ಬೆಂಗಳೂರು ಕೊಳಕು ನಗರ.. ಇಲ್ಲಿನ ಕಂಪನಿಗಳು ಮುಚ್ಚಬೇಕು ಎಂದ ನಾರ್ಥಿ!
ಬೆಂಗಳೂರು ಹಾಗೂ ಬೆಂಗಳೂರಿನ ಸಾರಿಗೆ ಸೇವೆ, ಕನ್ನಡ ಭಾಷೆಯ ಬಗ್ಗೆ ಮತ್ತೊಬ್ಬ ನಾರ್ಥಿ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದು. ಇದಕ್ಕೆ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಈ ರೀತಿ ಬೆಂಗಳೂರು ಮತ್ತು ಕನ್ನಡ ಭಾಷೆಯ ಬಗ್ಗೆ ಮಾತನಾಡುವವರಿಗೆ ಕರ್ನಾಟಕ ಸರ್ಕಾರವು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಬೆಂಗಳೂರು ಹಾಗೂ ಕನ್ನಡಿಗರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವು ನಾರ್ಥಿಗಳು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದು ಮುಂದುವರಿದಿದೆ. ಇದೀಗ ಬೆಂಗಳೂರು ಕೊಳಕು ಪ್ರದೇಶ ಎಂದು ನಾರ್ಥಿ ಮಾಡಿರುವ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ.
ಬೆಂಗಳೂರು ನಗರ ಸಂಪೂರ್ಣ ಕೊಳಕು ಪ್ರದೇಶ. ಕಳೆದ 30 ನಿಮಿಷಗಳಿಂದ ನಾನು ಕ್ಯಾಬ್ ಅಥವಾ ಆಟೋ ಬುಕ್ ಮಾಡಲು ಪ್ರಯತ್ನಿಸುತ್ತಿದ್ದೇನೆ - ಏನೂ ಇಲ್ಲ. ಈಗ ಈ ಸರ್ಕಾರ ಉಬರ್ ಮತ್ತು ಓಲಾವನ್ನು ಸಹ ನಿಷೇಧಿಸಲು ನಿರ್ಧರಿಸಿದೆ. ಮೊದಲು ಅವರು ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಿದರು. ಈಗ ಇದು? ಇದು ಯಾವ ರೀತಿಯ ಮಾಫಿಯಾ ಅಸಂಬದ್ಧ ನಡೆ. ಮೂಲಸೌಕರ್ಯವಿಲ್ಲ, ಸರಿಯಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ನಿರಂತರ ಭಾಷೆಯ ಅಡೆತಡೆಗಳು - ಇದು ಒಂದು ತಮಾಷೆ ಅಷ್ಟೇ. ರಾಜ್ಯ ಸರ್ಕಾರ ಇಲ್ಲಿನ ಕಚೇರಿಗಳನ್ನು ಮುಚ್ಚುವಂತೆ ಹೇಳಬೇಕು. ಆಗ ನಾವು ಎಲ್ಲವೂ ಸರಿಯಾಗಿರುವ ನಗರಕ್ಕೆ ಸ್ಥಳಾಂತರವಾಗಬಹುದು ಎಂದು Rishabh ಎನ್ನುವ ವ್ಯಕ್ತಿ ಸೋಷಿಯಲ್ ಮೀಡಿಯಾ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದು. ಭಾರೀ ಚರ್ಚೆಗೆ ಕಾರಣವಾಗಿದೆ.

ನಾನು ವಿಮಾನ ನಿಲ್ದಾಣಕ್ಕೆ ಹೋಗಲು @rapidobikeapp ಬುಕ್ ಮಾಡಿದೆ. ಚಾಲಕ ಸುರಕ್ಷಿತವಲ್ಲದ ಟೋಲ್ ರಹಿತ ರಸ್ತೆಯನ್ನು ತೆಗೆದುಕೊಂಡು ಆ ರಸ್ತೆಯಲ್ಲಿ ಹೋಗಲು ಪ್ರಾರಂಭಿಸಿದೆ. ನಂತರ ಅಪ್ಲಿಕೇಶನ್‌ನಲ್ಲಿ ತೋರಿಸಿದ್ದಕ್ಕಿಂತ ಹೆಚ್ಚಿನ ಹಣ ಕೊಡುವಂತೆ ಕೇಳಿದ. ಅದಕ್ಕೆ ನಾನು ನಿರಾಕರಿಸಿದಾಗ, ಅವನು ನಿಂದಿಸಲು ಪ್ರಾರಂಭಿಸಿದ. ಬೆಂಗಳೂರು...
ಮತ್ತೊಂದು ಟ್ವೀಟ್ ಮಾಡಿರುವ ಆ ವ್ಯಕ್ತಿ ಜನರೇ, ಕ್ಷಮಿಸಿ, ಇದು ಬೆಂಗಳೂರಿನ ಬಗ್ಗೆ ಅಲ್ಲ. ಬೆಂಗಳೂರು ಚೆನ್ನಾಗಿದೆ. ಇಷ್ಟು ವರ್ಷಗಳಿಂದ ಈ ನಗರವನ್ನು ಆಳುತ್ತಿರುವ ಮೂರ್ಖ, ಭ್ರಷ್ಟ ಸರ್ಕಾರದ ಬಗ್ಗೆ ಅಂತ ಮತ್ತೊಂದು ಟ್ವೀಟ್ ಮಾಡಿದ್ದಾನೆ. ಈ ರೀತಿ ಬೆಂಗಳೂರು ಹಾಗೂ ಬೆಂಗಳೂರಿನ ಬಗ್ಗೆ ಆ ವ್ಯಕ್ತಿ ಕೆಟ್ಟದಾಗಿ ಹಲವು ಪೋಸ್ಟ್‌ಗಳನ್ನು ಮಾಡಿದ್ದಾನೆ. ಇದನ್ನು ಹಂಚಿಕೊಂಡು ಟೀಕಿಸಿರುವ ಕನ್ನಡಿಗರನ್ನೂ ಆ ವ್ಯಕ್ತಿ ನಿಂದಿಸಿದ್ದಾನೆ.
bangalore is an absolute shithole of a city. I’ve been trying to book a cab or an auto for the last 30 damn minutes—nothing. now these unions have decided to ban Uber and Ola too. first, they banned bike taxis, and now this? What kind of mafia nonsense is this? no infrastructure,…
— Rishabh (@rishabhbansal97) July 6, 2025
ಕಠಿಣ ಕ್ರಮ ತೆಗೆದುಕೊಳ್ಳಬೇಕು: ಇನ್ನು ಈ ರೀತಿ ಬೆಂಗಳೂರು ಹಾಗೂ ಕನ್ನಡಿಗರ ಬಗ್ಗೆ ಉದ್ದೇಶಪೂರ್ವಕವಾಗಿ ಕೆಟ್ಟದಾಗಿ ಮಾತನಾಡುವವರ ಬಗ್ಗೆ ಹಾಗೂ ಟ್ವೀಟ್ ಮಾಡುವವರ ಬಗ್ಗೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.












Click it and Unblock the Notifications