Bengaluru: ಬಿಸಿ ಬಿಸಿ ಚಹಾ ಬೇಕಾ? ಬುಕ್ ಮಾಡಿ ಮನೆ ಬಾಗಿಲಿಗೇ ಬರುತ್ತೆ...!
ಇತ್ತಿಚಿನ ದಿನಗಳಲ್ಲಿ ನೀರು, ಹಾಲು, ಮಾಂಸ, ತರಕಾರಿ ಎಲ್ಲಾ ಮನೆ ಬಾಗಿಲಿಗೆ ಬಂದು ತಲುಪುತ್ತೆ. ಈಗ ಬಿಸಿ ಬಿಸಿ ಟೀ ಸಹ ನೀವು ಮನೆಗೆ ತರಿಸಿಕೊಳ್ಳಬಹುದು. ಅದು ಕೂಡ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಅದು ಎಲ್ಲಿ ಅಂದ್ರಾ... ಈ ವ್ಯವಸ್ಥೆ ಎಲ್ಲೂ ಅಲ್ಲ ನಮ್ಮ ಬೆಂಗಳೂರಿನಲ್ಲೇ ಲಭ್ಯವಿದೆ. ಹೀಗೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಟೀ ಎಕ್ಸ್‌ಪ್ರೆಸ್ ಮೂಲಕ ನಿಮಗಿಷ್ಟವಾದ ಚಹಾವನ್ನು ನೀವು ಬುಕ್ ಮಾಡಬಹುದು. ಇದರಲ್ಲಿ QR ಕೋಡ್ ಅನ್ನು ನೀಡಲಾಗಿದೆ. ಈ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಣವನ್ನು ಪಾವತಿಸಬಹುದು. ಕೇವಲ ಹತ್ತು ರೂಪಾಯಿಯಲ್ಲಿ ನಿಮಗಿಷ್ಟವಾದ ಚಾಹಾವನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಜೊತೆಗೆ ಈ ಸೇವೆಯನ್ನು ದಿನದ 24 ಗಂಟೆಗಳ ಕಾಲ ಒದಗಿಸಲಾಗುತ್ತದೆ.

ಎಲ್ಲೆಲ್ಲಿ ಚಹಾ ತರಿಸಿಕೊಳ್ಳಬಹುದು?
ಸದ್ಯ ಈ ಸೇವೆಯನ್ನು ವಿಜಯನಗರ, ಚಂದ್ರಲೇಔಟ್ ಹಾಗೂ ನಾಗರಬಾಯಿಯಲ್ಲಿ ಮಾತ್ರ ಒದಗಿಸಲಾಗುತ್ತಿದೆ. ಈ ಪ್ರದೇಶಗಳಲ್ಲಿ ವಾಸಿಸುವ ಜನ ತಾವಿರುವ ಸ್ಥಳಕ್ಕೆ ಚಹಾ ತರಿಸಿಕೊಳ್ಳಬಹುದು. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಜನ ಖುಷಿ ಪಟ್ಟಿದ್ದಾರೆ. ಜೊತೆಗೆ ತಾವಿರುವ ಸ್ಥಳಕ್ಕೆ ಚಹಾವನ್ನು ತರಿಸಿಕೊಳ್ಳುವ ಮೂಲಕ ತಮ್ಮವರು ಹಾಗೂ ತಮ್ಮ ಸ್ನೇಹಿತರೊಂದಿಗೆ ಈ ಖುಷಿ ವಿಚಾರವನ್ನು ಹಂಚಿಕೊಳ್ಳುತ್ತಿದ್ದಾರೆ.
ಏನೆಲ್ಲಾ ಲಭ್ಯ?
ಟೀ ಎಕ್ಸ್‌ಪ್ರೆಸ್ ಮೂಲಕ ಚಹಾದೊಂದೊಗೆ ನೀವು ಸ್ಟ್ಯಾಂಡರ್ಡ್ ಟೀ, ಕಾಫಿ, ಹಾಟ್ ಮಿಲ್ಕ್ ಅನ್ನು ಕೂಡ ತರಿಸಿಕೊಳ್ಳಬಹುದು. ರುಚಿಕರವಾದ ಬಿಸಿ ಬಿಸಿ ಚಹಾವನ್ನು ನೀವಿರುವ ಸ್ಥಳದಲ್ಲೇ ಆನಂದಿಸಬಹುದು. ಇದಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಹಾ ಪ್ರಿಯರು ಇದನ್ನು ಮೆಚ್ಚಿಕೊಂಡಿದ್ದಾರೆ. ಜೊತೆಗೆ ನಗರದ ಬೇರೆ ಬೇರೆ ಪ್ರದೇಶಗಳಿಗೂ ಈ ಸೇವೆಯನ್ನು ಒದಗಿಸಲು ಮನವಿ ಮಾಡಿಕೊಂಡಿದ್ದಾರೆ.

ಹೀಗೊಬ್ಬ ಗ್ರಾಹಕರು ತಮ್ಮ ಮನೆ ಬಾಗಿಲಿಗೆ ಚಹಾವನ್ನು ತರಿಸಿಕೊಳ್ಳುವ ಮೂಲಕ ಎಕ್ಸ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ಆಸೆಯೆಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯಾ?''
— ರೇಖಾ ತಿಪಟೂರು/ Rekha Tipaturu (@RekhaBasavaraju) November 23, 2023
Library ಮುಗಿಸಿಕೊಂಡು ಆಚೆ ಬಂದೆ, ರಾತ್ರಿ ಸುಮಾರು 12ರ ಸಮಯ.
ಕೇವಲ 7 ನಿಮಿಷದಲ್ಲಿ ನಾನಿದ್ದ ಕಡೆಗೆ
ಬಿಸಿ ಬಿಸಿ ಟೀ ಬಂತು!
ಅದೂ 10 ರೂಪಾಯಿಗೆ!
ಏನ್ ಹೇಳಬೇಕು ಗೊತ್ತಾಗ್ಲಿಲ್ಲ, ಅವನಿಗೆ tips ಕೊಡಬೇಕಾ! ಕೊಟ್ರೆ ಅವನ ಸ್ವಾಭಿಮಾನಕ್ಕೆ ಧಕ್ಕೆ ಆಗುತ್ತಾ ಗೊತ್ತಾಗ್ಲಿಲ್ಲ!… pic.twitter.com/2qeB6ITFd3
ಪ್ರಯೋಜನವೇನು?
ಸಾಮಾನ್ಯವಾಗಿ ಮನೆಗೆ ಅತಿಥಿಗಳು ಬಂದರೆ ಅಥವಾ ಹೊರಗಡೆ ಹೋದಾಗ ಸ್ನೇಹಿತರು ಸಿಕ್ಕರೆ ಅವರಿಗೆ ಚಹಾ ಕುಡಿಸಬೇಕು ಅನ್ನೋ ಮನಸ್ಸಾಗುವುದು ಸಹಜ. ಮನೆಯಲ್ಲಾದರೆ ಮಹಿಳೆಯರು ಬಂದ ಅತಿಥಿಗಳನ್ನು ಒಂಟಿಯಾಗಿ ಕೂಡಿಸಿ ಚಹಾ ಮಾಡಲು ಅಡುಗೆ ಮನೆ ಸೇರಿಬಿಡ್ತಾರೆ. ಇದರಿಂದ ಬಂದ ಅತಿಥಿಗಳೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದೇ ಇಲ್ಲ. ಆದರೀಗ ಮನೆಗೆ ಬರುವ ಅಥಿಥಿಗಳೊಂದಿಗೆ ಟೈಂ ಪಾಸ್ ಮಾಡ್ತಾ ಮಹಿಳೆಯರು ಚಹಾ ತರಿಸಿಕೊಳ್ಳಬಹುದು.
ಇನ್ನೂ ವಾಕಿಂಗ್, ಜಾಗಿಂಗ್ ಪಾರ್ಕ್fನಲ್ಲಿ ಸುತ್ತಾಡಲು ಹೋದಾಗ ಸ್ನೇಹಿತರು ಸಿಕ್ಕರೆ ಚಹಾ ಕುಡಿಯೋ ಮನಸ್ಸಾದರೆ ಹೋಟೆಲ್ ಹುಡುಕಿಕೊಂಡು ತಾವಿರುವ ಸ್ಥಳವನ್ನು ಬಿಟ್ಟು ಹೋಗಬೇಕಾಗುತ್ತದೆ. ಇಂಥಹ ಸಂದರ್ಭದಲ್ಲಿ ಈ ಸೇವೆ ತುಂಬಾ ಪ್ರಯೋಜನಕಾರಿಯಾಗಿದೆ. ನೀವಿರು ಸ್ಥಳದಲ್ಲಿ ಚಹಾವನ್ನು ತರಿಸಿಕೊಂಡು ಎಂಜಾಯ್ ಮಾಡಬಹುದು.












Click it and Unblock the Notifications