Bengaluru Metro: ನೇರಳೆ- ಹಸಿರು ಮಾರ್ಗದ ಸಂಚಾರ ದಟ್ಟಣೆಗೆ ಮುಕ್ತಿ, ಹೊಸ ರೈಲುಗಳಿಗೆ ಬೋರ್ಡ್ ಅನುಮತಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಅವಲಂಬನೆ ಪ್ರಮಾಣ ಹೆಚ್ಚಾಗುತ್ತಿದೆ. ಶೀಘ್ರವೇ ಮತ್ತೆರಡು ಹೊಸ ಮೆಟ್ರೋ ಮಾರ್ಗಗಳು ತೆರೆಯಲು ಸಿದ್ಧವಾಗಿವೆ. ಈ ಮಧ್ಯೆ ಹಾಲಿ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗದಲ್ಲಿ ಪೀಕ್ ಸಮಯದಲ್ಲಿ ಹೆಚ್ಚಿನ ಪ್ರಯಾಣಿಕರ ದಟ್ಟಣೆ ಕಂಡು ಬರುತ್ತಿದೆ. ಇದರ ನಿವಾರಣೆಗೆ ಸದರಿ ಎರಡು ಮಾರ್ಗಗಳಲ್ಲಿ ಮತ್ತಷ್ಟು ಹೊಸ ರೈಲುಗಳ ಸೇರ್ಪಡೆಗೆ ಅನುಮೋದನೆ ದೊರೆತಿದೆ.

ಹೌದು, ರೈಲ್ವೆ ಮಂಡಳಿಯು ಚಲಘಟ್ಟ-ವೈಟ್‌ಫಿಲ್ಡ್ (ಕಾಡುಗೋಡಿ) (ನೇರಳೆ ಮಾರ್ಗ) ಮತ್ತು ಮಾದಾವರ-ರೇಷ್ಮೆ ಸಂಸ್ಥೆ (ಹಸಿರು ಮಾರ್ಗ) ಮಾರ್ಗಗಳಲ್ಲಿ ಹೊಸ ರೈಲುಗಳನ್ನು ಪಡೆಯಲು ತಾತ್ಕಾಲಿಕ ಅನುಮತಿ ನೀಡಿದೆ. ಮುಂದಿನ ಮೇ ಅಥವಾ ಜೂನ್ ನಲ್ಲಿ ಈ ಮಾರ್ಗಗಳಲ್ಲಿ ಪೀಕ್ ಅವರ್‌ನಲ್ಲಿ ಹೆಚ್ಚಿನ ರೈಲುಗಳು ಸಂಚಾರ ಮಾಡುವ ಸಾಧ್ಯತೆಗಳು ಇವೆ.

Bengaluru Metro

ಕಳೆದ ವಾರ ಏಪ್ರಿಲ್ 1 ರಂದು ರೈಲ್ವೆ ಮಂಡಳಿಯು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ತಾತ್ಕಾಲಿಕ ಅನುಮತಿ ನೀಡಿರುವ ಕುರಿತು ಪತ್ರದಲ್ಲಿ ತಿಳಿಸಿದೆ. ಸದ್ಯ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲವು 96ಕಿಲೋ ಮೀಟರ್ ವ್ಯಾಪಿಸಿದೆ. ಐಟಿ ಹಾಗೂ ಕೈಗಾರಿಕಾ ಕಾರಿಡಾರ್ ಗಳಿಗೂ ಮೆಟ್ರೋ ವಿಸ್ತರಣೆ ಆಗಿದ್ದರಿಂದ ದೈನಂದಿನ ಪ್ರಯಾಣಿಕರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ.

ಹೊಸ ರೈಲುಗಳು ಸಂಚಾರ, ಷರತ್ತು ಇಲ್ಲಿವೆ

ಅದರಲ್ಲೂ ಬೆಳಗ್ಗೆ 7 ನಂತರ ಮತ್ತು ಸಂಜೆ 4 ಗಂಟೆ ನಂತರ ಪೀಕ್ ಅವರ್ ನಲ್ಲಿ ಮೆಟ್ರೋ ರೈಲುಗಳು ತುಂಬಿರುತ್ತವೆ. ಆಗ ಅತೀ ಕಡಿಮೆ ಸಮಯದಲ್ಲಿ (ಕನಿಷ್ಠ 3ನಿಮಿಷಕ್ಕೊಂದರಂತೆ) ಮೆಟ್ರೋ ರೈಲುಗಳ ಆವರ್ತನಗೊಳ್ಳುತ್ತವೆ. ಆದರೂ ದಟ್ಟಣೆ ಕಡಿಮೆ ಮಾಡಲಾಗುತ್ತಿಲ್ಲ. ಇದಕ್ಕೆ ಪರಿಹಾರವೆಂಬಂತೆ ಇನ್ನಷ್ಟು ರೈಲುಗಳು ಮಾರ್ಗ ಒಂದು ಮತ್ತು ಎರಡರಲ್ಲಿ ಸಂಚರಿಸಲಿವೆ. ಅನುಮತಿ ನೀಡಿರುವ ರೈಲ್ವೆ ಮಂಡಳಿಯು ನಮ್ಮ ಮೆಟ್ರೋಗೆ ಕೆಲವು ಷರತ್ತುಗಳನ್ನು ವಿಧಿಸಿದೆ.

ಅದೆನೆಂದರೆ ಸೇರ್ಪಡೆ ಆಗಲಿರುವ ಹೊಸ ರೈಲುಗಳ ಗರಿಷ್ಠ ವೇಗ ಗಂಟೆಗೆ 80 ಕಿಮೀ ಮತ್ತು ದ್ವಿತೀಯ ಏರ್ ಸ್ಪ್ರಿಂಗ್‌ನ ಡಿಫ್ಲೇಟೆಡ್ ಮೋಡ್‌ನಲ್ಲಿ ಗಂಟೆಗೆ 25 ಕಿಮೀ ಆಗಿರುತ್ತದೆ.

ಇನ್ನೂ ಈ ರೈಲುಗಳು ಬರುತ್ತಿದ್ದಂತೆ ಎರಡು ಮಾರ್ಗಗಳ ಏಕೀಕರಣ, ಕಾರ್ಯಾಚರಣೆ ಮತ್ತು ಡೈರೆಕ್ಟ್ ಟು ಗೋ (ಡಿಟಿಜಿ) ಸಿಗ್ನಲಿಂಗ್ ಮತ್ತು ರೈಲು ನಿಯಂತ್ರಣ ವ್ಯವಸ್ಥೆಯೊಂದಿಗೆ ಹೊಂದಾಣಿಕೆಗೆ ಸಂಬಂಧಿಸಿದ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ (ಐಎಸ್‌ಎ) ವರದಿ ಸಲ್ಲಿಸಬೇಕು. ಆ ಮೂಲಕ ಬಿಎಂಆರ್‌ಸಿಎಲ್ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ (ಸಿಎಂಆರ್‌ಎಸ್) ಪ್ರತ್ಯೇಕ ಅನುಮತಿ ಪಡೆಯಬೇಕು ಎಂದು ಎಂದು ರೈಲ್ವೆ ಮಂಡಳಿಯು ತಿಳಿಸಿದೆ.

37 ಪರೀಕ್ಷೆಗಳ ಬಳಿಕ ರೈಲು ಸಂಚಾರ

ಬೆಂಗಳೂರಿನ ಮೆಟ್ರೋ ಮಾರ್ಗಗಳಿಗೆ ಮೂಲ ಮಾದರಿ (ಪ್ರೊಟೋಟೈಪ್) ರೈಲು, ಡಿಟಿಜಿ ಸೇರಿ ಒಟ್ಟು ಮೂರು ಮೆಟ್ರೋ ರೈಲುಗಳು ಬಂದಿವೆ. ಅವುಗಳನ್ನು ಹಸಿರು ಹಾಗೂ ನೇರಳೆ ಮಾರ್ಗದಲ್ಲಿ ಸೇವೆಗೆ ಅಣಿ ಮಾಡುವ ಮೊದಲು ವಿವಿಧ ಸುಮಾರು 37 ಶಾಸನಬದ್ಧ ಪರೀಕ್ಷೆಗಳು ಹಾಗೂ ತಪಾಸಣೆಗೆ ಒಳಪಟ್ಟು ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಈಗಾಗಲೇ ಸ್ವೀಕರಿಸಲಾದ ಮೂರು ರೈಲಗಳಿಗೆ ಬ್ರೇಕಿಂಗ್, ವೇಗ ಮತ್ತು ವ್ಯವಸ್ಥೆಯ ಏಕೀಕರಣ ಪರೀಕ್ಷೆಗಳ ಶಾಸನಬದ್ಧ ಪ್ರಯೋಗ ನಡೆಸಲು ಬಿಎಂಆರ್‌ಸಿಎಲ್ ರೈಲ್ವೆ ಸಚಿವಾಲಯ ವ್ಯಾಪ್ತಿಗೆ ಬರುವ 'ಸಂಶೋಧನಾ ವಿನ್ಯಾಸಗಳು ಮತ್ತು ಮಾನದಂಡಗಳ ಸಂಸ್ಥೆ (ಆರ್‌ಡಿಎಸ್‌ಒ)' ಸಂಪರ್ಕಿಸಿದೆ. ಐಎಸ್‌ಎ ಪ್ರಮಾಣಪತ್ರವನ್ನು ಪಡೆದ ನಂತರ ಸಿಎಮ್‌ಆರ್‌ಎಸ್ ಅಂತಿಮ ಅನುಮೋದನೆ ನೀಡಲಿದೆ.

ಎರಡು ಮಾರ್ಗಗಳಿಗೆ 21 ರೈಲು ಪೂರೈಕೆ

ಬಿಎಂಆರ್ ಸಿಎಲ್ ಮಾಡಿಕೊಂಡ ಒಪ್ಪಂದದಂತೆ ಹೊಸ ಮೆಟ್ರೋಗಳನ್ನು ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಕಂಪನಿ ಪೂರೈಸುತ್ತಿದೆ. ಇದು ಬಂಗಾಳ ಮೂಲದ ಟಿಟಗಢ ರೈಲ್ ಸಿಸ್ಟಮ್ಸ್ ಲಿಮಿಟೆಡ್ (ಟಿಆರ್‌ಎಸ್‌ಎಲ್) ಸಹಕಾರದಲ್ಲಿ ನೇರಳೆ ಮತ್ತು ಹಸಿರು ಮೆಟ್ರೋ ಮಾರ್ಗಕ್ಕಾಗಿ ಒಟ್ಟು 21 ರೈಲುಗಳನ್ನು ಪೂರೈಸಲಿದೆ. ಸದ್ಯ ಈ ಎರಡು ಮಾರ್ಗಗಳಲ್ಲಿ ಬರೋಬ್ಬರಿ 57 ರೈಲುಗಳು ನಿತ್ಯ ಸಂಚಾರ ಮಾಡುತ್ತಿವೆ. ಇನ್ನೂ 19.5 ಕಿಮೀ ಉದ್ದದ ಹಳದಿ ಮಾರ್ಗದಲ್ಲಿ 8 ಡ್ರೈವರ್‍‌ಲೆಸ್ ರೈಲುಗಳು ಸೇವೆ ನೀಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+