ಚಿಣ್ಣರ ಸೃಜನಶೀಲತೆಯ ಅಭಿವ್ಯಕ್ತಿಗೆ ವೇದಿಕೆ ಈ 'ಮಕ್ಕಳ ಹಬ್ಬ'

ಬೆಂಗಳೂರು, ನವೆಂಬರ್ 02: ಬಾಲ್ಯದ ಸುವರ್ಣಯುಗವನ್ನು ನೆನಪಿಸುವುದಕ್ಕಾಗಿ ಮತ್ತು ಮಕ್ಕಳಲ್ಲಿನ ಸೃಜನಶೀಲತೆಯ ಪ್ರಕಟಣೆಗೆ ವೇದಿಕೆಯಾಗುವುದಕ್ಕಾಗಿ 'ಮಕ್ಕಳ ಹಬ್ಬ' ಎಂಬ ವಿನೂತನ ಕಾರ್ಯಕ್ರಮವೊಂದು ನಡೆಯುತ್ತಿದೆ. ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನವೆಂಬರ್ 11 ರಿಂದ 14 ರವರೆಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಮತ್ತು ಬಾಲಭವನ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ಮಕ್ಕಳಿಂದ ಜಾನಪದ ಕಲಾಪ್ರದರ್ಶಸನ, ನಾಟಕ ಪ್ರದರ್ಶನ, ಕುಸ್ತಿ, ಮಲ್ಲಕಂಬ, ಚಿತ್ರಕಲಾ ಪ್ರದರ್ಶನ, ವೈಜ್ಞಾನಿಕ ಪ್ರದರ್ಶನ, ರಾಜ್ಯ ಹಾಗೂ ಹೊರ ರಾಜ್ಯದ ಮಕ್ಕಳಿಂದ ನೃತ್ಯ ಪ್ರಕಾರ ಪ್ರದರ್ಶನ, ಕನ್ನಡ ಕಿರೀಟದ ಗರಿಗಳು ಸೇರಿದಂತೆ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ವಿಭಿನ್ನ ಕಾರ್ಯಕ್ರಮಗಳು ಮನರಂಜಿಸಲಿವೆ.

ಮಕ್ಕಳ ಈ ಕಾರ್ಯಕ್ರಮಗಳನ್ನು ಸಭಿಕರು ಕಣ್ತುಂಬಿಸಿಕೊಳ್ಳಬಹುದು. ಹಾಗೆಯೇ ಕೆಲ ಗ್ರಾಮೀಣ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು ಕೂಡ. ಗ್ರೀಣ ಆಟಗಳು, ಜೇಡಿ ಮಣ್ಣಿನ ಆಕೃತಿ ತಯಾರಿ, ಕ್ವಿಜ್, ಕಥೆ ಹೇಳುವುದು, ನಾಟಕ, ಚಿತ್ರಕಲೆ ಸೇರಿದಂತೆ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಮಕ್ಕಳೊಂದಿಗೆ ದೊಡ್ಡವರೂ ಪಾಲ್ಗೊಳ್ಳಬಹುದು.

Bengaluru: Makkala Habba by WCD of Karnataka goovernment on No 11th to 14th

ಈ ಎಲ್ಲ ಕಾರ್ಯಕ್ರಮಗಳಿಗೂ ಪ್ರವೇಶ ಉಚಿತವಾಗಿದ್ದು ಮಕ್ಕಳೊಂದಿಗೆ, ಮಕ್ಕಳಾಗಬಯಸುವವರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ, ಮಕ್ಕಳನ್ನು ಪ್ರೋತ್ಸಾಹಿಸುವಂತೆ ಕೋರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+