ಬೆಂಗಳೂರು ಹೋಟೆಲ್‌: ಶ್ರೀಕೃಷ್ಣನ ಕೈಯಲ್ಲಿ ಮಾಂಸಾಹಾರ ಫೋಟೋ: ಕೇರಳಂ- ತುಳು ವಿಷು ಹಬ್ಬದಲ್ಲಿ ವಿವಾದ, ಆಕ್ಷೇಪ

Bengaluru: ಬೆಂಗಳೂರಿನ ಪ್ರಮುಖ ಹೋಟೆಲ್‌ಗಳು ಶ್ರೀಕೃಷ್ಣನ ಮುಂದೆ ಹಾಗೂ ಶ್ರೀಕೃಷ್ಣನ ಕೈಯಲ್ಲಿ ಮಾಂಸದ ಆಹಾರ ಇರುವಂತಹ ಪ್ರಮೋಷನ್ ಫೋಟೋಗಳನ್ನು ಹಂಚಿಕೊಂಡಿದ್ದು, ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪ ಕೇಳಿ ಬಂದಿದ್ದು, ಈ ಮಾದರಿಯ ಫೋಟೋಗಳಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಅಲ್ಲದೆ ಬೆಂಗಳೂರಿನ ಹೋಟೆಲ್‌ವೊಂದು ಈ ಮಾದರಿಯ ಫೋಟೋವನ್ನು ವಿಷು ಹಬ್ಬದ ಸಂದರ್ಭದಲ್ಲಿ ಹಂಚಿಕೊಂಡಿದ್ದು, ಮಲಯಾಳಂ ನಟ ಉನ್ನಿ ಮುಕುಂದನ್ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇರಳ ಮತ್ತು ಕರಾವಳಿ ಕರ್ನಾಟಕದಲ್ಲಿ (ತುಳುನಾಡು) ಆಚರಿಸಲಾಗುವ ಪ್ರಮುಖ ಸಾಂಪ್ರದಾಯಿಕ ಹಬ್ಬವಾಗಿರುವ ವಿಷು ಹಬ್ಬದ ಸಂಕೇತವಾಗಿ ವಿವಿಧ ಹೋಟೆಲ್‌ಗಳು, ಉದ್ಯಮಗಳು ವಿಶೇಷ ಆಫರ್‌ಗಳನ್ನು ನೀಡುವ ಸಂದರ್ಭದಲ್ಲಿ ಬೆಂಗಳೂರಿನ ಪ್ರಮುಖ ಹೋಟೆಲ್‌ಗಳು ಎಡವಟ್ಟು ಮಾಡಿಕೊಂಡಿವೆ. ವಿಷು ಹಬ್ಬ ಎನ್ನುವುದು ಮಲಯಾಳಂ ಕ್ಯಾಲೆಂಡರ್‌ನ ಹೊಸ ವರ್ಷದ ಆರಂಭವಾಗಿದೆ. ಏಪ್ರಿಲ್ ತಿಂಗಳಲ್ಲಿ ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುವಾಗ ಇದನ್ನು ಆಚರಿಸಲಾಗುತ್ತದೆ. ಹಬ್ಬದ ಪ್ರಮುಖ ಆಕರ್ಷಣೆಯು ಬೆಳಗ್ಗೆ ಮೊದಲು ನೋಡುವ 'ವಿಷುಕಣಿ' (ಅಕ್ಕಿ, ಹಣ್ಣುಗಳು, ಚಿನ್ನ, ಕನ್ನಡಿ, ಹೂವುಗಳ ಜೋಡಣೆ) ನೋಡಲಾಗುತ್ತದೆ.

Bengaluru

ಇದೀಗ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕೋನಪ್ಪನ ಅಗ್ರಹಾರದ ಮಹಾ ಯೋಗಿ ವೇಮನ ರಸ್ತೆ ಭಾಗದಲ್ಲಿರುವ ನಾದವಿ ಮಂಡಿ (Nadavi Mandi) ರೆಸ್ಟೋರೆಂಟ್ ಹಾಗೂ ಮೆಹರ್ ಮಂಡಿ & ಗ್ರಿಲ್ಸ್ (Mehr Mandi & Grills) ಎನ್ನುವ ರೆಸ್ಟೋರೆಂಟ್‌ಗಳು ಹಂಚಿಕೊಂಡಿವೆ ಎನ್ನಲಾದ ಫೋಟೋಗಳು ಭಾರೀ ಚರ್ಚೆಗೆ ಕಾರಣವಾಗಿವೆ. ವಿಷು ವಿಷಯದ ಪ್ರಚಾರದ ಪೋಸ್ಟರ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ. ಈ ಫೋಟೋಗಳಲ್ಲಿ ಬಾಲ ಕೃಷ್ಣನ ಮುಂದೆ ಬಿರಿಯಾನಿ ಹಾಗೂ ಚಿಕನ್ ಪೀಸ್ ಇರಿಸಿರುವುದು ಹಾಗೂ ಬಾಲ ಕೃಷ್ಣ ಚಿಕನ್ ಪೀಸ್ ತೆಗೆದುಕೊಳ್ಳುತ್ತಿರುವಂತೆ ಚಿತ್ರಿಸಲಾಗಿದೆ. ಸೌದಿ ಅರೇಬಿಯಾದಲ್ಲಿಯೂ ಒಂದು ಅಂಗಡಿಯನ್ನು ಹೊಂದಿರುವ ರೆಸ್ಟೋರೆಂಟ್, ವಿಷು ಶುಭಾಶಯಗಳ ಭಾಗವಾಗಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಚಿತ್ರವನ್ನು ಪೋಸ್ಟ್ ಮಾಡಿ, ನಂತರ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾದ ನಂತರ ಫೋಟೋಗಳನ್ನು ತೆಗೆದಿದೆ ಎಂದು ವರದಿಯಾಗಿದೆ.

ಈಗ ಅಳಿಸಲಾಗಿರುವ ಚಿತ್ರದಲ್ಲಿ ಭಗವಾನ್ ಕೃಷ್ಣನು ಬೇಯಿಸಿದ ಮಾಂಸದ ತುಂಡನ್ನು ಹಿಡಿದು ಮೇಜಿನ ಮೇಲೆ ಇಣುಕುತ್ತಿರುವ ಮಗುವಿನಂತಹ ಚಿತ್ರವಿತ್ತು. ಅದರ ಮೇಲೆ ಹುರಿದ ಕೋಳಿಮಾಂಸವನ್ನು ಮುಂಭಾಗದಲ್ಲಿ ಪ್ರಮುಖವಾಗಿ ಇರಿಸಲಾಗಿದೆ. ಹಿನ್ನೆಲೆಯು ಊಟ ಮಾಡುವವರು ಕುಳಿತಿರುವ ರೆಸ್ಟೋರೆಂಟ್ ಸೆಟ್ಟಿಂಗ್ ಅನ್ನು ತೋರಿಸುತ್ತದೆ, ಆದರೆ ಹಬ್ಬದ ವಿನ್ಯಾಸದ ಅಂಶಗಳು ಮತ್ತು "ವಿಷು ಶುಭಾಶಯಗಳು" ಎಂದು ಬರೆದಿರುವ ಮಲಯಾಳಂ ಬರಹವನ್ನೂ ಪ್ರದರ್ಶಿಸಲಾಗಿತ್ತು.

ಮಾಂಸ ಭಕ್ಷ್ಯದೊಂದಿಗೆ ನೇರವಾಗಿ ಶ್ರೀ ಕೃಷ್ಣನ ಚಿತ್ರ ಬಳಕೆ ಮಾಡಿರುವುದು ಇದೀಗ ವಿವಾದ ಕೇಂದ್ರ ಬಿಂದುವಾಗಿದೆ. ಮಲಯಾಳಂನ ಹೊಸ ವರ್ಷವಾದ ವಿಷು, ಕೇರಳದ ಹಿಂದೂಗಳಿಗೆ ಅತ್ಯಂತ ಮಹತ್ವದ ಹಬ್ಬವಾಗಿದ್ದು, ಮುಂಬರುವ ವರ್ಷಕ್ಕೆ ಸಮೃದ್ಧಿ, ಶುದ್ಧತೆ ಮತ್ತು ದೈವಿಕ ಆಶೀರ್ವಾದಗಳನ್ನು ಸಂಕೇತಿಸುವ ವಿಶುಕ್ಕನಿಯಂತಹ ಆಚರಣೆಗಳ ಮೇಲೆ ಕೇಂದ್ರೀಕೃತವಾಗಿದೆ. ಆದರೆ ಈ ಹಬ್ಬವನ್ನು ಕೆಲವು ರೆಸ್ಟೋರೆಂಟ್‌ಗಳು ಬಳಸಿಕೊಂಡಿರುವ ರೀತಿಗೆ ಆಕ್ಷೇಪ ವ್ಯಕ್ತವಾಗಿದೆ.

ಅಂತಹ ಜಾಹೀರಾತುಗಳಲ್ಲಿ ಮಾಂಸ ಭಕ್ಷ್ಯಗಳೊಂದಿಗೆ ಭಗವಾನ್ ಕೃಷ್ಣನ ಚಿತ್ರಣವನ್ನು ಬಳಸುವುದು ಹಿಂದೂ ಸಂಪ್ರದಾಯಗಳ ನೇರ ಅವಮಾನವಾಗಿದೆ, ಇದು ಹಬ್ಬದ ಪಾವಿತ್ರ್ಯ ಮತ್ತು ಅದರ ಪದ್ಧತಿಗಳಿಗೆ ಅಗೌರವ ಎಂದು ಭಕ್ತರಲ್ಲಿ ಬಲವಾದ ಪ್ರತಿಕ್ರಿಯೆಗಳಿಗೆ ಕಾರಣವಾಗುತ್ತದೆ. ಪೋಸ್ಟರ್‌ನಲ್ಲಿ ನಾಡವಿ ಮಂಡಿ ರೆಸ್ಟೋರೆಂಟ್‌ನ ಬ್ರ್ಯಾಂಡಿಂಗ್ ಅಂಶಗಳು ಮತ್ತು ಬೆಂಗಳೂರು ಮತ್ತು ಸೌದಿ ಅರೇಬಿಯಾ ಸೇರಿದಂತೆ ಅದರ ಸ್ಥಳಗಳ ಉಲ್ಲೇಖಗಳಿವೆ.

ಈ ದೃಶ್ಯವನ್ನು ಹಬ್ಬದ ಶುಭಾಶಯಕ್ಕಾಗಿ ಉದ್ದೇಶಿಸಲಾಗಿತ್ತು ಆದರೆ ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ತ್ವರಿತವಾಗಿ ಗಮನ ಸೆಳೆಯಿತು. ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳು ರೆಸ್ಟೋರೆಂಟ್‌ನ ಸಾಮಾಜಿಕ ಮಾಧ್ಯಮ ಪುಟದಿಂದ ತೆಗೆದುಹಾಕಲ್ಪಟ್ಟ ನಂತರವೂ ಪ್ರಸಾರವಾಗುತ್ತಲೇ ಇದ್ದವು. ಈ ಎರಡು ಹೋಟೆಲ್‌ಗಳು ಮಾತ್ರವಲ್ಲದೆ ವಿವಿಧ ಕೆಲವು ನಿರ್ದಿಷ್ಟ ಹೋಟೆಲ್‌ಗಳು ಸಹ ಇದೇ ಮಾದರಿಯ ಫೋಟೋಗಳನ್ನು ಹಂಚಿಕೊಂಡಿವೆ ಎಂದು ಹೇಳಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ.

ಮಲಯಾಳಂ ನಟ ಉನ್ನಿ ಮುಕುಂದನ್ ವಿರೋಧ

ಇನ್ನು ಮಲಯಾಳಂ ನಟ ಉನ್ನಿ ಮುಕುಂದನ್ ಅವರು ಸಹ ಕೆಲವು ಹೋಟೆಲ್‌ಗಳ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಲ್ಲದಕ್ಕೂ ಒಂದು ಮಿತಿ ಇದೆ. ದಯವಿಟ್ಟು ಬೇರೆಯವರ ಭಾವನೆಗಳಿಗೆ ಬೆಲೆ ಕೊಡುವುದನ್ನು ತಿಳಿಯಿರಿ, ಇದು ಸಂಪೂರ್ಣವಾಗಿ ಅಸಹ್ಯಕರವಾದ ಬೆಳವಣಿಗೆ ಎಂದು ಉನ್ನಿ ಮುಕುಂದನ್ ಅವರು ಅಭಿಪ್ರಾಯಪಟ್ಟಿದ್ದಾರೆ. Mehr Mandi & Grills ಫೋಟೋವನ್ನು ಸೋಷಿಯಲ್ ಮೀಡಿಯಾ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+