ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರಿಗೆ ಬೆಂಗಳೂರು ಪೊಲೀಸ್ ಕಮಿಷನರ್ ಹೊರಡಿಸಿದ 7 ಆದೇಶ

|
Google Oneindia Kannada News

ಬೆಂಗಳೂರು, ಏಪ್ರಿಲ್ 14: ಎರಡನೇ ಹಂತದ ಲಾಕ್ ಡೌನ್ ಮುನ್ನ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್, ಪೊಲೀಸರಿಗೆ ಹೊಸ ಸೂಚನೆಗಳನ್ನು ಸೋಮವಾರ (ಏ 13) ನೀಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಬರುವ ಮಾರ್ಗಸೂಚಿಯ ಪ್ರಕಾರ ಮತ್ತಿನ್ನೇನಾದರೂ ಬದಲಾವಣೆಗಳಿದ್ದರೆ ಸೂಚನೆ ನೀಡುವುದಾಗಿ ಆಯುಕ್ತರು, ತಮ್ಮ ಸಿಬ್ಬಂದಿಗಳಿಗೆ ಹೇಳಿದ್ದಾರೆ.

#LifeAfterCorona: ಕೊರೊನಾ ನಂತರದ ಬದುಕು ಹೇಗಿರಲಿದೆ?#LifeAfterCorona: ಕೊರೊನಾ ನಂತರದ ಬದುಕು ಹೇಗಿರಲಿದೆ?

"ಕಳೆದ ಮೂರು ವಾರಗಳಲ್ಲಿ ಪೊಲೀಸ್ ಸಿಬ್ಬಂದಿಯ ಸೇವೆಗೆ ಸರಕಾರ ಮತ್ತು ಸಾರ್ವಜನಕರಿಂದ ಪ್ರಶಂಸೆ ಬಂದಿದೆ" ಎಂದು ಹೇಳಿರುವ ಭಾಸ್ಕರ್ ರಾವ್, ಇದೇ ರೀತಿ ಕೆಲಸ ಮುಂದುವರಿಸಿಕೊಂಡು ಹೋಗಲು ಸೂಚಿಸಿದ್ದಾರೆ.

ವಾಕಿಟಾಕಿಯ ಮೂಲಕ ಪೊಲೀಸ್ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿರುವ ಭಾಸ್ಕರ್ ರಾವ್ ನೀಡಿರುವ ಏಳು ಸೂಚನೆಗಳು ಈ ರೀತಿಯಿವೆ:

ಕರ್ನಾಟಕದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ ಕರ್ನಾಟಕದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ

ಪೊಲೀಸ್ ಸಿಬ್ಬಂದಿ ಯಾವುದೇ ತೊಂದರೆ ಕೊಡಬಾರದು

ಪೊಲೀಸ್ ಸಿಬ್ಬಂದಿ ಯಾವುದೇ ತೊಂದರೆ ಕೊಡಬಾರದು

1. ಕಳೆದ ಮೂರು ವಾರಗಳಿಂದ ಸಾರ್ವಜನಿಕರು ಸಹಕಾರ ಕೊಟ್ಟಿದ್ದಾರೆ, ಹೀಗಾಗಿ ಮಾಧ್ಯಮ, ತರಕಾರಿ ಮಾರಾಟ ಮಾಡುವವರು, ಪೌಲ್ಟ್ರಿ ಉತ್ಪನ್ನ ಮಾರಾಟ ಮಾಡುವವರಿಗೆ ಪೊಲೀಸ್ ಸಿಬ್ಬಂದಿ ಯಾವುದೇ ತೊಂದರೆ ಕೊಡಬಾರದು.

ಎಪಿಎಂಸಿಗೆ ಬರುವ ವಾಹನಗಳು

ಎಪಿಎಂಸಿಗೆ ಬರುವ ವಾಹನಗಳು

2. ಎಪಿಎಂಸಿಗೆ ದೊಡ್ಡ ದೊಡ್ಡ ಟ್ರಕ್‌ಗಳಲ್ಲಿ ಅಗತ್ಯ ವಸ್ತುಗಳು ಬರುತ್ತಿವೆ, ಅವುಗಳಿಗೆ ತೊಂದರೆ ಕೊಡಬಾರದು, ಖಾಲಿ ಟ್ರಕ್‌ಗಳು ಹೋಗುವುದು, ಬರುವುದು ಮಾಡುತ್ತಿವೆ. ಅವುಗಳಿಗೂ ತೊಂದರೆ ಕೊಡಬಾರದು. ಗೂಡ್ಸ್‌ ವಾಹನಗಳಿಗೂ ಯಾವುದೇ ತೊಂದರೆ ಕೊಡಬಾರದು.

ಹಮಾಲಿಗಳಿಗೆ, ಕೂಲಿ ಕಾರ್ಮಿಕರಿಗೆ ಯಾವುದೇ ತೊಂದರೆ ಕೊಡಬಾರದು.

ಹಮಾಲಿಗಳಿಗೆ, ಕೂಲಿ ಕಾರ್ಮಿಕರಿಗೆ ಯಾವುದೇ ತೊಂದರೆ ಕೊಡಬಾರದು.

3. ಎಪಿಎಂಸಿಗೆ ಬರುವ ಹಮಾಲಿಗಳಿಗೆ, ಕೂಲಿ ಕಾರ್ಮಿಕರಿಗೆ ಯಾವುದೇ ತೊಂದರೆ ಕೊಡಬಾರದು.

4. ಪಾಸ್‌ ಇಲ್ಲದೆ ಇದ್ದರೂ ಡಯಾಲಿಸಿಸ್, ಗರ್ಭಿಣಿ ಮಹಿಳೆಯರಿಗೆ, ಕಿಮೊಥೆರಪಿಗೆ ಹೋಗುವವರಿಗೆ ಅವಮಾನ ಮಾಡದೇ ಕಳಿಸಿ ಕೊಡಬೇಕು, ಅವಾಚ್ಯ ಶಬ್ದಗಳನ್ನು ಬಳಕೆ ಮಾಡಬಾರದು.

ಟ್ಯಾಂಕರ್ ನೀರು

ಟ್ಯಾಂಕರ್ ನೀರು

5. ಟ್ಯಾಂಕರ್ ನೀರು, ವಿದ್ಯುತ್, ಸರ್ಕಾರಿ ಸಿಬ್ಬಂದಿಗೆ ಅವಕಾಶ ಕೊಡಬೇಕು.

6. ಪಾಸ್‌ ಚೆಕ್‌ ಮಾಡುತ್ತಿರಬೇಕು, ನಕಲಿ ಪಾಸ್, ಜೆರಾಕ್ಸ್ ಪಾಸ್‌ಗಳನ್ನು ಪತ್ತೆ ಮಾಡಬೇಕು.

7. ಪ್ರತಿದಿನ ಪ್ರತಿ ಪೊಲೀಸ್ ಸಿಬ್ಬಂದಿಗೆ 3 ಲೀಟರ್ ನೀರು, 4 ಆರೆಂಜ್ ಒದಗಿಸಬೇಕು. ಏನೇ ಸಮಸ್ಯೆ ಇದ್ದರೂ ಮಾನವೀಯತೆಯಿಂದ ಕೆಲಸ ಮಾಡಬೇಕು.

English summary
Bengaluru City Police Commissioner Given Seven Directions To City Police,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X