ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕೊವಿಡ್ ರೋಗಿ ಶವ ನೀಡಲು ಖಾಸಗಿ ಆಸ್ಪತ್ರೆಯಿಂದ 9 ಲಕ್ಷ ಸುಲಿಗೆ

|
Google Oneindia Kannada News

ಬೆಂಗಳೂರು, ಆಗಸ್ಟ್ 10: ಕೊರೊನಾ ಸೋಂಕಿಗೆ ತುತ್ತಾಗಿದ್ದ ರೋಗಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, 9 ಲಕ್ಷ ಕಟ್ಟಿದರಷ್ಟೇ ಮೃತದೇಹ ಕೊಡುವುದಾಗಿ ಆಸ್ಪತ್ರೆ ಎರಡು ದಿನಗಳ ಕಾಲ ಶವವನ್ನು ಆಸ್ಪತ್ರೆಯಲ್ಲೇ ಇಟ್ಟುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Recommended Video

BSY Discharged : ಒಂದೇ ವಾರದಲ್ಲಿ ಆಸ್ಪತ್ರೆಯಿಂದ ಹೊರಬಂದ ಯಡಿಯೂರಪ್ಪ | Oneindia Kannada

ಆರ್‌ಪಿಸಿ ಲೇಔಟ್‌ನ ನಿವಾಸಿಯೊಬ್ಬರಿಗೆ ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು ಅವರನ್ನು ಜುಲೈ 19 ರಂದು ಆಸ್ಪತ್ರೆಗೆ ದಾಖಲಿಸಿದ್ದರು. ಪರೀಕ್ಷೆ ನಡೆಸಿದ್ದ ವೈದ್ಯರು ಮೂತ್ರಪಿಂಡ ಮತ್ತು ಶ್ವಾಸಕೋಶದ ಸಮಸ್ಯೆಯಿದೆ ಎಂದು ಚಿಕಿತ್ಸೆ ನೀಡಿದ್ದರು.

ಲಕ್ಷಣ ಕಾಣಿಸಿಕೊಂಡ ಬಳಿಕ ದೇಹದೊಳಗೆ ಕೊರೊನಾ ಸೋಂಕು ಎಷ್ಟು ದಿನ ಇರುತ್ತೆ?ಲಕ್ಷಣ ಕಾಣಿಸಿಕೊಂಡ ಬಳಿಕ ದೇಹದೊಳಗೆ ಕೊರೊನಾ ಸೋಂಕು ಎಷ್ಟು ದಿನ ಇರುತ್ತೆ?

ಈ ಮಧ್ಯದಲ್ಲಿ ರೋಗಿಯ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಿಳಿಸಿದ್ದ ವೈದ್ಯರು ತುರ್ತು ನಿಗಾಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆ.7ರಂದು ರೋಗಿಯು ಮೃತಪಟ್ಟಿದ್ದಾರೆ.

ಆಸ್ಪತ್ರೆ ವೆಚ್ಚ 9 ಲಕ್ಷ ಕಟ್ಟಿ ಮೃತದೇಹ ತೆಗೆದುಕೊಂಡು ಹೋಗಿ

ಆಸ್ಪತ್ರೆ ವೆಚ್ಚ 9 ಲಕ್ಷ ಕಟ್ಟಿ ಮೃತದೇಹ ತೆಗೆದುಕೊಂಡು ಹೋಗಿ

ಮೃತದೇಹವನ್ನು ನೀಡಬೇಕಿದ್ದರೆ ಆಸ್ಪತ್ರೆ ವಚ್ಚ 9ಲಕ್ಷವನ್ನು ಪಾವತಿ ಮಾಡಲೇಬೇಕು, ಬಳಿಕ ಹಸ್ತಾಂತರಿಸಲಾಗುವುದು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

ಜ್ವರ ಹಾಗೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಸಹೋದರನನ್ನು ಕುಮರಸ್ವಾಮಿ ಲೇಔಟ್ ನಲ್ಲಿರುವ ಸಾಗರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜು.19ರಂದು ಕೊರೊನಾ ಪಾಸಿಟಿವ್ ಬಂದಿತ್ತು.

ಅದೇ ಆಸ್ಪತ್ರೆಯಲ್ಲೇ ಸಹೋದರ ಕೆಲಸ ಮಾಡುತ್ತಿದ್ದರು

ಅದೇ ಆಸ್ಪತ್ರೆಯಲ್ಲೇ ಸಹೋದರ ಕೆಲಸ ಮಾಡುತ್ತಿದ್ದರು

ಸಹೋದರ ಸಾಗರ್ ಆಸ್ಪತ್ರೆಯಲ್ಲಿಯೇ ಕಳೆದ 20 ವರ್ಷಗಳಿಂದ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿಯೇ ಅವರನ್ನು ದಾಖಲು ಮಾಡಲಾಗಿತ್ತು. ಆಗಸ್ಟ್ 7 ರಂದು ಆಸ್ಪತ್ರೆಯಿಂದ ದೂರವಾಣಿ ಕರೆ ಬಂದಿತ್ತು.ಈ ವೇಳೆ ಸಹೋದರ ಸಾವನ್ನಪ್ಪಿದ್ದಾರೆಂದು ಹೇಳಿದ್ದರು. ಬಳಿಕ ಮೃತದೇಹ ನೀಡುವಂತೆ ಕೇಳಿದಾಗ ಚಿಕಿತ್ಸಾ ವೆಚ್ಚ ರೂ.8.96 ಲಕ್ಷ ಭರಿಸುವಂತೆ ಹೇಳಿದ್ದರು.

ಕೊವಿಡ್-19 ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಮಾರ್ಗಸೂಚಿಕೊವಿಡ್-19 ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಮಾರ್ಗಸೂಚಿ

ವಿಮಾ ಹಣ ರೂ.1.84 ಲಕ್ಷ ಬಿಡುಗಡೆಯಾಗಿದ್ದು, ರೂ.1 ಲಕ್ಷ ನಾವು ನೀಡಿದ್ದೆವು. ಆದರು, ಆಸ್ಪತ್ರೆಯವರು ಮೃತದೇಹ ನೀಡಿಲ್ಲ. 2 ದಿನಗಳಿಂದ ಮೃತ ದೇಹಕ್ಕಾಗಿ ಆಸ್ಪತ್ರೆಯ ಮುಂದೆ ಕಾಯುತ್ತಿದ್ದೇವೆಂದು ಮೃತ ವ್ಯಕ್ತಿಯ ಹಿರಿಯ ಸಹೋದರ ಅಳಲು ತೋಡಿಕೊಂಡಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವರಿಗೂ ಮಾಹಿತಿ ನೀಡಲಾಗಿದೆ

ವೈದ್ಯಕೀಯ ಶಿಕ್ಷಣ ಸಚಿವರಿಗೂ ಮಾಹಿತಿ ನೀಡಲಾಗಿದೆ

ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರಿಗೆ ಮಾಹಿತಿ ನೀಡಲಾಗಿದೆ. ಸಚಿವರು ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದು, ಇದೀಗ ಮೃತದೇಹ ನೀಡಿದ್ದಾರೆ. ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಮೃತದೇಹ ಹಸ್ತಾಂತರಿಸಿದ್ದರು. ನಾನು ಅಂಗವಿಕಲನಾಗಿದ್ದು, ಮನೆಯಲ್ಲಿ ನನ್ನ ಸಹೋದರನೊಬ್ಬನೇ ದುಡಿದು ಎಲ್ಲರನ್ನೂ ನೋಡಿಕೊಳ್ಳುತ್ತಿದ್ದ ಎಂದು ತಿಳಿಸಿದ್ದಾರೆ.

ರೋಗಿಗೆ ಆಕ್ಸಿಜನ್ ನೀಡಲಾಗಿತ್ತು

ರೋಗಿಗೆ ಆಕ್ಸಿಜನ್ ನೀಡಲಾಗಿತ್ತು

ರೋಗಿಗೆ ಆಕ್ಸಿಜನ್ ನೀಡಲಾಗಿತ್ತು. ಆಗಸ್ಟ್ 7 ರಂದು ವ್ಯಕ್ತಿ ಮೃತಪಟ್ಟಿದ್ದರು. ಬಳಿಕ ಕುಟುಂಬಸ್ಥರನ್ನು ಸುದೀರ್ಘವಾಗಿ ಸಂಪರ್ಕಿಸುವ ಕಾರ್ಯ ನಡೆದಿತ್ತು ಎಂದು ಸಾಗರ್ ಆಸ್ಪತ್ರೆಯ ನಿರ್ದೇಶಕ ಡಾ.ವೆಂಕಟೇಶ್ ವಿಕ್ರಮ್ ಅವರು ಹೇಳಿದ್ದಾರೆ.

ಕುಟುಂಬಸ್ಥರ ಸಂಪರ್ಕಿಸಲು ಸಾಕಷ್ಟು ಬಾರಿ ಯತ್ನ ನಡೆಸಿದೆವು. ಬಳಿಕ ಬಿಬಿಎಂಪಿ, ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದೆವು. ಕುಟುಂಬಸ್ಥರು ರೂ.1 ಲಕ್ಷ ನೀಡಿದರೂ ಕೂಡ ಬಿಲ್ ಮೊತ್ತ ಕಟ್ಟಿದ ಬಳಿಕವೇ ಮೃತದೇಹ ತೆಗೆದುಕೊಂಡು ಹೋಗುವಂತೆ ನಾವು ತಿಳಿಸಿಲ್ಲ ಎಂದು ತಿಳಿಸಿದ್ದಾರೆ.

ಆಗಸ್ಟ್ 7 ರಂದು ವ್ಯಕ್ತಿ ಮೃತಪಟ್ಟ ಬಳಿಕ ಕುಟುಂಬಸ್ಥರಾರೂ ಮೃತದೇಹ ತೆಗೆದುಕೊಂಡು ಹೋಗಲು ಬರಲಿಲ್ಲ ಎಂದು ವಿವರಿಸಿದ್ದಾರೆ.

English summary
A 62-year-old male Covid-19 positive patient who was admitted at a private hospital passed away on August 7. The patient’s brother has alleged that the body wasn’t given to the family for two days as they were unable to pay the full amount of Rs 8.96 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X