Bengaluru Murder Case: ಬಿಹಾರಿ ಕೊಲೆ ಪ್ರಕರಣದ ಸೀಕ್ರೆಟ್ ರಿವೀಲ್; 2ನೇ ಪತ್ನಿ ರುಕ್ಸಾನಾ ಕೊಂದಿದ್ಯಾಕೆ ಮೊಹಮ್ಮದ್ ಇರ್ಫಜ್
ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣವೊಂದು ಇದೀಗ ಹೊಸದೊಂದು ತಿರುವು ಪಡೆದುಕೊಂಡಿದೆ. ಬೆಂಗಳೂರು ನಗರದಲ್ಲಿ ಬಿಹಾರದ 22 ವರ್ಷದ ವಲಸೆ ಕಾರ್ಮಿಕ ಮೊಹಮ್ಮದ್ ಇರ್ಫಜ್, ತನ್ನ ಪತ್ನಿ ರುಕ್ಸಾನಾ (25)ಳನ್ನು ವಿವಾಹೇತರ ಸಂಬಂಧದ ಅನುಮಾನದ ಮೇಲೆ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ರುಕ್ಸಾನಾಗೆ ಈಗಾಗಲೇ ವಿವಾಹವಾಗಿತ್ತು. ಎರಡನೇ ಬಾರಿ ಮೊಹಮ್ಮದ್ ಇರ್ಫಜ್ ಎನ್ನುವ ವ್ಯಕ್ತಿಯೊಂದಿಗೆ ಮದುವೆ ಆಗಿತ್ತು. ಇನ್ನು ಬೆಂಗಳೂರು ನಗರ ಪೊಲೀಸರು ಬಿಹಾರದ 22 ವರ್ಷದ ವಲಸೆ ಕಾರ್ಮಿಕನನ್ನು 25 ವರ್ಷದ ತನ್ನ ಪತ್ನಿಯನ್ನು ಕೊಂದು, ಆಕೆಯ ಶವವನ್ನು ರಾಜಕಾಲುವೆಗೆ ಎಸೆದ ಆರೋಪದ ಮೇಲೆ ಬಂಧಿಸಿದ್ದಾರೆ.
ಆರೋಪಿಯನ್ನು ಮೊಹಮ್ಮದ್ ಇರ್ಫಜ್ ಎಂದು ಗುರುತಿಸಲಾಗಿದ್ದು, ಮೃತಪಟ್ಟ ಮಹಿಳೆಯನ್ನು ರುಕ್ಸಾನಾ ಎಂದು ಗುರುತಿಸಲಾಗಿದೆ. ಇಬ್ಬರೂ ಬಿಹಾರದ ನಿವಾಸಿಗಳಾಗಿದ್ದಾರೆ. ದಂಪತಿಗಳು ಸುಮಾರು ಒಂದು ವರ್ಷದ ಹಿಂದೆ ವಿವಾಹವಾಗಿದ್ದರು. ರುಕ್ಸಾನಾಗೆ ಈ ಹಿಂದೆಯೇ ವಿವಾಹವಾಗಿತ್ತು ಮತ್ತು ಮೊದಲ ಪತ್ನಿಯ ಮಗುವೂ ಸಹ ಇವರೊಂದಿಗಿತ್ತು ಎಂದು ಹೇಳಲಾಗಿದೆ.

ಮೊಹಮ್ಮದ್ ಇರ್ಫಜ್ ಹಾಗೂ ರುಕ್ಸಾನಾ ಇಬ್ಬರು ಬಿಹಾರದಲ್ಲಿ ಬಲೂನ್ ಮಾರಾಟ ಮಾಡುವಾಗ ಪ್ರೀತಿಸಿದ್ದು, ಸುಮಾರು ಆರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಇಲ್ಲಿ ಮೊಹಮ್ಮದ್ ಇರ್ಫಜ್ ಸ್ಥಳೀಯ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಇತ್ತೀಚಿನ ದಿನಗಳಲ್ಲಿ ಮೊಹಮ್ಮದ್ ಇರ್ಫಜ್ ಹಾಗೂ ರುಕ್ಸಾನ ನಡುವೆ ಸಂಬಂಧ ಹಳಸಿತ್ತು ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ರುಕ್ಸಾನಾ ಆಗಾಗ್ಗೆ ಫೋನ್‌ನಲ್ಲಿ ಯಾರೊಂದಿಗಾದರೂ ಮಾತನಾಡುತ್ತಿದ್ದರಿಂದ ಆಕೆಗೆ ಮತ್ತೊಬ್ಬರೊಂದಿಗೆ ಸಂಬಂಧವಿದೆ ಎಂದು ಇರ್ಫಜ್ ಅನುಮಾನಿದ್ದ. ಈ ವಿಷಯವಾಗಿ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು ಎಂದು ಹೇಳಲಾಗಿದೆ.
ರುಕ್ಸಾನಾ ಕೊಲೆ ಪ್ರಕರಣದ ಹಿನ್ನೆಲೆ ಏನು ?
ಅಕ್ಟೋಬರ್ 10 ರಂದು ಇರ್ಫಜ್, ರುಕ್ಸಾನಾ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದ ಈ ದಾಳಿಯಲ್ಲಿ ರುಕ್ಸಾನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಗಳ ವಿಕೋಪಕ್ಕೆ ಹೋದಾಗ ಇರ್ಘಜ್ ರುಕ್ಸಾನಾಳ ಬಾಯಿಗೆ ಬಟ್ಟೆ ತುರುಕಿದ್ದಾನೆ ಎಂದು ಆರೋಪಿಸಲಾಗಿದೆ. ಅಪರಾಧವನ್ನು ಮರೆಮಾಚಲು, ಆರೋಪಿ ಹತ್ತಿರದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಹ್ಯಾಂಡಲ್ ಲಾಕ್ ಮುರಿದಿದ್ದಾನೆ ಎಂದು ಆರೋಪಿಸಲಾಗಿದೆ.
ರುಕ್ಸಾನಾ ಮೃತದೇಹವನ್ನು ಚೀಲಕ್ಕೆ ತುಂಬಿಸಿ, ಹ್ಯಾಂಡಲ್‌ಬಾರ್‌ಗಳ ನಡುವೆ ಇರಿಸಿ, ವಾಹನವನ್ನು ಗೋಪಾಲಪುರ ರಾಜಕಾಲುವೆ ಪ್ರದೇಶಕ್ಕೆ ತಳ್ಳಿ, ಶವವನ್ನು ಮಳೆನೀರಿನ ಚರಂಡಿಗೆ ಎಸೆದಿದ್ದಾನೆ. ಅಕ್ಟೋಬರ್ 13 ರಂದು, ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿದ ಶವವು ಚರಂಡಿಯಲ್ಲಿ ಪತ್ತೆಯಾಗಿದೆ. ಪೊಲೀಸರಿಗೆ ಆರಂಭದಲ್ಲಿ ಸಂತ್ರಸ್ತೆ ಯಾರು ಎಂದು ಗುರುತಿಸಲು ಸಾಧ್ಯವಾಗಿಲ್ಲ. ಮಾಗಡಿ ರಸ್ತೆ ಪೊಲೀಸರು 10ಕ್ಕೂ ಹೆಚ್ಚು ತಂಡಗಳನ್ನು ರಚಿಸಿ, ಮನೆ - ಮನೆಗೆ ವ್ಯಾಪಕ ಪರಿಶೀಲನೆ ಮತ್ತು ಪ್ರದೇಶದಲ್ಲಿ ಇತ್ತೀಚೆಗೆ ಕಾಣೆಯಾದವರ ದೂರುಗಳನ್ನು ಪರಿಶೀಲಿಸಿದ್ದಾರೆ ಎಂದು ಹೇಳಲಾಗಿದೆ.
ವಿಚಾರಣೆಯ ಸಮಯದಲ್ಲಿ ಗೋಪಾಲಪುರದಲ್ಲಿ ವಾಸವಿದ್ದ ಮಹಿಳೆ ಹಲವು ದಿನಗಳಿಂದ ಕಾಣೆಯಾಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ದೂರಿನ ಆಧಾರದ ಮೇಲೆ ಇರ್ಫಾಜ್‌ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪೊಲೀಸರ ಪ್ರಕಾರ, ವಿಚಾರಣೆಯ ಸಮಯದಲ್ಲಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


Click it and Unblock the Notifications
