Swiggy Orders Analysis: ಸಸ್ಯಹಾರಿಗಳಿಂದ ಬೆಂಗಳೂರಿಗೆ ಹೊಸ ಬಿರುದು..!

ಬೆಂಗಳೂರು, ಆಗಸ್ಟ್‌ 10: ಬೆಂಗಳೂರು ಉದ್ಯೋಗ, ಉದ್ಯಾನವಕ್ಕೆ ಹೇಗೆ ಜನಪ್ರಿಯವಾಗಿದೆಯೋ ಇಲ್ಲಿನ ತಿನಿಸುಗಳಿಗೂ ಅಷ್ಟೇ ಫೇಮಸ್‌. ಅಂತರ್‌ ಜಿಲ್ಲೆ, ಅಂತರ್‌ ರಾಜ್ಯ ಮಾತ್ರವಲ್ಲದೇ ಇಲ್ಲಿ ದೇಶ ವಿದೇಶದ ಆಹಾರಗಳು ಕೂಡ ಸಿಗುತ್ತದೆ. ಸದ್ಯ ಬೆಂಗಳೂರಿನಲ್ಲಿ ಹೋಟೆಲ್‌ ಉದ್ಯಮ ಯಶಸ್ವಿ ಉದ್ಯಮವಾಗಿ ಹೊರಹೊಮ್ಮುತ್ತಿದೆ. ಇದಕ್ಕೆ ಕಾರಣ ಜನಸಂಖ್ಯೆ ಹೆಚ್ಚಳ. ನಗರದಲ್ಲಿ ದಕ್ಷಿಣ ಭಾರತದ ಸಸ್ಯಹಾರಿ ಆಹಾರಗಳು ಹೆಚ್ಚು ಜನಪ್ರಿಯತೆ ಪಡೆಯುತ್ತಿದ್ದು, ಇಲ್ಲಿ ಸಿಗುವ ಅಪ್ಪಟ ದಕ್ಷಿಣ ಭಾರತದ ತಿನಿಸುಗಳ ರುಚಿಗೆ ಮರುಳಾಗದವರಿಲ್ಲ ಎನ್ನುವಂತಾಗಿದೆ. ಹೀಗಾಗಿ ಬೆಂಗಳೂರಿಗೆ ಒಂದು ಹೊಸ ಹೆಸರು ನಾಮಕರಣವಾಗಿದೆ.

ಭಾರತದ ಅತಿದೊಡ್ಡ ಆನ್‌ಲೈನ್ ಆಹಾರ ಆರ್ಡರ್‌ ಹಾಗೂ ವಿತರಣಾ ವೇದಿಕೆಯಾಗಿರುವ ಸ್ವಿಗ್ಗಿಯ ಇತ್ತೀಚಿನ ಆರ್ಡರ್ ವಿಶ್ಲೇಷಣೆಯ ಪ್ರಕಾರ, ಎಲ್ಲಾ ಸಸ್ಯಾಹಾರಿ ಆರ್ಡರ್‌ಗಳಲ್ಲಿ ಮೂರನೇ ಒಂದು ಭಾಗವು ಬೆಂಗಳೂರಿನಿಂದ ಬರುತ್ತಿದೆ ಹೀಗಾಗಿ ಬೆಂಗಳೂರು ಭಾರತದ ('Veggie valley') ಅಂದರೆ ಸಸ್ಯಹಾರಿಗಳು ಹೆಚ್ಚಾಗಿರುವ ಪ್ರದೇಶ ಎನ್ನುವ ಹೊಸ ಬಿರುದನ್ನು ಪಡೆದುಕೊಂಡಿದೆ.

Bengaluru City Ordered The Most Number Of Vegetarian Dishes From Swiggy

ಸ್ವಿಗ್ಗಿ ಗ್ರೀನ್ ಡಾಟ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಸಂಸ್ಥೆ ನಡೆಸಿದ ಸಮೀಕ್ಷೆಯ ಅಂಕಿಅಂಶಗಳನ್ನು ಬಹಿರಂಗಪಡಿಸಲಾಗಿದೆ. ಇದರಿಂದ ದೇಶದಲ್ಲಿನ ಅತ್ಯುನ್ನತ ರೆಸ್ಟೋರೆಂಟ್‌ಗಳು ಬೆಂಗಳೂರು ನಗರದಲ್ಲಿದೆ ಎನ್ನುವುದು ತಿಳಿದು ಬರುತ್ತದೆ. ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್‌ ಮಾಡಲಾದ ಮಸಾಲಾ ದೋಸೆ, ಪನೀರ್ ಬಟರ್ ಮಸಾಲಾ, ಮಾರ್ಗರಿಟಾ ಪಿಜ್ಜಾ ಮತ್ತು ಪಾವ್ ಭಾಜಿ ಸೇರಿದಂತೆ ದೇಶದ ಒಟ್ಟು ಹತ್ತು ಟಾಪ್‌ ಆಹಾರಗಳಲ್ಲಿ ಆರು ಸಸ್ಯಾಹಾರಿದೆ ಎಂದು ವಿಶ್ಲೇಷಣೆಯಲ್ಲಿ ತಿಳಿದು ಬಂದಿದೆ. ಇದರಲ್ಲಿ ಬೆಂಗಳೂರಿನ ಮಸಾಲಾ ದೋಸೆ, ಪನೀರ್ ಬಿರಿಯಾನಿ ಮತ್ತು ಪನೀರ್ ಬಟರ್ ಮಸಾಲಾ ಕೂಡ ಅಗ್ರಸ್ಥಾನದಲ್ಲಿವೆ ಎಂದು ತಿಳಿದು ಬಂದಿದೆ.

ಸ್ವಿಗ್ಗಿಯ ಗೋಲ್ಡನ್ ಅವರ್ ನಲ್ಲಿ 90%ಕ್ಕಿಂತ ಹೆಚ್ಚು ಜನರು ಸಸ್ಯಾಹಾರಿ ಉಪಹಾರಗಳನ್ನು ಆರ್ಡರ್‌ ಮಾಡುತ್ತಿದ್ದಾರೆ. ಅದರಲ್ಲಿ ಮಸಾಲೆ ದೋಸೆ, ಇಡ್ಲಿ-ವಡಾ ಮತ್ತು ಪೊಂಗಲ್ ಸೇರಿದಂತೆ ಇತರ ಉಪಹಾರಗಳು ಮೊದಲ ಸ್ಥಾನಗಳಲ್ಲಿದೆ. ದೋಸೆಗೆ ರಾಷ್ಟ್ರವ್ಯಾಪಿ ಜನಪ್ರಿಯತೆಯಿದ್ದು, ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಸಹ ಜನ ದೋಸೆಯನ್ನೇ ಆರ್ಡರ್‌ ಮಾಡುತ್ತಿದ್ದಾರೆ. ಜೊತೆಗೆ ಪಿಜ್ಜಾ, ಪಾವ್ ಭಾಜಿ ಹಾಗೂ ಸಮೋಸಾ ಕೂಡ ಹೆಚ್ಚಿನ ಆರ್ಡರ್‌ನಲ್ಲಿದೆ ಎಂದು ಸಂಸ್ಥೆ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+