ತಿಂಗಳಿಗೆ 2 ಲಕ್ಷ ಸಂಬಳ ಪಡೆಯುವುದೇ ಡೇಂಜರ್‌ ಅಂತೆ! ಬೆಂಗಳೂರು ಯುವಕನ ಈ ಮಾತಿನ ಹಿಂದಿದೆ ಅಚ್ಚರಿ ಕಾರಣ

ಕಾರ್ಪೋರೇಟ್‌ ಅಥವಾ ಇನ್ಯಾವುದೇ ಕ್ಷೇತ್ರದ ಪ್ರತಿಯೊಬ್ಬ ಉದ್ಯೋಗಿಗೂ ತಿಂಗಳಾಂತ್ಯದಲ್ಲಿ ಕೈತುಂಬಾ ಸಂಬಳ ಬರಬೇಕು ಎಂಬ ಕನಸು ಇರುತ್ತದೆ. ಸಂಬಳಕ್ಕಾಗಿಯೇ ಅಲ್ಲವೇ ಎಲ್ಲರೂ ದುಡಿಯುವುದು. ಅದರಲ್ಲೂ ಲಕ್ಷ ಲಕ್ಷ ವೇತನ ಸಿಕ್ಕರಂತೂ ಜೀವನವೇ ಸೆಟಲ್ ಆಯಿತು ಎಂದು ಭಾವಿಸುವವರೇ ಹೆಚ್ಚು. ಆದರೆ, ಇಲ್ಲೊಬ್ಬ ಬೆಂಗಳೂರು ಯುವಕ ತಿಂಗಳಿಗೆ 2 ಲಕ್ಷ ಸಂಬಳ ಪಡೆಯುವುದೇ ಅತ್ಯಂತ ಅಪಾಯಕಾರಿ ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ಚರ್ಚೆ ಹುಟು ಹಾಕಿದ್ದಾರೆ.

ಶಶಾಂಕ್ ದೀಕ್ಷಿತ್ ಎಂಬುವವರು ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್ ಈಗ ವೈರಲ್ ಆಗಿದ್ದು, ಐಟಿ ಉದ್ಯೋಗಿಗಳು ಸೇರಿದಂತೆ ಅನೇಕರು ಈ ಯುವಕನ ಮಾತಿಗೆ ಬಹುಮತದಿಂದ ಸಹಮತ ವ್ಯಕ್ತಪಡಿಸಿದ್ದಾರೆ.

Bengaluru Man Calls Rs 2 Lakh Per Month Salary The Most Dangerous Number Here Is The Reason Why

ಕಂಫರ್ಟ್ ಝೋನ್ ಎಂಬ ಮಾಯಾಜಾಲ

ಶಶಾಂಕ್ ದೀಕ್ಷಿತ್ ಅವರ ಪ್ರಕಾರ, 2 ಲಕ್ಷ ರೂಪಾಯಿ ಎನ್ನುವುದು ತುಂಬಾ ಕಡಿಮೆ ಮೊತ್ತ ಎನ್ನುವ ಕಾರಣಕ್ಕೆ ಅಪಾಯಕಾರಿಯಲ್ಲ, ಬದಲಾಗಿ ಅದು ಜೀವನವನ್ನು ನೆಮ್ಮದಿಯಾಗಿ ನಡೆಸಲು ಸಾಕಷ್ಟು ಎಂಬ ಭಾವನೆ ಮೂಡಿಸುವ ಕಾರಣಕ್ಕೆ ಅಪಾಯಕಾರಿಯಾಗಿದೆ. ತಿಂಗಳಿಗೆ ಇಷ್ಟು ದೊಡ್ಡ ಮೊತ್ತದ ಹಣ ಕೈಗೆ ಬರುತ್ತಿದ್ದಂತೆ ಮನುಷ್ಯನಿಗೆ ಅರಿವಿಲ್ಲದೆಯೇ ಆತ ಒಂದು ಕಂಫರ್ಟ್ ಝೋನ್ ಒಳಗೆ ಸಿಲುಕಿಕೊಳ್ಳುತ್ತಾನೆ. ಪೋಷಕರು ತಮ್ಮ ಮಗ ಉತ್ತಮವಾಗಿ ನೆಲೆಸಿದ್ದಾನೆ ಎಂದು ಖುಷಿಪಡುತ್ತಾರೆ.

ಯಾವುದೇ ಆರ್ಥಿಕ ಚಿಂತೆಯಿಲ್ಲದೆ ವೀಕೆಂಡ್‌ನಲ್ಲಿ ಎಂಜಾಯ್ ಮಾಡಬಹುದು ಎಂಬ ಭ್ರಮೆ ಶುರುವಾಗುತ್ತದೆ. ಈ ನೆಮ್ಮದಿಯ ಮನಸ್ಥಿತಿಯೇ ಮನುಷ್ಯನನ್ನು ಹೊಸದೇನನ್ನಾದರೂ ಸಾಧಿಸಬೇಕು ಎಂಬ ಹಂಬಲದಿಂದ ಹಾಗೂ ವೃತ್ತಿಜೀವನದಲ್ಲಿ ಪ್ರಶ್ನೆಗಳನ್ನು ಕೇಳುವ ಪ್ರವೃತ್ತಿಯಿಂದ ದೂರ ಮಾಡುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಉದ್ಯೋಗ ಕಳೆದುಕೊಳ್ಳುವ ಭಯ

ಒಮ್ಮೆ ಈ ಆರಾಮದಾಯಕ ಜೀವನಕ್ಕೆ ಒಗ್ಗಿಕೊಂಡರೆ, ಕೈತುಂಬಾ ಕಾಸು ತರುವ ಸ್ಥಿರವಾದ ಉದ್ಯೋಗವನ್ನು ಬಿಟ್ಟು ಹೊರಬರುವುದು ಬಹಳ ಕಷ್ಟಕರವಾಗುತ್ತದೆ. ನಿಧಾನವಾಗಿ ನಿಮ್ಮ ಸಂಬಳವೇ ನಿಮ್ಮ ಗುರುತಾಗಿ ಬದಲಾಗುತ್ತದೆ. ನಿಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಬದಲು, ಇರುವ ಆದಾಯವನ್ನು ಕಾಪಾಡಿಕೊಳ್ಳುವ ಕಡೆಗಷ್ಟೇ ನಿಮ್ಮ ಗಮನ ಕೇಂದ್ರೀಕೃತವಾಗುತ್ತದೆ.

ಸ್ವಂತ ಉದ್ಯಮ ಅಥವಾ ಹೊಸ ಸಾಹಸಕ್ಕೆ ಕೈಹಾಕಲು ಮುಂದಾದರೆ, ಕೈಯಲ್ಲಿರುವ ಆ ದೊಡ್ಡ ಮೊತ್ತದ ಸಂಬಳವನ್ನು ಕಳೆದುಕೊಳ್ಳಬೇಕಾಗುತ್ತದೆಯಲ್ಲ ಎಂಬ ಭಯ ಕಾಡಲಾರಂಭಿಸುತ್ತದೆ. ಈ ಕಾರಣದಿಂದಾಗಿ ಅನೇಕರು ತಮ್ಮ ಉದ್ಯೋಗ ಮತ್ತು ಆಕಾಂಕ್ಷೆಗಳ ನಡುವೆ ಸಿಲುಕಿ, ತಮ್ಮ ಕನಸುಗಳನ್ನ 'ಮುಂದಿನ ತಿಂಗಳು', 'ಮುಂದಿನ ವರ್ಷ' ಎಂದು ಮುಂದೂಡುತ್ತಲೇ ಹೋಗುತ್ತಾರೆ. ಕೊನೆಗೊಂದು ದಿನ ನಿಮ್ಮ ಕನಸುಗಳೆಲ್ಲವೂ ಕಮರಿ ಹೋಗಿ, ಹಣದ ಹಿಂದೆ ಬಿದ್ದು ನಿಮ್ಮ ಮಹತ್ವಾಕಾಂಕ್ಷೆಯನ್ನೇ ಮರೆತುಬಿಟ್ಟಿರುತ್ತೀರಿ ಎಂದು ಶಶಾಂಕ್ ಬರೆದುಕೊಂಡಿದ್ದಾರೆ.

ಬೆಂಗಳೂರು ಟೆಕ್ಕಿ ವೈರಲ್ ಪೋಸ್ಟ್: ನೆಟ್ಟಿಗರ ಪ್ರತಿಕ್ರಿಯೆ

ಶಶಾಂಕ್ ಅವರ ಈ ಪೋಸ್ಟ್ ವೈರಲ್‌ ಆಗುತ್ತಿದ್ದಂತೆ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಅನೇಕ ನೆಟ್ಟಿಗರು ತಮ್ಮ ಸ್ವಂತ ಅನುಭವಗಳನ್ನ ಹಂಚಿಕೊಳ್ಳುವ ಮೂಲಕ ಈ ಮಾತನ್ನು ಒಪ್ಪಿಕೊಂಡಿದ್ದಾರೆ. "ಭಾರತದಲ್ಲಿ ನಿಜಕ್ಕೂ ಇದೊಂದು ದೊಡ್ಡ ಕಂಫರ್ಟ್ ಝೋನ್. ಅಲ್ಲಿಂದ ಹೊರಬಂದು ಉದ್ಯಮಿಯಾಗುವುದು, ರಿಸ್ಕ್ ತೆಗೆದುಕೊಳ್ಳುವುದು ಬಹಳ ಕಷ್ಟ," ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸುತ್ತಾ, "ನಾನು ನನ್ನ ಸ್ವಂತ ಸ್ಟಾರ್ಟ್ಅಪ್ ಶುರು ಮಾಡುವಾಗ ನನಗೂ 2 ಲಕ್ಷ ರೂಪಾಯಿ ಸಂಬಳ ಬರುತ್ತಿತ್ತು. ಆರಾಮದಾಯಕ ಜೀವನ ಎನ್ನುವುದು ಒಂದು ಚಿನ್ನದ ಪಂಜರ ಇದ್ದಂತೆ, ಅದನ್ನು ಒಡೆದು ಹೊರಬಂದರಷ್ಟೇ ನಿಮ್ಮ ಸಾಮರ್ಥ್ಯ ಏನೆಂದು ನಿಮಗೆ ಅರಿವಾಗುತ್ತದೆ," ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+