Get Updates
Get notified of breaking news, exclusive insights, and must-see stories!

Bengaluru: ಬೆಂಗಳೂರಿನ ಈ ಹೋಟೆಲ್‌ನಲ್ಲಿ ಗಂಟೆಗಟ್ಟಲೆ ಮೀಟಿಂಗ್ ಮಾಡಿದ್ರೆ ಬೀಳುತ್ತೆ 1000 ರೂ. ದಂಡ: ಮಾಲೀಕರ ಹೊಸ ರೂಲ್ಸ್ ವೈರಲ್

ಬೆಂಗಳೂರು: ಭಾರತದ 'ಸಿಲಿಕಾನ್ ಸಿಟಿ' ಮತ್ತು 'ಸ್ಟಾರ್ಟಪ್ ರಾಜಧಾನಿ' ಎಂದೇ ಕರೆಯಲ್ಪಡುವ ಬೆಂಗಳೂರಿನಲ್ಲಿ ಕೆಫೆ ಸಂಸ್ಕೃತಿ ಎಷ್ಟು ಹಾಸುಹೊಕ್ಕಾಗಿದೆ ಎಂದರೆ, ಇಲ್ಲಿನ ಅನೇಕ ಕೆಫೆಗಳು ಕೇವಲ ಕಾಫಿ ಕುಡಿಯುವ ಜಾಗಗಳಾಗಿ ಉಳಿದಿಲ್ಲ, ಬದಲಾಗಿ ಅವು ಅನೌಪಚಾರಿಕ ಮೀಟಿಂಗ್ ರೂಮ್‌ಗಳು ಮತ್ತು ಆಫೀಸ್‌ಗಳಾಗಿ ಬದಲಾಗಿವೆ. ಆದರೆ, ಈ ಪ್ರವೃತ್ತಿಗೆ ಕಡಿವಾಣ ಹಾಕಲು ಬೆಂಗಳೂರಿನ ಹೋಟೆಲ್ ಮಾಲೀಕರೊಬ್ಬರು ತೆಗೆದುಕೊಂಡಿರುವ ಕಠಿಣ ನಿರ್ಧಾರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಹೋಟೆಲ್ ಒಂದರ ಗೋಡೆಯ ಮೇಲೆ ಅಂಟಿಸಲಾದ ನೋಟಿಸ್‌ ಒಂದರ ಫೋಟೋವನ್ನು ಎಕ್ಸ್ (ಟ್ವಿಟರ್) ಬಳಕೆದಾರರಾದ ಶೋಭಿತ್ ಬಕ್ಲಿವಾಲ್ ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಸ್ಪಷ್ಟವಾಗಿ, "ಇಲ್ಲಿ ಯಾವುದೇ ಮೀಟಿಂಗ್‌ಗಳಿಗೆ ಅವಕಾಶವಿಲ್ಲ. ಒಂದು ವೇಳೆ ಮೀಟಿಂಗ್ 1 ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಂಡರೆ, ನಂತರದ ಪ್ರತಿ ಗಂಟೆಗೆ 1000 ರೂಪಾಯಿ ಶುಲ್ಕ ವಿಧಿಸಲಾಗುವುದು" ಎಂದು ಬರೆಯಲಾಗಿದೆ.

Bengaluru Eatery Bans Long Meetings Charges 1000 Fine Per Hour Viral Post Sparks Debate

ಈ ಪೋಸ್ಟ್ ಕ್ಷಣಾರ್ಧದಲ್ಲೇ ವೈರಲ್ ಆಗಿದ್ದು, ಕಡಿಮೆ ಅವಧಿಯಲ್ಲಿ 30,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಈ ಘಟನೆ ಬೆಂಗಳೂರಿನ ಕೆಫೆ ಸಂಸ್ಕೃತಿ ಮತ್ತು ಹೋಟೆಲ್ ಮಾಲೀಕರ ಅಸಹಾಯಕತೆಯನ್ನು ಜಗಜ್ಜಾಹೀರು ಮಾಡಿದೆ.

ಕೆಫೆ ಮಾಲೀಕರು ಹೀಗೇಕೆ ಮಾಡುತ್ತಿದ್ದಾರೆ?

ಬೆಂಗಳೂರಿನಲ್ಲಿ ವರ್ಕ್ ಫ್ರಂ ಹೋಮ್ (Work from Home) ಮತ್ತು ರಿಮೋಟ್ ವರ್ಕ್ ಸಂಸ್ಕೃತಿ ಹೆಚ್ಚಾದ ನಂತರ, ಅನೇಕ ಉದ್ಯೋಗಿಗಳು ಮತ್ತು ಸ್ಟಾರ್ಟಪ್ ಸಂಸ್ಥಾಪಕರು ಕೆಫೆಗಳನ್ನೇ ತಮ್ಮ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಕೇವಲ ಒಂದು ಕಾಫಿ ಆರ್ಡರ್ ಮಾಡಿ, ಲ್ಯಾಪ್‌ಟಾಪ್ ತೆರೆದಿಟ್ಟುಕೊಂಡು, ಉಚಿತ ವೈ-ಫೈ ಮತ್ತು ಎಸಿ ಸೌಲಭ್ಯವನ್ನು ಬಳಸುತ್ತಾ ಗಂಟೆಗಟ್ಟಲೆ ಟೇಬಲ್ ಆಕ್ರಮಿಸಿಕೊಳ್ಳುತ್ತಾರೆ.

ಇದರಿಂದಾಗಿ ಹೋಟೆಲ್ ಮಾಲೀಕರಿಗೆ ದೊಡ್ಡ ನಷ್ಟ ಉಂಟಾಗುತ್ತಿದೆ. "ಪೀಕ್ ಅವರ್‌ಗಳಲ್ಲಿ ಬರುವ ಗ್ರಾಹಕರಿಗೆ ಕೂರಲು ಜಾಗವಿಲ್ಲದೆ ಅವರು ವಾಪಸ್ ಹೋಗುತ್ತಾರೆ. ಒಂದು ಟೇಬಲ್‌ನಲ್ಲಿ ಒಬ್ಬ ವ್ಯಕ್ತಿ ಗಂಟೆಗಟ್ಟಲೆ ಕುಳಿತರೆ, ನಮಗೆ ವ್ಯಾಪಾರವಾಗುವುದಾದರೂ ಹೇಗೆ?" ಎಂಬುದು ಹೋಟೆಲ್ ಮಾಲೀಕರ ಅಳಲು. ಈ ಹತಾಶೆಯೇ ಇಂತಹ ಕಠಿಣ ನೋಟಿಸ್ ಹಾಕಲು ಕಾರಣವಾಗಿದೆ.

ನೆಟ್ಟಿಗರ ಪ್ರತಿಕ್ರಿಯೆ ಏನು?

ಈ ಪೋಸ್ಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡರೆ, ಇನ್ನು ಕೆಲವರು ಹೋಟೆಲ್ ಮಾಲೀಕರ ಪರ ಬ್ಯಾಟ್ ಬೀಸಿದ್ದಾರೆ. ಒಬ್ಬ ಬಳಕೆದಾರರು ಕಮೆಂಟ್ ಮಾಡುತ್ತಾ, "ನಾನು ಅನೇಕ ಕೆಫೆಗಳಲ್ಲಿ ಇದನ್ನು ನೋಡಿದ್ದೇನೆ. ಜನರು ತಿನ್ನಲು ಅಥವಾ ಕುಡಿಯಲು ಏನನ್ನೂ ತೆಗೆದುಕೊಳ್ಳದೆ ಗಂಟೆಗಟ್ಟಲೆ ಹರಟೆ ಹೊಡೆಯುತ್ತಾರೆ. ಕೆಫೆ ಮಾಲೀಕರ ಪರಿಸ್ಥಿತಿ ನೋಡಿದರೆ ಪಾಪ ಅನ್ನಿಸುತ್ತೆ," ಎಂದು ಬರೆದಿದ್ದಾರೆ.

ಮತ್ತೊಬ್ಬರು ತಮಾಷೆಯಾಗಿ, "ನೀವು ಪಬ್ ಅಥವಾ ಬಾರ್‌ಗಳಲ್ಲಿ ಇಂತಹ ಬೋರ್ಡ್ ನೋಡುವುದಿಲ್ಲ. ಅಲ್ಲಿ ಜನ ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಆರ್ಡರ್ ಮಾಡುತ್ತಲೇ ಇರುತ್ತಾರೆ. ಇದರಲ್ಲಿ ಕಲಿಯಬೇಕಾದ ಪಾಠವಿದೆ," ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಇನ್ನು ಕೆಲವರು, "ಬೆಂಗಳೂರಿನ ಹೋಟೆಲ್ ಮಾಲೀಕರು ಇಂತಹ ವಿಚಿತ್ರ ರೂಲ್ಸ್ ಮಾಡುವುದರಲ್ಲಿ ಎತ್ತಿದ ಕೈ," ಎಂದು ಲೇವಡಿ ಮಾಡಿದ್ದಾರೆ.

ಬೆಂಗಳೂರಿನಂತಹ ದುಬಾರಿ ನಗರದಲ್ಲಿ ಹೋಟೆಲ್ ಬಾಡಿಗೆ, ವಿದ್ಯುತ್ ಬಿಲ್ ಮತ್ತು ಸಿಬ್ಬಂದಿ ಸಂಬಳ ನಿಭಾಯಿಸುವುದು ಮಾಲೀಕರಿಗೆ ದೊಡ್ಡ ಸವಾಲು. 'ಕೋ-ವರ್ಕಿಂಗ್ ಸ್ಪೇಸ್'ಗಳು ದುಬಾರಿಯಾಗಿರುವುದರಿಂದ ಫ್ರೀಲಾನ್ಸರ್‌ಗಳು ಕೆಫೆಗಳನ್ನು ಅವಲಂಬಿಸಿದ್ದಾರೆ. ಆದರೆ, ಕೆಫೆಗಳು ಸಾರ್ವಜನಿಕ ಸ್ಥಳಗಳಾಗಿದ್ದು, ಅಲ್ಲಿ ತಿನ್ನಲು ಬರುವವರಿಗಿಂತ ಕೆಲಸ ಮಾಡಲು ಬರುವವರ ಸಂಖ್ಯೆ ಹೆಚ್ಚಾದರೆ, ಅದು ವ್ಯವಹಾರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿದೆ.

ಒಟ್ಟಿನಲ್ಲಿ, "ಒಂದು ಕಾಫಿ ಕುಡಿದು ದಿನವಿಡೀ ಕಳೆಯುವ" ಸಂಸ್ಕೃತಿಗೆ ಬೆಂಗಳೂರಿನ ಹೋಟೆಲ್‌ಗಳು ಈಗ ಫುಲ್ ಸ್ಟಾಪ್ ಇಡಲು ಮುಂದಾಗಿವೆ ಎಂಬುದಕ್ಕೆ ಈ ವೈರಲ್ ಫೋಟೋ ಸಾಕ್ಷಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+