Namma Metro: ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ BMRCL ಶಾಕ್, ಜನಾಕ್ರೋಶ

Namma Metro Updates: ಬೆಂಗಳೂರು ಮೆಟ್ರೋ ದಿನಕ್ಕೊಂದು ವಿಷಯಕ್ಕೆ ಸುದ್ದಿಯಾಗುತ್ತಿದೆ. ದರ ಹೆಚ್ಚಳ ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು. ರಾತ್ರಿ 10.10ಕ್ಕೆ ಪ್ರಯಾಣಿಕರೊಬ್ಬರಿಗೆ ಮೆಟ್ರೋ ನಿಲ್ದಾಣ ನಿರಾಕರಿಸಿದ್ದ ಆರೋಪ BMRCL ವಿರುದ್ಧ ಕೇಳಿ ಬಂದಿದೆ. ಇದರ ಬೆನ್ನಲ್ಲೆ ಸ್ಮಾರ್ಟ್‌ ಬಳಕೆದಾರರಿಗೆ ನಮ್ಮ ಮೆಟ್ರೋ ನಿರ್ಧಾರ ಬೇಸರ ತರಿಸಿದೆ.

ಹೌದು, ಬೆಂಗಳೂರು ಮೆಟ್ರೋದ ಹಲವಾರು ದೈನಂದಿನ ಪ್ರಯಾಣಿಕರು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ನಿರಾಶೆ ವ್ಯಕ್ತಪಡಿಸಿದ್ದಾರೆ. ಸ್ಮಾರ್ಟ್ ಕಾರ್ಡ್‌ ಬಳಸುವ ಪ್ರಯಾಣಿಕರು ಕನಿಷ್ಠ ₹90 ರೂಪಾಯಿ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕಿದೆ. ಈ ನಿಯಮ ಕಡ್ಡಾಯಗೊಳಿಸಲಾಗಿದೆ. ಈ ಹೊಸ ನಿಯಮದ ಬಗ್ಗೆ ಅಧಿಕಾರಿಗಳನ್ನು ಸಾರ್ವಜನಿಕರು ಟೀಕಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಹುಟ್ಟು ಹಾಕಿದ್ದಾರೆ. ಬಿಎಂಆರ್‌ಸಿಎಲ್ ಇತ್ತೀಚೆಗೆ ದರ ಏರಿಕೆಯನ್ನು ಘೋಷಿಸಿದ ಕೆಲವೇ ದಿನಗಳ ನಂತರ ಈ ನಿಯಮ ಕಡ್ಡಾಯಗೊಳಿಸಿದ್ದಾರೆ.

Bengaluru Metro Users Slams BMRCL over 90 Minimum Balance Rule for Smart Card

ಮೆಟ್ರೋ ಕನಿಷ್ಠ ಬ್ಯಾಲೆನ್ಸ್ ನಿಯಮದ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಆರ್ಥಿಕ ಹೊರೆ ಉಂಟಾಗುತ್ತದೆ. ಮೊದಲಿದ್ದ ನಿಯಮ ಸರಿಯಾಗಿದೆ ಎಂದಿದ್ದಾರೆ. ಇತ್ತೀಚೆಗೆ ದರ ಹೆಚ್ಚಿಸಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಜನಾಕ್ರೋಶ ಎದುರಿಸಿತ್ತು. ಇದರಿಂದಾಗಿ ದೈನಂದಿನ ಪ್ರಯಾಣಿಕರ ಪ್ರಮಾಣ ಸಹ ಇಳಿಕೆ ಆಗಿತ್ತು. ಸದ್ಯ ಸ್ಮಾರ್ಟ್ ಕಾರ್ಡ್ ಬಳಕೆದಾರರು 90 ರೂಪಾಯಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸಬೇಕೆಂದು ಹೇಳಿದೆ. ಒಂದು ವೇಳೆ 90 ರೂಪಾಯಿಗಿಂತ ಹಣ ಕಡಿಮೆ ಇದ್ದಲ್ಲಿ ಪ್ರವೇಶ ದ್ವಾರ ತೆರೆಯುವುದಿಲ್ಲ. ಒಳ ಹೋಗುವ ಮೊದಲೇ ಮತ್ತೆ ಹಣ ರಿಚಾರ್ಜ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಮೊದಲು ಕನಿಷ್ಠ ಹಣ 50 ರೂಪಾಯಿ ಇತ್ತು. ಅದನ್ನು ಹೆಚ್ಚಿಸುವ ಮೂಲಕ BMRCL ಜನರಿಗೆ ಮತ್ತೊಂದು ಬರೆ ಹಾಕಿದೆ.

ಈ ನಿರ್ಧಾರದಿಂದ BMRCL ನಿತ್ಯ ಪ್ರಯಾಣ ಮಾಡುವ ಲಕ್ಷಾಂತರ ಜನರ ಕೆಂಗಣ್ಣಿಗೆ ಗುರಿಯಾಗಿದೆ. ದರ ಕಡಿಮೆ ಮಾಡಬೇಕು, ದರ ಸಮಿತಿ ವರದಿ ಬಹಿರಂಗೊಳಿಸಿ ಎಂದರೆ ಕೇಳದ ಅಧಿಕಾರಿಗಳು, ಹೊಸ ನಿಯಮ ಜಾರಿಗೆ ತಂದಿದ್ದಾರೆ ಎಂದು ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಯಾಣಿಕರ ಮೇಲಿನ ಹೊರೆ ಕಡಿಮೆ ಮಾಡಬೇಕು. ಈ ಸಮಸ್ಯೆಗೆ ಪರಿಹಾರಗಳು ಏನು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಬೆಂಗಳೂರು ಮೆಟ್ರೋ ಸದ್ಯ 96 ಕಿಲೋ ಮೀಟರ್ ಇದ್ದು. ಮೂರು ಮಾರ್ಗಗಳಲ್ಲಿ ಸುಮಾರು 60 ರೈಲುಗಳು ಕಾರ್ಯಾಚರಣೆ ಮಾಡುತ್ತವೆ. ನಿತ್ಯ ಸುಮಾರು 10 ಲಕ್ಷ ಮಂದಿ ಪ್ರಯಾಣ ಮಾಡುತ್ತಿದ್ದಾರೆ. ವಾಟ್ಸಾಪ್ ಕ್ಯೂಆರ್ ಕೋಡ್, ಟೋಕನ್, ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಇದೆ. ಕೆಲವೊಮ್ಮೆ ಪೇಪರ್ ಟಿಕೆಟ್ ಸಹ ವಿಶೇಷ ಸಂದರ್ಭಗಳಲ್ಲಿ ನೀಡಲಾಗುತ್ತದೆ. ಇತ್ತೀಚೆಗೆ ದೈನಂದಿನ ಪ್ರಮಾಣಿಕರ ಸಂಖ್ಯೆ ಏರಿಕೆ ಆಗುತ್ತಿದೆ. ಈ ಮಧ್ಯೆ ಸ್ಮಾರ್ಟ್ ಕಾರ್ಡ್ ಕನಿಷ್ಠ ದರ ನಿಯಮ ಜನರಿಗೆ ಮತ್ತೊಂದು ಆರ್ಥಿಕ ಹೊರೆ ತಂದೊಡ್ಡಿದೆ. ಈ ಬಗ್ಗೆ ಮೆಟ್ರೋ ಅಧಿಕಾರಿಗಳು ಪ್ರತಿಕ್ರಿಯಿಸಿ, ಅಧಿಕೃತ ಮಾಹಿತಿ ಇಲ್ಲವೇ ಸ್ಪಷ್ಟನೆ ನೀಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+