Bengaluru Property: ಬೆಂಗಳೂರಿಗೆ ಸೇರ್ಪಡೆಯಾದ್ರೆ ಈ 6 ತಾಲ್ಲೂಕುಗಳಲ್ಲಿ ಭೂಮಿ ಬೆಲೆ ಗಗನಕ್ಕೆ ಏರೋದು ಗ್ಯಾರಂಟಿ

Bengaluru New Update: ದೇಶದ ಬೃಹತ್ ಐಟಿ ಸಿಟಿಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ. ಇಲ್ಲಿಗೆ ಉದ್ಯೋಗ ಅರಸಿ ಪ್ರತಿನಿತ್ಯ ಬೇರೆ ಕಡೆಗಳಿಂದ ಏನಿಲ್ಲ ಅಂದರೂ ಸಾವಿರಾರು ಮಂದಿ ಭೇಟಿ ನೀಡುತ್ತಲಿರುತ್ತಾರೆ. ಈ ಹಿನ್ನೆಲೆ ನಗರದ ವ್ಯಾಪ್ತಿ ವಿಸ್ತರಣೆಯಾಗುತ್ತಲಿದೆ. ಈಗಾಗಲೇ ಹಲವು ಸುತ್ತಮುತ್ತಲಿನ ಪ್ರದೇಶಗಳವರೆಗೂ ವ್ಯಾಪಿಸಿಬಿಟ್ಟಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಮೀಪದ ಆರು ತಾಲ್ಲೂಕುಗಳನ್ನು ಬೆಂಗಳೂರಿಗೆ ಸೇರ್ಪಡೆ ಮಾಡಲು ಯೋಜನೆ ರೂಪಿಸಲಾಗಿದೆ. ಹಾಗಾದ್ರೆ, ಇದರಿಂದ ಏನೆಲ್ಲಾ ಪ್ರಯೋಜನೆಗಳಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬೆಂಗಳೂರಿಗೆ ಭೇಟಿ ನೀಡುವವರಲ್ಲಿ ಬಹುತೇಕ ಮಂದಿ ಉದ್ಯೋಗ ಅರಸಿ ಬರುವವರ ಸಂಖ್ಯೆಯೇ ಹೆಚ್ಚಿದೆ. ಹೆಚ್ಚು ಜನರು ಬಂದಂತೆ ದೊಡ್ಡ ದೊಡ್ಡ ಕಂಪನಿಗಳು ತಲೆ ಎತ್ತುತ್ತಲಿವೆ. ಆದ್ದರಿಂದ ಪಕ್ಕದ ಜಿಲ್ಲೆಗಳ ಸಮೀಪದವರಗೂ ಹರಡಿಕೊಂಡುಬಿಟ್ಟಿದೆ. ಹೀಗೆ ಬೆಂಗಳೂರು ಮಹಾನಗರ ದಿನದಿಂದ ದಿನಕ್ಕೆ ಅಭಿವೃದ್ಧಿ ಕಾಣುತ್ತಲಿದೆ.

Bengaluru Expansion Plan Proposal to Merge Six Nearby Taluks and Its Key Benefits

ಇದನ್ನು ಗಮನದಲ್ಲಿ ಇಟ್ಟುಕೊಂಡು, ಸುತ್ತಮುತ್ತಲಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ರಾಮನಗರ ಹಾಗೂ ಮಾಗಡಿ ತಾಲ್ಲೂಕಿನ ಬಿಡದಿ ಪ್ರದೇಶಗಳನ್ನು ಬೆಂಗಳೂರಿಗೆ ಸೇರ್ಪಡೆ ಮಾಡಲು ಯೋಜನೆ ರೂಪಿಸಲಾಗಿದೆ. ಒಂದು ವೇಳೆ ಇವು ಬೆಂಗಳೂರಿನೊಂದಿಗೆ ಕೂಡಿಕೊಂಡರೆ, ಏನಾಗಬಹುದು ಎಂಬ ಚಿಂತೆಯಲ್ಲಿನ ಈ ಭಾಗಗಳ ಜನರಿದ್ದಾರೆ.

ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಪ್ರತಿಕ್ರಿಯಿಸಿದ್ದು, ಈ ಪ್ರದೇಶಗಳ ಅಭಿವೃದ್ಧಿ ದೃಷ್ಟಿಯಿಂದ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬೆಂಗಳೂರಿಗೆ ಹೊಸ ರೂಪ ನೀಡುವುದರ ಜೊತೆಗೆ ನಿಮ್ಮ ಆಸ್ತಿ ಮೌಲ್ಯಕ್ಕೆ ಗೌರವ ತರುವುದು ನನ್ನ ಕೆಲಸವಾಗಿ ಎಂದು ಹೇಳಿದ್ದರು. ಈಗಾಗಲೇ ಬೆಂಗಳೂರಿನಲ್ಲಿ ಭೂಮಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲಿದೆ. ಅದರಲ್ಲೂ ಹೆದ್ದಾರಿ ಪಕ್ಕದಲ್ಲಿರುವ ಭೂಮಿಗೆ ಬಂಗಾರದ ಬೆಲೆ ಇದೆ. ಹಾಗೆಯೇ ಈ ತಾಲ್ಲೂಕುಗಳಲ್ಲಿಯೂ ಪ್ರದೇಶಕ್ಕೆ ತಕ್ಕಂತೆ ಭೂಮಿಗೆ ಬೆಲೆ ನಿಗದಿಯಾಗಲಿದೆ. ಈ ಹಿಂದೆ ಇರುವ ಬೆಲೆಗಿಂತಲೂ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.

ಅದರಲ್ಲೂ ಇದೀಗ ಬೆಂಗಳೂರಿಗೆ ಸೇರ್ಪಡೆ ಮಾಡಲು ಹೊರಟಿರುವ ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ರಾಮನಗರ, ಮಾಗಡಿ ತಾಲೂಕಿನ ಬಿಡದಿ ಮೇರೆ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ ವೇಗಳು ಹಾದುಹೋಗಲಿವೆ. ಇದೇ ಕಾರಣಕ್ಕೆ ಈ ಭಾಗಗಳಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಜೊತೆಗೆ ಭೂಮಿ ಬೆಲೆ ಈಗಾಗಲೇ ಈ ಭಾಗಗಳಲ್ಲಿ ಭೂಮಿ ಬೆಲೆ ಗಗನಕ್ಕೇರಿದೆ. ಇನ್ನೂ ಬೆಂಗಳೂರಿಗೆ ಸೇರ್ಡೆಯಾದ್ರೆ, ಮತ್ತಷ್ಟು ಹೆಚ್ಚಳ ಆಗಲಿದ್ದು, ಇದರಿಂದ ಈ ಭಾಗಗಳ ಜನರು ಕೋಟ್ಯಾಧಿಪತಿಗಳಾಗುವುದರಲ್ಲಿ ಎರಡು ಮಾತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+