Get Updates
Get notified of breaking news, exclusive insights, and must-see stories!

Bengaluru Metro: ಬೆಂಗಳೂರು ಮೆಟ್ರೋ ಪ್ರಯಾಣ ದರ ಶೇ 5% ಹೆಚ್ಚಳ: ಈ ದಿನದಿಂದ ಹೊಸ ದರ ಜಾರಿ

ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋದ ಪ್ರಯಾಣ ದರವನ್ನು ಹೆಚ್ಚಳ ಮಾಡುವುದಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಅನುಮತಿ ನೀಡಿದೆ. ಕಳೆದ ವರ್ಷವಷ್ಟೇ ನಮ್ಮ ಮೆಟ್ರೋದ ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು. ಕಳೆದ ವರ್ಷ ನಮ್ಮ ಮೆಟ್ರೋದ ಪ್ರಯಾಣ ದರವನ್ನು ಶೇ 71.5ರಷ್ಟು ಹೆಚ್ಚಳ ಮಾಡಲಾಗಿತ್ತು. ಈಗಾಗಲೇ ನಮ್ಮ ಮೆಟ್ರೋದ ಪ್ರಯಾಣ ದರವು ದುಬಾರಿಯಾಗಿದೆ. ಈ ರೀತಿ ಇರುವಾಗ ಮತ್ತೆ ಪ್ರಯಾಣ ದರವನ್ನು ಶೇ. 5ರಷ್ಟು ಹೆಚ್ಚಳ ಮಾಡುವುದಕ್ಕೆ ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಇದಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರವೂ ಸಹ ಸಮ್ಮತಿ ನೀಡಿದೆ. ಯಾವಾಗಿನಿಂದ ಪರಿಷ್ಕೃತ ದರ ಜಾರಿ ಆಗಲಿದೆ, ಎಷ್ಟು ಹೆಚ್ಚಳವಾಗಲಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಸಾರಿಗೆ ಜೀವನಾಡಿಯಾಗಿರುವ ನಮ್ಮೆ ಮೆಟ್ರೋದ ಪ್ರಯಾಣ ದರವು ಮತ್ತೊಮ್ಮೆ ಹೆಚ್ಚಳವಾಗುತ್ತಿದೆ. ಈ ಬಾರಿ ಮೆಟ್ರೋದ ಪ್ರಯಾಣ ದರವನ್ನು ಶೇ5% ರಷ್ಟು ಹೆಚ್ಚಳ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಇನ್ನು ಪರಿಷ್ಕೃತ ದರವು ಫೆಬ್ರವರಿ 9ರಿಂದ ಜಾರಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Bengaluru Metro

ಇದೇ 9ರ ಸೋಮವಾರದಿಂದಲೇ ಹೊಸ ದರ ಜಾರಿಗೆ ಬರಲಿದ್ದು, ಹೊಸ ಪ್ರಯಾಣ ದರವು ಕನಿಷ್ಠ 1 ರೂಪಾಯಿ ಹಾಗೂ ಗರಿಷ್ಠ 5 ರೂಪಾಯಿ ಹೆಚ್ಚಳವಾಗಲಿದೆ. ಇನ್ನು ಕನಿಷ್ಠ 10 ರೂಪಾಯಿ ಇರುವ ದರವು 11 ರೂಪಾಯಿಗೆ, ಗರಿಷ್ಠ 90 ರೂಪಾಯಿ ಇರುವ ಬೆಲೆಯು 95 ರೂಪಾಯಿಗೆ ಹೆಚ್ಚಳವಾಗಲಿದೆ.ಇನ್ನು ಮೆಟ್ರೋ ಪ್ರಯಾಣ ದರವನ್ನು ಶೇ 5 ಹೆಚ್ಚಳ ಮಾಡಿದ ಸಂದರ್ಭದಲ್ಲಿ 30 ರೂಪಾಯಿ ಇರುವ ದರವು, 31.5 ಆಗಲಿದೆ. ಆದರೆ, ಚಿಲ್ಲರೆಗೆ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಪೈಸೆ ಇರುವುದನ್ನು ರೌಂಡ್ ಫಿಗರ್ ಮಾಡುವ ಸಾಧ್ಯತೆ ಇದೆ. ಈ ರೀತಿ ಮಾಡಿದರೆ ಬೆಲೆಯು 32 ರೂಪಾಯಿ ಆಗಲಿದೆ.

ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ಕಾರಣವೇನು

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್)ವು ಪ್ರತಿ ವರ್ಷ ಶೇ 5ರಷ್ಟು ಪ್ರಯಾಣ ದರವನ್ನು ಏರಿಕೆ ಮಾಡಬಹುದು ಎಂದು ದರ ನಿಗದಿ ಸಮಿತಿ (ಎಫ್‌ಎಫ್‌ಸಿ) 2025ರಲ್ಲಿ ಶಿಫಾರಸು ಮಾಡಿತ್ತು. ಈ ವಿಷಯದ ಬಗ್ಗೆ ಈಚೆಗೆ ಬಿಎಂಆರ್‌ಸಿಎಲ್‌ ಮಂಡಳಿಯ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಶೇ 5ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಕರ್ನಾಟಕ ಕಾಂಗ್ರೆಸ್ ಸರ್ಕಾರವು ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.

ಸಾರ್ವಜನಿಕರಿಂದ ವಿರೋಧ

ಇನ್ನು ನಮ್ಮ ಮೆಟ್ರೋ ಪ್ರಯಾಣ ದರವನ್ನು ಹೆಚ್ಚಳ ಮಾಡುತ್ತಿರುವುದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಬೆಂಗಳೂರು ನಮ್ಮ ಮೆಟ್ರೋದ ಪ್ರಯಾಣ ದರವು ಈಗಾಗಲೇ ದುಬಾರಿ ಆಗಿದೆ. ಮುಂದುವರಿದು ಇನ್ನಷ್ಟು ಹೆಚ್ಚಳ ಮಾಡಿದರೆ ಹೊರೆ ಆಗಲಿದೆ. ಅಲ್ಲದೇ ಹಲವರು ಪ್ರಯಾಣಿಕರು ಮೆಟ್ರೋ ಪ್ರಯಾಣ ಮಾಡುವುದನ್ನು ಬಿಡಬಹುದು, ಇದರಿಂದ ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+