ತಿನ್ನೋಕ್ಕಾಗದ ಅಡುಗೆಗೂ 8 ಸಾವಿರ ಸಂಬಳ : ಕುಕ್ ಬಗ್ಗೆ ಬೆಂಗಳೂರು ಮಹಿಳೆ ಪೋಸ್ಟ್ ವೈರಲ್
Bengaluru Cook: ಬೆಂಗಳೂರು ದುಡಿಯುವ ಅದೆಷ್ಟೋ ಕೈಗಳಿಗೆ ಕೆಲಸ ಕೊಟ್ಟ ಊರು. ಸಾವಿರಾರು ಕುಟುಂಬಗಳನ್ನು ಸಲಹುತ್ತಿರೋ ನಗರ. ಇಲ್ಲಿನ ಟ್ರಾಫಿಕ್ ಸಮಸ್ಯೆ ಮಾತ್ರ ಹೇಳ ತೀರದು. ನಮ್ಮ ಅರ್ಧ ಆಯುಷ್ಯ ಇಲ್ಲಿನ ಟ್ರಾಫಿಕ್ ನಲ್ಲಿಯೇ ಕಳೆದು ಬಿಡುತ್ತದೆ. ಕೆಲಸಕ್ಕೆ ಹೋಗುವವರ ಫ್ರೀ ಟೈಂನ್ನು ನುಂಗಿ ಬಿಡುತ್ತದೆ. ಹಾಗಾಗಿ ಇಲ್ಲಿ ಕೆಲಸದವರ ಅವಶ್ಯಕತೆ ಹೆಚ್ಚು. ಮನೆ ಕೆಲಸ, ಅಡುಗೆ ಹೀಗೆ ಎಲ್ಲದಕ್ಕೂ ಜನ ಬೇಕು.
ಮನೆ ಕೆಲಸದವರನ್ನು ಇಟ್ಟುಕೊಳ್ಳುವ ಮೂಲಕ ತಮ್ಮ ಜೀವನವನ್ನು ಸ್ವಲ್ಪ ಹಗುರ ಮಾಡಿಕೊಳ್ಳುತ್ತಾರೆ ಇಲ್ಲಿನ ಜನ. ಆದ್ರೆ ಇದೀಗ ಮಹಿಳೆಯೊಬ್ಬರು ಅಡುಗೆಯವರ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಹಾಕಿರುವ ಪೋಸ್ಟ್ ಸಖತ್ ವೈರಲ್ ಆಗ್ತಾ ಇದೆ. ಇವರು ಅಡುಗೆಯವರಿಗೆ ತಿಂಗಳಿಗೆ 8 ಸಾವಿರ ರೂಪಾಯಿ ಸಂಬಳ ಕೊಡ್ತಾರಂತೆ. ಎರಡು ಹೊತ್ತಿನ ಅಡುಗೆಗೆ 8 ಸಾವಿರ ದುಬಾರಿಯೇ. ಇಷ್ಟು ಹಣ ಕೊಟ್ಟರೂ ಪರವಾಗಿಲ್ಲ ಮಾಡುವ ಅಡುಗೆ ರುಚಿಯಾಗಿದ್ದರೆ. ಇಲ್ಲಿ ಅದೂ ಇಲ್ಲ. ಈ ಮಹಿಳೆಯೇ ಹೇಳುವ ಹಾಗೆ ಸುಮಾರಾಗಿರುವ ಅಡುಗೆ. ಬೇರೆ ವಿಧಿಯಿಲ್ಲದೆ ತಿನ್ನಬೇಕು ಅಂದುಕೊಂಡು ಹೊಟ್ಟೆಗೆ ಹಾಕುತ್ತಾ ಹೋಗಬೇಕು. ಆದರೂ ಇವರಿಗೆ ಅಡುಗೆಯವರು ಬೇಕೇ ಬೇಕು ಅನ್ನುವುದೇ ವಿಶೇಷ.

ಸೋಶಿಯಲ್ ಮೀಡಿಯಾದಲ್ಲಿ ಇದೇ ಪ್ರಶ್ನೆ :
ಅಡುಗೆಯವರು ಮಾಡುವ ಅಡುಗೆಗೆ ರುಚಿಯಿಲ್ಲ, ಹೇಳಿದ ರೀತಿಯಲ್ಲಿ ಅಡುಗೆ ಆಗುವುದಿಲ್ಲ. ಮನಸ್ಸಿಲ್ಲದ ಮನಸ್ಸಿನಿಂದಲೇ ಆ ಊಟ, ತಿಂಡಿ ತಿನ್ನಬೇಕು. ಇಷ್ಟಿದ್ದರೂ ಮತ್ಯಾಕೆ ಅ ಅಡುಗೆಯವರನ್ನು ಇರಿಸಿಕೊಂಡಿದ್ದೀರಿ ಎನ್ನುವುದು ಸೋಶಿಯ್ ಮಿಡಿಯಾದಲ್ಲಿ ಜನ ಕೇಳುತ್ತಿರುವ ಪ್ರಶ್ನೆ. ಇದೀಗ ಮಹಿಳೆಯ ಪೋಸ್ಟ್ ನಗರಗಳಲ್ಲಿ ವಾಸಿಸುವ, ಕೆಲಸಕ್ಕೆ ಹೋಗುವವರ ಜೀವನ ಮತ್ತು ಆದ್ಯತೆಗಳ ಬಗ್ಗೆ ಹೊಸ ಚರ್ಚೆಯನ್ನೇ ಹುಟ್ಟುಹಾಕಿದೆ.
Bengaluru Cook ಅಡುಗೆ ಹೀಗಿರುತ್ತದೆ :
ಬೆಂಗಳೂರಿನಲ್ಲಿ (bengaluru) ನೆಲೆಸಿರುವ ಮೇಘಾ ಸೋಶಿಯಲ್ ಮಿಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದವರು. ಇವರ ಮನೆಯ ಅಡುಗೆಯವರು ಇಬ್ಬರಿಗಾಗಿ ಅಡುಗೆ ಮಾಡಬೇಕು. ದಿನಕ್ಕೆ ಎರಡು ಬಾರಿ ಅಂದರೆ ಬೆಳಿಗ್ಗೆ ಮತ್ತು ಸಂಜೆ ಬಂದು ಅಡುಗೆ ಮಾಡಿ ಹೋಗುತ್ತಾರೆ. ದಿನಕ್ಕೆ ಎರಡು ರೀತಿಯ ಅಡುಗೆ ಆಗುತ್ತದೆ. ವಾರದಲ್ಲಿ ಒಂದು ದಿನ ಅಂದರೆ ಭಾನುವಾರ ರಜೆ. ಇಲ್ಲಿ ಮತ್ತೊಂದು ವಿಷಯ ಅಂದರೆ ಎಲ್ಲಾ ತರಕಾರಿ, ಪಲ್ಯ, ಕೋಳಿ, ಮಾಂಸ ಏನೇ ಇರಲಿ ಎಲ್ಲದಕ್ಕೂ ಕುಕ್ಕರ್ ಬಳಕೆ. ಎಲ್ಲವನ್ನೂ ಕಟ್ ಮಾಡುವುದು ಮಸಾಲೆ ಹಾಕುವುದು ಕುಕ್ಕರ್ ನಲ್ಲಿಟ್ಟು ಕೂಗಿಸುವುದು. ಈ ಕಾರಣದಿಂದಲೇ ಅಡುಗೆಗೆ ರುಚಿ ಇರಲ್ಲ.
ನಮ್ಮ ಅನುಕೂಲ, ರುಚಿಗೆ ತಕ್ಕಂತೆ ಹೇಗೆ ಅಡುಗೆ ಮಾಡಬೇಕು ಎನ್ನುವುದನ್ನು ಪದೇ ಪದೇ ನೆನಪು ಮಾಡಿಸುತ್ತಾ ಇರಬೇಕು. ಇನ್ನು ರುಚಿಯ ಬಗ್ಗೆ ಕೇಳಿದರೆ ಮಾರನೇ ದಿನ ಎಣ್ಣೆ ಸುರಿದು, ಮಸಾಲೆ ಹೆಚ್ಚು ಹಾಕಿ ಅಡುಗೆ ಮಾಡುತ್ತಾರೆ. ಅಡುಗೆಯ ರುಚಿ ಹೆಚ್ಚಿಸಲು ಕಂಡುಕೊಳ್ಳುವ ಸುಲಭ ಮಾರ್ಗ ಇದು. ನಗರದಲ್ಲಿ ವಾಸಿಸುವ ಜನರಿಗೆ ಇದು ಸಾಮಾನ್ಯ. ಮೊದಲೇ ಹೇಳಿದ ಹಾಗೆ ಕೆಲಸ, ಜವಾಬ್ದಾರಿ ಟ್ರಾಫಿಕ್ (traffic) ಜೊತೆ ಗುದ್ದಾಡಿ ಮತ್ತೆ ಅಡುಗೆ ಮಾಡುವಷ್ಟು ತಾಳ್ಮೆ ಅವರಲ್ಲಿ ಉಳಿದಿರುವುದಿಲ್ಲ. ಹಾಗಾಗಿ ಅಡುಗೆಯವರೇ ಗತಿ.
ಇಂಥಹ ಅಡುಗೆಗೆ ಅಡುಗೆಯವರು ಬೇಕೆ ?:
ಮೇಘಾ ಅವರ ಪೋಸ್ಟ್ ನ ಅತ್ಯಂತ ಇಂಟೆರೆಸ್ಟಿಂಗ್ ಪಾಯಿಂಟ್ ಇರುವುದು ಇಲ್ಲಿಯೇ. ಇಲ್ಲಿ ಜನರಿಗೆ ರುಚಿ ರುಚಿಯಾದ ಅಡುಗೆ ಮಾತ್ರ ಆದ್ಯತೆ ಅಲ್ಲ. ದಿನಕ್ಕೆ ಎರಡು ಬಾರಿ ಅಡುಗೆ ಮಾಡುವ ಚಿಂತೆ ತಪ್ಪುತ್ತದೆ ಎನ್ನುವ ಕಾರಣಕ್ಕೆ ಪ್ರತಿ ತಿಂಗಳು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ದಿನ ಬೆಳಗಾದರೆ ಅಡುಗೆ ಏನು ಮಾಡುವುದು, ತಿಂಡಿ ಏನು ಮಾಡುವುದು, ತರಕಾರಿ ಯಾವಾಗ ಕಟ್ ಮಾಡುವುದು, ಅಡುಗೆ ಎಷ್ಟು ಹೊತ್ತಿಗೆ ಮಾಡುವದು ಎನ್ನುವ ಯೋಚನೆಯಿಂದಲೂ ಮುಕ್ತಿ ಬೇಕು. ಇಲ್ಲಿ ಅಡುಗೆಯವರಿಗೆ ಕೊಡುವ ಹಣ ರುಚಿಗಿಂತ ಹೆಚ್ಚಾಗಿ ಅವರಿಗಾಗಿ ಸಿಗುವ ಟೈಂನದ್ದಾಗಿದೆ.
ಜನ ಹೇಳುವುದೇನು?
ಮೇಘಾ ಅವರ ಪೋಸ್ಟ್ ವೈರಲ್ ಆಗ್ತಾ ಇದ್ದ ಹಾಗೆಯೇ ಜನ ಕೂಡಾ ಇದಕ್ಕೆ ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಕೆಲವರು ಮನೆಕೆಲಸದವರಿಗೆ ಸಂಬಳ ಕೊಡುವುದು ಸುಲಭದ ಮಾತಲ್ಲ ಎಂದು ಹೇಳಿದ್ದಾರೆ. ಅಡುಗೆಮನೆಗೆ ಸಂಬಂಧಿಸಿದ ನಿರ್ಧಾರಗಳಿಂದ ಮುಕ್ತಿ ಪಡೆಯಲು ಜನರು ದಿನಾ ಹಣ ಖರ್ಚು ಮಾಡುತ್ತಾರೆ ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ. ಅದೇ ಸಮಯದಲ್ಲಿ, ಮತ್ತೊಬ್ಬ ಬಳಕೆದಾರರು ಮನೆಯಲ್ಲಿ ತಯಾರಿಸಿದ ಆಹಾರವು ಯಾವಾಗಲೂ ರುಚಿಯಾಗಿರುವುದಿಲ್ಲ. ಆದರೆ ಹೊರಗಿನಿಂದ ಹೊಟೇಲಿಂದ ಆರ್ಡರ್ ಮಾಡುವುದಕ್ಕಿಂತ ಇದೇ ಬೆಸ್ಟ್ ಎಂದು ಹೇಳಿದ್ದಾರೆ.
Bengaluru cook economics are crazy actually.For 2 people, around ₹7–8k/month, 2 visits a day, Sunday off.They come in, chop vegetables , make 2 dishes quickly and move on to the next house.Pressure cooker is basically their Astra , dal, aloo, soya, chicken… everything somehow ends up in it!Taste is usually average unless you keep explaining how you want it. Otherwise more oil + more masala seems to be the shortcut.And yet we continue.Because I realised we’re not really paying ₹8k for amazing food.We’re paying ₹8k to not have to think about cooking twice every single day.
— Megha (@HeyItsMegha) October 7, 2026


Click it and Unblock the Notifications
