18 ವರ್ಷಗಳ ನಂತರ ಯೆಮೆನ್ ವ್ಯಕ್ತಿಯ ತಲೆಯಿಂದ ಗುಂಡು ತೆಗೆದ ಬೆಂಗಳೂರಿನ ವೈದ್ಯರು
ಬೆಂಗಳೂರು ಡಿಸೆಂಬರ್ 12: ಬೆಂಗಳೂರಿನಲ್ಲಿ ವೈಜ್ಞಾನಿಕ ಪವಾಡವೊಂದು ನಡೆದಿದೆ. ಬೆಂಗಳೂರಿನ ವೈದ್ಯರು 18 ವರ್ಷಗಳ ನಂತರ ಯೆಮೆನ್ ವ್ಯಕ್ತಿಯ ತಲೆಯಿಂದ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಗುಂಡು ಹೊರ ತೆಗೆದಿದ್ದಾರೆ.
10ನೇ ವಯಸ್ಸಿನಲ್ಲಿ ತಲೆಗೆ ಗುಂಡು ಹಾರಿಸಲಾಗಿತ್ತು. ತಕ್ಷಣ ಇವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ವೈದ್ಯರು ಗಾಯವನ್ನು ಮಾತ್ರ ಸ್ವಚ್ಛಗೊಳಿಸಿ ಬುಲೆಟ್ ಅನ್ನು ಹೊರತೆದಿರಲಿಲ್ಲ. ಸದ್ಯ ಅದನ್ನು ಯಶಸ್ವುಯಾಗಿ ಹೊರತೆಗೆಯಲಾಗಿದೆ.

ಹೌದು... 29 ವರ್ಷದ ಯೆಮೆನ್ ಪ್ರಜೆಯ ತಲೆಯಲ್ಲಿ ಸುಮಾರು 18 ವರ್ಷಗಳಿಂದ ಅಂಟಿಕೊಂಡಿದ್ದ ಬುಲೆಟ್ ಅನ್ನು ಬೆಂಗಳೂರಿನ ವೈದ್ಯರು ತೆಗೆದುಹಾಕಿದ್ದಾರೆ. 10 ನೇ ವಯಸ್ಸಿನಲ್ಲಿ ಯೆಮೆನ್‌ನಲ್ಲಿ ಎರಡು ಗುಂಪುಗಳ ಘರ್ಷಣೆ ನಡೆದಿತ್ತು. ಈ ವೇಳೆ ವ್ಯಕ್ತಿ ತನ್ನ ಅಂಗಡಿಯಿಂದ ಹೊರಬಂದಾಗ ಗಾಯಗೊಂಡಿದ್ದರು. ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಗಾಯವನ್ನು ಮಾತ್ರ ಸ್ವಚ್ಛಗೊಳಿಸಿದರು ಮತ್ತು ಬುಲೆಟ್ ಅನ್ನು ಹೊರತೆಗೆಯಲಿಲ್ಲ.
ಈ ವ್ಯಕ್ತಿ ಎರಡು ಮಕ್ಕಳ ತಂದೆ ಮತ್ತು 10 ಒಡಹುಟ್ಟಿದವರಲ್ಲಿ ಒಬ್ಬರಾಗಿದ್ದಾರೆ. ಯೆಮೆನ್‌ನ ವ್ಯಕ್ತಿ ಬುಲೆಟ್‌ನಿಂದ ಕಿವುಡನಾಗಿದ್ದರು. ಪದೇ ಪದೇ ತಲೆನೋವು ಮತ್ತು ಕಿವಿ ಸ್ರವಿಸುವಿಕೆಯಿಂದ ಬಳಲುತ್ತಿದ್ದರು. ಸುಮಾರು 3 ಸೆಂಟಿಮೀಟರ್ ಉದ್ದದ ಗುಂಡು ಅವರ ಎಡ ಕಿವಿಯ ಮೂಲಕ ಒಳಗೆ ಹೋಗಿತ್ತು. ಮೂಳೆಯಲ್ಲಿ ಸಿಲುಕಿತ್ತು, ಕೀವು ಶೇಖರಣೆಯಿಂದಾಗಿ ಕಿವಿಯ ಸೋಂಕು ಉಂಟಾಗಿತ್ತು. ಕೊನೆಗೂ ಕಳೆದ ವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅದನ್ನು ತೆಗೆಯಲಾಗಿದೆ.
ವ್ಯಕ್ತಿಗೆ ಬೆಂಗಳೂರಿನ ಆಸ್ಟರ್ ಆಸ್ಪತ್ರೆಯಲ್ಲಿ (Aster Hospital) ಚಿಕಿತ್ಸೆ ನೀಡಲಾಯಿತು. ಅಲ್ಲಿನ ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಆ ಗುಂಡನ್ನು ಹೊರತೆಗೆದಿದ್ದಾರೆ. ವ್ಯಕ್ತಿಗೆ ಹೆಚ್ಚಿನ ರಕ್ತಸ್ರಾವದ ಅಪಾಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರು ಬುಲೆಟ್‌ನ ನಿಖರವಾದ ಸ್ಥಾನವನ್ನು ಕಂಡುಹಿಡಿಯಲು ಎಕ್ಸ್ ರೇ ಮಾಡಿ ಸುತ್ತಮುತ್ತಲಿನ ಅಂಗಾಂಶಗಳಿಂದ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಸದ್ಯ ವ್ಯಕ್ತಿಯ ಶಸ್ತ್ರಚಿಕಿತ್ಸೆಯಿಂದಾಗಿ ವ್ಯಕ್ತಿಯ ಶ್ರವಣಶಕ್ತಿ ಭಾಗಶಃ ಪುನಃಸ್ಥಾಪಿಸಲಾಗಿದೆ.












Click it and Unblock the Notifications