ಹೊರಗೆ ಕ್ಯೂ, ಒಳಗೆ ನೋ ಖಾಲಿ ಸೀಟ್: ಬೆಂಗಳೂರು ಕೆಫೆ ಓನರ್‌ನ ಧರ್ಮಸಂಕಟಕ್ಕೆ ನೆಟ್ಟಿಗರು ಕೊಟ್ಟ ಐಡಿಯಾಗಳು!

ಬೆಂಗಳೂರು: ಕೆಫೆ ಎಂದರೆನೇ ಹಾಗೆ ಕೆಲವರು ಅಲ್ಲಿ ಹರಟುತ್ತ ಕೂತರೇ ಗಂಟೆಯ ಬಳಿಕ ಏಳುತ್ತಾರೆ. ಇನ್ನೂ ಕೆಲವರು ಅಲ್ಲಿ ಸಿಗುವ ಕಾಫಿ ಹೀರುತ್ತಾ ಲ್ಯಾಪ್ ಟಾಪ್ ತೆಗೆದು ಗಂಟೆಗಳ ಕೆಲಸ ಮುಗಿಸಿ ತೆರಳುತ್ತಾರೆ. ಅದೆಷ್ಟೋ ಜನರಿಗೆ ಇಲ್ಲಿನ ವೈ-ಫೈ, ಸೇವೆ, ವಾತಾವರಣ ಮನಸ್ಸಿಗೆ ಖುಷಿ ನೀಡುತ್ತರೆ. ಆದರೆ ಇದೇ ಆ ಕೆಫೆ ಮಾಲೀಕರಿಗೆ ತೊಂದರೆ ಆಗಿದೆ. ಗಂಟೆಗಳ ಕಾಲ ಒಂದು ಕಾಫಿ ಹಿಡಿದು ಕೂತರೆ ಹೊಸ ಗ್ರಾಹಕರಿಗೆ ಸಮಸ್ಯೆ ಆಗುತ್ತಿದೆ. ಇದೀಗ ಈ ವಿಚಾರ ಆನ್‌ಲೈನ್‌ನಲ್ಲಿ ಸಖತ್ ಸದ್ದು ಮಾಡುತ್ತಿದ್ದು, ನೆಟ್ಟಿಗರು ಅನೇಕ ಐಡಿಯಾಗಳನ್ನು ಕೊಟ್ಟಿದ್ದಾರೆ.

ನನ್ನ ಸ್ನೇಹಿತ ಬೆಂಗಳೂರು ಇಂದಿರಾನಗರದಲ್ಲಿ ತೆರೆದ ಕೆಫೆ ತೆರದಿದ್ದು, ಅಲ್ಲಿನ ನಿತ್ಯ ಇಂಥದ್ದೊಂದು ಸಮಸ್ಯೆ ಎದುರಿಸುತ್ತಿದ್ದಾನೆ ಎಂದು ಎಕ್ಸ್ ಖಾತೆಯಲ್ಲಿ ವಿಕ್ರಮಾದಿತ್ಯ ಶುಕ್ಲಾ ಅವರು ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ಆತ ಸುಮಾರು 60-70 ಲಕ್ಷ ರೂಪಾಯಿ ಹೂಡಿಕೆ ಮಾಡಿ ಹೊಸ ಕೆಫೆಯೊಂದನ್ನು ಆರಂಭಿಸಿದ್ದಾನೆ.

Bengaluru Indiranagar Cafe Owner

ಕೆಲವರು ಆಫೀಸ್ ಕೆಲಸ ಮಾಡಲು, ಸ್ನೇಹಿತರೊಂದಿಗೆ, ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲು, ಕೆಲವರು ಏಕಾಂಗಿಯಾಗಿ ಸಮಯ ಕಳೆಯಲು ಸಹ ಕೆಫೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವರ್ಗದ ಜನರ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ ಎನ್ನಬಹುದು.

ಗಂಟೆಗಟ್ಟಲೇ ಕುಳಿತರೆ ಹೊಸ ಗ್ರಾಹಕರು ಬರುತ್ತಿಲ್ಲ!

ಆದರೆ, ಸದ್ಯ ಅವನಿಗೆ ಎದುರಾಗಿರುವ ದೊಡ್ಡ ಸಮಸ್ಯೆಯೆಂದರೆ, ಕೆಲ ಗ್ರಾಹಕರು ಕೇವಲ 150 ರೂಪಾಯಿ ಮೌಲ್ಯದ ಒಂದು ಕಪ್ ಕಾಫಿಯನ್ನು ಆರ್ಡರ್ ಮಾಡುತ್ತಾರೆ. ಕಾಫಿ ಕುಡಿದು ತೆರಳದೇ, ತಮ್ಮ ಲ್ಯಾಪ್‌ಟಾಪ್ ತೆರೆದಿಟ್ಟುಕೊಂಡು ಗಂಟೆಗಟ್ಟಲೆ ಅಲ್ಲಿ ಕುಳಿತುಕೊಳ್ಳುತ್ತಾರೆ. ಕೆಲವರು ಕೆಲವೊಮ್ಮೆ ದಿನಗಟ್ಟಲೇ ಕೂತಿರುತ್ತಾರೆ. ಇದರಿಂದ ರಶ್ ರೀತಿ ಕಾಣುತ್ತದೆ. ಆದರೆ ಹೊಸ ಗ್ರಾಹಕರು ಕೆಫೆಗೆ ಬಂದಾಗ, ಅಲ್ಲಿ ಜಾಗ ಇಲ್ಲದಿರುವುದನ್ನು ಕಂಡು ನೇರವಾಗಿ ಹೊರಟುಹೋಗುತ್ತಾರೆ. ಇದರಿಂದ ವ್ಯವಹಾರಕ್ಕೂ ಸಮಸ್ಯೆ ಆಗುತ್ತಿದೆ. ಕೆಲವೊಮ್ಮೆ ಇತರ ಗ್ರಾಹಕರಿಗೆ ಸೇವೆ ನೀಡಲು ಸಹ ಆಗದ ಸ್ಥಿತಿ ಉಂಟಾಗಿರುತ್ತದೆ.

ಕೆಫೆ ಬಗ್ಗೆ ನೆಗಟಿವ್ ರಿವ್ಯೂ ಬರುವ ಹೆದರಿಕೆ!

ಸ್ನೇಹಿತ ಆ ಗ್ರಾಹಕರಿಗೆ ಅಲ್ಲಿಂದ ಹೋಗುವಂತೆ ಹೇಳಲು ಆಗಲ್ಲ. ಏಕೆಂದರೆ ಒಂದು ಬಾರಿ ಆ ರೀತಿ ಹೇಳಿದ್ದು, ಗೊತ್ತಾಗಿ ಇಂಟರ್‍‌ನೆಟ್‌ ಬಂದರೆ, ಅಥವಾ ಗೂಗಲ್‌ನಲ್ಲಿ ಕೆಫೆ ಬಗ್ಗೆ ನೆಗಟಿವ್ ರಿವ್ಯೂ ಬಂದರೆ ಅದು ಕೂಡ ವ್ಯವಹಾರಕ್ಕೆ, ಕೆಫೆ ಧಕ್ಕೆ ತರುವ ಸಾಧ್ಯತೆ ಇರುತ್ತದೆ. ಹೀಗಾಗಿ ಏನು ಮಾಡಬೇಕೆಂದು ತೋಚದೇ ಚಿಂತಿಸುತ್ತಿದ್ದಾನೆ ಎಂದಿದ್ದಾರೆ.

ಅಲ್ಲಿ ಕಾಫಿ, ತಿಂಡಿ ಜತೆ ಆಸನಕ್ಕೂ ಹಣ..

ಅದೇ ಸ್ಟಾರ್‌ಬಕ್ಸ್, ಸಿಸಿಡಿ ಇಲ್ಲವೇ ಥರ್ಡ್ ವೇವ್ ಕಾಫಿಯಂತಹ ಕೆಫೆಗಳಲ್ಲಿ ಕಾಫಿಗೆ ಅಥವಾ ಅಲ್ಲಿನ ತಿಂಡಿಗಳಿಗೆ ದುಬಾರಿ ಬೆಲೆ ಇರುತ್ತದೆ. ಕಾರಣ ಅವರು ಅಲ್ಲಿ ಕೂರುವ ಜಾಗಕ್ಕೂ ಹಣ ಪಡೆದುಕೊಳ್ಳುತ್ತಾರೆ ಎಂದನಿಸುತ್ತದೆ. ನೀವು ಅಲ್ಲಿ ಪಾವತಿಸುವ ಹಣ ಕಾಫಿಗಷ್ಟೇ ಅಲ್ಲ, ಕೂರುವ ಆಸನಕ್ಕೂ ಎಂಬುದು ಅರ್ಥ ಮಾಡಿಕೊಂಡಿದ್ದೇನೆ. ಸದ್ಯ ಸ್ನೇಹಿತ ಕೆಫೆಯಲ್ಲಿ ಈ ರೀತಿ ಆಗುತ್ತಿದೆ. ಯಾರಾದರೂ ಇಂತಹ ಸಮಸ್ಯೆ ಅನುಭವಿಸುತ್ತಿದ್ದರೆ, ಪರಿಹಾರ ಕಂಡು ಕೊಂಡಿದ್ದರೆ ದಯವಿಟ್ಟು ತಿಳಿಸುವಂತೆ ಅವರು ಕೋರಿದ್ದಾರೆ.

ಸಮಸ್ಯೆ ಪರಿಹಾರಕ್ಕೆ ನೆಟ್ಟಿಗರು ಕೊಟ್ಟ ಉಪಾಯ!

'ನೀವು ಗಂಟೆಗೆ ಒಂದು ಕಾಫಿ ಖರೀದಿಸಬೇಕು ಎಂಬ ನಿಯಮ ವಿಧಿಸಬಹುದು' ನೆಟ್ಟಿಗರೊಬ್ಬರು ಸಲಹೆ ನೀಡಿದ್ದಾರೆ. 'ಕಾಫಿ, ವೈಯಕ್ತಿಕ ಇತರ ಪಾನೀಯ ಜೊತೆಗೆ ಸಮಯಕ್ಕೆ ಹಣ ನಿಗದಿಪಡಿಸಿದರೆ ಹೆಚ್ಚು ಹೊತ್ತು ಕೂರುವವರ ಸಂಖ್ಯೆ ಕಡಿಮೆ ಆಗಬಹುದು. ಗ್ರಾಹಕರಿಗೆ ಗಂಟೆ ಲೆಕ್ಕದಲ್ಲಿ ಶುಲ್ಕ ವಿಧಿಸಬಹುದು. ಅದರಲ್ಲಿ ಕಾಫಿ-ತಿಂಡಿ ಜೊತೆಗೆ ಆಸನ ದರವು ಸೇರಿಸಬಹುದು' ಎಂದು ಮತ್ತೊಬ್ಬರು ತಿಳಿಸಿದ್ದಾರೆ.

ಲ್ಯಾಪ್ ಬಳಕೆ ಬೇಡ ಎಂಬ ಬೋರ್ಡ್ ಹಾಕಿ

ಕೆಲವು ನೆಟ್ಟಿಗರು 'ಕೆಫೆಯಲ್ಲಿ ಲ್ಯಾಪ್ ಟಾಪ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ' ಎಂಬಂಥ ನಾಮಫಲಕ/ ಬೋರ್ಡ್ ಹಾಕಿಬಿಡಿ ಎಂದಿದ್ದಾರೆ. ಇದರೊಂದಿಗೆ ಆಗಾಗ ಟೇಬಲ್ ಕ್ಲೀನ್ ಮಾಡಲು ಸಿಬ್ಬಂದಿ ಕಳುಹಿಸಿದರೆ ಅದು ಸಹ ಕೆಲವೊಮ್ಮೆ ಕಿರಿ ಕಿರಿ ಮಾಡುತ್ತದೆ. ಆಗ ಅವರು ಬೇಗ ಸೀಟು ಖಾಲಿ ಆಗಬಹುದು. ಆದರೆ ಈ ವಿಧಾನ ಕೆಲಸ ಮಾಡುವ ಸಿಬ್ಬಂದಿ ವರ್ತನೆ ಸರಿಯಿಲ್ಲ ಎಂದು ಕೆಲವರು ದೂರಬಹುದು.

ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಬಹುದು..

ಇನ್ನೂ 'ಲಾಪ್ ಟಾಪ್ ಬಳಕೆದಾರರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬಹುದು. ಬೆಳಗ್ಗೆ, ಸಂಜೆ, ಇಲ್ಲವೇ ವಾರಾಂತ್ಯದ ದಿನಗಳಲ್ಲಿ ಅಲ್ಲಿಗೆ ಬರುವವರಿಗೆ ವಿಶೇಷ ತಿಂಡಿ, ಊಟದ ವ್ಯವಸ್ಥೆ ಜೊತೆಗೆ ಹೆಚ್ಚುವರಿ ಹಣವನ್ನು ನಿಗದಿ ಮಾಡಬಹುದು'. ಹೀಗೆ ಅನೇಕ ರೀತಿಯಲ್ಲಿ ನೆಟ್ಟಿಗರು ಉಪಾಯಗಳನ್ನು ನೀಡಿದ್ದಾರೆ. ಸದ್ಯ ಈ ವಿಚಾರ ಆನ್‌ಲೈನ್‌ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+