ಆಗಸ್ಟ್ 16ಕ್ಕೆ ವೆಂಕಟೇಶ್ ಗೋಡ್ಖಿಂಡಿ ಅವರಿಗೆ ನಾದನಮನ
ಬೆಂಗಳೂರು, ಆಗಸ್ಟ್.12: ತಮ್ಮ ಕೊಳಲಿನ ನಾದದಿಂದ ಹಿಂದುಸ್ಥಾನಿ ಪರಂಪರೆಯನ್ನು ಸಂಗೀತ ಪ್ರಿಯರಿಗೆ ಹಂಚಿದ್ದ ದಿವಂಗತ ಪಂಡಿತ್ ವೆಂಕಟೇಶ್ ಗೋಡ್ಖಿಂಡಿ ಸ್ಮರಣಾರ್ಥವಾಗಿ ಗುರುವಂದನೆ ಕಾರ್ಯಕ್ರಮವನ್ನು ಆಗಸ್ಟ್ 16, ಭಾನುವಾರ ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಜೋಗ್ ಸಂಸ್ಥೆ, ಗೋಡ್ಕಿಂಡಿ ಮ್ಯೂಸಿಕ್ ಹಾಗೂ ಕನ್ನಡ ಮತ್ತು ¸ಸಂಸ್ಕ್ರತಿ ಇಲಾಖೆ ಆಶ್ರಯದಲ್ಲಿ ಬೆಳಗ್ಗೆ 8.30 ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ನಾದ ನಮನವನ್ನು ನಾಡಿನ ಹಿರಿಯ ಗಾಯಕ ಪಂಡಿತ್ ವಿನಾಯಕ್ ತೊರವೀ ರವರು ನಡೆಸಿಕೊಡಲಿದ್ದಾರೆ. ಇವರಿಗೆ ಸಹ ವಾದನದಲ್ಲಿ ಪಂಡಿತ್ ರವಿಂದ್ರ ಕಾಟೊಟಿ (ಹಾರ್ಮೊನಿಯಂ) ಮತ್ತು ವಿದ್ವಾನ್ ಕಿರಣ್ ಗೋಡ್ಖಿಂಡಿ (ತಬಲ) ಸಹಕರಿಸಲಿದ್ದಾರೆ.[ಮರೆಯಾದ ಕೊಳಲು ಕಲಾವಿದ]

ಪಂಡಿತ್ ಪ್ರವೀಣ್ ಗೋಡ್ಖಿಂಡಿ ಮತ್ತು ಅವರ ಪುತ್ರ ಮಾಸ್ಟರ್ ಷಡ್ಜ ಗೋಡ್ಖಿಂಡಿ ಜೊತೆ ಜುಗಲ್‍ಬಂದಿ ಪ್ರಸ್ತುತ ಪಡಿಸಲಿದ್ದಾರೆ. ಸಂಜೋಗ್ ನ ವಿದ್ಯಾರ್ಥಿಗಳು ಸಹ ಗುರುವಿಗೆ ಸಂಗೀತ ನಮನ ಸಲ್ಲಿಸಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶ.
* ಪಂಡಿತ್ ವೆಂಕಟೇಶ್ ಗೋಡ್ಖಿಂಡಿ ಸ್ಮರಣಾರ್ಥ ಗುರುವಂದನೆ 2015
* ಸ್ಥಳ: ಕಿಂಚ ಸಭಾಂಗಣ, ಭಾರತೀಯ ವಿದ್ಯಾ ಭವನ್, ರೇಸ್ ಕೋರ್ಸ್ ರಸ್ತೆ, ಬೆಂಗಳೂರು
ದಿನಾಂಕ: 16ನೇ ಆಗಸ್ಟ್ 2015, ಬೆಳಗ್ಗೆ 8.30 ಗಂಟೆ













Click it and Unblock the Notifications