Bengaluru Rain: ಸಾಧಾರಣ ಮಳೆಗೆ ನಲುಗಿದ ಬೆಂಗಳೂರು: ಹಲವು ಸಮಸ್ಯೆಗಳ ಅನಾವರಣ!

ಬೆಂಗಳೂರು ನಗರದಲ್ಲಿ ಮಂಗಳವಾರ ಸುರಿದ 25.2 ಮಿಮೀ ಮಳೆ ಬೆಂಗಳೂರಿಗರಿಗೆ ಸಮಸ್ಯೆಗಳ ಸುರಿಮಳೆ ತಂದಿದೆ. ಮನೆಗಳು, ರಸ್ತೆಗಳು ಜಲಾವೃತಗೊಂಡಿದ್ದು, ಮರಗಳು ನೆಲಕ್ಕುರುಳಿವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಸಿವಿಲ್ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಪ್ರದೇಶಗಳಲ್ಲಿ ಮಳೆಯಿಂದ ಹೆಚ್ಚಿನ ಸಮಸ್ಯೆ ಉಂಟಾಗಿದೆ.

Bengaluru Drowns Under 25.2mm Downpour, Wreaking Havoc on Homes and Roads

ಬನ್ನೇರುಘಟ್ಟ ರಸ್ತೆಯಲ್ಲಿ ಬುಧವಾರ ಬೆಳಗಿನ ಜಾವವೂ ಜಲಾವೃತವಾಗಿದ್ದು, ಸಂಚಾರ ದಟ್ಟಣೆ ಉಂಟಾಗಿತ್ತು. ವಾಹನ ಸವಾರರು ಜಲಾವೃತಗೊಂಡ ರಸ್ತೆಗಳಲ್ಲಿ ಪ್ರಯಾಣಿಸಲು ಪರದಾಡಿದರು.

ಬಿಬಿಎಂಪಿಯ ಪ್ರಮುಖ ರಸ್ತೆಗಳ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಮೇಶ್ ಮಾತನಾಡಿ, 'ಕಾಳೇನ ಅಗ್ರಹಾರ ಕೆರೆಗೆ ಸಂಪರ್ಕ ಕಲ್ಪಿಸುವ ಚರಂಡಿಯ ಸಮೀಪ ನಡೆಯುತ್ತಿರುವ ಕಾವೇರಿ ಪೈಪ್‌ಲೈನ್ ಕಾಮಗಾರಿಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕಾಮಗಾರಿ ನಡೆಯುತ್ತಿರುವುದರಿಂದ ನೀರು ಹರಿಯಲು ಅಡ್ಡಿಯಾಗಿದ್ದು, ಕೆರೆಯ ನೀರು ಕೂಡ ತುಂಬಿ ರಸ್ತೆಗಳಿಗೆ ನುಗ್ಗಿದೆ. ಚರಂಡಿಯನ್ನು ತೆರವು ಮಾಡಿ ನೀರು ಹರಿಸಬೇಕು' ಎಂದು ಹೇಳಿರುವುದಾಗಿ ಟಿಎನ್ಐಇ ವರದಿ ಮಾಡಿದೆ.

ಸಾಮಾಜಿಕ ಕಾರ್ಯಕರ್ತ ಹಾಗೂ ಇಲಿಯಾಜ್ ನಗರ ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಗುಲಾಬ್ ಪಾಷಾ ಮಾತನಾಡಿ, ಪ್ರತಿ ಬಾರಿ ಮಳೆ ಸುರಿದ ನಂತರ ಯಲಚೇನಹಳ್ಳಿ ಭಾಗದಲ್ಲಿ ಹರಿದು ಬರುವ ನೀರು ಈ ಭಾಗದ ಮನೆಗಳಿಗೆ ನುಗ್ಗುತ್ತದೆ. ಕನಕನಗರ ಮುಖ್ಯರಸ್ತೆಯ ಸುತ್ತಮುತ್ತಲಿನ ಪ್ರದೇಶಗಳು, ಜೆಪಿ ನಗರ ಮತ್ತು ಸಾರಕ್ಕಿ ಮತ್ತು ಶಾಖಾಂಬರಿ ನಗರದಿಂದ ನೀರು ಹರಿದು ರಾಮಕೃಷ್ಣ ನಗರ ಮತ್ತು ಇಲಿಯಾಜ್ ನಗರಗಳು ಜಲಾವೃತವಾಗಿದೆ. ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಸಮೀಪದ ಸುಮಾರು 20 ಮನೆಗಳಿಗೂ ನೀರು ನುಗ್ಗಿದೆ" ಎಂದು ಸಮಸ್ಯೆಯನ್ನು ವಿವರಿಸಿದ್ದಾರೆ.

ಉರುಳಿದ ಮರಗಳು

ಯಲಚೇನಹಳ್ಳಿಯಲ್ಲಿ ಹೊಸ ಚರಂಡಿ ಮೂಲಕ ನೀರು ಹರಿಸುವುದೇ ಪರಿಹಾರವಾಗಿದೆ. 500 ಮೀಟರ್ ತಿರುವು ಚಾನಲ್ ಅನ್ನು ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿ ವೇಗಗೊಳಿಸಲು ಬಿಬಿಎಂಪಿಗೆ ಮನವಿ ಮಾಡಲಾಗಿದೆ. ವರ್ತೂರು, ಬಳಗೆರೆಯಲ್ಲಿ ರಸ್ತೆಗಳ ಮೇಲೂ ಪರಿಣಾಮ ಬೀರಿದೆ. ಮಂಗಳವಾರ ರಾತ್ರಿ ಮೆಜೆಸ್ಟಿಕ್ ಬಸ್ ನಿಲ್ದಾಣ ಜಲಾವೃತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಯಿತು. ನಾಲ್ಕು ಮರಗಳು ಬಿದ್ದಿದ್ದು, ಬೀದಿದೀಪ ಕಂಬ ಹಾಗೂ ಬೈಕ್‌ಗೆ ಹಾನಿಯಾಗಿದೆ ಎಂದು ವರದಿಯಾಗಿದೆ.

ಬುಧವಾರ, ತನ್ನ ಮಗುವನ್ನು ಶಾಲೆಗೆ ಬಿಡಲು ಹೋಗುತ್ತಿದ್ದ ಮಹಿಳೆಯೊಬ್ಬರು ಕೊಡತಿಯ ಶಾಲೋಮ್ ಚರ್ಚ್ ಎದುರಿನ ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಕಳಪೆ ನಿರ್ವಹಣೆಯ ರಸ್ತೆಗಳ ಬಗ್ಗೆ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

'ಮಹಿಳೆಯೊಬ್ಬರು ಕೆಸರುಮಯವಾದ ರಸ್ತೆಯಲ್ಲಿ ಕಾರು ಓಡಿಸಲು ಪ್ರಯತ್ನಿಸುತ್ತಿರುವುದನ್ನು ನೋಡಿದೆ ಮತ್ತು ಅವರ ಕಾರಿನ ಚಕ್ರಗಳು ಸಿಲುಕಿಕೊಂಡವು. ಕಾರನ್ನು ಹೊರತೆಗೆಯಲು ಜೆಸಿಬಿ ತರಬೇಕಾಯಿತು. 110 ಗ್ರಾಮಗಳಲ್ಲಿ ನೀರಿನ ಪೈಪ್‌ಲೈನ್‌ ಹಾಕುವ ಕಾಮಗಾರಿ ನಡೆಯುತ್ತಿದ್ದು, ಈ ಪ್ರದೇಶವು ಪಟ್ಟಿಯಲ್ಲಿದೆ. ಆಗಸ್ಟ್ ವೇಳೆಗೆ ಕಾಮಗಾರಿ ಪೂರ್ಣಗೊಂಡಿದ್ದರೆ ಮಳೆ ಬಂದಾಗ ಈ ಘಟನೆ ನಡೆಯುತ್ತಿರಲಿಲ್ಲ' ಎಂದು ಕೊಡತಿ ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಮಿತ್ಲೇಶ್ ಕುಮಾರ್ ಹೇಳಿದರು.

ಕಾವೇರಿ ಪೈಪ್‌ಲೈನ್‌ಗೆ ಸಂಬಂಧಿಸಿದ ಕಾಮಗಾರಿ ಪ್ರಗತಿಯಲ್ಲಿದೆ ಮತ್ತು ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿ ತಿಳಿಸಿದ್ದಾರೆ. 300 ಮೀಟರ್‌ ರಸ್ತೆ ಕಾಮಗಾರಿಯಲ್ಲಿ 220 ಮೀಟರ್‌ ಕಾಮಗಾರಿ ಪೂರ್ಣಗೊಂಡಿದೆ ಎಂದು ಮಾಹಿತಿ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+