ಮಹಿಳೆಯರಿಗೆ ದೇಶದಲ್ಲಿ ಬೆಂಗಳೂರೇ ದಿ ಬೆಸ್ಟ್ & ಫಸ್ಟ್: ಯಾವ ವಿಚಾರದಲ್ಲಿ?
ಬೆಂಗಳೂರು, ಜನವರಿ, 11: ಬೆಂಗಳೂರು ಹಲವು ಹೆಸರುಗಳನ್ನು ಹೊಂದಿದೆ. ಐಟಿ ಸಿಟಿ, ಉದ್ಯಾನ ನಗರಿ, ಭಾರತದ ಸಿಲಿಕಾನ್ ವ್ಯಾಲಿ ಹೀಗೆ ಇನ್ನೂ ಹಲವು ಹೆಸರಗಳಿಂದ ಕರೆಲ್ಪಡುವ ಬೆಂಗಳೂರಿನ ಇದೀಗ ಮತ್ತೊಂದು ಪಟ್ಟ ಸಿಕ್ಕಿದೆ. ಹಾಗಾದರೆ ಆ ಹೆಸರು ಯಾವುದು ಹಾಗೂ ಯಾಕೆ ಬಂದಿದ್ದು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರಿಗೆ ಪ್ರತನಿತ್ಯ ಲಕ್ಷಾಂತರ ಮಂದಿ ಉದ್ಯೋಗ ಕಟ್ಟಿಕೊಳ್ಳಲು ಬೇರೆ ಬೇರೆ ಹಳ್ಳಿಗಳಿಂದ, ನಗರ ಪ್ರದೇಶಗಳಿಂದ ಆಗಮಿಸುತ್ತಲೇ ಇರುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನತ್ತ ಉದ್ಯೋಗ ಹುಡುಕಿಕೊಂಡು ಬರುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಹೀಗೆ ಇಲ್ಲಿಗೆ ಬಂದಂತಹ ಅದೆಷ್ಟೋ ಮಂದಿ ಜೀವನ ಕಟ್ಟಿಕೊಂಡರೆ, ಇನ್ನೂ ಕೆಲವರು ಬರಿಗೈಲ್ಲಂತೂ ಹೋಗದೇ, ಜೀವನ ಪಾಠ ಕಲಿತು ತಮ್ಮ ಸ್ವಂತ ಊರಿಗೆ ಹಿಂದಿರುಗಿದ ಉದಾಹರಣೆಗಳು ಇವೆ.

ಉದ್ಯೋಗ ಮಾಡುವ ಮಹಿಳೆಯರಿಗೆ ಅತ್ಯುತ್ತಮ ನಗರ ಎಂಬ ಕೀರ್ತಿ ಬೆಂಗಳೂರಿಗೆ ಸಿಕ್ಕಿದೆ. ಇದರಲ್ಲಿ ಮುಂಬೈ, ಚೆನ್ನೈ ಸೇರಿದಂತೆ 16 ನಗರಗಳು ನಂತರದ ಸ್ಥಾನವನ್ನು ಅಲಂಕರಿಸಿವೆ. ಈ ಮೂಲಕ ಬೆಂಗಳೂರು ದೇಶದಲ್ಲೇ ಉದ್ಯೋಗಸ್ಥ ಮಹಿಳೆಯರ ಅತ್ಯುತ್ತಮ ನಗರದ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಅವತಾರ್ ಗ್ರೂಪ್ ಸಂಸ್ಥೆ ನಡೆಸಿದ ಭಾರತದಲ್ಲಿ ಮಹಿಳೆಯರಿಗಾಗಿ ಟಾಪ್ ನಗರಗಳು ಎಂವ ಸಮೀಕ್ಷೆಯಲ್ಲಿ ಬೆಂಗಳೂರು ನಂಬರ್ 1 ಸ್ಥಾನ ಪಡೆದುಕೊಂಡಿದೆ.
2024ನೇ ಸಾಲಿನಲ್ಲಿ ಬೆಂಗಳೂರು ನಗರ ಉದ್ಯೋಗ ನಿರತ ಮಹಿಳೆಯರ ಅತ್ಯುತ್ತಮ ನಗರ ಎಂಬ ಖ್ಯಾತಿ ಪಡೆದಿದೆ. ಬೆಂಗಳೂರು ನಗರವು ಮಹಿಳಾ ವೃತ್ತಿಪರರಿಗೆ ಸುರಕ್ಷಿತ ಮತ್ತು ಸುಲಭವಾಗಿ ಹೊಂದಿಕೊಳ್ಳುವ ವಾತಾವರಣವನ್ನು ಒದಗಿಸುತ್ತದೆ ಎಂದು ಈ ಸಮೀಕ್ಷೆ ತಿಳಿಸಿದೆ. ಮಹಿಳೆಯರ ಕೌಶಲ್ಯ ಅಭಿವೃದ್ಧಿ, ಉದ್ಯೋಗಾವಕಾಶಗಳು, ಮೂಲಸೌಕರ್ಯ ಸೌಲಭ್ಯಗಳು ಸೇರಿ ಹೆಚ್ಚು ವಿಭಾಗಗಳಲ್ಲಿ ಬೆಂಗಳೂರು ದಿ ಬೆಸ್ಟ್ ಎಂದು ವರದಿ ಹೇಳಿದೆ.
ಈ ಪಟ್ಟಿಯಲ್ಲಿ ಚೆನ್ನೈ ಮತ್ತು ಹೈದರಾಬಾದ್ ನಂತರದ ಸ್ಥಾನಗಳಲ್ಲಿವೆ. ಚೆನ್ನೈ 2ನೇ ಸ್ಥಾನ, ಮುಂಬೈ 3ನೇ ಮತ್ತು ನವದೆಹಲಿ 2ನೇ ಸ್ಥಾನದಲ್ಲಿವೆ. ದಕ್ಷಿಣ ಭಾರತದ 16 ದೊಡ್ಡ, ಸಣ್ಣ ನಗರಗಳು ಅತ್ಯುನ್ನತ ಸ್ಥಾನ ಪಡೆದಿವೆ. ಸುರಕ್ಷತಾ ನಿಯತಾಂಕಗಳ ವಿಷಯದಲ್ಲಿ ಮುಂಬೈ ಮತ್ತು ಹೈದರಾಬಾದ್ ಅಗ್ರಸ್ಥಾನದಲ್ಲಿವೆ. ಉದಯೋನ್ಮುಖ ಸಣ್ಣ ನಗರ ಕೇಂದ್ರಗಳ ಗುಂಪಿನಲ್ಲಿ, ತಿರುವನಂತಪುರಂ ಹೆಚ್ಚಿನ ರೇಟಿಂಗ್‌ನೊಂದಿಗೆ ಮುಂದಿದ್ದರೆ, ಗುರುಗ್ರಾಮ್ ಅತ್ಯಂತ ಕಡಿಮೆ ರೇಟಿಂಗ್ ಅನ್ನು ದಾಖಲಿಸಿದೆ.
ಮಹಾನಗರಗಳಲ್ಲಿ ಹೈದರಾಬಾದ್ ಮತ್ತು ಬೆಂಗಳೂರು ಅತ್ಯುತ್ತಮ ಮೂಲಸೌಕರ್ಯ ಹೊಂದಿರುವ ನಗರಗಳಾಗಿವೆ. ಪ್ರಮುಖ ಮಹಾನಗರ ಪ್ರದೇಶಗಳಲ್ಲಿ ಹೈದರಾಬಾದ್ ಅತ್ಯಧಿಕ ಮೂಲಸೌಕರ್ಯ ರೇಟಿಂಗ್‌ನೊಂದಿಗೆ ಮುಂಚೂಣಿಯಲ್ಲಿ ಹೊರಹೊಮ್ಮಿತು, ಮುಂಬೈ 2ನೇ ಸ್ಥಾನವನ್ನು ಪಡೆದುಕೊಂಡಿತು, ಎರಡೂ ದೊಡ್ಡ ಮಟ್ಟದಲ್ಲಿ ಸಾರಿಗೆ ಜಾಲ ಮತ್ತು ನಾಗರಿಕ ಸೌಲಭ್ಯಗಳನ್ನು ನೀಡುತ್ತಿವೆ ಅಂತಾ ವರದಿ ಹೇಳಿದೆ.












Click it and Unblock the Notifications