Bengaluru-Mangaluru New Expressway: ಬೆಂಗಳೂರು - ಮಂಗಳೂರಿನ ಈ ಭಾಗದಲ್ಲಿ ಭೂಮಿ ಬೆಲೆ ಭರ್ಜರಿ ಹೆಚ್ಚಳ!

ಬೆಂಗಳೂರು - ಮಂಗಳೂರು ಎಕ್ಸ್‌ಪ್ರೆಸ್‌ ವೇ ಭಾಗದಲ್ಲಿ ಜಾಗ ಇರುವವರಿಗೆ ಬಂಪರ್ ಗುಡ್‌ನ್ಯೂಸ್‌ವೊಂದು ಇಲ್ಲಿದೆ. ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ವೇ ಯಶಸ್ವಿಯಾದ ಮೇಲೆ ಇದೀಗ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರು - ಮಂಗಳೂರು ಎಕ್ಸ್‌ಪ್ರೆಸ್‌ ವೇ ನಿರ್ಮಾಣಕ್ಕೆ ಮಾಸ್ಟರ್‌ ಪ್ಲಾನ್ ಮಾಡಿದೆ. ಈ ಭಾಗದಲ್ಲಿ ಎಕ್ಸ್‌ಪ್ರೆಸ್‌ ವೇ ನಿರ್ಮಾಣ ಪ್ರಸ್ತಾವನೆ ಪ್ರಾರಂಭವಾದ ಬೆನ್ನಲ್ಲೇ ಆಸ್ತಿ ಹಾಗೂ ಭೂಮಿಗಳಿಗೆ ಚಿನ್ನದ ಬೆಲೆ ಬಂದಿದೆ.

ರಾಜ್ಯದಲ್ಲಿ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಹಾಗೂ ವಿವಿಧ ಎಕ್ಸ್‌ಪ್ರೆಸ್‌ ವೇ ನಿರ್ಮಾಣದ ಯೋಜನೆಯ ಬೆನ್ನಲ್ಲೇ ಜಾಗಗಳ ಬೆಲೆ ಗಗನಮುಖಿಯಾಗಿದೆ. ಇದೀಗ ಬೆಂಗಳೂರು ಹಾಗೂ ಮಂಗಳೂರು ಎಕ್ಸ್‌ಪ್ರೆಸ್‌ ವೇ ಅಲ್ಲೂ ಬಂಪರ್ ಆಫರ್ ಶುರುವಾಗಿದೆ ಅದರ ಕಂಪ್ಲೀಟ್ ಡೀಟೆಲ್ಸ್‌ ಇಲ್ಲಿದೆ.

Bengaluru-Mangaluru New Expressway Land prices increased in Bengaluru and Mangaluru

ಬೆಂಗಳೂರು ಹಾಗೂ ಮಂಗಳೂರಿನ ನಡುವಿನ ಸಂಚಾರ ಸಮಯ ಕಡಿಮೆ ಮಾಡುವುದು. ರಫ್ತು ಹೆಚ್ಚಳ ಮಾಡುವುದು ಹಾಗೂ ಬೆಂಗಳೂರು ಹಾಗೂ ಮಂಗಳೂರು ಭಾಗದಲ್ಲಿ ಉದ್ಯಮಗಳನ್ನು ಹೆಚ್ಚಿಸುವುದು ಸೇರಿದಂತೆ ಹಲವು ಉದ್ದೇಶವನ್ನು ಈ ಯೋಜನೆ ಒಳಗೊಂಡಿದೆ. ಈಗಾಗಲೇ ಈ ಯೋಜನೆಗೆ ಡಿಪಿಆರ್ ಸಹ ಸಿದ್ಧಪಡಿಸಲಾಗುತ್ತಿದೆ.

ಇದರ ನಡುವೆ ಎಕ್ಸ್‌ಪ್ರೆಸ್‌ ವೇ ಹಾದು ಹೋಗಲಿರುವ ಮಾರ್ಗಗಳಲ್ಲಿ ಭೂಮಿ ಬೆಲೆ ಏಕಾಏಕಿ ಹೆಚ್ಚಳವಾಗಿದೆ. ಯಾವುದಾದರೂ ಮೇಜರ್‌ ಪ್ರಾಜೆಕ್ಟ್‌ಗಳು ಬಂದರೆ. ಸಹಜವಾಗಿಯೇ ಭೂಮಿ ಹಾಗೂ ಆಸ್ತಿಗಳ ಬೆಲೆ ಗಗನಮುಖಿಯಾಗುತ್ತವೆ. ಅದೇ ರೀತಿ ಈ ಯೋಜನೆಯಲ್ಲೂ ಆಗುತ್ತಿದೆ. ಎಕ್ಸ್‌ಪ್ರೆಸ್‌ ವೇ ಯೋಜನೆಯಿಂದ ಸಾವಿರಾರು ಜನ ಶ್ರೀಮಂತರಾಗಲಿದ್ದಾರೆ ಅಂತಲೇ ಹೇಳಲಾಗುತ್ತಿದೆ.

ಹೆದ್ದಾರಿ ನಿರ್ಮಾಣ ಯೋಜನೆಯಿಂದ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಮಂಗಳೂರಿನ ಕೊಟ್ಟಾರ, ಅಲ್ಪೆ, ಪಂಪ್‌ವೆಲ್, ಪಿತ್ರೋಡಿ ಹಾಗೂ ನೀರು ಮಾರ್ಗ ಸೇರಿದಂತೆ ಹಲವು ಭಾಗದಲ್ಲಿ ಭೂಮಿಯ ಬೆಲೆಗೆ ಒಳ್ಳೆಯ ಬೆಲೆ ಬಂದಿದೆ. ಅದೇ ರೀತಿ ಬೆಂಗಳೂರಿನ ವಿವಿಧೆಡೆಯೂ ಭೂಮಿಯ ಬೆಲೆ ಹೆಚ್ಚಳವಾಗಿದೆ.

ಮಂಗಳೂರಿನ ಕೊಟ್ಟಾರದಲ್ಲಿ 1.25 ಎಕರೆ ವಾಣಿಜ್ಯ ಭೂಮಿಯ ಬೆಲೆಯು 37 ಕೋಟಿ ರೂಪಾಯಿಗೂ ಹೆಚ್ಚಳವಾಗಿದೆ. ಇನ್ನು ಇಲ್ಲಿನ ಅಲ್ಪೆ ಪಡೀಲ್ ಮುಖ್ಯ ರಸ್ತೆ ಭಾಗದಲ್ಲಿ 20 ಸೆಂಟ್ ಭೂಮಿಯ ಬೆಲೆ 4.25 ಕೋಟಿ ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ಅಂದಾಜಿಸಲಾಗಿದೆ.

ಮಂಗಳೂರಿನ ಪಂಪ್‌ವೆಲ್ ಹೆದ್ದಾರಿ ಬಳಿ ಮಾರಾಟಕ್ಕಿರುವ ಹಳೆಯ ಮನೆಗಳ ಬೆಲೆ ಹಾಗೂ ಭೂಮಿ ಬೆಲೆ ಸಹ ಹೆಚ್ಚಳವಾಗಿದೆ. 9 ಸೆಂಟ್ ಭೂಮಿಯ ಬೆಲೆ 1.35 ಕೋಟಿಗೆ ಮಾರಾಟವಾಗುತ್ತಿದೆ. ಪಿತ್ರೋಡಿ ಹೆದ್ದಾರಿ ಸಮೀಪದ ಕಟ್ಪಾಡಿಯಲ್ಲಿ ಹಾಗೂ ನೀರು ಮಾರ್ಗದಲ್ಲೂ ಜಮೀನು ಹಾಗೂ ಆಸ್ತಿಗಳಿಗೆ ಚಿನ್ನದ ಬೆಲೆ ಬಂದಿದೆ ಎನ್ನುತ್ತಿದ್ದಾರೆ ರಿಯಲ್‌ ಎಸ್ಟೇಟ್‌ ಉದ್ಯಮಿಗಳು.

ಬೆಂಗಳೂರಲ್ಲೂ ಹೆಚ್ಚಳ: ಬೆಂಗಳೂರಿನಲ್ಲಿ ಕಳೆದ ಮೂರು ತಿಂಗಳಿಂದ ಎಚ್‌ಎಸ್‌ಆರ್‌ ಲೇಔಟ್‌ ಹಾಗೂ ಕೋರಮಂಗಲ ಸೇರಿದಂತೆ ವಿವಿಧ ಭಾಗದಲ್ಲಿ ಆಸ್ತಿ ಬೆಲೆ ಹೆಚ್ಚಳವಾಗಿದೆ. ಅಲ್ಲದೆ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ಹಾಗೂ ಪುಣೆ ಎಕ್ಸ್‌ಪ್ರೆಸ್‌ ವೇ ಹಾಗೂ ಮಂಗಳೂರು - ಬೆಂಗಳೂರು ಎಕ್ಸ್‌ ಪ್ರೆಸ್‌ ವೇ ಎನ್ನುವುದು ಸೇರಿದಂತೆ ಹಲವು ಕಾರಣಕ್ಕೆ ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ಗೆ ಬೂಸ್ಟ್‌ ಸಿಕ್ಕಿದೆ. ಕಳೆದ ಎರಡು ವರ್ಷಗಳಿಂದ ರಿಯಲ್‌ ಎಸ್ಟೇಟ್‌ ಬೆಂಗಳೂರಿನಲ್ಲೂ ಚೇತರಿಸಿಕೊಳ್ಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+