ಬೆಂಗಳೂರು ಟ್ರಾಫಿಕ್ ಜಾಮ್‌ನಲ್ಲಿ ಅರಳಿದ ಪ್ರೀತಿ: ಮದುವೆಯಾಗಿ ಎರಡು ವರ್ಷವಾದರೂ ಬ್ರಿಡ್ಜ್ ಪೂರ್ಣಗೊಂಡಿಲ್ಲ
ಬೆಂಗಳೂರು, ಸೆಪ್ಟೆಂಬರ್ 22: ಬೆಂಗಳೂರು ಟ್ರಾಫಿಕ್ ಜಾಮ್‌ಗೆ ಹೆಸರು ವಾಸಿಯಾಗಿದೆ. ಬೆಂಗಳೂರಿನ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ವ್ಯಕ್ತಿಗೆ ಹುಟ್ಟಿದ ಪ್ರೀತಿಯ ಕಥೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಬೆಂಗಳೂರಿನ ಕೋರಮಂಗಲ ಪ್ರದೇಶದ ಕುಖ್ಯಾತ ಈಜಿಪುರ ಮೇಲ್ಸೇತುವೆಯಲ್ಲಿ ಟ್ರಾಫಿಕ್ ಜಾಮ್‌ನ ಮಧ್ಯದ ಸಿಗ್ನಲ್‌ನಲ್ಲಿ ಪ್ರೀತಿ ಪ್ರಾರಂಭವಾಗಿದೆ. ಹೇಳಿಕೇಳಿ ಇದು ನಗರದ ಸುಪ್ರಸಿದ್ಧ ದಟ್ಟಣೆ ಮತ್ತು ಮೂಲಸೌಕರ್ಯದಿಂದ ವಿಫಲವಾದ ಪ್ರದೇಶವಾಗಿದೆ.
ಸಾಮಾನ್ಯವಾಗಿ ಕಾಲೇಜು, ದೇವಸ್ಥಾನ, ಪಾರ್ಕ್, ಆಫೀಸ್, ಇನ್ನಿತರ ಸ್ಥಳಗಳಲ್ಲಿ ಪ್ರೀತಿ ಹುಟ್ಟುವುದನ್ನು ಕೇಳಿದ್ದೇವೆ. ಯಾಕೆಂದರೆ ಈ ಸ್ಥಳಗಳಲ್ಲಿ ಸಂಗಾತಿಯೊಂದಿಗೆ ಸಮಯ ಕಳೆಯಲು ಅವಕಾಶವಿರುತ್ತದೆ. ಇದರಿಂದ ಪ್ರೀತಿ ಹುಟ್ಟಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ ಟ್ರಾಫಿಕ್ ಜಾಮ್‌ನಲ್ಲಿ ಪ್ರೀತಿ ಹುಟ್ಟಿದೆ ಅಂದರೆ ಹೇಗೆ ಸಾಧ್ಯ ಎನ್ನುವ ಕುತೂಹಲ ಎಲ್ಲರಿಗೂ ಮೂಡಿದೆ. Reddit ಬಳಕೆದಾರ MaskedManiac92 ಅವರು ಪ್ರೀತಿ ಕಥೆಯನ್ನು ಹಂಚಿಕೊಂಡಿದ್ದಾರೆ. ತಾವು ಭೇಟಿ ಮಾಡಿ ಪ್ರೀತಿ ಹುಟ್ಟಿ ಮದುವೆಯಾಗಿ ಎರಡು ವರ್ಷದ ಬಳಿಕವೂ ಈಜಿಪುರ ಕಾಮಗಾರಿ ಪೂರ್ಣಗೊಂಡಿಲ್ಲ. ಇಲ್ಲಿನ ಟ್ರಾಫಿಕ್ ಜಾಮ್ ಕೂಡ ಹಾಗೇ ಇದೆ ಎಂದು ಬರೆದಿದ್ದಾರೆ.
Reddit ಬಳಕೆದಾರ MaskedManiac92 ಅವರು ಸೋನಿ ವರ್ಲ್ಡ್ ಸಿಗ್ನಲ್ ಬಳಿ ತನ್ನ ಹೆಂಡತಿಯನ್ನು ಭೇಟಿಯಾದರು ಎಂದು ಹೇಳಿಕೊಂಡಿದ್ದಾರೆ. ಆರಂಭದಲ್ಲಿ ತಾವಿಬ್ಬರು ಸ್ನೇಹಿತರಾಗಿದ್ದರೆಂದು ಹೇಳಿಕೊಂಡಿದ್ದಾರೆ. 'ಒಂದು ದಿನ ಅವನು ಅವಳನ್ನು ಮನೆಗೆ ಬಿಡುತ್ತಿದ್ದಾಗ, ಈಜಿಪುರ ಮೇಲ್ಸೇತುವೆಯ ನಿರ್ಮಾಣ ಕಾರ್ಯದಿಂದಾಗಿ ಅವರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡರು. ಟ್ರಾಫಿಕ್ ಜಾಮ್ ನಿಂದಾಗಿ ಬೇಸತ್ತಿದ್ದೆವು. ನಮ್ಮಿಬ್ಬರಿಗೂ ಹಸಿವು ಕೂಡ ಆಗಿತ್ತು. ಈ ವೇಳೆ ಹತ್ತಿರದಲ್ಲಿ ಊಟ ಮಾಡಿದೆವು. ಈ ವೇಳೆ ಹುಟ್ಟಿಕೊಂಡ ಪ್ರೀತಿಯಿಂದ ನಾನು ಅವಳೊಂದಿಗೆ 3 ವರ್ಷಗಳ ಕಾಲ ಡೇಟ್ ಮಾಡಿದ್ದೇನೆ. ಈಗ ನಾನು ಅವಳನ್ನು ಮದುವೆಯಾಗಿ 2 ವರ್ಷಗಳು ಕಳೆದಿವೆ. ಆದರೆ 2.5 ಕಿಮೀ ಫ್ಲೈಓವರ್ ಇನ್ನೂ ನಿರ್ಮಾಣ ಹಂತದಲ್ಲಿದೆ' ಎಂದು ಅವರು ಬರೆದಿದ್ದಾರೆ.

ಟ್ವಿಟರ್‌ನಲ್ಲಿ ಪೋಸ್ಟ್ 4000 ಕ್ಕೂ ಹೆಚ್ಚು ಲೈಕ್ಸ್ ಮತ್ತು 450 ರೀಟ್ವೀಟ್‌ಗಳನ್ನು ಹೊಂದಿದೆ.
Top drawer stuff on Reddit today 😂😂@peakbengaluru pic.twitter.com/25H0wr526h
— Aj (@babablahblah_) September 18, 2022
ಟ್ವಿಟರ್ ಕಥೆಯನ್ನು ಇಷ್ಟಪಟ್ಟಿದೆ ಮತ್ತು ಅನೇಕರು ಕಾಮೆಂಟ್ ಮಾಡಿದ್ದಾರೆ. ಅಸ್ಗರ್ ಎಂಬ ಬಳಕೆದಾರರು, "ಇದು ಆಸಕ್ತಿದಾಯಕ ಕಥೆಯಂತೆ ತೋರುತ್ತದೆ ಮತ್ತು ಬಾಲಿವುಡ್ ಇದನ್ನು ದೊಡ್ಡ ಪರದೆಯಲ್ಲಿ ತೋರಿಸುವ ಬಗ್ಗೆ ಯೋಚಿಸಬೇಕು" ಎಂದು ಹೇಳಿದರು.
ಮೂಲಸೌಕರ್ಯ ಯೋಜನೆಗಳು ಪೂರ್ಣಗೊಳ್ಳಲು ತೆಗೆದುಕೊಳ್ಳುವ ಸಮಯಕ್ಕೆ ಹಲವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇನ್ನೊಬ್ಬ ನೆಟಿಜನ್ ಬರೆದಿದ್ದಾರೆ, "ಹೌದು, ಅದು ಸಂಭವಿಸುತ್ತಲೇ ಇರುತ್ತದೆ. ನನ್ನ ಮಗಳು ಫ್ಲೈಓವರ್ ಕೆಲಸ ಪ್ರಾರಂಭವಾದಾಗ ಕ್ರೈಸ್ಟ್ ಜೂನಿಯರ್ ಕಾಲೇಜಿಗೆ ಸೇರಿಕೊಂಡಳು, ಅವಳು ತನ್ನ ಪದವಿಯನ್ನು ಮುಗಿಸಿ ಮಾಸ್ಟರ್ಸ್ ಸೇರಿದ್ದಾಳೆ. ಆದರೆ ಫ್ಲೈಓವರ್ ಇನ್ನೂ ಅಪೂರ್ಣವಾಗಿಲ್ಲ," ಎಂದು ಹೇಳಿದ್ದಾರೆ.
ಕೆಲವರು ದಂಪತಿಗಳ ಪ್ರೇಮಿಗಳು ಸೇವಿಸಿದ ಆಹಾರದ ಬಗ್ಗೆ ಆಸಕ್ತಿ ತೋರಿದ್ದಾರೆ. "ಅವರು ಊಟಕ್ಕೆ ಏನು ತಿಂದರು?" ಎಂದು ಪ್ರಶ್ನೆ ಮಾಡಿದ್ದಾರೆ.
ಮತ್ತೊಬ್ಬರು ''ಒಂದು ದಶಕದಿಂದ ಇಲ್ಲಿ ರಸ್ತೆ ದುರಸ್ತಿಯಲ್ಲಿದೆ. ನಾನು ಶಾಲೆ, ಕಾಲೇಜು ಮತ್ತು ನನ್ನ ಕೆಲಸದಲ್ಲಿ ಕೆಲವು ವರ್ಷಗಳನ್ನು ಪೂರ್ಣಗೊಳಿಸಿದಾಗಲೂ ಅದು ಸಂಪೂರ್ಣ ದುರಸ್ತಿ ಕಾರ್ಯ ಮುಗಿದಿಲ್ಲ" ಎಂದು ರಸ್ತೆ ಅವ್ಯವಸ್ಥೆಯ ಬಗ್ಗೆ ಹೇಳಿಕೊಂಡಿದ್ದಾರೆ. ಇನ್ನೊಬ್ಬರು, 'ಇದೊಂದು ಉತ್ತಮ ಪ್ರೇಮ ಕಥೆ' ಎಂದು ಬರೆದಿದ್ದಾರೆ.












Click it and Unblock the Notifications