Get Updates
Get notified of breaking news, exclusive insights, and must-see stories!

Bengaluru cab incident :ತಡರಾತ್ರಿ ಕ್ಯಾಬ್‌ ಹತ್ತಿದ ಬೆಂಗಳೂರು ಯುವತಿಗೆ ಭಯಾನಕ ಅನುಭವ

ಬೆಂಗಳೂರಿನಲ್ಲಿ ನೈಟ್‌ಲೈಫ್‌ ಎಂಬ ಕಲರ್‌ಫುಲ್‌ ಜಗತ್ತು ಕೂಡ ಇದೆ. ಯುವಕ ಯುವತಿಯರು ತಡರಾತ್ರಿವರೆಗೆ ಪಾರ್ಟಿ, ಪಬ್‌ ಅಂತೆಲ್ಲ ಮೋಜು ಮಸ್ತಿ ಮಾಡೋದು ಹೊಸದೇನಲ್ಲ. ಇಂತಹವರನ್ನ ಸುರಕ್ಷಿತವಾಗಿ ಮನೆಗೆ ತಲುಪಿಸಲು ಹಲವಾರು ಕ್ಯಾಬ್‌ ಸೇವೆ ಇದೆ. ಆದರೆ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ವೊಬ್ಬರು ಬೆಂಗಳೂರಿನಲ್ಲಿ ರಾತ್ರಿ ವೇಳೆ ಕ್ಯಾಬ್‌ ಪ್ರಯಾಣದ ಬಗ್ಗೆ ಭಯಾನಕ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಶಾಕಿಂಗ್ ವೀಡಿಯೊ ಹಂಚಿಕೊಂಡಿದ್ದಾರೆ.

ಬೆಂಗಳೂರು ಮೂಲದ ಇನ್‌ಫ್ಲುಯೆನ್ಸರ್‌ ಆಗಿರುವ ಅಮೀ, ತಡರಾತ್ರಿಯ ಉಬರ್ ಕ್ಯಾಬ್‌ ಪ್ರಯಾಣದ ವೇಳೆ ತಮ್ಮ ಭಯಾನಕ ಅನುಭವ ಹಂಚಿಕೊಂಡಿದ್ದಾರೆ. ಕ್ಯಾಬ್‌ ಚಾಲಕ ನಾನು ತಲುಪಬೇಕಾದ ಸ್ಥಳಕ್ಕೆ ಬಿಡಲು ನಿರಾಕರಿಸಿದನು. ಇದ್ದಕ್ಕಿದ್ದಂತೆ ನನ್ನ ಮೇಲೆ ಆಕ್ರಮಣಕಾರಿಯಾಗಿ ವರ್ತಿಸಿದನು. ನಾನು ಕೇಳಿದ ಜಾಗದಲ್ಲೇ ಬಿಡಿ ಎಂದು ಕೇಳಿದಾಗ ಆತ ಯು-ಟರ್ನ್ ಮಾಡಿ ಕಾರನ್ನು ಪ್ರಯಾಣ ಪ್ರಾರಂಭಿಸಿದ ಸ್ಥಳಕ್ಕೆ ಹಿಂತಿರುಗಿಸಲು ಪ್ರಯತ್ನಿಸಿದನು. ನಾನು ಭಯಭೀತದಿಂದ ಒಳಗೆ ಸಿಲುಕಿಕೊಂಡೆ ಎಂದು ಹೇಳಿದ್ದಾರೆ.

Bengaluru Influencer Horrific Uber Ride At Midnight Driver Attack Refused Drop

ಅಲ್ಲದೆ ವಾಹನದ ನೋಂದಣಿ ಸಂಖ್ಯೆಯನ್ನು ನೋಡಿದಾಗ ಇನ್ನೂ ಶಾಕ್‌ ಆಯ್ತು. ಕಾರಿನಲ್ಲಿರುವ ನಂಬರ್ ಪ್ಲೇಟ್ ಉಬರ್ ಅಪ್ಲಿಕೇಶನ್‌ನಲ್ಲಿ ತೋರಿಸಿರುವ ನಂಬರ್‌ ಪ್ಲೇಟ್‌ಗೆ ಹೊಂದಿಕೆಯಾಗಲಿಲ್ಲ. ಅಲ್ಲದೆ ಚಾಲಕ ನನ್ನನ್ನು ಹೊಡೆಯಲು ಪ್ರಯತ್ನಿಸಿದ ಎಂದೂ ಹೇಳಿಕೊಂಡಿದ್ದಾರೆ.

ತನ್ನ ಪೋಸ್ಟ್‌ನಲ್ಲಿ ಅಮೀ, "ನನ್ನ ಗಂಭೀರ ಕಳವಳವನ್ನು ವ್ಯಕ್ತಪಡಿಸಲು ನಾನು ನಿಮ್ಮ ಸಹಾಯ ಕೋರುತ್ತಿದ್ದೇನೆ. ಉಬರ್ ಚಾಲಕನೊಂದಿಗೆ ನನಗೆ ಕೆಟ್ಟ ಅನುಭವವಾಗುತ್ತಿರುವುದು ಇದು ಮೊದಲ ಅಥವಾ ಎರಡನೆಯ ಬಾರಿಯೂ ಅಲ್ಲ. ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ನಿರೀಕ್ಷಿಸುತ್ತಾ ನಾವು ಉಬರ್ ಅನ್ನು ಆಯ್ಕೆ ಮಾಡುತ್ತೇವೆ. ಆದರೆ ದುರದೃಷ್ಟವಶಾತ್, ಈ ರೀತಿಯ ಘಟನೆಗಳು ನಡೆಯುತ್ತಲೇ ಇವೆ. ಇದು ನಾನು ಮಾತ್ರವಲ್ಲ, ಅನೇಕ ಗ್ರಾಹಕರು ಸಹ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದು ಖಚಿತವಾಗಿದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದು ಕರೆದಿದ್ದಾರೆ.

ಕ್ಷಮೆ ಕೇಳಿದ ಉಬರ್‌

ಯುವತಿಯ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಆ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಉಬರ್ ಇಂಡಿಯಾ ಕ್ಷಮೆಯಾಚಿಸಿದೆ. ಈ ಘಟನೆಯ ತನಿಖೆಗಾಗಿ ಹೆಚ್ಚಿನ ವಿವರಗಳನ್ನು ಕೋರಿದೆ. ನಾವು ಈ ಘಟನೆಯಿಂದ ಕಳವಳಗೊಂಡಿದ್ದೇವೆ. ಇದರ ಬಗ್ಗೆ ತನಿಖೆ ನಡೆಸಲು ಒತ್ತಾಯಿಸುತ್ತೇವೆ. ಹೀಗಾಗಿ ಹೆಚ್ಚುವರಿ ವಿವರಗಳನ್ನು ಕೋರಲು ನಾವು ನಿಮಗೆ ಸಂದೇಶವನ್ನು ಕಳುಹಿಸಿದ್ದೇವೆ, ದಯವಿಟ್ಟು ನಿಮ್ಮ ಉತ್ತರ ತಿಳಿಸಿ ಎಂದು ಉಬರ್‌ ಹೇಳಿದೆ. ನಂತರ ಉಬರ್ ಆಕೆಯ ಪ್ರಯಾಣ ದರವನ್ನು ಮರುಪಾವತಿಸಿ, ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಬೆಂಗಳೂರು ಪೊಲೀಸರು ಕೂಡ ಈ ಬಗ್ಗೆ ವಿವರ ಕೋರಿದೆ. ಆದರೆ ಚಾಲಕನನ್ನು ಜೈಲಿಗೆ ಹಾಕುವುದು ತನಗೆ ಇಷ್ಟವಿಲ್ಲ, ಹಾಗಾಗಿ ದೂರು ಕೊಡಲ್ಲ ಎಂದು ಅಮೀ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+