ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ಗೆ 8 ಹೊಸ ವಿಮಾನ ಸೇರ್ಪಡೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 31: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 8 ವಿಮಾನಗಳು ಹೊಸದಾಗಿ ಸೇರ್ಪಡೆಯಾಗಿವೆ.

ಇಥೋಪಿಯನ್ ಏರ್‌ಲೈನ್ಸ್ ಆಫ್ರಿಕಾದಲ್ಲಿ ಸೋಮವಾರ ಅಡಿಸ್ ಅಬಾಬಕ್ಕೆ ನೇರವಿಮಾನಯಾನ ಸೌಲಭ್ಯವನ್ನು ಕಲ್ಪಿಸಿದೆ. ಇದು ಗುರುವಾರ 12.37ಕ್ಕೆ ಬೆಂಗಳೂರಲ್ಲಿ ಲ್ಯಾಂಡ್ ಆಗಿದೆ.

ದೇಶದಲ್ಲಿ 2024ರೊಳಗೆ 100 ಹೆಚ್ಚುವರಿ ಏರ್‌ಪೋರ್ಟ್‌ ನಿರ್ಮಾಣದೇಶದಲ್ಲಿ 2024ರೊಳಗೆ 100 ಹೆಚ್ಚುವರಿ ಏರ್‌ಪೋರ್ಟ್‌ ನಿರ್ಮಾಣ

ಡಚ್ ಕ್ಯಾರಿಯರ್ ಕೆಎಲ್‌ಎಂ ಆಂಸ್ಟರ್‌ಡಮ್‌ಗೆ ವಾರಕ್ಕೆ ಮೂರು ಬಾರಿ ಸಂಚರಿಸುವ ವಿಮಾನಕ್ಕೆ ಬುಧವಾರ ಚಾಲನೆ ನೀಡಿದ್ದಾರೆ.

Bengaluru Kempegowda Airport Gets 8 Flight this Week

ಏರ್‌ಫ್ರಾನ್ಸ್‌ನ ಬೆಂಗಳೂರು-ಪ್ಯಾರಿಸ್, ದೆಹಲಿ-ಪ್ಯಾರಿಸ್‌ಗೆ ವಿಮಾನ ಸೇವೆ ಆರಂಭಿಸಲಾಗಿದೆ. ಗೋ ಏರ್‌ ವಿಮಾನವು ಬೆಂಗಳೂರಿನಿಂದ ದೆಹಲಿಗೆ ವಾರಕ್ಕೊಮ್ಮೆ ಸಂಚರಿಸಲಿದೆ. ಹಾಗೆಯೇ ಇಂಡಿಗೋ ವಿಮಾನವು ಬೆಂಗಳೂರು-ಶಿರಡಿ, ರಾಜಮುಂಡ್ರಿ, ಬೆಳಗಾವಿ ನಡುವೆ ಅಕ್ಟೋಬರ್‌ 27ರಿಂದ ಸೇವೆ ಆರಂಭಿಸಿದೆ.

ಇಂಡಿಗೋ ವಿಮಾನವು ಬೆಂಗಳೂರು-ಟುಟಿಕೋರನ್ ನಡುವೆ ಇಂದಿನಿಂದ ವಿಮಾನ ಸೇವೆ ಆರಂಭಗೊಳಿಸಲಿದೆ. ಬೆಂಗಳೂರಿನಿಂದ ಟೋಕಿಯಗೆ 2020ರ ಮಾರ್ಚ್ 29ರಿಂದ ನೇರ ವಿಮಾನ ಸೌಲಭ್ಯ ಕಲ್ಪಿಸಿಕೊಡಲಾಗುತ್ತದೆ. ನವೆಂಬರ್ 6ರಿಂದ ಬುಕಿಂಗ್ ತೆರೆದುಕೊಳ್ಳಲಿದೆ.

ಟೋಕಿಯೋಗೆ ಇಷ್ಟು ದಿನ ಕೇವಲ ಚೆನ್ನೈನಿಂದ ನೇರ ವಿಮಾನ ಸೌಲಭ್ಯವಿತ್ತು. ಇದೀಗ ಬೆಂಗಳೂರಿನಿಂದ ಆರಂಭಗೊಳ್ಳಲಿದೆ.

English summary
Eight new flights and routes, both domestic and international, are being introduced this week from Kempegowda International Airport (KIA).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X