Metro Price Hike: ಬೆಂಗಳೂರು ನಮ್ಮ ಮೆಟ್ರೋ ಟಿಕೆಟ್ ಬೆಲೆ ಹೆಚ್ಚಳ: ದರ ಪರಿಷ್ಕರಣೆಗೆ ಸರ್ಕಾರಕ್ಕೆ ಪ್ರಸ್ತಾವನೆ

Bengaluru Metro Fare Hike: ಬೆಂಗಳೂರಿನ ನಮ್ಮ ಮೆಟ್ರೋದ ಪ್ರಯಾಣ ದರ ಮತ್ತೆ ಹೆಚ್ಚಳ ಮಾಡುವುದಕ್ಕೆ ಬಿಎಂಆರ್‌ಸಿಎಲ್ ಮುಂದಾಗಿದೆ. ಕಳೆದ ವರ್ಷವಷ್ಟೇ ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳವಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ನಮ್ಮ ಮೆಟ್ರೋ ಟಿಕೆಟ್ ದರವನ್ನು ಮತ್ತೆ ಹೆಚ್ಚಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದ್ದು, ಕರ್ನಾಟಕ ಸರ್ಕಾರದ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ.

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಪ್ರಯಾಣ ದರ ಮತ್ತೆ ಹೆಚ್ಚಳವಾಗುವ ಮುನ್ಸೂಚನೆ ಸಿಕ್ಕಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಹೊಸ ಟಿಕೆಟ್ ದರ ಹೆಚ್ಚಳಕ್ಕೆ ಮುಂದಾಗಿದೆ. ಬೆಂಗಳೂರಿನ ಮೆಟ್ರೋ ಪ್ರಯಾಣಿಕರು ಈಗಾಗಲೇ ಕಳೆದ ವರ್ಷ ಹೆಚ್ಚಳ ಮಾಡಲಾಗಿದ್ದ ಬೆಲೆ ಏರಿಕೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈ ರೀತಿ ಇರುವಾಗ ಮತ್ತೆ ಬೆಲೆ ಏರಿಕೆಗೆ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಬೆಲೆ ಏರಿಕೆಗೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಹಲವಾರು ಆಂತರಿಕ ಸಭೆಗಳನ್ನು ನಡೆಸಿದ್ದಾರೆ. ಅಲ್ಲದೇ ಔಪಚಾರಿಕವಾಗಿ ಈ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರದ ಗಮನಕ್ಕೆ ತಂದಿದ್ದಾರೆ ಎಂದಿ ಹೇಳಲಾಗಿದೆ.

Bengaluru Metro Fare Hike

ಇನ್ನು ದರ ಪರಿಷ್ಕರಣಾ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಫೆಬ್ರವರಿ 1 ರಿಂದ ಪರಿಷ್ಕೃತ ದರಗಳನ್ನು ಜಾರಿಗೆ ತರಲು ಬಿಎಂಆರ್‌ಸಿಎಲ್ ಮುಂದಾಗಿತ್ತು. ಸಮಿತಿಯು ಮೆಟ್ರೋ ಪ್ರಯಾಣ ಟಿಕೆಟ್ ಬೆಲೆಗಳಲ್ಲಿ ಶೇ 5% ಹೆಚ್ಚಳ ಮಾಡುವುದಕ್ಕೆ ಶಿಫಾರಸು ಮಾಡಿತ್ತು. ರಾಜ್ಯ ಸರ್ಕಾರವು ಅನುಮೋದನೆ ನೀಡಿದ ನಂತರ ಮೆಟ್ರೋ ಪ್ರಾಧಿಕಾರವು ಈಗ ಅದನ್ನು ಆದಷ್ಟು ಬೇಗ ಜಾರಿಗೆ ತರುವ ಸಾಧ್ಯತೆ ಇದೆ. ಮೆಟ್ರೋ ಟಿಕೆಟ್ ದರಗಳಲ್ಲಿ 2025ನೆ ಸಾಲಿನಲ್ಲಿ ಶೇ.71% ಹೆಚ್ಚಳ ಮಾಡಲಾಗಿತ್ತು. ಇದಾದ ಕೇವಲ ಒಂದು ವರ್ಷದ ಅವಧಿಯಲ್ಲೇ ಈ ಪ್ರಸ್ತಾವನೆ ಸಲ್ಲಿಸಲಾಗಿದೆ.

ಮೆಟ್ರೋ ಪ್ರಯಾಣ ದರ ಶೇ 5ರಷ್ಟು ಹೆಚ್ಚಳ ಸಾಧ್ಯತೆ

ಇನ್ನು ಬೆಂಗಳೂರಿನ ನಮ್ಮ ಮೆಟ್ರೋದ ಪ್ರಯಾಣ ದರವು 1ರೂಪಾಯಿಯಿಂದ 5 ರೂಪಾಯಿಯ ವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಸರ್ಕಾರದಿಂದ ಅನುಮೋದನೆ ದೊರೆತರೆ, ಹೊಸ ಪರಿಷ್ಕರಣೆಯು ಪ್ರಯಾಣದ ದೂರವನ್ನು ಅವಲಂಬಿಸಿ ಕನಿಷ್ಠ 1 ರೂಪಾಯಿ ಮತ್ತು ಗರಿಷ್ಠ 5 ರೂಪಾಯಿಯ ವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಬಿಎಂಆರ್‌ಸಿಎಲ್‌ ದೂರದ ಮಾರ್ಗಗಳಿಗೆ ನಿರ್ದಿಷ್ಟ ದರವನ್ನು ನಿಗದಿ ಮಾಡಿದೆ.

ಮೆಜೆಸ್ಟಿಕ್‌ನಿಂದ ವೈಟ್‌ಫೀಲ್ಡ್‌ಗೆ ಪ್ರಸ್ತುತ 80 ರೂಪಾಯಿ ಇದೆ. ಇದು ಮುಂದೆ 84 ರೂಪಾಯಿಗೆ ಏರಿಕೆಯಾಗಲಿದೆ. ಮೆಜೆಸ್ಟಿಕ್‌ನಿಂದ ಬೊಮ್ಮಸಂದ್ರಕ್ಕೆ ಪ್ರಯಾಣಿಸುವುದಕ್ಕೂ ಹೆಚ್ಚಳ ಅನ್ವಯವಾಗಲಿದೆ. ಮೆಜೆಸ್ಟಿಕ್‌ನಿಂದ ಚಲ್ಲಘಟ್ಟಕ್ಕೆ ಪ್ರಯಾಣ ದರವು 60 ರಿಂದ 63 ರೂಪಾಯಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ಬಾರಿ ಮೆಟ್ರೋ ಪ್ರಯಾಣ ದರವನ್ನು ಹೆಚ್ಚಳ ಮಾಡದಿದ್ದರೆ, ಮುಂದಿನ ವರ್ಷ ಮೆಟ್ರೋ ಪ್ರಯಾಣ ದರ ಶೇ 10% ಹೆಚ್ಚಳ ಮಾಡಬೇಕಾಗಬಹುದು ಎಂದು BMRCL ಸರ್ಕಾರಕ್ಕೆ ತಿಳಿಸಿದೆ ಎಂದು ವರದಿಯಾಗಿದೆ.

Bengaluru Metro: ಬಿಎಂಆರ್‌ಸಿಎಲ್ ನಿರ್ಧಾರಕ್ಕೆ ವಿರೋಧ

ಇನ್ನು ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣ ದರವನ್ನು ಶೇ 5%ರಷ್ಟು ಹೆಚ್ಚಳ ಮಾಡುವುದಕ್ಕೆ ಮುಂದಾಗಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕಳೆದ ವರ್ಷ ಭಾರೀ ಮೊತ್ತದಲ್ಲಿ ಏರಿಕೆ ಮಾಡಲಾಗಿದೆ. ಇದಾಗಿ ಒಂದು ವರ್ಷ ಸಹ ಪೂರ್ಣಗೊಂಡಿಲ್ಲ. ಈ ರೀತಿ ಇರುವಾಗ ಹೊಸ ಪರಿಷ್ಕೃತ ದರ ಯಾಕೆ ಎಂದು ಪ್ರಯಾಣಿಕರು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ಈಗಾಗಲೇ ಟ್ರಾಫಿಕ್ ಜಾಮ್ ಸಮಸ್ಯೆಯು ವಿಪರೀತವಾಗಿದೆ. ಈ ರೀತಿ ಇರುವಾಗ ಇನ್ನಷ್ಟು ಬೆಲೆ ಏರಿಕೆಯಾದರೆ ಜನ ಮೆಟ್ರೋ ಬಳಕೆ ಮಾಡುವುದನ್ನು ಕಡಿಮೆ ಮಾಡಲಿದ್ದಾರೆ ಎನ್ನುವ ಅಭಿಪ್ರಾಯವೂ ಕೇಳಿ ಬರುತ್ತಿದೆ.

Take a Poll

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+