"ಬೆಂಗಳೂರು ಸಿಟಿ ದಿಶಾಂಕ್" – ನಿಮ್ಮ ನಗರ ಪಾಲಿಕೆ, ವಲಯ, ವಾರ್ಡ್, ವಿಧಾನಸಭಾ ಕ್ಷೇತ್ರದ ಸಂಪೂರ್ಣ ವಿವರ!
ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬದಲಾಗಿ, ಇದೀಗ ಗ್ರೇಟರ್ ಬೆಂಗಳೂರು ಆಡಳಿತ ಪ್ರಾರಂಭವಾದ ಮೇಲೆ ಸಾರ್ವಜನಿಕರಲ್ಲಿ ಕೆಲವೊಂದು ಗೊಂದಲಗಳು ಇವೆ. ಇದೀಗ ಈ ಗೊಂದಲಗಳನ್ನು ಕಡಿಮೆ ಮಾಡುವುದಕ್ಕೆ ಗ್ರೇಟರ್ ಬೆಂಗಳೂರು ಆಡಳಿತ ಮುಂದಾಗಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿನ ಪ್ರದೇಶ ಹಾಗೂ ವಾರ್ಡ್‌ಗಳ ವಿವರ ಸೇರಿದಂತೆ ಹಲವು ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
"ಬೆಂಗಳೂರು ಸಿಟಿ ದಿಶಾಂಕ್" - ನಿಮ್ಮ ನಗರ ಪಾಲಿಕೆ, ವಲಯ, ವಾರ್ಡ್, ವಿಧಾನಸಭಾ ಕ್ಷೇತ್ರ ಮತ್ತು ನಗರದ ಎಲ್ಲಾ ಜಿ.ಐ.ಎಸ್ ಮಾಹಿತಿಯನ್ನು ಪಡೆದುಕೊಳ್ಳುವ ವಿನೂತನ ವ್ಯವಸ್ಥೆಯನ್ನು ಗ್ರೇಟರ್ ಬೆಂಗಳೂರು ಆಡಳಿತವು ಮಾಡಿದೆ. ಇದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬದಲಾದ ಮೇಲೆ ಮೂಡಿದ್ದ ಗೊಂದಲಗಳಿಗೆ ತೆರೆ ಬಿದ್ದಂತೆ ಆಗಿದೆ. ಜನ ತಮ್ಮ ಮೊಬೈಲ್ ಅಪ್ಲಿಕೇಷನ್‌ಗಳ ಮೂಲಕ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ 5 ನಗರ ಪಾಲಿಕೆಗಳು ಸೇರಿದಂತೆ "ಬೆಂಗಳೂರು ಸಿಟಿ ದಿಶಾಂಕ್" ಮೊಬೈಲ್ ತಂತ್ರಾಂಶವನ್ನು ಬಿಡುಗಡೆ ಮಾಡಲಾಗಿದೆ.
ಇದು ಜಿ.ಐ.ಎಸ್ ಮೊಬೈಲ್ ಅಪ್ಲಿಕೇಶನ್ ಆಗಿದ್ದು, ಜಿಬಿಎ, 05 ನಗರ ಪಾಲಿಕೆಗಳು, ವಲಯ, ವಿಧಾನಸಭಾ ಕ್ಷೇತ್ರ ಹಾಗೂ ವಾರ್ಡ್(ಹಳೆಯ 198 ವಾರ್ಡ್ ಗಳು)ಗಳ ಅಧಿಕೃತ ಗಡಿಗಳನ್ನು ವೀಕ್ಷಿಸುವುದಕ್ಕೆ ಸಹಾಯವನ್ನು ಮಾಡಲಿದೆ ಎಂದು ಗ್ರೇಟರ್ ಬೆಂಗಳೂರು ಆಡಳಿತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ವಿವರಗಳುಳ್ಳ ಜಿ.ಐ.ಎಸ್ ಮಾಹಿತಿಯನ್ನು ಸೇರಿಸಲಾಗುವುದು ಎಂದೂ ಗ್ರೇಟರ್ ಬೆಂಗಳೂರು ಆಡಳಿತದ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.
Google Play Store ಲಿಂಕ್:
https://play.google.com/store/apps/details?id=com.dishaank
Apple App Store ಲಿಂಕ್:
https://apps.apple.com/in/app/bengaluru-city-dishaank/id6752650304
ಈ ವಿಷಯವನ್ನು ಗ್ರೇಟರ್ ಬೆಂಗಳೂರು ಆಡಳಿತದ ಮಾಹಿತಿ ತಂತ್ರಜ್ಞಾನ(IT) ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಅವರು ತಿಳಿಸಿದ್ದಾರೆ.
400 ರಿಂದ 450 ವಾರ್ಡ್ ರಚನೆ: ಇನ್ನು ಬೆಂಗಳೂರಿನಲ್ಲಿ ಗ್ರೇಟರ್ ಆಡಳಿತ ಆಗುವುದಕ್ಕೂ ಮೊದಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟು 198 ವಾರ್ಡ್‌ಗಳು ಹಾಗೂ 8 ವಲಯಗಳು ಇದ್ದವು. ಅಲ್ಲದೇ ಬೆಂಗಳೂರಿನಲ್ಲಿ ಇದೀಗ ಗ್ರೇಟರ್ ಬೆಂಗಳೂರು ಆಡಳಿತದ ಭಾಗವಾಗಿ ಐದು ಹೊಸ ನಗರ ಪಾಲಿಕೆಗಳನ್ನು ರಚನೆ ಮಾಡಲಾಗಿದ್ದು. ಇದೀಗ ಬೆಂಗಳೂರಿನಲ್ಲಿ 400 ರಿಂದ 450 ವಾರ್ಡ್‌ಗಳ ರಚನೆ ಆಗಲಿದೆ ಎಂದು ರಾಜ್ಯ ಸರ್ಕಾರವು ಹೇಳಿದೆ. ಈ ವಾರ್ಡ್‌ಗಳಿಗೆ ಹೊಸ ಪ್ರದೇಶಗಳು ಸೇರ್ಪಡೆ ಆಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.












Click it and Unblock the Notifications