Bengaluru Dating Scam: ಬೆಂಗಳೂರಲ್ಲಿ ಪಾರ್ಸೆಲ್ ಹೆಸರಿನಲ್ಲಿ ನಡೆತಿದೆ ವಂಚನೆ ಯುವಕ ರಿವೀಲ್ ಮಾಡಿದ ಶಾಕಿಂಗ್ ನ್ಯೂಸ್!
Bengaluru Dating Scam: ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಡೇಟಿಂಗ್ ಆ್ಯಪ್ ಮೂಲಕ ಹೇಗೆ ವಂಚನೆಗೆ ಒಳಗಾದರು, ಈ ಜಾಲಕ್ಕೆ ಯುವಕರು ಹೇಗೆ ಬಲಿಯಾಗುತ್ತಿದ್ದಾರೆ ಎನ್ನುವುದನ್ನು ವಿವರಿಸಿದ್ದಾರೆ. ಯುವತಿಯೊಬ್ಬಳು ವ್ಯಕ್ತಿಯೊಬ್ಬರನ್ನು ವಂಚಿಸಿ, ನಕಲಿ ಪಾರ್ಸೆಲ್‌ಗಾಗಿ ಹಣ ನೀಡುವಂತೆ ಒತ್ತಾಯಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. "ಬೆಂಗಳೂರು ಡೇಟಿಂಗ್ ಸ್ಕ್ಯಾಮ್ ಅಲರ್ಟ್" ಎಂಬ ಸಾಲುಗಳೊಂದಿಗೆ ಯುವಕರೊಬ್ಬರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶೆಲ್ಲಿ ಎಂಬ ಯುವತಿಯೊಂದಿಗೆ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ ಮಾತನಾಡುತ್ತಿದ್ದುದಾಗಿ ಆ ಯುವಕ ಹೇಳಿಕೊಂಡಿದ್ದಾರೆ.
ಬೆಂಗಳೂರಿನಂತಹ ನಗರದಲ್ಲಿ ಡೇಟಿಂಗ್ ಆ್ಯಪ್‌ಗಳ ಮೂಲಕ ವಂಚನೆ ಆಗುತ್ತಿರುವ ವಿಚಾರವು ಹಲವು ದಿನಗಳಿಂದ ಚರ್ಚೆ ಆಗುತ್ತಿದೆ. ಯುವತಿಯೊಬ್ಬಳು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ / ಪಬ್ ಜೊತೆ ಟೈಅಪ್ ಅಥವಾ ಒಪ್ಪಂದ ಮಾಡಿಕೊಂಡು ಯುವಕರನ್ನು ಅಲ್ಲಿಗೆ ಕರೆದುಕೊಂಡು ಬಂದು ದುಬಾರಿ ಬಿಲ್ ಮಾಡಿಸುತ್ತಿದ್ದಳು. ಇದರಿಂದ ಹೋಟೆಲ್ - ಬಾರ್ ಅಂಡ್ ರೆಸ್ಟೋರೆಂಟ್‌ಗೆ ಹೆಚ್ಚು ಆದಾಯ ಬರುತ್ತಿತ್ತು ಎನ್ನುವ ವಿಚಾರವೊಂದು ಈಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲವನ್ನೇ ಸೃಷ್ಟಿ ಮಾಡಿತ್ತು.

Bengaluru Dating Scam: ಪಾರ್ಸಲ್ ಮೂಲಕ ಭಾರೀ ಮೋಸ!
ಇದೀಗ ಈ ಯುವಕನೂ ಸಹ ಡೇಟಿಂಗ್ ಆ್ಯಪ್ ಜಾಲದಲ್ಲಿ ಹೇಗೆ ಸಿಲುಕಿದ್ದೆ ಅಂತ ವಿವರಿಸಿದ್ದಾರೆ. ಇದು ಸಹ ಯಾವ ಸಿನಿಮಾ ಕಥೆಗಿಂತಲೂ ಕಮ್ಮಿ ಇಲ್ಲ ಎನ್ನುವಂತೆಯೇ ಇದೆ. ಯುವಕ ತನ್ನ ಬಿಡುವಿಲ್ಲದ ಕೆಲಸ - ಮೀಟಿಂಗ್‌ಗಳ ನಡುವೆ ಆಕೆಯನ್ನು ಭೇಟಿ ಮಾಡುವುದನ್ನು ತುಸು ತಡ ಮಾಡಿದರೂ ಸಹ, ಕಚೇರಿಯಲ್ಲಿ ಸ್ವಲ್ಪ ಬಿಡುವು ಅಥವಾ ರಜೆ ಸಿಕ್ಕಾಗ ಕೊನೆಗೆ ಅವಳನ್ನು ಭೇಟಿಯಾಗಲು ನಿರ್ಧರಿಸಿದ್ದೆ ಅಂತ ಹೇಳಿಕೊಂಡಿದ್ದಾರೆ.
ನಾನು ಶೆಲ್ಲಿಯನ್ನು (ಯುವತಿಯ ಹೆಸರು) ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯ ಮಾಡಿಕೊಂಡೆ. ನಾವು ಹಲವು ದಿನ ಡೇಟಿಂಗ್ ಆ್ಯಪ್‌ನಲ್ಲಿಯೇ ಮಾತನಾಡಿಕೊಂಡೆವು. ಕೆಲಸದ ಕಾರಣದಿಂದ ನಾನು ಅವಳನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ನಾವು ಡೇಟಿಂಗ್ ಆ್ಯಪ್‌ನಲ್ಲಿ ಚಾಟ್ ಮಾತನಾಡುತ್ತಿದ್ದೆವು. ಈಗ ನಾನು ಬಿಡುವಾಗಿದ್ದು ಆಕೆಯನ್ನು ಭೇಟಿಯಾಗಲು ನಿರ್ಧರಿಸಿದೆ ಎಂದು ಆ ಯುವಕ ವೈರಲ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಮುಂದುವರಿದು ಆದಾಗ್ಯೂ ಭೇಟಿಯಾಗುವುದಕ್ಕೂ ಮೊದಲು ಆ ಯುವತಿ ರಾನ್ ಎನ್ನುವ ಇನ್ನೊಬ್ಬ ವ್ಯಕ್ತಿಯಿಂದ ಪ್ಯಾಕೇಜ್ ಪಡೆಯಲು ಹೇಳಿದಳು. ಪ್ರತಿಯಾಗಿ ಹಣವನ್ನು ನೀಡುವುದಾಗಿ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಲು ಸಹ ಅವಳು ಹೇಳಿದ್ದಳು ನನಗೆ ಇದು ವಿಚಿತ್ರವೆನಿಸಿತು ಆದರೆ ಅವಳು ಹೆಚ್ಚು ಹೇಳಲಿಲ್ಲ ಏಕೆಂದರೆ ಅವಳ ತಾಯಿ ಬ್ಯುಸಿನೆಸ್‌ವೊಂದನ್ನು ನಡೆಸುತ್ತಾರೆ ಮತ್ತು ಆನ್‌ಲೈನ್‌ನಲ್ಲಿರುವ ಹಣಕ್ಕಿಂತ ಹೆಚ್ಚಿನ ಹಣವಿದೆ ಎಂದು ಅವಳು ಹೇಳಿದಳು ಅಂತ ಯುವಕ ಹೇಳಿದ್ದಾನೆ.
ನಾನು ರಾನ್ ಇರುವ ಸ್ಥಳಕ್ಕೆ ಬಂದೆ; ಈ ವ್ಯಕ್ತಿ ಅದನ್ನು ಪ್ಯಾಕ್ ಮಾಡುತ್ತಿದ್ದಾನೆ ಮತ್ತು ಅಷ್ಟರಲ್ಲಿ ನೀವು ಹಣ ಪಾವತಿಸಬಹುದು ಎಂದು ಹೇಳಿದಳು. ನಾನು ಮೊದಲಿಗೆ ಸಂಶಯಗೊಂಡು ಮೊದಲು ಬರಲು ಕೇಳಿದೆ. ಆದರೆ ಕೊನೆಯಲ್ಲಿ ನಾನು ಹಣ ನೀಡಿದೆ. ಈ ಸಂಭಾಷಣೆಯ ಉದ್ದಕ್ಕೂ ಆ ವ್ಯಕ್ತಿ ಸಂಪೂರ್ಣವಾಗಿ ವಿಭಿನ್ನ ಸ್ಥಳದಲ್ಲಿದ್ದ ಶೆಲ್ಲಿಯೊಂದಿಗೆ ಮಾತನಾಡುತ್ತಿರುವುದಾಗಿ ಹೇಳಿದ. ಸಿಗರೇಟ್ ಖರೀದಿ ಮಾಡುವಂತೆ ಹೇಳಿದಳು, ಆರ್ಡರ್ ಮಾಡಲು ಮರೆತಿದ್ದಾಳೆ ಎಂದು ಹೇಳಿದಳು. ಆದಾಗ್ಯೂ, ಮತ್ತೆ ಆಕೆಯನ್ನು ಕಾಂಟ್ಯಾಕ್ಟ್ ಮಾಡುವ ವೇಳೆಗೆ ಇಬ್ಬರೂ ನನ್ನ ನಂಬರ್ ಬ್ಲ್ಯಾಕ್ ಮಾಡಿದ್ದರು ಅಂತ ಯುವಕ ತನ್ನ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾನೆ.
"ಈಗ, ಇದಾದ ನಂತರ, ಇಬ್ಬರೂ ಸಂಪರ್ಕದಲ್ಲಿಲ್ಲ. ಇಬ್ಬರೂ ಉತ್ತರಿಸುವುದನ್ನು ನಿಲ್ಲಿಸಿದರು. ಇದರರ್ಥ ಅವರಿಬ್ಬರೂ ಇದನ್ನು ಮಾಡುವಾಗ ಸಂಪರ್ಕದಲ್ಲಿದ್ದರು ಮತ್ತು ಜನರನ್ನು ಮರುಳು ಮಾಡಲು ಮತ್ತು ಅವರ ಹಣವನ್ನು ಕದಿಯಲು ಎಚ್ಚರಿಕೆಯಿಂದ ಯೋಜಿಸಿದ್ದರು" ಎಂದು ಆ ವ್ಯಕ್ತಿ ಹೇಳಿದರು.


Click it and Unblock the Notifications
