Bengaluru: ಸಹೋದ್ಯೋಗಿಯನ್ನೇ ಥಳಿಸಲು ಗೂಂಡಾಗಳ ನೇಮಕ! ಐವರನ್ನು ಬಂಧಿಸಿದ ಪೊಲೀಸರು
ಸಹೋದ್ಯೋಗಿಯೊಬ್ಬ ಕಚೇರಿಯಲ್ಲಿ ಹೆಚ್ಚಿನ ಒತ್ತಡ ಹಾಕಿದ್ದಕ್ಕೆ ಆತನನ್ನು ಥಳಿಸಲು ಗೂಂಡಾಗಳನ್ನು ನೇಮಕ ಮಾಡಿದ್ದಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ದೂರು ದಾಖಲಿಸಿಕೊಂಡ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಖಾಸಗಿ ಸಂಸ್ಥೆಯೊಂದರಲ್ಲಿ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ಬೆಂಗಳೂರು ಪೊಲೀಸರು ಐವರನ್ನು ಬಂಧಿಸಿದ್ದು, ಬಂಧಿತ ಐವರಲ್ಲಿ ಇಬ್ಬರು ಹಲ್ಲೆಗೊಳಗಾದ ಲೆಕ್ಕ ಪರಿಶೋಧಕರ ಸಹೋದ್ಯೋಗಿಗಳಾಗಿದ್ದು, ಅವರನ್ನು ಥಳಿಸಲು ಗೂಂಡಾಗಳನ್ನು ನೇಮಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವ ವೀಡಿಯೊದಲ್ಲಿ ಆರೋಪಿಗಳು ಕಲ್ಯಾಣ್ ನಗರ ಬಳಿಯ ರಿಂಗ್ ರಸ್ತೆಯಲ್ಲಿ ಲೆಕ್ಕಪರಿಶೋಧಕ ಸುರೇಶ್ ಎಂಬಾತನಿಗೆ ಕಬ್ಬಿಣದ ರಾಡ್‌ನಿಂದ ಥಳಿಸಿದ್ದರು.
ಒತ್ತಡ ಹೇರಿದ್ದಕ್ಕೆ ಹಲ್ಲೆ
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಹಲ್ಲೆಗೊಳಗಾಗಿರುವ ಸುರೇಶ್ ಹಾಲಿನ ಉತ್ಪನ್ನ ಕಂಪನಿಯಲ್ಲಿ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಂಧನವಾಗಿರುವ ಉಮಾಶಂಕರ್ ಮತ್ತು ವಿನೇಶ್ ಕೂಡ ಕಂಪನಿಯಲ್ಲಿ ಆತನೊಂದಿಗೆ ಕೆಲಸ ಮಾಡುತ್ತಿದ್ದರು.
ಘಟನೆ ಬಗ್ಗೆ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಸುರೇಶ್ ತಮ್ಮ ಮೇಲೆ ಹೆಚ್ಚಿನ ಒತ್ತಡ ಹೇರಿದ್ದಕ್ಕಾಗಿ ಥಳಿಸಿದ್ದೇವೆ ಎಂದು ಬಾಯಿಬಿಟ್ಟಿದ್ದಾರೆ.
SHOCKING!
— Waseem ವಸೀಮ್ وسیم (@WazBLR) April 2, 2024
In Bengaluru's Kalyan Nagar, dash camera of a vehicle records a man being assaulted with a rod in broad daylight. Attacker walks out on the road normally.
I've no idea if he survived. @BlrCityPolice look into this
Source of the video: @/_cavalier_fantome on instagram pic.twitter.com/uNy51CBwpY
ಸುರೇಶ್ ಒಂದು ವರ್ಷದ ಹಿಂದೆ ಕಂಪನಿಗೆ ಸೇರಿದ್ದರು. ಅವರು ಕಟ್ಟುನಿಟ್ಟಾದ ಲೆಕ್ಕ ಪರಿಶೋಧಕ ಅಧಿಕಾರಿಯಾಗಿದ್ದರು ಎಂದು ಹೇಳಲಾಗಿದೆ. ಎಲ್ಲಾ ನೌಕರರು ಕೂಡಲೇ ಕೂಡಲೇ ಸ್ಟಾಕ್ ಬ್ಯಾಲೆನ್ಸ್ ಅನ್ನು ತೆರವುಗೊಳಿಸಬೇಕೆಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದರು, ಉದ್ಯೋಗಿಗಳಿಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಸುರೇಶ್ ಕೆಲಸಕ್ಕೆ ಸೇರುವ ಮೊದಲು ಉಮಾಶಂಕರ್ ಮತ್ತು ವಿನೇಶ್ ಬಾಕಿಯನ್ನು ತೆರವು ಮಾಡಲು ವಿಳಂಬ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇಬ್ಬರ ಬೇಜವಬ್ದಾರಿಯನ್ನು ಸುರೇಶ್ ಕಂಪನಿಯ ಮೇಲಧಿಕಾರಿಗಳ ಗಮನಕ್ಕೆ ತಂದು ಇಬ್ಬರ ವಿರುದ್ಧ ಕ್ರಮ ತೆಗೆದುಕೊಂಡಿದ್ದರು.
ಸುರೇಶ್ ಮಾಡಿದ ಕೆಲಸದಿಂದ ಮನನೊಂದ ಉಮಾಶಂಕರ್ ಮಾಜಿ ನೌಕರನನ್ನು ಸಂಪರ್ಕಿಸಿ ಆತನನ್ನು ಇನ್ನೊಬ್ಬ ಆರೋಪಿ ಸಂದೀಪ್‌ಗೆ ಪರಿಚಯಿಸಿದ್ದಾನೆ. ಉಮಾಶಂಕರ್ ನಿರ್ದೇಶನದ ಮೇರೆಗೆ ಸಂದೀಪ್ ಕೆಆರ್ ಪುರಂನಿಂದ ಕೆಲವು ಗೂಂಡಾಗಳನ್ನು ನೇಮಿಸಿಕೊಂಡಿದ್ದರು. ಸುರೇಶ್ ನನ್ನು ಹಿಂಬಾಲಿಸಿ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿಡಿಯೋ ವೈರಲ್ ಆದ ನಂತರ ಹೆಣ್ಣೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ.












Click it and Unblock the Notifications