Bengaluru Food: ₹71ಕ್ಕೆ ಇಡ್ಲಿ, ವಡೆ, ಮಸಾಲೆ ದೋಸೆ; ಇಲ್ಲಿನ ಅಗ್ಗದ ಆಹಾರಕ್ಕೆ ನೆಟ್ಟಿಗರು ಫಿದಾ!

Bengaluru Food: ಬೆಂಗಳೂರಿನ ಹೋಟೆಲ್‌ಗಳ ಆಹಾರ ಹಾಗೂ ಬೆಲೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ರುಚಿ ಹಾಗೂ ಶುಚಿ ಆಹಾರ ಸಿಗುತ್ತದೆ. ಹಣದುಬ್ಬರದ ನಡುವೆಯೂ ಕಡಿಮೆ ಬೆಲೆಗೆ ಆಹಾರ ಸಿಗುತ್ತಿರುವುದು ಉತ್ತಮ ವಿಚಾರ ಎಂದು ಹಲವು ನೆಟ್ಟಿಗರು ಹೇಳಿದ್ದಾರೆ. vish key (@himalayanguy_7) ಎನ್ನುವವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬೆಂಗಳೂರಿನ ಫುಡ್ ಬಗ್ಗೆ ಮಾಡಿರುವ ಟ್ವೀಟ್ ಗಮನ ಸೆಳೆಯುತ್ತಿದೆ. ಬೆಂಗಳೂರಿನಂತ ನಗರದಲ್ಲಿ ಕೇವಲ 71 ರೂಪಾಯಿಗೆ ಅತ್ಯುತ್ತಮ ಊಟ ಸಿಕ್ಕಿತು ಅಂತ ಅವರು ಪೋಸ್ಟ್‌ ಮಾಡಿದ್ದಾರೆ.

ಬೆಂಗಳೂರಿನ ಆಹಾರ ಕ್ಷೇತ್ರವು ವಿಭಿನ್ನ ಹಾಗೂ ವಿಶೇಷವಾಗಿದೆ. ಬೆಂಗಳೂರಿನ ಜಯನಗರದಲ್ಲಿರುವ "ತಾಜಾ ತಿಂಡಿ' ಹೋಟೆಲ್‌ಗೆ ಹೋಗಿ ಇಡ್ಲಿ, ವಡೆ ಮತ್ತು ಮಸಾಲೆ ದೋಸೆ ಆರ್ಡರ್ ಮಾಡಿದೆ. ಮೂರು ವಸ್ತುಗಳಿಗೆ ಒಟ್ಟು ಬಿಲ್ ಕೇವಲ 71 ರೂಪಾಯಿ ಆಗಿತ್ತು. ಹಣದುಬ್ಬರದ ಹೊರತಾಗಿಯೂ ಈ ಸ್ಥಳೀಯ ದರ್ಶಿನಿಗಳು ಇನ್ನೂ ಇಷ್ಟು ಬೆಲೆಯಲ್ಲಿ ಉತ್ತಮ ಆಹಾರವನ್ನು ಹೇಗೆ ನೀಡುತ್ತಿದ್ದಾರೆಂದು ನೋಡಿ ನಿಜಕ್ಕೂ ಆಶ್ಚರ್ಯವಾಯಿತು ಅಂತ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Bengaluru Food Idli Vada amp amp Masala Dosa for 71 Netizens Praise the City s Affordable Eats

ಈ ಪೋಸ್ಟ್‌ಗೆ ಹಲವು ನೆಟ್ಟಿಗರು ರಿಯಾಕ್ಟ್‌ ಮಾಡಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರಿನ ಜಯನಗರ, ಜೆ.ಪಿ. ನಗರ, ಬಸವನಗುಡಿ, ಮಲ್ಲೇಶ್ವರಂನಂತಹ ಪ್ರದೇಶಗಳಲ್ಲಿ ದಶಕಗಳಿಂದ ನಡೆದುಕೊಂಡು ಬರುತ್ತಿರುವ ಹೋಟೆಲ್‌ಗಳಿವೆ. ಇಷ್ಟು ವರ್ಷಗಳ ಕಾಲ ಯಾವುದನ್ನಾದರೂ ನಡೆಸಿಕೊಂಡು ಬರಬೇಕೆಂದರೆ, ಕೇವಲ ಹಣ ಗಳಿಸುವುದಕ್ಕಿಂತಲೂ ಹೆಚ್ಚಿನ ಕಾಳಜಿ ಮತ್ತು ಬದ್ಧತೆ ಇರಬೇಕು ಎಂದು ನನಗೆ ಅನಿಸುತ್ತದೆ ಎಂದೂ ನೆಟ್ಟಿಗರು ಹೇಳಿದ್ದಾರೆ.

Bengaluru Food: ಬೆಂಗಳೂರಿನಲ್ಲಿ ಗುಡ್‌ಫುಡ್

ನೈವೇದ್ಯಂ ಹೆಸರಿನ ಒಂದು ಹೋಟೆಲ್, ಜೆಪಿ ನಗರ 2 ನೇ ಹಂತ, ಎಲ್ಐಸಿ ಕಚೇರಿ ಎದುರು ಇದೆ. ಅವರು 4 ವಡೆ - ಸಾಂಬಾರ್ ಕೇವಲ 20ಗೆ ಕೊಡುತ್ತಾರೆ. ಈಗ ಅಲ್ಲಿನ ಮೆನು ಹೇಗಿರಬಹುದು ಎಂದು ನೀವೇ ಊಹಿಸಿ. ಸ್ವಚ್ಛತೆ - ನೈರ್ಮಲ್ಯ ಕಾಪಾಡಿಕೊಳ್ಳುವುದರೊಂದಿಗೆ ಪ್ರಮುಖ ಸ್ಥಳ, ಮುಖ್ಯ ರಸ್ತೆಯಲ್ಲೇ ಹೋಟೆಲ್ ಇದೆ. ಬೆಂಗಳೂರಿನಲ್ಲಿ ಆಹಾರ ತುಂಬಾ ಅಗ್ಗವಾಗಿದೆ. ಆದರೆ ದಕ್ಷಿಣ ಭಾರತೀಯ ಆಹಾರ ಇಷ್ಟಪಡುವವರು ಮಾತ್ರವಲ್ಲ, ಉತ್ತರ ಭಾರತೀಯ ಆಹಾರವನ್ನು ದಕ್ಷಿಣ ಭಾರತೀಯ ಹೋಟೆಲ್‌ಗಳಲ್ಲೇ ತಿನ್ನಲು ಬಯಸುವವರಿಗೂ ಇದು ಒಳ್ಳೆಯ ಆಯ್ಕೆಯಾಗಬಹುದು. ಆದರೆ ಸಂಪೂರ್ಣ ಉತ್ತರ ಭಾರತೀಯ ಹೋಟೆಲ್‌ಗಳಲ್ಲಿ ಆಹಾರದ ಬೆಲೆ ತುಂಬಾ ಹೆಚ್ಚಿರುತ್ತದೆ ಎಂದೂ ಕೆಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ನಗರದಲ್ಲಿ ಕಡಿಮೆ ಬೆಲೆಗೆ ಅತ್ಯುತ್ತಮ ಆಹಾರ ಕೊಡುವ ಅನೇಕ ಸ್ಥಳಗಳಿವೆ. ಆದರೆ ಜನರು ಸೋಷಿಯಲ್ ಮೀಡಿಯಾ ಟ್ರೆಂಡ್ ಫಾಲೋ ಮಾಡುತ್ತಾರೆ. ಉತ್ತಮ ಗುಣಮಟ್ಟವನ್ನು ಬಯಸುತ್ತಾರೆ, ಅದಕ್ಕಾಗಿಯೇ ಅವರು ಮಸಾಲೆ ದೋಸೆಗೆ 150 ಪಾವತಿಸುತ್ತಾರೆ, ಕೆಲವು ಅದ್ಭುತ, ಹಳೆಯ ಕಾಲದ ಹೋಟೆಲ್‌ಗಳಲ್ಲಿ ಇಂದಿಗೂ 60-80 ರೂಪಾಯಿಗೆ ಒಳ್ಳೆಯ ಊಟ ಸಿಗುತ್ತೆ ಅಂತ ನೆಟ್ಟಿಗರು ಹೇಳಿದ್ದಾರೆ. ನನ್ನ ಅನುಭವದ ಪ್ರಕಾರ, ಬೆಂಗಳೂರಿನ ಎಲ್ಲಾ ಸ್ಥಳಗಳಲ್ಲೂ ಅಗ್ಗದ, ತಾಜಾ ಮತ್ತು ಆರೋಗ್ಯಕರ ಆಹಾರ ಸಿಗುತ್ತದೆ ಎಂದು ನಾರ್ಥಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+