Bengaluru KIA New Rules: ಟರ್ಮಿನಲ್ ಪ್ರವೇಶಕ್ಕೆ ಖಾಸಗಿ ವಾಹನಗಳಿಗೆ ಶುಲ್ಕ ಹೇರಿಕೆ
ಬೆಂಗಳೂರು, ಮೇ 21: ವಾರ್ಷಿಕವಾಗಿ ಲಕ್ಷಾಂತರ ಜನರಿಗೆ ಸೇವೆ ನೀಡುವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಆವರಣದಲ್ಲಿ ಇತ್ತೀಚೆಗೆ ಹೆಚ್ಚು ವಾಹನದಟ್ಟಣೆ ಕಂಡು ಬರುತ್ತಿದೆ. ಈ ದಟ್ಟಣೆ ತಪ್ಪಿಸಿ, ಸೂಕ್ತ ಸಂಚಾರಕ್ಕೆ ಅನುಕೂಲ ಮಾಡುವ ನಿಟ್ಟಿನಲ್ಲಿ ಪಿಕ್‌ಅಪ್ ವಾಹನಗಳಿಗೆ ಶುಲ್ಕ ವಿಧಿಸಲಾಗಿದೆ.
ಬೆಂಗಳೂರು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಇನ್ನು ಮುಂದೆ ಪಿಕ್ಅಪ್ ಮತ್ತು ಡ್ರಾಪ್ ಗೆ ಬರುವ ಖಾಸಗಿ ಮತ್ತು ವಾಣಿಜ್ಯ ವಾಹನಗಳಿಗೆ ಈ ಶುಲ್ಕ ನಿಯಮ ಅನ್ವಯಿಸಲಿದೆ. ಈ ವಾಹನಗಳಿಗೆ 150 ರೂಪಾಯಿ ನಿಗದಿ ಮಾಡಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ ಒಂದು ಮತ್ತು ಟರ್ಮಿನಲ್ ಎರಡರಲ್ಲಿ ಪಿಕ್ ಅಪ್ ಮತ್ತು ಡ್ರಾಪ್‌ಗೆ ಬರುವ ವಾಹನಗಳಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಪ್ರಯಾಣಿಕರನ್ನು ಇಳಿಸಲು, ಇಲ್ಲವೇ ನಿಲ್ದಾಣದಿಂದ ಹತ್ತಿಸಿಕೊಂಡು ತೆರಳು ಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ. ಇದು ಇಲ್ಲಿ ಟ್ರಾಫಿಕ್‌ಗೆ ಕಾರಣವಾಗುತ್ತಿದೆ.
ಏಳು ನಿಮಿಷಕ್ಕೆ 150 ರೂಪಾಯಿ ನಿಗದಿ
ಹೀಗಾಗಿ ಪಿಕ್‌ಅಪ್ ಮತ್ತು ಡ್ರಾಪ್‌ಗೆ ಟರ್ಮಿನಲ್ ಪ್ರವೇಶಿರುವ ವಾಹನಗಳಿಗೆ ವಾಣಿಜ್ಯ ವಾಹನಗಳಿಗೆ ಮೊದಲು 07 ನಿಮಿಷ 150 ರೂಪಾಯಿ ನಿಗದಿ ಮಾಡಲಾಗಿದೆ. ನಂತರದ ಏಳು ನಿಮಿಷ 150 ರೂಪಾಯಿ ವಿಧಿಸಲಾಗುವುದು. ಬಸ್‌ಗಳಿಗೆ 600 ರೂಪಾಯಿ ಶುಲ್ಕ ಹೇರಲಾಗಿದೆ.
ಇನ್ನೂ ಖಾಸಗಿ ವಾಹನಗಳಿಗೆ ಮೊದಲು ಏಳು ನಿಮಿಷ ಉಚಿತ ಪ್ರವೇಶಕ್ಕೆ ಅವಕಾಶ ಇದೆ. ನಂತರ ಏಳು ನಿಮಿಷ ಅಂದರೆ ಎಂಟನೇ ನಿಮಿಷದಿಂದ ಹದಿನೈದನೇ ನಿಮಿಷಗಳವರೆಗೆ 150 ರೂಪಾಯಿ ಶುಲ್ಕ ಹೇರಲಾಗಿದೆ. ಏರ್‌ಪೋರ್ಟ್ ಟರ್ಮಿನಲ್ ನಲ್ಲಿ 15 ನಿಮಿಷಕ್ಕಿಂತ ಹೆಚ್ಚಾಗಿ ನಿಂತುಕೊಂಡರೆ, ಆ ವಾಹನಗಳನ್ನು ಟೋಯಿಂಗ್ ಮೂಲಕ ಠಾಣೆಗೆ ತೆಗೆದುಕೊಂಡು ಹೋಗಲಾಗುವುದು.

ಏರ್‌ಪೋರ್ಟ್‌ನಲ್ಲಿ ಶುಲ್ಕ, ಸಮಯದ ಫಲಕ
ಟೋಯಿಂಗ್ ಆದ ವಾಹನಗಳಿಗೆ ಆಯಾ ಮಾಲೀಕರ ಜವಾಬ್ದಾರರಾಗಿದ್ದು, ಅವರೇ ಟೋಯಿಂಗ್ ಹಣ ಭರಿಸಬೇಕಿರುತ್ತದೆ ಎಂದು ತಿಳಿಸಲಾಗಿದೆ. ಈ ಕುರಿತು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು, ಎರಡು ಟರ್ಮಿನಲ್‌ಗಳ ಮುಂದೆ ಶುಲ್ಕ, ಸಮಯದ ಎಚ್ಚರಿಕೆ ಕುರಿತು ಫಲಕ ಅಳವಡಿಸಿದೆ.
ಬೆಂಗಳೂರು ಏರ್‌ಪೋರ್ಟ್ ಈ ನಿರ್ಧಾರದಿಂದ ಕೆಲವು ವಾಣಿಜ್ಯ ವಾಹನಗಳು ಅಂದರೆ, ಟ್ಯಾಕಿ, ಒಲಾ, ಊಬರ್ ಇನ್ನಿತರ ವಾಣಿಜ್ಯ ವಾಹನಗಳಿಗೆ ತೊಂದರೆ ಆಗುವ ಸಾಧ್ಯತೆ. ಕೆಲವೊಮ್ಮೆ ವಿಮಾನಗಳು ತಡವಾಗಿ ಬಂದಾಗ, ಇಲ್ಲವೇ ನಿಯಮ ಗೊತ್ತಿಲ್ಲದೆ ಎಂದಿನಂತೆ ವಾಹನಗಳು ಟರ್ಮಿನಲ್ ಪ್ರವೇಶಿಸಿದಾಗ ತೊಂದರೆ ಆಗಬಹುದು. ಈ ಬಗ್ಗೆ ಅರಿವು ಮೂಡಿಸಿ ನಂತರ ಶುಲ್ಕ ವಿಧಿಸಬಹುದಾಗಿತ್ತು ಎಂದು ಕೆಲವು ವಾಣಿಜ್ಯ ವಾಹನಗಳ ಮಾಲೀಕರು ಅಭಿಪ್ರಾಯಪಟ್ಟಿದ್ದಾರೆ.
ಇದಾಗಿ ಕೆಲ ಹೊತ್ತಿನಲ್ಲಿ ನಿಲ್ದಾಣದಲ್ಲಿ ಪ್ರವೇಶ ಶುಲ್ಕದ ಬೋರ್ಡ್ ನೋಡಿದ ಖಾಸಗಿ, ವಾಣಿಜ್ಯ ವಾಹನಗಳ ಮಾಲೀಕರು, ಆಕ್ರೊಶ ವ್ಯಕ್ತಪಡಿಸಿದ್ದಾರೆ. ಏಳು ನಿಮಿಷಕ್ಕೆ ಇಷ್ಟೊಂದು ಶುಲ್ಕ ಕಟ್ಟಿದರೆ ಜೀವನ ನಡೆಯುವುದು ಹೇಗೆ ಎಂದೆಲ್ಲ ದೂರಿದ್ದಾರೆ.
ಬಳಿಕ ಎಚ್ಚೆತ್ತ ಬೆಂಗಳೂರು ಏರ್‌ಪೋರ್ಟ್ ಆಡಳಿತ ಮಂಡಳಿ ಹೊರಡಿಸಿದ್ದ ಪ್ರವೇಶಿ ಶುಲ್ಕದ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.












Click it and Unblock the Notifications