ಪ್ರೇಮಿಗಳ ದಿನ ಆಚರಣೆಗೆ ಬೆಂಗಳೂರು ಜೋಡಿಗಳು ಜೈಪುರಕ್ಕೆ ಹಾರಿದ್ದಾರೆ!
ಬೆಂಗಳೂರು, ಫೆಬ್ರವರಿ 14: ಪ್ರೇಮಿಗಳ ದಿನ ಆಚರಣೆಗಾಗಿ ಬೆಂಗಳೂರಿನ ಬಹುತೇಕ ಜೋಡಿಗಳು ಜೈಪುರಕ್ಕೆ ಹಾರಿದ್ದಾರೆ. ಹಾಗಾದರೆ ಬೇರೆ ಎಲ್ಲಾ ಊರುಗಳನ್ನು ಬಿಟ್ಟು ಜೈಪುರಕ್ಕೆ ಏಕೆ ಹೋಗಿದ್ದಾರೆ ಎನ್ನುವುದಕ್ಕೆ ಉತ್ತರ ಇಲ್ಲಿದೆ.
ಉದಯ್‌ಪುರದಲ್ಲಿ ವಿಶ್ವ ಮ್ಯೂಸಿಕ್ ಫೆಸ್ಟಿವಲ್ ಫೆಬ್ರವರಿ 15ರಿಂದ 17ರವರೆಗೆ ನಡೆಯಲಿರುವ ಕಾರಣ ಎಲ್ಲರೂ ಶುಕ್ರವಾರ ಕಚೇರಿಗಳಿಗೆ ರಜೆ ಹಾಕಿದ್ದಾರೆ. ಬುಧವಾರ ರಾತ್ರಿಯೇ ಜೈಪುರಕ್ಕೆ ವಿಮಾನದಲ್ಲಿ ಹಾರಿದ್ದಾರೆ.
ಟ್ರಾವೆಲ್ ಪೋರ್ಟಲ್ ನಡೆಸಿದ ಸಮೀಕ್ಷೆ ಪ್ರಕಾರ ಪ್ರೇಮಿಗಳ ದಿನ ಸಂದರ್ಭದಲ್ಲಿ ಜೈಪುರಕ್ಕೆ ತೆರಳುವವರ ಸಂಖ್ಯೆ ಶೇ.30ರಷ್ಟು ಹೆಚ್ಚಾಗಿದೆ. ಬೆಂಗಳೂರಿನಿಂದ ಜೈಪುರ ಕ್ಕೆ ಶೇ.20, ಗೋವಾ ಶೇ.18, ಕೊಚ್ಚಿ-ಶೇ.15, ಡೆಹ್ರಾಡೂನ್ ಶೇ.14 ಕಳೆದ ವರ್ಷಕ್ಕೆ ಹೋಲಿಸಿದರೆ ಇಷ್ಟು ಹೆಚ್ಚಳವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಬೆಂಗಳೂರಿನಿಂದ ಬಾಲಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಶೇ.25ರಷ್ಟು ಹೆಚ್ಚಳವಾಗಿದೆ. ಪ್ರೇಮಿಗಳ ದಿನ ಎಂದರೆ ಕೇವಲ ಉಡುಗೊರೆಗಳನ್ನು ನೀಡುವುದಲ್ಲ, ಜೋಡಿಗಳು ಟ್ರಾವೆಲ್ ಮಾಡುವಲ್ಲಿ ಕೂಡ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಯಾತ್ರಾ ಡಾಟ್ ಕಾಮ್ ಮೂಲಕವೂ ಸಾಕಷ್ಟು ಮಂದಿ ಬುಕಿಂಗ್ ಮಾಡಿದ್ದಾರೆ. ಗೋಕರ್ಣ, ಹಂಪಿ, ಗೋವಾಕೆ ಹೆಚ್ಚು ಬುಕಿಂಗ್ ಆಗಿದೆ ಎಂದು ಯಾತ್ರಾಡಾಟ್ ಕಾಮ್‌ನ ಶರತ್ ತಿಳಿಸಿದ್ದಾರೆ.












Click it and Unblock the Notifications