ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣಪನ ಎತ್ತರದ ಮೇಲಿನ ನಿರ್ಬಂಧ ಹಿಂತೆಗೆದ ಮಾಲಿನ್ಯ ಮಂಡಳಿ

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 3: ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಐದು ಅಡಿಗಿಂತ ಹೆಚ್ಚು ಎತ್ತರದ ವಿಗ್ರಹಗಳನ್ನು ಪ್ರತಿಷ್ಠಾಪಿಸಬಾರದೆಂದು ಆಗ್ರಹಿಸಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಆದೇಶವನ್ನು ಹಿಂತೆಗೆದುಕೊಂಡಿದೆ.

ಸೋಮವಾರ ಬೆಂಗಳೂರು ಗಣೇಶ ಉತ್ಸವ ಮಂಡಳಿ ನಡೆಸಿದ ಪ್ರತಿಭಟನೆ ನಂತರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳ ತಯಾರಿ ಮತ್ತು ಮಾರಾಟಕ್ಕೆ ನಿಷೇಧ ಹೇರಿರುವುದನ್ನು ವಿರೋಧಿಸಿ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯಿಂದ ಪ್ರತಿಭಟನೆ ನಡೆಸಿದರು.

ಬಿಬಿಎಂಪಿ ಬ್ಯಾನ್ ಗೆ ಬೆಲೆ ಇಲ್ಲ: ಪಿಒಪಿ ಗಣಪನ ಹಾವಳಿ ನಿಂತಿಲ್ಲ!ಬಿಬಿಎಂಪಿ ಬ್ಯಾನ್ ಗೆ ಬೆಲೆ ಇಲ್ಲ: ಪಿಒಪಿ ಗಣಪನ ಹಾವಳಿ ನಿಂತಿಲ್ಲ!

ಐದು ಅಡಿ ಎತ್ತರಕ್ಕೆ ಮೂರ್ತಿ ಎತ್ತರ ಸೀಮಿತ ಸೇರಿದಂತೆ ಆರ್‌ವಿ ರಸ್ತೆ ಬಳಿ ಮೂರ್ತಿಗಳನ್ನು ವಶಪಡಿಸಿಕೊಂಡಿತ್ತು, ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಸಮಿತಿ ಪಿಒಪಿ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದೆ.

Bengaluru Ganesha idol installation committee protests against KSPCB

ಪಿಒಪಿ ಮೂರ್ತಿಗಳಿಂದ ಪರಿಸರಕ್ಕೆ ಹಾನಿಯಾಗದಂತೆ ಕ್ರಮ ಕೈಗೊಳ್ಳುವುದು ಮಂಡಳಿಯ ಜವಾಬ್ದಾರಿ, ಬಳಕೆ ಮತ್ತು ಮಾರಾಟದ ಮೇಲೆ ನಿಯಂತ್ರಣ ಹೇರುವುದರಿಂದ ಸಮಸ್ಯೆ ಪರಿಹಾರ ದೊರಕುವುದಿಲ್ಲ ಎನ್ನುವುದು ಮೂರ್ತಿ ತಯಾರಕರ ವಾದವಾಗಿತ್ತು.

ಪಾಲಿಸಿದರೆ ವರ, ಉಲ್ಲಂಘಿಸಿದರೆ ಶಾಪ, ಇದು ಗಣೇಶನ ನಿಯಮಪಾಲಿಸಿದರೆ ವರ, ಉಲ್ಲಂಘಿಸಿದರೆ ಶಾಪ, ಇದು ಗಣೇಶನ ನಿಯಮ

ಐದು ಅಡಿಗೂ ಎತ್ತರದ ಗಣೇಶನನ್ನು ಕೂರಿಸದಂತೆ ಆದೇಶ ಹೊರಡಿಸಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶವನ್ನು ಹಿಂಪಡೆಯುವಂತೆ ನಗರದ ಮಾವಳ್ಳಿಯಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿವರೆಗೆ ಪ್ರತಿಭಟನೆ ನಡೆಯಿತು. ಹತ್ತು ಅಡಿ ಗಣೇಶನನ್ನು ಮೆರವಣಿಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

 ನಿಮ್ಮ ಏರಿಯಾ ಗಣೇಶ 5 ಅಡಿಗಿಂತ ಹೆಚ್ಚು ಎತ್ತರ ಇರೋಹಾಗಿಲ್ಲ ನಿಮ್ಮ ಏರಿಯಾ ಗಣೇಶ 5 ಅಡಿಗಿಂತ ಹೆಚ್ಚು ಎತ್ತರ ಇರೋಹಾಗಿಲ್ಲ

ಈ ಹಿಂದೆ ಹೊರಡಿಸಿದ್ದ ಆದೇಶ ಕಡ್ಡಾಯವಲ್ಲ, ಇದೊಂದು ಮಾರ್ಗ ಸೂಚಿ ಅಷ್ಟೇ, ಹಸಿರು ನ್ಯಾಯಾಧೀಕರಣ ತೀರ್ಪಿನ ಪ್ರಕಾರ ತೀರ್ಮಾನ ಕೈಗೊಳ್ಳಲಾಗಿದೆ. ಹಾಗಾಗಿ ಗಣೇಶ ಉತ್ಸವ ಸಮಿತಿ ಪ್ರತಿಭಟನೆ ಮಣಿದು ನಿಯಮದಲ್ಲಿ ಸಡಿಲಿಕೆ ಮಾಡಿದೆ.

English summary
Bengaluru Ganesha idol installation committee has held protests against KSPCB on Monday opposing idol height was restricted for five feet earlier. Following this protest board has relaxed its restriction order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X