ಬೆಂಗಳೂರು: ಪತ್ರಕರ್ತ ಆತ್ಮಹತ್ಯೆಗೆ ಶರಣು, ಕಾರಣ ನಿಗೂಢ
ಬೆಂಗಳೂರು, ಜೂನ್ 06: ಪತ್ರಕರ್ತ ನಯಾಜ್ ಖಾನ್ ಎಂಬುವರು ಕೆ.ಆರ್.ಪುರಂ ನ ನಿವಾಸದಲ್ಲಿ ನಿನ್ನೆ ಈದ್-ಉಲ್-ಫಿತ್ರ್ ದಿನವೇ ನೇಣಿಗೆ ಶರಣಾಗಿದ್ದಾರೆ.
ನಯಾಜ್ ಖಾನ್ ಅವರು ಪ್ರಜಾ ಟಿವಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಅವರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ನಯಾಜ್ ಖಾನ್ ಅವರ ಮಗಳಿಗೆ ಹೃದಯದ ಖಾಯಿಲೆ ಇದ್ದು, ಅದಕ್ಕಾಗಿ 5-6 ಲಕ್ಷ ಸಾಲಮಾಡಿಕೊಂಡಿದ್ದರು ಸಾಲದಿಂದ ಹೊರಬರಲಾಗದೆ ನೊಂದು ಪವಿತ್ರ ಹಬ್ಬದಂದೇ ಜೀವ ಅಂತ್ಯಗೊಳಿಸಿಕೊಂಡಿದ್ದಾರೆ ಎಂದು ನಯಾಜ್ ಖಾನ್ ಅವರ ಕೆಲವು ಗೆಳೆಯರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ನಯಾಜ್ ಖಾನ್ ಅವರಿಗೆ ಕೆಲವು ತಿಂಗಳಿನಿಂದ ಸಂಬಳವಾಗಿರಲಿಲ್ಲ ಸಾಲದಲ್ಲಿದ್ದ ನಯಾಜ್ ಖಾನ್ ಇದಕ್ಕಾಗಿಯೇ ಜೀವ ಬಿಟ್ಟಿದ್ದಾರೆ ಎಂದು ಕೆಲವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಸಾಕಷ್ಟು ಮಂದಿ ಪತ್ರಕ್ತರು ನಯಾಜ್ ಖಾನ್ ಅವರ ಅಗಲಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications