Bengaluru Metro: "ನಮ್ಮ ಮೆಟ್ರೋ ಇರಲಿ - ಬಸವ ಮೆಟ್ರೋ ಬೇಡ, "ನಮ್ಮ" ಪದದಲ್ಲೇ ಬಸವ ತತ್ವ ಇದೆ!"
Bengaluru Metro: ನಮ್ಮ ಮೆಟ್ರೋಗೆ "ಬಸವ ಮೆಟ್ರೋ" ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇನೆ. ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ "ಬಸವ ಮೆಟ್ರೋ" ಎಂದು ಘೋಷಿಸಿ ಬಿಡುತ್ತಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವುದು ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಹಲವರು ಈ ಪ್ರಸ್ತಾವನೆಯನ್ನು ಸ್ವಾಗತಿಸಿದ್ದರೆ, ಇನ್ನೂ ಹಲವರು "ನಮ್ಮ" ಎನ್ನುವುದೇ ಬಸವ ತತ್ವವಾಗಿದೆ. ಹೀಗಾಗಿ ನಮ್ಮ ಮೆಟ್ರೋ ಹೆಸರು ಮುಂದುವರಿಯಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕವಿ ಮತ್ತು ಸಾಹಿತಿ ರಾಜೇಂದ್ರ ಪ್ರಸಾದ್ ಅವರು, "ನಮ್ಮ ಮೆಟ್ರೋ" ಎಂಬುದು ಈಗಾಗಲೇ ಇದೆ. ಅದನ್ನು ಬದಲಿಸುವ ಅಗತ್ಯವಿಲ್ಲ. ಹಾಗೆಯೇ ಮೆಟ್ರೋ ನಿಲ್ದಾಣಗಳಿಗೆ ಯಾವುದೇ ವ್ಯಕ್ತಿಯ ಹೆಸರು ಕೂಡ ಅಗತ್ಯವಿಲ್ಲ. ಹಾಗೇ ನಿಲ್ದಾಣಗಳಿಗೆ ವ್ಯಕ್ತಿಗಳ ಹೆಸರು ಇಡುವುದು ಜನಸಾಮಾನ್ಯರಿಗೆ ಪ್ರದೇಶಗಳನ್ನು ಗುರುತಿಸುವುದು ಕಷ್ಟವಾಗುತ್ತದೆ, ಗೊಂದಲವಾಗುತ್ತದೆ.

ಉದಾ: ಸೆಂಟ್ರಲ್ ಕಾಲೇಜು ಮೆಟ್ರೋ ನಿಲ್ದಾಣವನ್ನು ಸರ್ ಎಂ ವಿ ಎಂದು ಕರೆಯಲಾಗುತ್ತಿದೆ. ವ್ಯಕ್ತಿಯ ಹೆಸರಿನಿಂದ ಪ್ರದೇಶಗಳನ್ನು ಗುರುತಿಸುವುದು ಸರಿಯಲ್ಲ. ಇದನ್ನ ಸರ್ಕಾರವು ಮನಗಾಣಬೇಕು. ಬಿಜೆಪಿಯಂತೆ ಕಾಂಗ್ರೆಸ್ಸೂ ಹೆಸರು ಬದಲಾವಣೆ, ಪ್ರತಿಮೆಗಳ ಸ್ಥಾಪನೆಗೆ ಮುಂದಾಗುತ್ತಿರುವುದು ನಾಚಿಕೆಗೇಡಿನ ವಿಚಾರ. ಸಾಧ್ಯವಾದ್ರೆ ಮೊದಲು ಬೆಂಗಳೂರಿನ ರಸ್ತೆಗಳ ಗುಂಡಿಗಳನ್ನು ಮುಚ್ಚಿ. ✋
Note: 'ನಮ್ಮ' ಎನ್ನುವ ಪದವೇ ಬಸವ ಪ್ರಜ್ಞೆಯ ಸಂಕೇತವಾಗಿದೆ. ಅದು ವಿಶ್ವಮಾನವ ಪ್ರಜ್ಞೆಯೂ ಹೌದು. 'ನಮ್ಮ' ಮತ್ತು 'ನಾವು' ಎಂಬ ಸಮುದಾಯ ಪ್ರಜ್ಞೆ ಉಳಿಯಲಿ, ಉಳಿದ ವ್ಯಕ್ತಿ ಪ್ರಜ್ಞೆ ಅಳಿಯಲಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಹಲವರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ಪ್ರಾರಂಭಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವರು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಸಂತೋಷ್ ಕುಮಾರ್ ಎಲ್‌ಎಂ ಎನ್ನುವವರು, ಕಳೆದ ವಾರವಷ್ಟೇ ರಸ್ತೆಯ ಗುಂಡಿಯೊಂದನ್ನು ತಪ್ಪಿಸಲು ಹೋಗಿ, ದ್ವಿಚಕ್ರ ವಾಹನದಿಂದ ಸಮತೋಲನ ಕಳೆದುಕೊಂಡು ರಸ್ತೆಗೆ ಬಿದ್ದ ಹಿರಿಯ ಮಹಿಳೆಯೊಬ್ಬರು ಹಿಂದಿನಿಂದ ಬಂದ ವಾಹನದಡಿಗೆ ಸಿಲುಕಿ ಮೃತಪಟ್ಟ ಘಟನೆ ಇನ್ನೂ ಮಾಸಿಲ್ಲ.
ಸರಿಪಡಿಸದ ರಸ್ತೆ ಗುಂಡಿಗಳಿಂದಾಗಿ ಜನರು ಪ್ರಾಣ ಕಳೆದುಕೊಳ್ಳುತ್ತಿರುವಾಗ, ತ್ವರಿತ ವೇಗದಲ್ಲಿ ಆ ಸಮಸ್ಯೆಯನ್ನು ಬಗೆಹರಿಸುವತ್ತ ಗಮನ ನೀಡುವ ಬದಲಾಗಿ "ನಮ್ಮ ಮೆಟ್ರೋ" ಹೆಸರನ್ನು ಬದಲಿಸುವ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆ ನಿಜಕ್ಕೂ ಬೇಸರ ತರಿಸುವಂಥದ್ದು. ಹೆಸರು ಬದಲಿಸಬೇಕೆಂದು ಅಂದುಕೊಂಡಾಗಲೆಲ್ಲ ಅದು ರಾಜಕೀಯ ಲೇಪನ ಪಡೆದುಕೊಂಡು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ಶುರುವಾಗುತ್ತವೆ. ಈ ಮಧ್ಯೆ ನಿಜಕ್ಕೂ ಆಗಲೇ ಬೇಕಿರುವ ಅನೇಕ ವಿಷಯಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲ. ವಿರೋಧ ಪಕ್ಷಗಳು ಕೂಡ ಅವುಗಳ ಬಗ್ಗೆ ದನಿಯೇರಿಸಿ ಪ್ರಶ್ನೆ ಮಾಡುವುದೂ ಇಲ್ಲ. ಇದನ್ನೇ ಯಾವ ಸರ್ಕಾರ ಬಂದರೂ advantage (ಪ್ರಯೋಜನ) ಆಗಿ ತೆಗೆದುಕೊಂಡು ಮರುನಾಮಕರಣ ಮಾಡುವ ಮಾತುಗಳನ್ನಾಡುತ್ತವೆ.
ಇಂಥವುಗಳನ್ನೆಲ್ಲ ನಾವು ಗಮನಿಸಿ ಟೀಕಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.
ರವಿ ಆಲದ ಮರ ಎನ್ನುವವರು, ಇಂದಿರಾ ಕ್ಯಾಂಟೀನ್ ಬದಲು ಬಸವ ಕ್ಯಾಂಟೀನ್ ಅಂತ ಹೆಸರಿಡುವ ಆಯ್ಕೆ ರಾಜ್ಯ ಸರ್ಕಾರದ ಬಳಿಯೇ ಇತ್ತು. ರಾಜೀವ್ ಗಾಂಧಿ, ಇಂದಿರಾ ಗಾಂಧಿ, ಸಂಜೀವ್ ಗಾಂಧಿ ಈ ರೀತಿ ಕರ್ನಾಟಕಕ್ಕೆ ಇವರ ಕೊಡುಗೆ ಏನೂ ಇಲ್ಲ ಅಂತಲ್ಲ. ಅವರ ಕೊಡುಗೆಗೂ ಮೀರಿ,ಕಾಂಗ್ರೆಸ್ ಹೈಕಮಾಂಡ್ ಅನ್ನು ಮೆಚ್ಚಿಸಲು ಸಿಕ್ಕ ಸಿಕ್ಕ ಕಡೆಯೆಲ್ಲಾ ಹೆಸರಿಡುವಾಗ ಅಪ್ಪಿ ತಪ್ಪಿಯೂ ಒಂದೆರಡು ಕಡೆ ಶರಣರ ಹೆಸರು ಬಾರದಂತೆ ನೋಡಿಕೊಂಡರು. ಕಾಂಗ್ರೆಸ್ ಹೈಕಮಾಂಡ್ ಅನ್ನು ಮೆಚ್ಚಿಸುವ ಕೆಲಸ ಇವತ್ತಿಗೂ ನಿಂತಿಲ್ಲ...ಮೊನ್ನೆ ಯಾವುದೋ ಕಾರಿಡಾರ್‌ಗೆ ರಾಜೀವ್ ಗಾಂಧಿ ಅಂತ ಇರಿಸಿದ್ದಾರೆ. ಸಂಜಯ್ ಗಾಂಧಿ ಪುತ್ಥಳಿ ಮಾಡಿದ್ದರ ನೆನಪು ಇನ್ನೂ ಮಾಸಿಲ್ಲ.
ಇದೆಲ್ಲ ಯಾಕೆ, ಮೊನ್ನೆ ಬೆಂಗಳೂರು ವಿ.ವಿ ಹೋಗಿ ಮನಮೋಹನ್ ಸಿಂಗ್ ವಿವಿ ಆಗಿದ್ದು ಹೇಗೆ ಮರೆಯುತ್ತೇವೆ. ಇದೀಗ ಇದ್ದಕ್ಕಿದ್ದಂತೆ, ರಾಜ್ಯ ಕಾಂಗ್ರೆಸ್‌ಗೆ ಶರಣರು ನೆನಪಾಗಿದ್ದಾರೆ. ಹಾಗಾಗಿ ಈಗ ಈಗಾಗಲೇ ನಮ್ಮ ಮೆಟ್ರೋ ಅಂತ ಇರುವ ಹೆಸರು ಬಸವ ಮೆಟ್ರೋ ಅಂತಾಗಬೇಕು ಅನ್ನೋ ನಾಟಕ ಮೊದಲು ಮಾಡಿದೆ. ನಮ್ಮ ಮೆಟ್ರೋ ಪದಕ್ಕಿಂತ ಬೇರೆ ಪದ ಇಲ್ಲಿ ಕಾಣಸಿಗದು, ಇದು ಸರಿಯಾಗಿದೆ. ಈಗ ಇದನ್ನು ಒಕ್ಕೂಟ ಸರ್ಕಾರದ ಮೇಲೆ ಹಾಕಿದೆ, ಅವರು ಒಂದು ವೇಳೆ ಈ ಹೆಸರು ಇಟ್ಟರೆ, ಅದನ್ನು ಇಡಲು ಒತ್ತಾಯ ಮಾಡಿದ್ದೇ ನಾವು, ನಾವು ಬಸವಪರ ಅಂತ ಕೊಚ್ಚಿಕೊಳ್ಳೋದು. ಒಂದು ವೇಳೆ ಅವರು ಹೆಸರು ನಾಮಕರಣಕ್ಕೆ ಅನುಮೋದನೆ ಕೊಡದೆ ಇದ್ದರೆ, ಬಿಜೆಪಿ ಬಸವ ವಿರೋಧಿ ಎಂದು ಅವರ ಮೇಲೆಯೇ ಪ್ರಚಾರ ಮಾಡೋದು, ಇದು ಕಾಂಗ್ರೆಸ್ ಮಾಡುತ್ತಿರುವ ದೊಡ್ಡ ತಂತ್ರಗಾರಿಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.
-
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು -
IPL ಪ್ರೇಕ್ಷಕರಿಗೆ ಗುಡ್ ನ್ಯೂಸ್: ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2026 ಪಂದ್ಯದ ಪ್ರಯುಕ್ತ ನಮ್ಮ ಮೆಟ್ರೋ ಸೇವೆ ವಿಸ್ತರಣೆ -
Dr BR Ambedkar: ಚುನಾವಣೆಯಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಸೋಲಿಸಿದ್ದು ಕಾಂಗ್ರೆಸ್ ಪಕ್ಷವಲ್ಲ: ಸಿದ್ದರಾಮಯ್ಯ -
Electric Vehicle Tax: ಎಲೆಕ್ಟ್ರಿಕ್ ಕಾರುಗಳ ಮೇಲೆ ಟ್ಯಾಕ್ಸ್ ಬೇಡ ಎಂದ ಸಂಸದ ತೇಜಸ್ವಿ ಸೂರ್ಯ, ಸಿಎಂಗೆ ಪತ್ರ -
Siddaramaiah: ಜನರ ದಾರಿತಪ್ಪಿಸುವ ಬಿಜೆಪಿಯನ್ನು ನಂಬಬೇಡಿ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರಣವೇನು -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ












Click it and Unblock the Notifications