Underground Market: ಇಂದು ಬೆಂಗಳೂರಿನಲ್ಲಿ ಎಸಿ ವ್ಯವಸ್ಥೆಯ 'ಪಾಲಿಕೆ ಬಜಾರ್' ಉದ್ಘಾಟನೆ
ಬೆಂಗಳೂರು, ಆಗಸ್ಟ್ 25: ರಾಷ್ಟ್ರ ರಾಜಧಾನಿ ನವದೆಹಲಿಯಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊಲದ ಏರ್‌ಕಂಡಿಷನರ್ ಅಂಡರ್‌ಗ್ರೌಂಡ್ ಮಾರುಕಟ್ಟೆ ನಿರ್ಮಿಸಲಾಗಿದೆ. ಇದನ್ನು 'ಪಾಲಿಕೆ ಬಜಾರ್' ಎಂದು ಕರೆಯಲಾಗುತ್ತದೆ. ಇಂದು ಭಾನುವಾರ ಆಗಸ್ಟ್ 25ರಂದು ಸಂಜೆ 06 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಹಾಗಾದರೆ ಈ ಪಾಲಿಕೆ ಬಜಾರ್ ಉದ್ದೇಶ, ವಿಶೇಷತೆ, ಎಲ್ಲಿದೆ? ಎಂಬೆಲ್ಲ ಮಾಹಿತಿ ಇಲ್ಲಿದೆ.
ಬೆಂಗಳೂರಿನ ವಿಜಯನಗರದ ಮೆಟ್ರೋ ನಿಲ್ದಾಣದ ಬಳಿಯೇ ಈ 'ಪಾಲಿಕೆ ಬಜಾರ್' ನಿರ್ಮಿಸಲಾಗಿದೆ. ನಿರಂತರ ಐದು ವರ್ಷಗಳ ತಿಂಗಳು ಕಾಲ ನಡೆದಿದ್ದ ಕಾಮಗಾರಿ ಇದೀಗ ಪೂರ್ಣಗೊಂಡಿದೆ.. ದೆಹಲಿಯಲ್ಲಿ ಅಂಡರ್ ಗ್ರೌಂಡ್‌ನಲ್ಲಿ ಮಾರುಕಟ್ಟೆಗಳು ಇರುವಂತೆ, ಅದೆ ಮಾದರಿಯಲ್ಲಿ ನಿರ್ಮಿಸಲಾಗಿದೆ. ವಿಜಯನಗರದಲ್ಲಿ ಇಂಥದ್ದೊಂದು ಬಜಾರ್ ನಿರ್ಮಿಸಬೇಕು ಎಂಬುದು ಸ್ಥಳೀಯ ಶಾಸಕ ಎಂ.ಕೃಷ್ಣಪ್ಪ ಅವರ ಬಹುದಿನಗಳ ಕನಸು ಇಂದು ನನಸಾಗುತ್ತಿದೆ.

ಇಂದಿನ ಉದ್ಘಾಟನೆ ಕಾರ್ಯಕ್ರಮದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಶಾಸಕ ಪ್ರಿಯಾಕೃಷ್ಣ, ಕಾಂಗ್ರೆಸ್ ಯುವ ನಾಯಕ ಪ್ರದೀಪ್ ಕೃಷ್ಣಪ್ಪ, ಸರ್ಕಾರದ ಸಚಿವರು, ಶಾಸಕರು ಹಾಗೂ ಮುಖಂಡರು ಭಾಗವಹಿಸಲಿದ್ದಾರೆ.
ಮಾರುಕಟ್ಟೆ ವಿಶೇಷತೆಗಳು ಏನು?
ವಿಜಯನಗರದ ಈ ಪಾಲಿಕೆ ಬಜಾರ್ ಹವಾ ನಿಯಂತ್ರಿತ (ಎಸಿ) ಆಗಿದೆ. ವಿಜಯನಗರ ಮೆಟ್ರೋ ನಿಲ್ದಾಣದಿಂದ ಕೂಗಳತೆಯ ದೂರದಲ್ಲಿದೆ. ಈ ಬಜಾರ್‌ನಲ್ಲಿ ಒಟ್ಟು ಸುಮಾರು 75ಕ್ಕೂ ಅಂಗಡಿಗಳಿವೆ. ಮಾರುಕಟ್ಟೆಯ ಒಳಾಂಗಣವೆಲ್ಲ ಸಂಪೂರ್ಣ ಗ್ರಾನೈಟ್ ಫ್ಲೋರಿಂಗ್ ಮಾಡಲಾಗಿದೆ.
ಸೆನ್ಸಾರ್ ಆಧಾರಿತ ಒಳ ಮತ್ತು ಹೋರು ಹೋಗುವವರಿಗೆ ಗ್ಲಾಸ್ ಸ್ಲೈಡಿಂಗ್ ಡೋರ್‌ಗಳಿವೆ. ಎರಡು ಎಸ್ಕಿಲೇಟರ್ ಹಾಗೂ ಗೂಡ್ಸ್ ಸೌಲಭ್ಯ ಇದೆ. ಬಜಾರ್ ಒಳಗೆ ಒಟ್ಟು 26 ಒಳಾಂಗಣ ಎಸಿ ಯೂನಿಟ್ಸ್‌ಗಳಿಗೆ. ಸುಸಜ್ಜಿತವಾಗಿ ನಿರ್ಮಿಸಲಾಗಿದೆ.
ಈ ಪಾಲಿಕೆ ಬಜಾರ್ ಒಟ್ಟು ಎಂದು ಪ್ರವೇಶ ಪಾಯಿಂಟ್ ಹೊಂದಿದೆ. ವಿದ್ಯುತ್ ನಿರ್ವಹಣಾ ಕೊಠಡಿ, ಕಚೇರಿ ರೂಂ ಹಾಗೂ ಒಂದು ಸ್ಟೋರ್ ರೂ. ಸಹ ಇದರೊಳಗೆ ನಿರ್ಮಿಸಲಾಗಿದೆ. ಉತ್ತಮ ಗಾಳಿ ಬೆಳಕು ಇರಲಿದ್ದು, ಅಂಗಡಿಕಾರರಿಗೆ ಮತ್ತು ಗ್ರಾಹಕರಿಗೆ ವ್ಯಾಪಾರಕ್ಕೆ ಹೇಳಿ ಮಾಡಿಸಿದ ಜಾಗ ಇದಾಗಿದೆ.
ಈ ಮಾರುಕಟ್ಟೆಯನ್ನು ಒಟ್ಟು 13ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದನ್ನು ನಗರೋತ್ಥಾನ ಯೋಜನೆಯಡಿ ಮೊದಲ ಹಂತದಲ್ಲಿ ಐದು ಕೋಟಿ ರೂ. ಖರ್ಚು ಮಾಡಿದರೆ, ಎರಡನೇ ಹಂತದಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಸರ್ವಾಂಗೀಣ ಅಭಿವೃದ್ಧಿಯ ಕ್ಷೇತ್ರಕ್ಕೆ ಮುನ್ನುಡಿಯಂತೆ #ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತ್ಯುನ್ನತ ಸೌಲಭ್ಯಗಳೊಂದಿಗೆ ಬೆಂಗಳೂರಿನ ಪ್ರಪ್ರಥಮ ಹವಾನಿಯಂತ್ರಿತ 150 ಅಂಗಡಿಗಳ ಪಾಲಿಕೆ ಬಜಾರ್ ಉದ್ಘಾಟನೆಗೆ ಸಜ್ಜುಗೊಂಡಿದೆ, ಅದರ ಪ್ರಗತಿ ಪರಿಶೀಲನೆಯನ್ನು ನಡೆಸಲಾಯಿತು. pic.twitter.com/cREPnXWiGo
— M Krishnappa (@mkrishnappa_MLA) August 19, 2024
100ಮೀಟರ್ ಉದ್ದದ ದೊಡ ಬಜಾರ್
ಒಳಾಂಗಣ ಮತ್ತಷ್ಟು ಮಾಹಿತಿ ನೋಡುವುದಾದರೆ ಒಟ್ಟಾರೆ ಮಾರುಕಟ್ಟೆಯು 100ಮೀಟರ್ ಉದ್ದ ಇದೆ. 11ಮೀಟರ್ ಅಗಲವಿದೆ. ವ್ಯಾಪಾರ ಮಳಿಗೆಗಳ ದೃಷ್ಟಿ ಇಟ್ಟುಕೊಂಡು ನಿರ್ಮಿಸಲಾಗಿದೆ. ಪಾದಾಚಾರಿ ಮಾರ್ಗದ ಎರಡು ಕಡೆಗಳಲ್ಲಿ ಪ್ರವೇಶ ದ್ವಾರ ಇದೆ. ರಸ್ತೆ ಪಕ್ಕದಲ್ಲಿಯೇ ಕಾಣಿಸುತ್ತದೆ. ಡಿಸೆಂಬರ್ 2019ರಲ್ಲಿ ಆರಂಭಗೊಂಡಿದ್ದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಇಂದು ಉದ್ಘಾಟನೆಗೊಳ್ಳುತ್ತಿದೆ.












Click it and Unblock the Notifications