Bengaluru Rains; ಜೂನ್ 8 ರವರೆಗೆ ನಗರದಲ್ಲಿ ವ್ಯಾಪಕ ಮಳೆ, ತಾಪಮಾನದ ವರದಿ

ಬೆಂಗಳೂರು, ಜೂನ್ 04: ರಾಜ್ಯ ರಾಜಧಾನಿಯಲ್ಲಿ ಎರಡು ವಾರಗಳಿಂದ ಅಬ್ಬರಿಸಿದ್ದ ಮಳೆ ಕಳೆದೆರಡು ದಿನಗಳಿಂದ ತಣ್ಣಗಾಗಿದ್ದು, ಇದೀಗ ಮತ್ತೆ ಸುರಿಯುವ ಮುನ್ಸೂಚನೆ ನೀಡಿದೆ. ಜೂನ್ 8ರವರೆಗೆ ನಗರದಲ್ಲಿ ಮಳೆ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.

ಸಿಲಿಕಾನ್ ಸಿಟಿಗೆ ಮತ್ತೆ ವರುಣ ವಕ್ಕರಿಸಲಿದ್ದಾನೆ. ಎರಡು ವಾರದಿಂದಲೂ ನಿತ್ಯ ಸಂಜೆ ನಂತರ ಬಂದ ಮಳೆ ನಗರದ ಜನರಿಗೆ ಎಲ್ಲಿಲ್ಲದ ತೊಂದರೆ ನೀಡಿತ್ತು. ಸಾಕಷ್ಟು ಮರಗಳ ಅವಸಾನಕ್ಕೆ ಕಾರಣವಾಯಿತು. ಕೆಲವೆಡೆ ಜನ ಜೀವಕ್ಕು ಕುತ್ತು ತಂದಿತ್ತು. ರಾಜ್ಯ ಮುಂಗಾರು ಮಳೆ ಎದುರು ನೋಡುತ್ತಿರುವ ಹೊತ್ತಿನಲ್ಲಿ ಬೆಂಗಳೂರಿಗೆ ಮತ್ತ ರಣಮಳೆಯ ಮುನ್ಸೂಚನೆ ಜನರನ್ನು ಆತಂಕಕ್ಕೆ ಈಡು ಮಾಡಿದೆ.

Bengaluru May See Thunderstorm Rain In Till June 8th As IMD Predicts

ಎರಡು ದಿನದಿಂದ ಮೋಡ ಕವಿದ ವಾತಾವರಣ ಮಾತ್ರವೇ ಕಂಡು ಬಂದಿದೆ. ಮಳೆ ಬಿದ್ದ ಬಗ್ಗೆ ವರದಿಯಾಗಿಲ್ಲ ನಾಳೆ ಸೋಮವಾರದಿಂದ ಜೂನ್ 8ರ ಶುಕ್ರವಾರ ವರೆಗೆ ಕೆಲವು ಬಡಾವಣೆಗಳಲ್ಲಿ ಹುಗರ ಮಳೆ ಸುರಿದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಸಾಧಾರಣದಿಂದ ಉತ್ತಮ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ನಗರದಲ್ಲಿ ಎಂದಿನಂತೆ ಬೆಳಗ್ಗೆಯಿಂದಲೂ ಚುರುಕಿನ ಬಿಸಿಲು ಕಂಡು ಬಂದರೆ ಮಧ್ಯಾಹ್ನ ನಂತರ ಸೂರ್ಯ ಮರೆಯಾಗಿ ದಿಢೀರ್ ಮೋಡ ಕವಿದ ಮಬ್ಬು ವಾತಾವರಣ ಸೃಷ್ಟಿಯಾಗಲಿದೆ. ಬಳಿಕ ಸಂಜೆಯಿಂದ ಕೆಲವೊಮ್ಮೆ ತಡರಾತ್ರಿವರೆಗೆ ಮಳೆ ಆಗಬಹುದು ಎನ್ನಲಾಗಿದೆ.

ಒಟ್ಟು ಮುಂದಿನ ನಾಲ್ಕು ದಿನಗಳ ಪೈಕಿ ಕೊನೆ ಎರಡು ದಿನ ಅಂದರೆ ಜೂನ್ 07 ಮತ್ತು ಜೂನ್ 08 ರಂದು ಮಳೆ ಸುರಿಸುವ ಮೋಡಗಳ ತೀವ್ರತೆ ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ. ಈ ನಾಲ್ಕು ದಿನಗಳ ಅವಧಿಯಲ್ಲಿ ನಗರದ ಗರಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಹಾಗು ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ ಎಂದು ಕೆಎಸ್‌ಎನ್‌ಸಿಎಂಸಿ ಮಳೆ ಮುನ್ಸೂಚನಾ ವರದಿ ತಿಳಿಸಿದೆ.

Bengaluru May See Thunderstorm Rain In Till June 8th As IMD Predicts

ಕರ್ನಾಟಕಕ್ಕೆ ಮುಂದಿನ ಐದು ದಿನ ಮಳೆ ನಿರೀಕ್ಷೆ
ಕರ್ನಾಟಕದಲ್ಲಿ ಸುರಿಯುತ್ತಿರುವ ಮಳೆ ಐದು ದಿನ ಜೂನ್ 9ರವರೆಗೆ ಮುಂದುವರಿಯಲಿದೆ. ಈ ಪೈಕಿ ಕರಾವಳಿ ಕರ್ನಾಟಕದ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಹಾಸನ, ವಿಜಯನಗರ, ಚಿಕ್ಕಮಗಳೂರು, ಚಾಮರಾಜನಗರ, ಮಡಿಕೇರಿ, ಶಿವಮೊಗ್ಗ ಜಿಲ್ಲೆಗಳ ಹಲವಡೆ ದಿನ ಬಿಟ್ಟು ದಿನ ಸಾಧಾರಣದಿಂದ ಉತ್ತಮ ಮಳೆ ಸಾಧ್ಯತೆ ಇದೆ.

ಇದೆ ಅವಧಿಯಲ್ಲಿ ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಸೇರಿದಂತೆ ಮುಂತಾದ ಕಡೆಗಳಲ್ಲಿ ಹಗುರದಿಂದ ಸಾಧಾರಣವರೆಗೂ ಮಳೆ ಬೀಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+