'ಕೆಲಸ ಬಿಟ್ಟು ಬ್ಯುಸಿನೆಸ್ ಮಾಡಿ, ನಷ್ಟವಾದ್ರೆ ಚಿಂತೆ ಬೇಡ'! ನೌಕರರಿಗೆ ಸುವರ್ಣಾವಕಾಶ ನೀಡಿದ ಬೆಂಗಳೂರು ಕಂಪನಿ

ಬೆಂಗಳೂರು: ಯಾವುದೇ ಕಾರ್ಪೋರೇಟ್, ಐಟಿ, ಖಾಸಗಿ ಕಂಪನಿಗಳೇ ಆಗಲಿ ಸ್ವಂತ ಬೆಳವಣಿಗೆ ನೋಡಿಕೊಳ್ಳುತ್ತವೆಯೇ ವಿನಃ ನೌಕರರ ಭವಿಷ್ಯ, ಆರ್ಥಿಕತೆ, ಅದರಲ್ಲೂ ಅವರ ಕನಸಿನ ಬಗ್ಗೆ ಯೋಚಿಸುವುದೇ ಇಲ್ಲ. ಆದರೆ ಬೆಂಗಳೂರಿನ ಕಂಪನಿಯೊಂದು ತನ್ನ ನೌಕರರ ಕನಸಿಗೆ ನೀರೆರೆಯಲು ಮುಂದಾಗಿದೆ. ಕಂಪನಿ ಬಿಟ್ಟು ಸ್ವಂತ ಉದ್ಯಮ ಆರಂಭಿಸಿ, ಫೇಲಾದರೆ ಮತ್ತೆ ಕಂಪನಿಗೆ ಬನ್ನಿ ಎಂಬ ವಿಶೇಷ ನೀತಿ ರೂಪಿಸಿದೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಎಐ ಜಮಾನ ಶುರುವಾದ ಬಳಿಕವಂತೂ ಯಾರ ಕೆಲಸವೂ ಶಾಶ್ವತ ಎಂದು ಹೇಳಲು ಆಗವುದಿಲ್ಲ. ಉದ್ಯೋ ಕಡಿತ ಸುದ್ದಿಗಳನ್ನು ನಿತ್ಯ ಕೇಳುತ್ತಲೇ ಇರುತ್ತೇವೆ. ಈ ನಡುವೆ ಕಂಪನಿಯಲ್ಲಿದ್ದುಕೊಂಡು ಹೊಸ ಉದ್ಯಮ ಆರಂಭಿಸಬೇಕು, ತಮ್ಮ ಕಾಲ ಮೇಲೆ ನಿಲ್ಲಬೇಕೆಂದುಕೊಂಡವರಿಗೆ, ಸ್ವಂತ ಉದ್ಯಮ ಕನಸು ಕಂಡವರಿಗೆ ಬೆಂಗಳೂರಿನಲ್ಲಿ ಶುರುವಾದ ಆಹಾರ ಉತ್ಪನಗಳ ಸಂಸ್ಥೆ 'ಐಡಿ ಫ್ರೆಶ್ ಫುಡ್' (ID Fresh Food) ಉತ್ತೇಜಿಸುತ್ತಿದೆ.

Bengaluru Company iD Fresh Food

ಕಂಪನಿಯಿಂದ ಅಚ್ಚರಿಯ ಆಫರ್

ಕೇಳಲು ಅಚ್ಚರಿ ಅನ್ನಿಸಿದರೂ ತನ್ನ ನೌಕರರಿಗೆ ಕಂಪನಿ ಈ ರೀತಿ ಅಚ್ಚರಿಯ ಆಫರ್ ನೀಡಿದೆ. 'ಐಡಿ ಫ್ರೆಶ್ ಫುಡ್' ಕಂಪನಿಯ ಸಿಇಒ ಮತ್ತು ಅಧ್ಯಕ್ಷ ಮುಸ್ತಫಾ ಪಿಸಿ ಅವರು ನೂತನ ಉಪಕ್ರಮ ಮಾಹಿತಿ ಹಂಚಿಕೊಂಡಿದ್ದಾರೆ. ಉದ್ಯಮದಲ್ಲಿ ಆಸಕ್ತಿ ಇರುವ ಅರ್ಹರಿಗೆ ಪಾಲುದಾರರಿಂದ ಅಗತ್ಯ ಮಾರ್ಗದರ್ಶನ, ಭಾಗಶಃ ವೇತನ ಸಹಿತ ರಜೆ ನೀಡಿ ಪ್ರೋತ್ಸಾಹಿಸುವ ಉಪಕ್ರಮ ಘೋಷಿಸಿದ್ದಾರೆ. ಒಂದು ವೇಳೆ ನಿಮಗೆ ಉದ್ಯಮ ಸರಿ ಹೊಂದದೇ ಅರ್ಧಕ್ಕೆ ಬಿಟ್ಟರೂ ಪರವಾಗಿಲ್ಲ, ಮತ್ತೆ ನೀವು ಕಂಪನಿಗೆ ಬರುವ ಸುವರ್ಣಾವಕಾಶವನ್ನು ನೀಡುತ್ತೇವೆ ಎಂದು ಮುಸ್ತಫಾ ತಿಳಿಸಿದ್ದಾರೆ.

ಉದ್ಯೋಗಿಗಳಿಗೆ ಯಾವೆಲ್ಲ ರೀತಿ ಬೆಂಬಲ?

ಸ್ವಂತ ಉದ್ಯಮ ಆರಂಭಿಸುವವರಿಗೆ ಒಂದೂವರೆ ವರ್ಷ (18) ವರೆಗೆ ಭಾಗಶಃ ವೇತನ ರಜೆ ಪಡೆಯಲು ಅವಕಾಶ ನೀಡುತ್ತಿದೆ. ನೀವು ಕೆಲಸದಿಂದ ತಾತ್ಕಾಲಿಕವಾಗಿ ದೂರ ಉಳಿಕೊಂಡು ಸಹ ಸ್ವಂತ ಉದ್ದಿಮೆ ಆರಂಭಿಸಬಹುದು ಎಂದು ಕಂಪನಿ ತಿಳಿಸಿದೆ.

ಅರ್ಹ ನೌಕರರು ಉದ್ಯಮ ಆರಂಭಿಸುವುದಾದರೆ ಅವರಿಗೆ ಕಂಪನಿ ಹಿರಿಯ ಅನುಭವಿ ಅಧಿಕಾರಿಗಳು ಸಲಹೆ, ಮಾರ್ಗದರ್ಶನ ಕೊಡುತ್ತಾರೆ. ಮಾರುಕಟ್ಟೆ ಸಂಪರ್ಕ, ಹೊಸ ಜಾಲ ಸೃಷ್ಟಿಯ ಕುರಿತು ತಿಳಿಸುತ್ತಾರೆ. ನೌಕರರು ಆಯ್ಕೆ ಮಾಡಿಕೊಳ್ಳುವ ವಲಯದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಲ್ಲಿನ ಸಂಪರ್ಕಗಳನ್ನು ಪರಿಚಯ ಮಾಡಿಕೊಡಲಿದ್ದಾರೆ.

ಉದ್ಯಮ ಯತ್ನ ವಿಫಲವಾದ್ರೆ ಚಿಂತೆ ಬಿಡಿ, ಮತ್ತೆ ಕಂಪನಿಗೆ ಬನ್ನಿ!

ಒಂದು ವೇಳೆ ನಿಮ್ಮ ಕನಸಿನ ಉದ್ಯಮ ಆರಂಭಿಸಿ ಅದರಲ್ಲಿ ನೀವು ವಿಫಲವಾದರೆ, ಇತ್ತ ಕೆಲವು ಹೋಯ್ತು, ಉದ್ಯಮ ಕೈ ಹಿಡಿಯಲಿಲ್ಲ ಎಂದು ಕೊರಗುವುದು ಬೇಡ. ನೀವು ಮತ್ತೆ ಮರಳಿ ನಮ್ಮ ಕಂಪನಿಗೆ ಬರಲು ಅವಕಾಶ ಇದೆ ಎಂದು ಸಿಇಓ ತಿಳಿಸಿದ್ದಾರೆ. ಇದರಿಂದ ಉದ್ಯಮ ಕನಸು ಈಡೇರಿಸಿಕೊಳ್ಳುವ ಜೊತೆಗೆ, ಕೆಲಸ ಕಳೆದುಕೊಳ್ಳುವ ಆತಂಕ, ಆರ್ಥಿಕತೆಯ ಭಯ ಸಹ ನೌಕರರಿಂದ ದೂರವಾಗಲಿದೆ. ನೌಕರರ ಭವಿಷ್ಯ ಗಮನದಲ್ಲಿಟ್ಟುಕೊಂಡು ಇಂಥದ್ದೊಂದು ಕಂಪನಿಯು ಮಹತ್ವದ ಉಪಕ್ರಮ ಆರಂಭಿಸಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ.

ನೌಕರರ ಉತ್ತೇಜನಕ್ಕೆ ಪ್ರಮುಖ ಕಾರಣವೇನು?

ಐಡಿ ಫ್ರೆಶ್ ಫುಡ್ ಕಂಪನಿಯು ಆರಂಭದಲ್ಲಿ ಇಂಥದ್ದೇ ಸಂಕಷ್ಟ ಎದುರಿಸಿದೆ. ಕೇವಲ 50,000 ರೂಪಾಯಿ ಬಂಡವಾಳದೊಂದಿಗೆ ಈ ಕಂಪನಿ ಆರಂಭವಾಗಿತ್ತು. ಆಗಲೂ ಸಾಕಷ್ಟು ಸವಾಲುಗಳು, ಆತಂಕದೊಂದಿಗೆ ಕಂಪನಿಯು ಶುರು ಮಾಡಿದ್ದ ಸಿಇಒ ಮುಸ್ತಫಾ ಅವರು, ಒಂದಷ್ಟು ಅನಿಶ್ಚಿತತೆ ಎದುರಿಸಬೇಕಾಯಿತು. ಆಗ ಅವರನ್ನು ಕೆಲವರು ಪ್ರೋತ್ಸಾಹಿಸಿ ಕಂಪನಿ ಬೆಳೆಯಲು ಸಹಾಯ ಮಾಡಿದರು. ಅದರಿಂದಲೇ ತಾವು ಈ ಹಂತದವರಿಗೆ ಉದ್ಯಮದಲ್ಲಿ ನೆಲೆ ನಿಲ್ಲಲು ಸಾಧ್ಯವಾಯಿತು ಎಂದು ಅವರು ನೆನಪಿಸಿಕೊಂಡಿದ್ದಾರೆ. ಈ ಕಾರಣದಿಂದಲೇ ಅವರು ತಮ್ಮ ಕಂಪನಿಯ ನೌಕರರ ಕನಸು ಸಾಕಾರಕ್ಕೆ ಇಂಥದ್ದೊಂದು ನಿರ್ಧಾರ ಕೈಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತ ಲಿಂಕ್ಡ್ ಇನ್ ಪೋಸ್ಟ್ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+