ಸ್ನೇಹಿತನಿಗೆ ಬುರ್ಖಾ ಕೊಟ್ಟು ಲೇಡೀಸ್ ಹಾಸ್ಟೆಲ್‌ಗೆ ಕರೆಸಿಕೊಂಡ ಯುವತಿ, ಕಾರಣ ಶಾಕಿಂಗ್
ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿರುವ ಲೇಡೀಸ್ ಹಾಸ್ಟೆಲ್‌ನಲ್ಲಿ ವಿಚಿತ್ರ ಸಂಗತಿಯೊಂದು ನಡೆದಿದೆ. ಯುವಕನೊಬ್ಬ ಬುರ್ಖಾ ಧರಿಸಿ ನೇರವಾಗಿ ಇಲ್ಲಿನ ವಿದ್ಯಾರ್ಥಿನಿಲಯಕ್ಕೆ ರಾಜಾರೋಷವಾಗಿ ನುಗ್ಗಿದ್ದಾನೆ. ಆದರೆ ಬುರ್ಖಾ ನಡಿಗೆ ಯಾಕೋ ಮಿಸ್ ಹೊಡೀತಿದೆಯಲ್ಲ ಅಂತ ಅನುಮಾನ ಬಂದ ಕೂಡಲೇ ಅಲ್ಲಿದ್ದವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆದ್ರೆ ಯುವಕ ಬುರ್ಖಾ ಧರಿಸಿ ಹಾಸ್ಟೆಲ್‌ಗೆ ನುಗ್ಗಿದ್ದು, ಏನೋ ಕಳ್ಳತನ ಮಾಡೋಕಂತೂ ಅಲ್ಲ. ಪೊಲೀಸರ ರುಚಿ ನೋಡಿದ ಮೇಲೆ ಯುವಕ ಬಾಯ್ಬಿಟ್ಟಿರುವ ವಿಚಾರ ಎಲ್ಲರಿಗೂ ಶಾಕ್ ನೀಡಿದೆ. ಇಷ್ಟಕ್ಕೂ ಆ ಟ್ವಿಸ್ಟ್ ಏನು ಗೊತ್ತಾ?
ಜ್ಞಾನಭಾರತಿ ಬಳಿ ಇರುವ ವಿಸ್ತಾರವಾದ ಭೂ ಪ್ರದೇಶದಲ್ಲಿ ಕಾಲೇಜುಗಳಿವೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಲ್ಲಿ ಹಲವು ಹಾಸ್ಟೆಲ್‌ಗಳೂ ಇವೆ. ಯುವತಿಯರಿಗೂ ಅಲ್ಲಿ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇದ್ದು, ಇಲ್ಲಿ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಹಾಸ್ಟೆಲ್ ಒಳಗೆ ಹೋಗಲು ಪ್ಲ್ಯಾನ್ ಮಾಡಿದ್ದ ಯುವಕ ಕೊನೆಗೆ ಯಶಸ್ವಿಯಾಗಿ ಎಂಟ್ರಿ ಕೂಡ ಕೊಟ್ಟಿದ್ದಾನೆ. ಆದ್ರೆ, ಹಾವ-ಭಾವದಲ್ಲಿ ಅನುಮಾನ ಬಂದೇ ಬರುತ್ತೆ ಅಲ್ವಾ? ಇಲ್ಲಿ ನಡೆದಿದ್ದೂ ಅದೇ ಹಾಸ್ಟೆಲ್ ನೋಡಲು ಹೋದವನು ಕೊನೆಗೆ ಜೈಲು ನೋಡುವಂತಾಗಿದೆ. ಇಷ್ಟಕ್ಕೂ ಆತ ಹಾಸ್ಟೆಲ್ ಒಳಗೆ ನುಗ್ಗಿದ್ದು ಯಾವ ಕಾರಣಕ್ಕೆ ಅನ್ನೋ ಅಸಲಿ ವಿಚಾರ ಇಲ್ಲಿದೆ ನೋಡಿ..

ಇನ್ನು ಬುರ್ಖಾ ಧರಿಸಿದ್ದ ಯುವಕ ಮಾಲೂರು ಮೂಲದವನು ಎಂದು ಗೊತ್ತಾಗಿದೆ. ಈತನನ್ನು ಜ್ಞಾನಭಾರತಿ ಪೊಲೀಸರು ಎತ್ತಾಕೊಂಡು ಹೋಗಿ ಏನಪ್ಪಾ ನಿನ್ ಕಥೆ ಎಂದು ಕೇಳಿದ್ದಾರೆ. ಆಗಲೇ ನೋಡಿ ಅಸಲಿ ವಿಚಾರ ಗೊತ್ತಾಗಿದ್ದು. ತನ್ನ ಸ್ನೇಹಿತೆ ಇದೇ ಹಾಸ್ಟೆಲ್‌ನಲ್ಲಿದ್ದು ಆಕೆಯನ್ನು ನೋಡಲು ಹೋಗಿದ್ದಾಗಿ ಬುರ್ಖಾ ಕಥೆ ಬಿಚ್ಚಿಟ್ಟಿದ್ದಾನೆ. ಆದರೆ, ಯಾಕೋ ಮಿಸ್ ಹೊಡೀತಿದೆಯಲ್ಲ ಅಂತ ಪೊಲೀಸರು ಇನ್ನೂ ಚೂರು ಬೆಂಡೆತ್ತಿದಾಗ ಅಸಲಿ ಕಥೆ ಹೇಳಿದ್ದಾನೆ.
ನಾನು ಕೋಲಾರ ಜಿಲ್ಲೆಯ ಮಾಲೂರು ಕಡೆಯವನು. ಇದೇ ಹಾಸ್ಟೆಲ್‌ನಲ್ಲಿ ನನ್ನ ಸ್ನೇಹಿತೆ ಇದ್ದಾಳೆ. ನನಗೆ ಉಳಿಯಲು ಎಲ್ಲೂ ಜಾಗ ಸಿಗಲಿಲ್ಲ. ಇದರಿಂದ ಏನು ಮಾಡುವುದು ಎಂದು ತಲೆಕೆಡಿಸಿಕೊಂಡಿದ್ದೆ. ಈ ವಿಚಾರವನ್ನು ಹಾಸ್ಟೆಲ್‌ನಲ್ಲಿರೋ ನನ್ನ ಸ್ನೇಹಿತೆಗೂ ತಿಳಿಸಿದೆ. ಅದಕ್ಕೆ ಆಕೆಯೇ ಒಂದು ಪ್ಲ್ಯಾನ್ ಕೊಟ್ಟಳು. ಅದೇನಂದ್ರೆ, ಬುರ್ಖಾ ಹಾಕ್ಕೊಂಡು ನಮ್ಮ ಹಾಸ್ಟೆಲ್‌ಗೆ ಬಂದುಬಿಡು, ಯಾರಿಗೂ ಗೊತ್ತಾಗಲ್ಲ ಎಂದು ಐಡಿಯಾ ಕೊಟ್ಟಳಂತೆ ಸ್ನೇಹಿತೆ.

ವಿಚಾರ ಇಷ್ಟೇ ಗೆಳೆಯನ ಪರದಾಟ ನೋಡಲಾಗದೆ ಯುವತಿಯೇ ತಮ್ಮ ಲೇಡೀಸ್ ಹಾಸ್ಟೆಲ್‌ನಲ್ಲಿ ಆತನಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿರುವುದಾಗಿ ತಿಳಿದುಬಂದಿದೆ. ಇಷ್ಟೇ ಅಲ್ಲದೆ, ಬುರ್ಖಾ ಐಡಿಯಾ ಕೊಟ್ಟಿದ್ದಲ್ಲದೆ ಆ ಬಟ್ಟೆಯನ್ನು ಕೂಡ ಆಕೆಯೇ ನೀಡಿದ್ದಳು. ನಾನು ಬೇರೆ ದಾರಿ ಕಾಣದೆ ಪ್ಲ್ಯಾನ್ ಮಾಡಿದಂತೆ ಬುರ್ಖಾ ಧರಿಸಿ ಹಾಸ್ಟೆಲ್‌ಗೆ ನುಗ್ಗಿದೆ ಎಂದು ಮಾಲೂರಿನ ಯುವಕ ಎಲ್ಲ ಕಥೆಯನ್ನೂ ಪೊಲೀಸರ ಮುಂದೆ ಹೇಳಿದ್ದಾನೆ.
ಅಕ್ರಮವಾಗಿ ಯುವತಿಯರ ಹಾಸ್ಟೆಲ್‌ಗೆ ನುಗ್ಗಿದ್ದ ಆರೋಪದ ಮೇರೆಗೆ ಯುವಕನ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಭದ್ರತೆಗಾಗಿ ಹಾಸ್ಟೆಲ್ ಬಳಿ ಸಿಬ್ಬಂದಿಯನ್ನು ಕೂಡ ನಿಯೋಜನೆ ಮಾಡಲಾಗಿದೆ. ಇನ್ನು ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಲ್ಲಿನ ಹಾಸ್ಟೆಲ್‌ಗಳಲ್ಲಿ ಭದ್ರತಾ ವ್ಯವಸ್ಥೆ ಸರಿಯಾಗಿಲ್ಲವಾ? ಎಂಬ ಪ್ರಶ್ನೆ ಕೂಡ ಎದುರಾಗಿದೆ.
ಪುರುಷನೊಬ್ಬ ಇಷ್ಟು ಸುಲಭವಾಗಿ ಯುವತಿಯರ ಹಾಸ್ಟೆಲ್ ಒಳಗೆ ಪ್ರವೇಶಿಸುತ್ತಾನೆ ಅಂದರೆ ಅಲ್ಲಿನ ಸಿಬ್ಬಂದಿ ಎಷ್ಟರಮಟ್ಟಿಗೆ ಅಲರ್ಟ್ ಆಗಿದ್ದಾರೆ ಎಂಬುದಕ್ಕೆ ಸಾಕ್ಷಿ. ನೂರಾರು ಯುವತಿಯರು ಇರುವ ಹಾಸ್ಟೆಲ್‌ಗಳಲ್ಲಿ ಮುಂದೆ ಏನಾದರೂ ಅನಾಹುತಗಳಾದರೆ ಯಾರು ಜವಾಬ್ದಾರಿ ಎಂದೂ ವಿಶ್ವವಿದ್ಯಾಲಯದ ಆಡಳಿತಾಧಿಕಾರಿಗಳ ಮುಂದೆ ಪ್ರಶ್ನೆ ಇಟ್ಟಿದ್ದಾರೆ. ಯುವಕನ ಎಂಟ್ರಿಯಿಂದ ಹಾಸ್ಟೆಲ್ ವಿದ್ಯಾರ್ಥಿನಿಯರೆಲ್ಲ ಆತಂಕಕ್ಕೆ ಒಳಗಾಗಿದ್ದು, ಎಲ್ಲ ಹಾಸ್ಟೆಲ್‌ಗಳಲ್ಲಿ 24 ಗಂಟೆಯೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಒತ್ತಾಯಿಸಿದ್ದಾರೆ.












Click it and Unblock the Notifications