• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವರದಿಗಾರನಿಗೆ ಕೊರೊನಾ ಸೋಂಕು: ಬೆಂಗಳೂರು ಪ್ರೆಸ್‌ಕ್ಲಬ್ ಸೀಲ್‌ಡೌನ್

|

ಬೆಂಗಳೂರು, ಜೂನ್ 27: ರಾಷ್ಟ್ರೀಯ ಸುದ್ದಿವಾಹಿನಿಯ ವರದಿಗಾರರೊಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

   Community spreading started in India ? The stats are scary | Oneindia Kannada

   ಅವರು ಪ್ರೆಸ್‌ಕ್ಲಬ್‌ಗೂ ಭೇಟಿ ನೀಡಿದ್ದ ಕಾರಣ ಮುಂದಿನ ಆದೇಶ ಬರುವವರೆಗೂ ಪ್ರೆಸ್‌ಕ್ಲಬ್ ಸೀಲ್‌ಡೌನ್ ಮಾಡಿ ಆದೇಶ ಹೊರಡಿಸಲಾಗಿದೆ.

   ಬೆಂಗಳೂರು; ಕೊರೊನಾ ಸೋಂಕಿತರಿಗಾಗಿಯೇ 50 ಅಂಬ್ಯುಲೆನ್ಸ್ ಮೀಸಲು

   ನೃಪತುಂಗ ರಸ್ತೆಯ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಡಿಜಿ ಐಜಿಪಿ ಸಭೆಯಲ್ಲಿ ಪಾಲ್ಗೊಂಡು ಬಳಿಕ ಪ್ರೆಸ್‌ಕ್ಲಬ್‌ಗೆ ಹೋಗಿದ್ದರು. ಪ್ರೆಸ್‌ಕ್ಲಬ್‌ನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ, ಬಳಿಕ ಬಿಬಿಎಂಪಿಯಿಂದ ಕರೆ ಬಂದಿದ್ದು, ಅವರಿಗೆ ಕೊರೊನಾ ಪಾಸಿಟಿವ್ ಇರುವುದಾಗಿ ತಿಳಿದುಬಂದಿದೆ.

   ಕೂಡಲೇ ಅವರು ಹಾಗೂ ಕುಟುಂಬದವರನ್ನು ಗೃಹಬಂಧನದಲ್ಲಿರಿಸಲಾಗಿದೆ. ಸುದ್ದಿಗಾರರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರೆಲ್ಲರಿಗೂ ನೊಟಿಸ್ ಜಾರಿಮಾಡಲಾಗಿದೆ.

   ಬೆಂಗಳೂರಿನಲ್ಲಿ ಶುಕ್ರವಾರ 144 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಒಟ್ಟು 1935 ಪ್ರಕರಣಗಳಿವೆ. ಶುಕ್ರವಾರ 21 ಮಂದಿ ಬಿಡುಗಡೆಯಾಗಿದ್ದಾರೆ. 1327 ಪ್ರಕರಣಗಳು ಸಕ್ರಿಯವಾಗಿವೆ.

   ಒಟ್ಟು 81 ಮಂದಿ ಮೃತಪಟ್ಟಿದ್ದಾರೆ. ಇದುವರೆಗೂ ಒಟ್ಟು 526 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ.

   English summary
   Reported For the National Television Channel in Bengaluru tested Postive For Coronavirus.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X