ಬೆಂಗಳೂರು ಜನರೇ ಹೊರಗಡೆ ಹೋಗುವಾಗ ಎಚ್ಚರ, ಬಾಂ* ಸ್ಫೋಟಕ ಪತ್ತೆ... Bengaluru Alert
ಬೆಂಗಳೂರು ಕನ್ನಡಿಗರ ರಾಜಧಾನಿ... ಬೆಂಗಳೂರು ಇಡೀ ಜಗತ್ತಿನ ಐಟಿ & ಬಿಟಿ ಹೃದಯ... ಹೀಗೆ ನಮ್ಮ ಬೆಂಗಳೂರು ಜಗತ್ತಿನಾದ್ಯಂತ ದೊಡ್ಡ ಹೆಸರು ಮಾಡಿದೆ. ಆದರೆ ಇದೇ ನಮ್ಮ ಬೆಂಗಳೂರು ಈಗ ಟಾರ್ಗೆಟ್ ಆಗುತ್ತಿದ್ದು, ಒಂದು ಕಡೆ ಬೆಂಗಳೂರಿಗೆ ಕೆಟ್ಟ ಹೆಸರು ತರಿಸಲು ಹಲವು ಪ್ರಯತ್ನ ಮಾಡುತ್ತಿದ್ದರೆ ಇನ್ನೂ ಕೆಲವರು ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಹೀಗಿದ್ದಾಗಲೇ, ಬೆಂಗಳೂರು ಜನರೇ ಹೊರಗಡೆ ಹೋಗುವಾಗ ಎಚ್ಚರ, ಬಾಂ* ಸ್ಫೋಟಕ ಪತ್ತೆ...
ಹೌದು, ಬೆಂಗಳೂರಲ್ಲಿ ಸುಮಾರು 1,50,00,000 ಜನರು ವಾಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಈಗ ನಮ್ಮ ಬೆಂಗಳೂರು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಹೀಗಿದ್ದಾಗ ಬೆಂಗಳೂರನ್ನೇ ಟಾರ್ಗೆಟ್ ಮಾಡಿ ಮಾಡಿ ಕೆಲವರು ನೆಮ್ಮದಿ ಕೆಡಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇತ್ತೀಚೆಗೆ ಕ್ರೈಂ ರೇಟ್ ಕೂಡ ಜಾಸ್ತಿ ಆಗುತ್ತಿದ್ದು ಬೆಂಗಳೂರು ಪೊಲೀಸರಿಗೆ ಚಿಂತೆ ಹೆಚ್ಚುವಂತೆ ಮಾಡಿತ್ತು. ಇಷ್ಟೆಲ್ಲದರ ನಡುವೆ ಬೆಂಗಳೂರಿನಲ್ಲಿ ಇಂದು ಭೀಕರ ಘಟನೆಯೊಂದು ನಡೆದೇ ಹೋಗಿದ್ದು, ಬೆಂಗಳೂರಿನ ಹೃದಯ ಭಾಗದಲ್ಲೇ ಬಾಂಬ್ ಸ್ಫೋಟಕ ಪತ್ತೆಯಾಗಿದೆ.

ಬೆಂಗಳೂರು ಜನರೇ ಹೊರಗೆ ಹೋಗುವಾಗ ಎಚ್ಚರ!
ಅಂದಹಾಗೆ ಬೆಂಗಳೂರಿನಲ್ಲಿ ಪ್ರತಿದಿನ ಹತ್ತಾರು ಲಕ್ಷ ಜನ ಬರ್ತಾರೆ, ಹತ್ತಾರು ಲಕ್ಷ ಜನ ಹೋಗುತ್ತಾರೆ. ಅದರಲ್ಲೂ ಮೆಜೆಸ್ಟಿಕ್, ಮಾರ್ಕೆಟ್ & ಕಲಾಸಿಪಾಳ್ಯ ಸೇರಿದಂತೆ ಬೆಂಗಳೂರಿನ ಹೃದಯ ಭಾಗದಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಜನರ ಸಂಚಾರ ಇರುತ್ತದೆ. ಇಷ್ಟೆಲ್ಲದರ ನಡುವೆ ಇಂದು ಕಲಾಸಿಪಾಳ್ಯ ಪ್ರದೇಶದಲ್ಲಿ ಘೋರ ದುರ್ಘಟನೆ ನಡೆದು ಹೋಗಿದ್ದು, ಬಾಂಬ್ ಸ್ಫೋಟಕ್ಕೆ ಬಳಸುವ ವಸ್ತುಗಳು ಒಂದು ಅನುಮಾನ ಮೂಡಿಸುವ ಬ್ಯಾಗ್ ಒಳಗೆ ಪತ್ತೆಯಾಗಿವೆ!
ಬೆಂಗಳೂರಿನಲ್ಲಿ ಉಗ್ರರ ದಾಳಿಗೆ ಸ್ಕೆಚ್??
ಅಷ್ಟಕ್ಕೂ ಕಲಾಸಿಪಾಳ್ಯ ಸಮೀಪದಲ್ಲಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಒಂದು ಪತ್ತೆಯಾಗಿ ಭಯದ ವಾತಾವರಣ ನಿರ್ಮಾಣ ಆಗಿತ್ತು. ತಕ್ಷಣವೇ ಆ ಬ್ಯಾಗ್ ಪರಿಶೀಲನೆ ನಡೆಸಿದ ನಂತರ ಭಯಾನಕ ಸತ್ಯ ಬಯಲಾಗಿದ್ದು, ಬ್ಯಾಗ್ ಪರಿಶೀಲನೆ ನಡೆಸಿದಾಗ ಬಾಂಬ್ & ಸುಧಾರಿತ ಐಇಡಿ ಸ್ಫೋಟಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿವೆ. ಜಿಲೆಟಿನ್ ಪತ್ತೆಯಾದ ನಂತರ ತಕ್ಷಣ ಪೊಲೀಸ್ ಅಧಿಕಾರಿಗಳು ಮತ್ತು ಶ್ವಾನ ದಳ & ಬಾಂಬ್ ನಿಷ್ಕ್ರಿಯ ದಳ ಎಂಟ್ರಿಯನ್ನ ಕೊಟ್ಟಿದೆ. ಅಲ್ಲದೆ ಸುತ್ತಮುತ್ತಲ ಪ್ರದೇಶವನ್ನ ಕೂಡ ಪರಿಶೀಲನೆ ನಡೆಸಲಾಗಿದ್ದು, ತನಿಖೆ ಮುಂದುವರಿದಿದೆ.
ಮೊದಲಿನಿಂದ ಕೂಡ ಬೆಂಗಳೂರಿಗೆ ಉಗ್ರರ ಆತಂಕ ಇದ್ದು, ಪದೇ ಪದೇ ಬೆಂಗಳೂರಿನ ಮೇಲೆ ಅಟ್ಯಾಕ್ ಮಾಡಲು ವಿಫಲ ಯತ್ನಗಳು ನಡೆದಿವೆ. ಅದೇ ರೀತಿ ಇಂದು ಕೂಡ ಸ್ಫೋಟಕ ಪತ್ತೆ ಆಗಿರುವುದು ಇದೇ ರೀತಿ ಉಗ್ರರ ದಾಳಿಗೆ ನಡೆದಿರುವ ಪ್ರಯತ್ನ ಆಗಿದೆಯಾ? ಎಂಬ ಅನುಮಾನದ ಜೊತೆಗೆ ಆರೋಪ ಕೂಡ ಕೇಳಿ ಬಂದಿದೆ. ಹಾಗಾದ್ರೆ ಈ ಬ್ಯಾಗ್ ತಂದು ಇಟ್ಟಿದ್ದು ಯಾರು? ಅಂತಾ ಬಸ್ ನಿಲ್ದಾಣ ಸೇರಿದಂತೆ, ಅಲ್ಲಿ ಸುತ್ತಮುತ್ತ ಇರುವ ಸಿಸಿಟಿವಿ ಪರಿಶೀಲನೆ ಮಾಡಲಾಗುತ್ತಿದೆ. ಹೀಗಾಗಿ ಶೀಘ್ರದಲ್ಲೇ ಪಾಪಿಗಳು ಯಾರು ಅಂತಾ ಗೊತ್ತಾಗುವ ನಿರೀಕ್ಷೆ ಇದೆ.












Click it and Unblock the Notifications