Namma Metro: ಬೆಂಗಳೂರಿನಲ್ಲಿ ಮೆಟ್ರೋ ರೈಲು ಲೋಕೋ ಪೈಲಟ್ ದಿನಚರಿ ಹೇಗಿರಲಿದೆ ಗೊತ್ತಾ?-ಮಾಹಿತಿ ಇಲ್ಲಿದೆ ತಿಳಿಯಿರಿ
Bengaluru Namma Metro: ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಸಾಗಿದೆ. ಪ್ರತಿನಿತ್ಯ ಏನಿಲ್ಲ ಅಂದರೂ ಲಕ್ಷಕ್ಕೂ ಅಧಿಕರ ಪ್ರಯಾಣಿಕೆ ಸಾಗಿಸುವ ಸಾರಿಗೆ ಇದಾಗಿದೆ. ಬಹುತೇಕ ಮಂದಿ ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಲು ಮೆಟ್ರೋ ರೈಲನ್ನೇ ಅವಲಂಬನೆ ಮಾಡಿದ್ದಾರೆ. ಹಾಗಾದರೆ ಇದರ ಚಾಲಕರ ದಿನಚರಿ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರು ಎಂದರೆ ಮೊದಲಿಗೆ ನೆನಪಾಗುವುದೇ ಟ್ರಾಫಿಕ್ ಜಾಮ್. ಈ ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಂಡು ತಲುಪಬೇಕಾದ ಸ್ಥಳಕ್ಕೆ ಅತೀ ಬೇಗ ಹೋಗಲು ಬಹುತೇಕ ಮಂದಿ ನಮ್ಮ ಮೆಟ್ರೋ ಸಾರಿಗೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕಾರು, ಬೈಕ್‌ಗಳು ಇದ್ದರೂ ಕೂಡ ಮೆಟ್ರೋವನ್ನೇ ಆಯ್ಕೆ ಮಾಡಿಕೊಳ್ಳುವುದು ಇದೇ ಕಾರಣಕ್ಕೆ ಎಂದರೆ ತಪ್ಪಾಗಲಾರದು. ಇನ್ನೂ ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರನ್ನು ಸಾಗಿಸುವ ಈ ಮೆಟ್ರೋ ದಿನಚರಿ ಹೇಗಿರಲಿದೆ ಎಂದು ನೀವು ತಿಳಿದುಕೊಳ್ಳಲೇಬೇಕು.

ಬೆಂಗಳೂರಿನಲ್ಲಿ ಮೆಟ್ರೋ ರೈಲು ಓಡಿಸುವುದೆಂದರೆ ಕೇವಲ ವಾಹನ ಚಲಾಯಿಸುವಷ್ಟು ಸುಲಭವಲ್ಲ. ಲೋಕೋ ಪೈಲಟ್‌ಗಳು ಹಲವು ಸವಾಲುಗಳನ್ನು ಎದುರಿಸುತ್ತಾರೆ. ಸಾಮಾನ್ಯವಾಗಿ ಮೆಟ್ರೋ ಚಾಲಕರು ತಮ್ಮ ಮೆಟ್ರೋ ಚಾಲನೆ ಕೆಲಸವನ್ನು ಬೆಳ್ಳಗ್ಗೆ 6 ಗಂಟೆಯಿಂದಲೇ ಆರಂಭಿಸುತ್ತಾರೆ.
ಬೆಳಗ್ಗೆ ಮೆಟ್ರೋ ಚಾಲನೆಗೂ ಮೊಲದು ಅವರು ರೈಲು ಸೇವೆಗೆ ಸಿದ್ಧವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಪ್ರಯಾಣಿಕರು ರೈಲು ಹತ್ತುವ ಮೊದಲು ಈ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲನೆ ಮಾಡುತ್ತಾರೆ. ಯಾಕೆಂದರೆ ಯಾವುದೇ ಸಮಸ್ಯೆಗಳಾದರೆ, ಪ್ರಯಾಣಿಕರಿಗೆ ಇದರಿಂದ ತುಂಬಾ ತೊಂದರೆಯಾಗಲಿದೆ ಎನ್ನುವ ದೃಷ್ಟಿಯಿಂದ ಮೆಟ್ರೋ ಸೇವೆಯ ಬಗ್ಗೆ ಖಚಿತಪಡಿಸಿಕೊಳ್ಳುತ್ತಾರೆ.
ದೈನಂದಿನ ದಿನಚರಿ ಮತ್ತು ಜವಾಬ್ದಾರಿಗಳು: ಮೊದಲು ಮಟ್ರೋ ಚಾಲಕರು ಟ್ರ್ಯಾಕ್ ನಿರ್ವಹಣೆ ಅಥವಾ ವೇಳಾಪಟ್ಟಿ ಬದಲಾವಣೆಗಳನ್ನು ಗಮನಿಸುತ್ತಾರೆ. ನಂತರ ಅವರು ರೈಲನ್ನು ಪರಿಶೀಲಿಸುತ್ತಾರೆ, ಬ್ರೇಕ್‌ಗಳು, ಬಾಗಿಲುಗಳು ಮತ್ತು ಸಂವಹನ ವ್ಯವಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಈ ನಿಖರವಾದ ಪ್ರಕ್ರಿಯೆಯು ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ.
ಸವಾಲುಗಳೇನು?: ಜನಸಂದಣಿ ಇರುವ ನಿಲ್ದಾಣಗಳಲ್ಲಿ ಚಾಲಕರು ಕಟ್ಟುನಿಟ್ಟಾದ ವೇಳಾಪಟ್ಟಿಗಳನ್ನು ಅನುಸರಿಸಬೇಕಾಗುತ್ತದೆ. ತಾಂತ್ರಿಕ ದೋಷಗಳು ಅಥವಾ ಪ್ರಯಾಣಿಕರ ತುರ್ತುಸ್ಥಿತಿಗಳಂತಹ ಅನಿರೀಕ್ಷಿತ ವಿಳಂಬಗಳ ಹೊರತಾಗಿಯೂ, ಅವರು ಸಮಯಪಾಲನೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇನ್ನು ಯಾವುದೇ ತೊಂದರೆಯಾಗದಂತೆ ಮೆಟ್ರೋ ಚಾಲನೆ ಮಾಡುವುದು ಅತ್ಯಗತ್ಯವಾಗಿರುತ್ತದೆ.
ಮೆಟ್ರೋ ಚಾಲಕರು ಪ್ರತಿದಿನ ವಿವಿಧ ಸಿಬ್ಬಂದಿಗಳೊಂದಿಗೆ ಸ್ಟೇಷನ್ ಕಂಟ್ರೋಲರ್‌ಗಳಿಂದ ಹಿಡಿದು ನಿರ್ವಹಣಾ ತಂಡಗಳವರೆಗೆ ಸಂವಹನ ನಡೆಸುತ್ತಾರೆ. ಯಾಕೆಂದರೆ ತಡೆರಹಿತ ಕಾರ್ಯಾಚರಣೆಗಳಿಗೆ ಈ ಸಂವಹ ಅತ್ಯಗತ್ಯವಾಗಿರುತ್ತದೆ. ಒಂದು ವೇಳೆ ಏನಾದರೂ ಹೋಗುವ ಮಾರ್ಗಗಳಲ್ಲಿ ಏನಾದರೂ ಸಮಸ್ಯೆಗಳಿದ್ದರೆ, ಆಗ ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಬಳಿಕ ಆ ಮಾರ್ಗದಲ್ಲಿ ಕೆಲ ಕಾಲ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ. ಯಾಕೆಂದರೆ ಪ್ರಯಾಣದ ಅವಧಿಯಲ್ಲಿ ಪ್ರಯಾಣಿಕರ ಸುರಕ್ಷೆತೂ ಅವರ ಪ್ರಮುಖ ಜವಾಬ್ದಾರಿಯಾಗಿರುತ್ತದೆ.












Click it and Unblock the Notifications