ಬೆಂಗಳೂರು: ಶೂ ಹಾಕಿಕೊಂಡು ಪೂಜೆ ಮಾಡಿದ ಸಿಎಂ ಸಿದ್ದರಾಮಯ್ಯ!
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಂಗಳೂರಿನಲ್ಲಿರುವ ಸಹಕಾರ ಸಮೃದ್ಧಿ ಸೌಧ ಕಟ್ಟಡದ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಶೂ ಹಾಕಿಕೊಂಡು ಪೂಜೆ ಮಾಡಿರುವುದು ಕಂಡು ಬಂದಿದೆ.
ಬೆಂಗಳೂರಿನಲ್ಲಿಂದು ಸಹಕಾರ ಇಲಾಖೆ ಸಹಕಾರ ಸಮೃದ್ಧಿ ಸೌಧ ಕಟ್ಟಡದ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ ಶೂ ಹಾಕಿಕೊಂಡೇ ಪೂಜೆ ಮಾಡಿರುವುದು ಕಂಡು ಬಂದಿದೆ. ಈ ವೇಳೆ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆಯ ಸಚಿವ ಎಚ್.ಕೆ.ಪಾಟೀಲ್, ಸಚಿವ ಜಮೀರ್ ಅಹ್ಮದ್ ಖಾನ್ ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಅವರ ಜೊತೆ ಈ ಎಲ್ಲಾ ಸಚಿವರು ಕೂಡ ಶೂ ಹಾಗೂ ಚಪ್ಪಲಿಗಳನ್ನು ಹಾಕಿಕೊಂಡು ಪೂಜೆ ನೆರೆವೇರಿಸಿದ್ದಾರೆ. ಸಿದ್ದರಾಮಯ್ಯ ಅವರೊಂದಿಗೆ ಗುದ್ದಲಿ ಹಿಡಿದು, ದೇವರಿಗೆ ಹೂ ಅರ್ಪಿಸಿ ಪೂಜೆ ಮಾಡಿರುವುದು ಕಂಡು ಬಂದಿದೆ.
ಸಾಮಾನ್ಯವಾಗಿ ಪೂಜೆ ಮಾಡುವಾಗ ಶೂ ಹಾಗೂ ಚಪ್ಪಲಿಯನ್ನು ತೆಗೆಯುವುದು ಪದ್ಧತಿ. ಜೊತೆಗೆ ಇದು ದೇವರಿಗೆ ತೋರಿಸುವ ಗೌರವ ಹಾಗೂ ಶುದ್ಧ ಮನಸ್ಸಿನ ಭಕ್ತಿ. ಆದರೆ ಸಿದ್ದರಾಮಯ್ಯ ಅವರು ಶೂ ಹಾಕಿಕೊಳ್ಳುವುದು ಮಾತ್ರವಲ್ಲದೆ ಅವರೊಂದಿಗೆ ಇದ್ದ ಸಚಿವರೂ ಇದನ್ನು ಅನುಸರಿಸಿದ್ದಾರೆ. ಎಲ್ಲರೂ ಪಾದರಕ್ಷಗಳೊಂದಿಗೆ ಗುದ್ದಲಿ ಪೂಜೆ ಮಾಡಿದ್ದು ಕಂಡು ಬಂದಿದೆ.
ಕೆಲವು ಪ್ರದೇಶಗಳನ್ನು ನಾವು ಅತ್ಯಂತ ಪವಿತ್ರ ಸ್ಥಳ ಎಂದು ಪರಿಗಣಿಸುತ್ತೇವೆ. ಅಂತಹ ಸ್ಥಳವನ್ನು ಶುದ್ಧ ಹಾಗೂ ಆರೋಗ್ಯಕರವಾಗಿ ಇಡಬೇಕು. ಆಗ ಸಕಾರಾತ್ಮಕ ಶಕ್ತಿಯ ಆಗಮನ ಆಗುವುದು. ಸಂತೋಷದ ವಾತಾವರಣ ನೆಲೆಸುವುದು. ಪಾದರಕ್ಷೆಯನ್ನು ನಮ್ಮ ಪಾದಗಳ ರಕ್ಷಣೆಗಾಗಿ ಬಳಸುತ್ತೇವೆ. ಅದನ್ನು ಧರಿಸಿ ಮನಸ್ಸು ಬಂದಲ್ಲಿ ಓಡಾಡುತ್ತೇವೆ. ಅದರ ಅಡಿಯಲ್ಲಿ ಸಾಕಷ್ಟು ಕೊಳಕು, ಕೀಟಾಣು ಹಾಗೂ ರೋಗಾಣುಗಳು ಇರುತ್ತವೆ. ಇವುಗಳನ್ನು ಪವಿತ್ರ ಸ್ಥಳಗಳಿಗೆ ಧರಿಸಿ ಬಂದರೆ ಅಲ್ಲಿಯ ಜಾಗ ಅಶುದ್ಧವಾಗುವುದು. ಜೊತೆಗೆ ಋಣಾತ್ಮಕ ಶಕ್ತಿಯ ಆಕರ್ಷಣೆ ಹೆಚ್ಚುವುದು. ಹಾಗಾಗಿ ಮನೆಯ ಒಳಗೆ ಮತ್ತು ದೇವಾಲಯಗಳ ಒಳಗೆ ಶೂ ಮತ್ತು ಚಪ್ಪಲಿಯನ್ನು ಧರಿಸಿ ಹೋಗಬಾರದು ಎಂದು ಹೇಳಲಾಗುತ್ತದೆ.

ಇಂತಹ ಸೂಕ್ಷ್ಮ ವಿಚಾರಗಳನ್ನು ತಿಳಿದೂ ಕೂಡ ಸಿಎಂ ಹಾಗೂ ಅವರೊಂದಿಗೆ ಸಚಿವರೆಲ್ಲರೂ ಪಾದರಕ್ಷಗಳೊಂದಿಗೆ ಗುದ್ದಲಿ ಪೂಜೆ ಮಾಡಿದ್ದು ಕಂಡು ಬಂದಿದೆ. ಇದು ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದೆ.












Click it and Unblock the Notifications