ಉದ್ಯೋಗ ಕಡಿತದ ಭೀತಿ: ವೀಕೆಂಡ್‌ನಲ್ಲಿ ಮೋಜು-ಮಸ್ತಿ ಬಿಟ್ಟು ಸೈಡ್ ಹಸಲ್' ಶುರುಮಾಡಿ ಎಂದ ಬೆಂಗಳೂರು ಯುವಕ!

ಪ್ರಸ್ತುತ ದಿನಗಳಲ್ಲಿ ಕಾರ್ಪೊರೇಟ್ ಜಗತ್ತಿನಲ್ಲಿ ಉದ್ಯೋಗ ಭದ್ರತೆ ಎಂಬುದೇ ಮರೀಚಿಕೆಯಾಗುತ್ತಿದೆ. ಪ್ರತಿದಿನ ಕೇಳಿಬರುತ್ತಿರುವ ಉದ್ಯೋಗ ಕಡಿತದ ಸುದ್ದಿಗಳು ಐಟಿ ಸೇರಿದಂತೆ ವಿವಿಧ ವಲಯದ ಉದ್ಯೋಗಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿವೆ. ಇಂತಹ ಅನಿಶ್ಚಿತತೆಯ ಕಾಲಘಟ್ಟದಲ್ಲಿ, ಬೆಂಗಳೂರಿನ ಯುವಕನೊಬ್ಬ ಕಾರ್ಪೊರೇಟ್ ಉದ್ಯೋಗಿಗಳಿಗೆ ನೀಡಿರುವ ಮಹತ್ವದ ಸಲಹೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ತಮ್ಮ ಬಿಡುವಿನ ವೇಳೆಯನ್ನ, ಅದರಲ್ಲೂ ವಿಶೇಷವಾಗಿ ವಾರಾಂತ್ಯದಲ್ಲಿ ಸೈಡ್ ಹಸಲ್ ಆರಂಭಿಸುವ ಮೂಲಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

Bengaluru Man Urges IT Employees To Start Side Hustles On Weekends Amid Job Market Uncertainty

ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ವಿಭು ಸಿಂಗ್ ಎಂಬುವವರು, ಶನಿವಾರ ಮತ್ತು ಭಾನುವಾರದ ರಜಾ ದಿನಗಳು ಕೇವಲ ಮೋಜು-ಮಸ್ತಿಗಾಗಿ ಮಾತ್ರವಲ್ಲ, ಜೀವನವನ್ನ ಬದಲಾಯಿಸುವ ಪ್ರಮುಖ ದಿನಗಳಾಗಿವೆ ಎಂದು ವಿವರಿಸಿದ್ದಾರೆ. ಐದು ದಿನಗಳ ಕಾಲ ಕಚೇರಿಯಲ್ಲಿ ದುಡಿದು ಸುಸ್ತಾಗುವ ಉದ್ಯೋಗಿಗಳು ವೀಕೆಂಡ್‌ಗಾಗಿ ಕಾಯುವುದು ಸಹಜ.

ಆದರೆ, ಪ್ರಸ್ತುತ ಉದ್ಯೋಗ ಮಾರುಕಟ್ಟೆಯ ಸ್ಥಿತಿಯನ್ನ ಗಮನಿಸಿದರೆ, ಈ ರಜಾ ದಿನಗಳನ್ನ ವ್ಯರ್ಥ ಮಾಡುವುದು ಮೂರ್ಖತನವಾಗುತ್ತದೆ ಎಂಬುದು ಅವರ ವಾದ.

ಕಾರ್ಪೊರೇಟ್ ಉದ್ಯೋಗ ಭದ್ರತೆ ಮತ್ತು ವಾರಾಂತ್ಯದ ಮಹತ್ವ

"ಶನಿವಾರ ಮತ್ತು ಭಾನುವಾರ ಬಂದರೆ ಸಾಕು, ನಾವೆಲ್ಲರೂ ತುಂಬಾ ಸುಸ್ತಾಗಿದ್ದೇವೆ, ವೀಕೆಂಡ್ ಬಂತು ಮಜಾ ಮಾಡೋಣ ಎಂದುಕೊಳ್ಳುತ್ತೇವೆ. ಆದರೆ, ಉದ್ಯೋಗ ಮಾರುಕಟ್ಟೆಯ ಇಂದಿನ ಪರಿಸ್ಥಿತಿ ನೋಡಿದರೆ ರಜಾ ದಿನಗಳನ್ನ ಸುಮ್ಮನೆ ಕಳೆಯಬಾರದು ಎನಿಸುತ್ತದೆ. ಆ ಎರಡು ದಿನಗಳು ನಿಮ್ಮ ಜೀವನವನ್ನೇ ಬದಲಾಯಿಸಬಹುದು. ವಾರಾಂತ್ಯದಲ್ಲಿ ನಿಮ್ಮನ್ನು ನೀವು ಅಪ್‌ಸ್ಕಿಲ್ ಮಾಡಿಕೊಳ್ಳಿ ಅಥವಾ ಯಾವುದಾದರೂ ಸಣ್ಣ ಮಟ್ಟದ ಸೈಡ್ ಬ್ಯುಸಿನೆಸ್ ಆರಂಭಿಸುವ ಬಗ್ಗೆ ಯೋಚಿಸಿ" ಎಂದು ಸಿಂಗ್ ಸಲಹೆ ನೀಡಿದ್ದಾರೆ.

ಕೇವಲ ಸ್ಪಾಗಳಿಗೆ ಭೇಟಿ ನೀಡುವುದು, ಪಾರ್ಟಿ ಮಾಡುವುದು ಅಥವಾ ಹ್ಯಾಂಗೋವರ್‌ನಲ್ಲಿ ಕಾಲ ಕಳೆಯುವುದರಿಂದ ಮುಂದೊಂದು ದಿನ ಪರಿತಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಪರ್ಯಾಯ ಆದಾಯದ ಮೂಲ ಹುಡುಕಿ

ನಿಮ್ಮ ಈಗಿರುವ ವೃತ್ತಿಗಿಂತ ಸಂಪೂರ್ಣ ಭಿನ್ನವಾಗಿರುವ ಕೌಶಲ್ಯವೊಂದನ್ನ ಕಲಿಯುವುದು ಬಹಳ ಮುಖ್ಯ. ಉದಾಹರಣೆಗೆ, ಕಾರ್ಪೊರೇಟ್ ಕೆಲಸದ ಜೊತೆಗೆ ತಾನು ಫೋಟೋಗ್ರಫಿಯನ್ನ ಹೇಗೆ ನಿರ್ವಹಿಸುತ್ತಿದ್ದೇನೆ ಎಂಬುದನ್ನು ವಿಭು ಸಿಂಗ್ ವಿವರಿಸಿದ್ದಾರೆ. "ಇಂದಿನ ದಿನಗಳಲ್ಲಿ ಯಾರೊಬ್ಬರೂ ತಮ್ಮ ಕೆಲಸ ನೂರಕ್ಕೆ ನೂರು ಸುರಕ್ಷಿತ ಎಂದು ಹೇಳಲು ಸಾಧ್ಯವಿಲ್ಲ. ನಮ್ಮೆಲ್ಲರ ಉದ್ಯೋಗಗಳೂ ಅಸುರಕ್ಷಿತವಾಗಿವೆ ಎಂಬುದನ್ನು ನಾವು ಆದಷ್ಟು ಬೇಗ ಅರ್ಥಮಾಡಿಕೊಳ್ಳಬೇಕು. ಇದಕ್ಕಾಗಿ ಯಾವುದಾದರೂ ಪರ್ಯಾಯ ಆದಾಯದ ಮೂಲವನ್ನು ಕಂಡುಕೊಳ್ಳಲೇಬೇಕು. ನಾನು ಯಾವುದೋ ದೊಡ್ಡ ಸ್ಟಾರ್ಟ್ಅಪ್ ಹುಟ್ಟುಹಾಕಿ ಎಂದು ಹೇಳುತ್ತಿಲ್ಲ, ಕನಿಷ್ಠ ಪಕ್ಷ ಯಾವುದಾದರೂ ಸಣ್ಣ ಉದ್ಯೋಗವನ್ನಾದರೂ ಆರಂಭಿಸಿ" ಎಂದು ಅವರು ಮನವಿ ಮಾಡಿದ್ದಾರೆ.

ವೈರಲ್ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆಗಳು

"ನಿಮ್ಮ ಕಾರ್ಪೊರೇಟ್ ಉದ್ಯೋಗ ಸುರಕ್ಷಿತವಾಗಿಲ್ಲ. ಇಂದಿನಿಂದಲೇ ಸಿದ್ಧತೆ ಆರಂಭಿಸಿ. ಸೈಡ್ ಹಸಲ್ ಎಂಬುದು ಈಗ ಕೇವಲ ಪ್ಯಾಷನ್ ಅಲ್ಲ, ಭವಿಷ್ಯದ ಸುರಕ್ಷತಾ ಕವಚ " ಎಂಬ ಕ್ಯಾಪ್ಷನ್‌ನೊಂದಿಗೆ ಹಂಚಿಕೊಳ್ಳಲಾದ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಅನೇಕರು ಸಿಂಗ್ ಅವರ ಮಾತನ್ನು ಬೆಂಬಲಿಸಿದ್ದಾರೆ. "ಇದು ನಿಜಕ್ಕೂ ಒಳ್ಳೆಯ ಸಲಹೆ, ಇಂದಿನ ಉದ್ಯೋಗ ಮಾರುಕಟ್ಟೆಯ ಪರಿಸ್ಥಿತಿ ನಿಜಕ್ಕೂ ಭಯಾನಕವಾಗಿದೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಹೊಸ ಕೌಶಲ್ಯಗಳನ್ನ ಕಲಿಯುವುದು ಯಾವಾಗಲೂ ಒಳ್ಳೆಯ ಯೋಚನೆ" ಎಂದು ಮತ್ತೊಬ್ಬರು ಬರೆದಿದ್ದಾರೆ.

ಆದರೆ, ವಾರಾಂತ್ಯವನ್ನ ಸಂಪೂರ್ಣವಾಗಿ ಕೆಲಸಕ್ಕೆ ಮೀಸಲಿಡುವುದನ್ನು ಕೆಲವರು ವಿರೋಧಿಸಿದ್ದಾರೆ. "ಮಾನಸಿಕ ನೆಮ್ಮದಿ ಮತ್ತು ಆರೋಗ್ಯಕ್ಕಾಗಿ ಕನಿಷ್ಠ ಎರಡು ದಿನಗಳ ವಿಶ್ರಾಂತಿ ಅತ್ಯಗತ್ಯ. ವಿಶ್ರಾಂತಿಯಿಲ್ಲದೆ ದುಡಿದರೆ ಬರ್ನ್‌ಔಟ್ ಆಗುವುದು ಖಚಿತ" ಎಂದು ಇನ್ನೊಬ್ಬ ಬಳಕೆದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+