Bengaluru Longest Flyover: ಅತೀ ಉದ್ದದ ರಸ್ತೆ ಮೇಲ್ಸೇತುವೆಗೆ ಯೋಜನೆ, ಎಲ್ಲಿಂದ-ಎಲ್ಲಿಗೆ? ವೆಚ್ಚ, ಪ್ರಯೋಜನ, ಆರಂಭದ ಮಾಹಿತಿ

ಬೆಂಗಳೂರು, ನವೆಂಬರ್ 22: ರಾಜ್ಯ ಸರ್ಕಾರ ಸೇರಿದಂತೆ ಸಂಬಂಧಿಸಿದ ಪ್ರಾಧಿಕಾರಗಳು ಬೆಂಗಳೂರಿನಲ್ಲಿನ ಸಂಚಾರ ದಟ್ಟಣೆಗೆ, ಅಭಿವೃದ್ಧಿಗೆ ಹೆಚ್ಚು ಗಮನ ಹರಿಸುತ್ತಿವೆ. ಟ್ರಾಫಿಕ್ ಕಡಿವಾಣಕ್ಕೆ ವಿವಿಧ ಹಾಲಿ ಯೊಜನೆಗಳ ಬೆನ್ನಲ್ಲೆ ಹೊಸ ಯೋಜನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೈಗೆತ್ತಿಕೊಂಡಿದೆ. ಇದರಡಿ ಬೆಂಗಳೂರಿನಲ್ಲಿ ಅತೀ ಉದ್ದದ ಮೇಲ್ಸೇತುವೆ ನಿರ್ಮಾಣ ಮಾಡಲು ನಿರ್ಧರಿಸಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ಈ ನೂತನ ಅತೀ ಉದ್ದದ ರಸ್ತೆ ಮೇಲ್ಸೇತುವೆ (Bengaluru longest flyover) ಹಳೇ ಮದ್ರಾಸ್ ರಸ್ತೆಯಲ್ಲಿ ಸುಮಾರು 1,500 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಈ ಯೋಜನೆ ಸಾಕಾರಗೊಳ್ಳಲಿದೆ. ಮುಖ್ಯವಾಗಿ ಈ ಯೋಜನೆಗೆ ಭೂಸ್ವಾಧೀನದ ಅಗತ್ಯತೆ ಇಲ್ಲ ಎಂದು ಪ್ರಾಧಿಕಾರ ತಿಳಿಸಿದೆ. ಹಾಗಾದರೆ ಇದರ ನಿರ್ಮಾಣ ಹೇಗೆ, ಯಾವ ಮಾರ್ಗ ಸಂಪಕಿಸುತ್ತದೆ, ಕಿಲೋ ಎಷ್ಟು, ಕಾಮಗಾರಿ ಆರಂಭ-ಮುಕ್ತಾಯದ ಮಹತ್ವದ ಮಾಹಿತಿ ಇಲ್ಲಿದೆ.

flyover-will-build-in-old-madras-road-by-nhai

ರಾಜಧಾನಿಯ ವಿವಿಧ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಇರುವಂತೆ ಹಳೆ ಮದ್ರಾಸ್ ರಸ್ತೆ ಯಾವಾಗಲೂ ಅತ್ಯಧಿಕ ವಾಹನಗಳಿಂದ ತುಂಬಿರುತ್ತದೆ. ಇದರಿಂದ ಜನರಿಗೆ, ಬೇರೆ ಬೇರೆ ಊರುಗಳಿಗೆ ತೆರಳುವವರಿಗೆ ಸಮಸ್ಯೆ ಆಗುತ್ತಿದೆ. ಈ ಕಾರಣದಿಂದ ಎಚ್‌ಎಚ್‌ಎಐ ಒಟ್ಟು ಸುಮಾರು 15ಕಿಲೋ ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಿಸಿ ಸಂಚಾರಕ್ಕೆ ಮತ್ತಷ್ಟು ಅನುಕೂಲ ಮಾಡಿಕೊಡಲಿದೆ.

ಇಲ್ಲಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ

ಇದು ಕೆಆರ್‌ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಿಂದ ಎಚ್‌ವಿಎಂ ಆಸ್ಪತ್ರೆ ವರೆಗೆ ನಿರ್ಮಾಣವಾಗಲಿದೆ. ಇದು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಸಂಪರ್ಕ ಕಲ್ಪಿಸಲಿದೆ. ಇದರಿಂದ ಹಳೆ ಮದ್ರಾಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಜೊತೆಗೆ ಈ ಭಾಗದ ಸುತ್ತಮುತ್ತಲಿನ ಟ್ರಾಫಿಕ್ ಸಮಸ್ಯೆಗಳಿಗೂ ಮುಕ್ತ ಸಿಗಲಿದೆ.

ಕೆಆರ್‌ಪುರ ಪೊಲೀಸ್‌ ಠಾಣೆಯಿಂದ ಮೇಡಹಳ್ಳಿ, ಕಾಟಮನಲ್ಲೂರು ಜಂಕ್ಷನ್, ಹೊಸಕೋಟೆ ಜಂಕ್ಷನ್ ಮೂಲಕ ಎಂವಿಜೆ ಆಸ್ಪತ್ರೆಗೆ ವರೆಗೆ ಒಟ್ಟು 15 ಕಿಲೋ ಮೀಟರ್ ಮೇಲ್ಸೇತುವೆ ತಲೆ ಎತ್ತಲಿದೆ. ಆದರೆ ಈ ಮೂರು ಸ್ಥಳಗಳಲ್ಲಿರುವ ಮೇಲ್ಸೇತುವೆಯನ್ನು ಹೊಸ ಯೋಜನೆಗಾಗಿ ತೆರವು ಮಾಡುವುದಿಲ್ಲ ಎಂದು ಎನ್‌ಎಚ್‌ಐಎ ಬೆಂಗಳೂರು ಯೋಜನಾ ನಿರ್ದೇಶಕ ಕೆ.ಬಿ. ಜಯಕುಮಾರ್ ಮಾಹಿತಿ ನೀಡಿದ್ದಾರೆ.

flyover-will-build-in-old-madras-road-by-nhai

ವಿಶೇಷತೆ- ಪ್ರಯೋಜನಗಳು

ಒಟ್ಟು 06 ಪಥಗಳ (ಲೈನ್) ಮೇಲ್ಸೇತುವೆ ಇದಾಗಿರಲಿದೆ. ನಗರದ ಅತೀ ಉದ್ದದ ಕ್ಯಾರಿಯೇಜ್ ವೇ ಆಗಲಿದೆ. ಸದ್ಯ ಎಲೆಕ್ಟ್ರಾನಿಕ್ ಸಿಟಿ ಎಕ್ಸ್ಪ್ರೆಸ್ (NH04) ಕೇವಲ 9.98 ಕಿಮೀ ಇದೆ. ಕೆಆರ್ ಪುರಂನ ಹಾಲಿ ಕೇಬಲ್ ಮೇಲ್ಸೇತುವೆಯಿಂದ ಉದ್ದೇಶಿತ ಹೊಸ ಮೇಲ್ಸೇತುವೆಗೆ ಸಂಪರ್ಕ ನೀಡುವಂತೆ ಸ್ಥಳಯರಿಂದ ಮನವಿ ಕೇಳಿ ಬಂದಿವೆ. ಆದರೆ ಹೀಗೆ ಸಂಪರ್ಕ ಕಲ್ಪಿಸಲು ಆಗುವುದಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಈ ನಿರ್ಧಾರಗಳು ಅಂತಿಮವಾಗಿಲ್ಲ

ಅತಿ ಉದ್ದದ ಮೇಲ್ಸೇತುವೆ ಬರುವ ಪ್ರದೇಶಗಳಲ್ಲಿನ ಮೇಲ್ಸೇತುವೆ, ಟೋಲ್‌ ಪ್ಲಾಜ್ ಕುರಿತು ಚರ್ಚೆಗಳು ಗರಿಗೆದರಿವೆ. ಸದ್ಯ ಕೊಳತ್ತೂರಿಗೆ ಟೋಲ್ ಪ್ಲಾಜಾ ಸ್ಥಳಾಂತರಿಸಲು ಸಾಧ್ಯವಿಲ್ಲ. ಹೊಸಕೋಟೆಯಲ್ಲಿನ ಟೋಲ್ ಪ್ಲಾಜಾದಿಂದ ಯೋಜನೆಗೆ ತೊಂದರೆಯೇ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಟೋಲ್ ಪ್ಲಾಜಾ ಮೇಲೆ ಹೊಸ ಮೇಲ್ಸೇತುವೆ ನಿರ್ಮಾಣವಾಗಲಿದೆ. ಇದೆಲ್ಲ ಅಂಶಗಳು ಕುರಿತು ಯಾವ ನಿರ್ಧಾರಗಳು ಅಂತಿಮಗೊಂಡಿಲ್ಲ. ಆತಂಕ ಬೇಡ ಎಂದು ಪ್ರಾಧಿಕಾರ ತಿಳಿಸಿದೆ.

ಯೋಜನೆ ಆರಂಭ-ಅಂತ್ಯ ಯಾವಾಗ?

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಈ ಯೋಜನೆ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸುತ್ತಿದೆ. ಈ ತಯಾರಿಕೆ 2024ರ ಮಾರ್ಚ್‌ಗೆ ಮುಗಿಯುತ್ತಿದ್ದಂತೆ 2025ರಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಆರಂಭವಾದ ಬಳಿಕ ಎರಡು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸುವ ಗುರಿ ಇದೆ. ಅಂದಾಜು ವೆಚ್ಚ 1500 ಕೋಟಿ ರೂ.ಹಣವನ್ನು ಎನ್‌ಎಚ್‌ಎಐ ಮತ್ತು ಗುತ್ತಿಗೆದಾರರು ಹಂಚಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+