ರಿಟರ್ನ್-ಟು-ಆಫೀಸ್ ನೀತಿ ಅಂದ್ರೆ ಆಫೀಸಿಗೆ ಕರೆಯೋದಲ್ಲ, ಉದ್ಯೋಗಿಗಳು ರಾಜೀನಾಮೆ ನೀಡುವಂತೆ ಮಾಡುವುದು!
Return To Office Policy : ಇತ್ತೀಚಿನ ಕೆಲವು ದಿನಗಳಲ್ಲಿ ಅನೇಕ ಕಂಪನಿಗಳು ಉದ್ಯೋಗಿಗಳನ್ನ ನಡೆಸಿಕೊಳ್ತಾ ಇರುವ ರೀತಿಯೇ ಅರ್ಥವಾಗುವುದಿಲ್ಲ. ಕಂಪನಿ ಯಾವಾಗ ಹೈರ್ ಮಾಡುತ್ತದೆಯೋ, ಯಾವಾಗ ಕೆಲಸದಿಂದ ತೆಗೆದು ಹಾಕುತ್ತದೆಯೋ ಒಂದೂ ತಿಳಿಯುವುದಿಲ್ಲ. ಕೆಲವೊಮ್ಮೆ ಕೆಲಸದಿಂದ ತೆಗೆದುಹಾಕುವುದಕ್ಕೆ ಸರಿಯಾದ ಕಾರಣವೂ ಇರಲ್ಲ. ಆದರೂ ಉದ್ಯೋಗಿ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಇಲ್ಲಿ ಪ್ರಾಮಾಣಿಕತೆ, ನಿಷ್ಠೆ, ಕೆಲಸ ಯಾವುದೂ ಲೆಕ್ಕಕ್ಕೇ ಬರಲ್ಲ. ಕಪನಿಯ ಬೇಕು ಬೇಡ ಅಷ್ಟೇ ಇಲ್ಲ ಮುಖ್ಯ.
ಇದೀಗ ಇಂಥದ್ದೇ ಒಂದು ಘಟನೆ ಸೋಶಿಯಲ್ ಮಿಡಿಯಾದಲ್ಲಿ ಸುದ್ದಿಯಾಗಿದೆ. ಒಂದು ಕಂಪನಿ ನೌಕರರಿಗೆ ವರ್ಕ್ ಫ್ರಂ ಹೋಂ ಕೊಟ್ಟಿತ್ತು. ಹಾಗಾಗಿ ಎಲ್ಲರೂ ಮನೆಯಿಂದಲೇ ಕೆಲಸ ಮಾಡುತ್ತಾ ಇದ್ದರು. ಇದ್ದಕ್ಕಿದ್ದಂತೆ ಕಂಪನಿ ಎಲ್ಲರಿಗೂ 10 ದಿನದ ಒಳಗೆ ಆಫೀಸಿಗೆ ಬರಬೇಕು ಎನ್ನುವ ನೊಟೀಸ್ ಕಳುಹಿಸಿತ್ತು. ಬಹುತೇಕ ಮಂದಿ ಅದೇ ಊರಲ್ಲಿ ಕಾರಣ ಅವರಿಗೆ ಸಮಸ್ಯೆ ಅನ್ನಿಸಲಿಲ್ಲ. ಆದ್ರೆ ಒಬ್ಬ ಮಾತ್ರ ಬೇರೆ ದೇಶದವರು. ಹಾಗಾಗಿ ಅವರು ತಮ್ಮ ದೇಶದಿಂದಲೇ ಕೆಲಸ ಮಾಡ್ತಾ ಇದ್ದರು. 10 ದಿನದ ಒಳಗೆ ಬರಬೇಕು ಎಂದರೆ ತಕ್ಷಣಕ್ಕೆ ಫ್ಲೈಟ್ ಟಿಕೆಟ್ ಬುಕ್ ಮಾಡಬೇಕು. ಕೊನೆ ಘಳಿಗೆಯಲ್ಲಿ ಫ್ಲೈಟ್ ಟಿಕೆಟ್ ಎಂದರೆ ಅದು ದುಬಾರಿಯೇ. ಇದಕ್ಕಾಗಿ ಅವರು ಬಂದು ತಕ್ಷಣಕ್ಕೆ ಹೊರಡುವ ಬದಲು ಒಂದು ತಿಂಗಳು ಇಲ್ಲೇ ಉಳಿದು ನಂತರ ವಾಪಸ್ ವರ್ಕ್ ಫ್ರಂಗೆ ಹೋಗುವ ಇರಾದೆಯಿಂದ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತಾರೆ.

HR ಆದೇಶವೇ ಫೈನಲ್ :
ಇದಕ್ಕೂ ಮೊದಲು ತಮ್ಮ ಸಮಸ್ಯೆಯನ್ನು ಪರಿ ಪರಿಯಾಗಿ ವಿವರಿಸಿ ಹೇಳುವ ಪ್ರಯತ್ನ ಮಾಡುತ್ತಾರೆ. ಆದರೆ ಕಂಪನಿ ಹೆಚ್ಆರ್ ಅರ್ಥ ಮಾಡಿಕೊಳ್ಳಬೇಕಲ್ಲ. ಯಾವುದಕ್ಕೂ ಸೊಪ್ಪು ಹಾಕುವುದಿಲ್ಲ. ಉದ್ಯೋಗಿಗೆ ಆಗುವ ಖರ್ಚು ವೆಚ್ಚ ತನ್ನ ತಲೆ ನೋವಲ್ಲ ಎನ್ನುವ ರೀತಿ ನಡೆದುಕೊಳ್ಳುತ್ತದೆ. ಯಾವುದೇ ಕಾರಣಕ್ಕೂ ಯಾರಿಗೂ ರಿಯಾಯಿತಿ ಇಲ್ಲ. ಎಲ್ಲರೂ ಮೀಟಿಂಗಿನಲ್ಲಿ ಇರಲೇಬೇಕು. 10 ದಿನದಲ್ಲಿ ಆಫೀಸಿಗೆ ರಿಪೋರ್ಟ್ ಮಾಡಿಕೊಳ್ಳಲೇ ಬೇಕು ಎನ್ನುವ ಆದೇಶ ಹೊರಡಿಸಿಯೇ ಬಿಡುತ್ತಾರೆ.
Return To Office Policy ಮಾಡಿಕೆಲಸದಿಂದಲೇ ವಜಾ :
ಇನ್ನೇನು ಮಾಡುವುದು ಬೇರೆ ದಾರಿ ಇಲ್ಲ ಎಂದು ಆ ಉದ್ಯೋಗಿ (employees) ಫ್ಲೈಟ್ ಟಿಕೆಟ್ ಬುಕ್ ಮಾಡುತ್ತಾರೆ. ಎಲ್ಲರೂ ಆಫೀಸಿಗೆ ಬಂದ ಮೇಲೆ ಮೀಟಿಂಗ್ ನಡೆಯುತ್ತದೆ. ಆ ಮೀಟಿಂಗಿನಲ್ಲಿ ಕೆಲಸದಿಂದ ತೆಗೆದು ಹಾಕುವ ನಿರ್ಧಾರದ ಬಗ್ಗೆ ಕಂಪನಿ ಹೇಳುತ್ತದೆ. ಇನ್ನು ಕೆಲಸದಿಂದ ತೆಗೆದು ಹಾಕುವುದಕ್ಕೆ ಕಂಪನಿ ಕೊಟ್ಟ ಕಾರಣ ಕಂಪನಿ ರೂಲ್ಸ್ ಬ್ರೇಕ್ ಮಾಡಿರುವುದು ಎಂದು. ಅದು ಕೂಡಾ ಎರಡು ವರ್ಷಗಳ ಹಿಂದಿನ ಕೆಲವು ಸಣ್ಣ ಪುಟ್ಟ ವಿಷಯಗಳನ್ನು ಹಿಡಿದು ಕೆಲಸದಿಂದ ತೆಗೆದು ಹಾಕುವ ನಿರ್ಧಾರದ ಬಗ್ಗೆ ಕಂಪನಿ ಹೇಳಿದೆ.
ಎಚ್ಆರ್ ಉದ್ದೇಶದ ಬಗ್ಗೆ ಎದ್ದಿದೆ ಪ್ರಶ್ನೆ :
ಇಲ್ಲಿ ಕಂಪನಿ ಕೆಲಸದಿಂದ ತೆಗೆದುಹಾಕುವುದು ಒಂದು ವಿಷಯವಾದರೆ ಅದಕ್ಕಾಗಿ ಬೇರೆ ದೇಶದಿಂದ ನೌಕರನನ್ನು ಅಷ್ಟು ಖರ್ಚು ಮಾಡಿಸಿಕೊಂಡು ಕರೆಸುವ ಅಗತ್ಯ ಏನಿತ್ತು ಎನ್ನುವುದು ಮುಖ್ಯವಾದ ಪ್ರಶ್ನೆ. ಮೀಟಿಂಗ್ ಅಜೆಂಡಾ ಕೆಲಸದಿಂದ ತೆಗೆದು ಹಾಕಿರುವುದನ್ನು ಅನೌನ್ಸ್ ಮಾಡುವುದೇ ಆಗಿದ್ದರೆ ಅದನ್ನು ಆನ್ಲೈನಿನಲ್ಲಿಯೇ ಮಾಡಬಹುದಿತ್ತು. ಆದರೆ ಖರ್ಚಿನ ಬಗ್ಗೆ ಎಷ್ಟು ಹೇಳಿದರೂ ಕೇಳದೆ ಆಫೀಸಿಗೆ ಕರೆಸಿಕೊಂಡು ಕೊನೆಗೆ ಕೆಲಸದಿಂದ ತೆಗೆದು ಹಾಕಿದ್ದೇವೆ ಎನ್ನುವ ಆದೇಶ ಕೈಗಿಟ್ಟಿರುವುದು ಈ ಉದ್ಯೋಗಿಗಳಿಗೆ ಅರ್ಥವಾಗಲಿಲ್ಲ.
ಈ ಉದ್ಯೋಗಿ ರೆಡ್ಡಿಟ್ ನ ಆರ್ / ಆಫೀಸ್ ಪಾಲಿಟಿಕ್ಸ್ ಸಬ್ ರೆಡಿಟ್ ನಲ್ಲಿ ತಮ್ಮ ಅನುಭವ ಶೇರ್ ಮಾಡಿದ್ದಾರೆ. ಕಂಪನಿ ನನ್ನನ್ನು ಕೆಲಸದಿಂದ ತೆಗೆದು ಹಾಕಲು ವಿದೇಶದಿಂದ ಕರೆಸಿಕೊಂಡಿದೆ ಎಂದು ಬೇಸರ ತೋಡಿಕೊಂಡಿದ್ದಾರೆ.
ಕಂಪನಿಯ ನಿಜವಾದ ಉದ್ದೇಶ ಪ್ರಶ್ನಿಸುತ್ತಿರುವ ಜನ :
ಈ ಪೋಸ್ಟಿಗೆ ಜನರು ಬೇರೆ ಬೇರೆ ರೀತಿಯಲ್ಲಿ ರಿಯಾಕ್ಟ್ ಮಾಡುತ್ತಿದ್ದಾರೆ. ಕೆಲವರು ರಿಟರ್ನ್-ಟು-ಆಫೀಸ್ ಬಹುಶಃ ಉದ್ಯೋಗಿಯನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸುವ ಉದ್ದೇಶವಿರಬಹುದು ಎಂದು ಹೇಳಿದ್ದಾರೆ. ಅವರು ಈಗಾಗಲೇ ನಿಮ್ಮನ್ನು ಕೆಲಸದಿಂದ ತೆಗೆದು ಹಾಕುವ ಯೋಚನೆ ಮಾಡಿರಬಹುದು. ಇದ್ದಕ್ಕಿದ್ದಂತೆ ಆಫೀಸಿಗೆ ಕರೆದರೆ ನೀವೇ ಕೆಲಸ ಬಿಡಬಹುದು ಎನ್ನುವುದು ಹೆಚ್ಆರ್ ಲೆಕ್ಕಾಚಾರ ಇದ್ದಿರಬಹುದು ಎಂದು ಹೇಳಿದ್ದಾರೆ.
ಉದ್ಯೋಗಿ ಕಂಪನಿಯೊಂದಿಗೆ (company) ಮಾತುಕತೆ ನಡೆಸುವಾಗ ಆಡಿರುವ ಎಲ್ಲಾ ಮಾತುಗಳನ್ನು ಇಲ್ಲಿ ಸ್ಪಷ್ಟವಾಗಿ ಹೇಳಿಲ್ಲ. ಕೆಲವು ವಿಚಾರಗಳನ್ನು ಅವರು ಮುಚ್ಚಿಟ್ಟಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಕಂಪನಿ ರಿಟರ್ನ್-ಟು-ಆಫೀಸ್ ನೀತಿ ರೂಪಿಸಿದಾಗ, ಅವರ ಉದ್ದೇಶ ಉದ್ಯೋಗಿಗಳನ್ನು ಮತ್ತೆ ಆಫೀಸಿಗೆ ಕರೆಯುವುದು ಅಲ್ಲ. ಅವರು ರಾಜೀನಾಮೆ ನೀಡುವಂತೆ ಮಾಡುವುದು ಎಂದು ಇನ್ನೊಬ್ಬರು ಬರೆದಿದ್ದಾರೆ. ಇನ್ನು ಕೆಲವರು ಉದ್ಯೋಗಿ ಕಾನೂನು ಸಹಾಯ ತೆಗೆದುಕೊಳ್ಳಬೇಕು ಎಂದು ಸಲಹೆ ಕೊಟ್ಟಿದ್ದಾರೆ.


Click it and Unblock the Notifications
