ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಪ್ಪನ ಅಗ್ರಹಾರ ಜೈಲು ಭಾರತದಲ್ಲೇ ಅತ್ಯುತ್ತಮ ಕಾರಾಗೃಹ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್‌ 14: ಇತ್ತೀಚೆಗೆ 6ನೇ ಅಖಿಲ ಭಾರತ ಕಾರಾಗೃಹ ಕರ್ತವ್ಯ ಸಭೆಯಲ್ಲಿ ನಡೆದ ಕಾರಾಗೃಹ ನೈರ್ಮಲ್ಯ ಸ್ಪರ್ಧೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ದೇಶದ ಅತ್ಯುತ್ತಮ ಕಾರಾಗೃಹ ಎಂಬ ಪ್ರಶಸ್ತಿಗೆ ಭಾಜನವಾಗಿದೆ.

ಇತ್ತೀಚೆಗೆ ಅಹಮದಾಬಾದ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸುಮಾರು 1,319 ಜೈಲುಗಳು ಭಾಗವಹಿಸಿದ್ದವು. ಇಲ್ಲಿ ಎರಡನೇ ಬಹುಮಾನವನ್ನು ಆಂಧ್ರಪ್ರದೇಶದ ಕೇಂದ್ರ ಕಾರಾಗೃಹ ಪಡೆದುಕೊಂಡರೆ. ತೃತೀಯ ಬಹುಮಾನವನ್ನು ತಮಿಳುನಾಡಿನ ಕೇಂದ್ರ ಕಾರಾಗೃಹ ಪಡೆದುಕೊಂಡಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿತ ಐಪಿಎಸ್ ಐಎಎಸ್ ಅಧಿಕಾರಿ ಹೇಗಿದ್ದಾರೆ? ಹೊಸ ನಿಯಮವೇನು?ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿತ ಐಪಿಎಸ್ ಐಎಎಸ್ ಅಧಿಕಾರಿ ಹೇಗಿದ್ದಾರೆ? ಹೊಸ ನಿಯಮವೇನು?

ಸ್ಪರ್ಧೆಯು ಆಹಾರದ ಗುಣಮಟ್ಟ, ಜೀವನೋಪಾಯ ಮತ್ತು ಖೈದಿಗಳ ಆರೋಗ್ಯ, ಜೈಲಿನ ಆವರಣದೊಳಗೆ ಶುಚಿತ್ವ, ಶೌಚಾಲಯಗಳು ಮತ್ತು ಸ್ನಾನಗೃಹಗಳ ನಿರ್ವಹಣೆ, ಸುರಕ್ಷತೆ, ಭದ್ರತೆ ಮತ್ತು ಕರ್ತವ್ಯ ನಿಯೋಜನೆ ಸೇರಿದಂತೆ ಹಲವು ನಿಯತಾಂಕಗಳನ್ನು ಹೊಂದಿತ್ತು. ಇವೆಲ್ಲವನ್ನೂ ಸ್ಪರ್ಧೆಯ ಭಾಗವಾಗಿ ಸಮೀಕ್ಷೆ ಮಾಡಲಾಗಿದೆ.

ಹೊಸದಿಲ್ಲಿಯ ಪೊಲೀಸ್‌ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಸಹಾಯಕ ನಿರ್ದೇಶಕರ (ಬಿಪಿಆರ್‌ ಆ್ಯಂಡ್‌ ಡಿ) ನೇತೃತ್ವದ ಐವರು ಅಧಿಕಾರಿಗಳ ತಂಡ ಆಗಸ್ಟ್‌ 26ರಂದು ಪರಪ್ಪನ ಅಗ್ರಹಾರಕ್ಕೆ ಜೈಲು ಪರಿಶೀಲನೆಗೆ ಬಂದಿತ್ತು. ಅಧಿಕಾರಿಗಳು ಕೈದಿಗಳೊಂದಿಗೆ ಸಂವಹನ ನಡೆಸಿದರು. ಕೇಂದ್ರ ಕಾರಾಗೃಹದ ಅಧಿಕಾರಿಗಳು ನಿರ್ವಹಿಸಿರುವ ದಾಖಲೆಗಳನ್ನೂ ತಂಡ ಪರಿಶೀಲಿಸಿತು. ಅವರು ಸಂವಾದ ನಡೆಸಿ ಮತ್ತು ಕೈದಿಗಳ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿದರು ಹಾಗೂ ಚಿತ್ರಗಳನ್ನು ಸಹ ತೆಗೆದುಕೊಂಡರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ 38 ಶ್ರೀಲಂಕಾ ಪ್ರಜೆಗಳ ಅಕ್ರಮ ಬಂಧನ..!ಪರಪ್ಪನ ಅಗ್ರಹಾರ ಜೈಲಿನಲ್ಲಿ 38 ಶ್ರೀಲಂಕಾ ಪ್ರಜೆಗಳ ಅಕ್ರಮ ಬಂಧನ..!

ಆಲ್ ಇಂಡಿಯಾ ಪ್ರಿಸನ್ ಡ್ಯೂಟಿ ಮೀಟ್ 2022

ಆಲ್ ಇಂಡಿಯಾ ಪ್ರಿಸನ್ ಡ್ಯೂಟಿ ಮೀಟ್ 2022

ಜೈಲಿನ ಉತ್ತಮ ಆಡಳಿತಕ್ಕಾಗಿ ಜೈಲು ಅಧಿಕಾರಿಗಳು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲಾಯಿತು. ಅವರು ಜೈಲು ಕೈಗಾರಿಕೆಗಳಿಗೆ ಭೇಟಿ ಮಾಡಿದರು. ಬಳಿಕ ಜೈಲು ಅಧಿಕಾರಿಗಳ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಿದರು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಸೆಪ್ಟೆಂಬರ್ 4 ರಿಂದ 6 ರವರೆಗೆ ಅಹಮದಾಬಾದ್‌ನಲ್ಲಿ ನಡೆದ 6 ನೇ ಆಲ್ ಇಂಡಿಯಾ ಪ್ರಿಸನ್ ಡ್ಯೂಟಿ ಮೀಟ್ 2022 ನಲ್ಲಿ ಕರ್ನಾಟಕದ ತಂಡ ಸೇರಿದಂತೆ ದೇಶಾದ್ಯಂತದ ಜೈಲುಗಳ ಅಧಿಕಾರಿಗಳು ಭಾಗವಹಿಸಿದ್ದರು.

ಕಾರಾಗೃಹಗಳ ನೈರ್ಮಲ್ಯ, ಪಾಲನೆ ಕುರಿತು ಸ್ಪರ್ಧೆ

ಕಾರಾಗೃಹಗಳ ನೈರ್ಮಲ್ಯ, ಪಾಲನೆ ಕುರಿತು ಸ್ಪರ್ಧೆ

ಕರ್ನಾಟಕ ರಾಜ್ಯ ಕಾರಾಗೃಹಗಳ ತಂಡವು ಕರ್ತವ್ಯ ಕೂಟದಲ್ಲಿ ವಿವಿಧ ವೃತ್ತಿಪರ ಸ್ಪರ್ಧೆಗಳಲ್ಲಿ ನಾಲ್ಕು ಚಿನ್ನದ ಪದಕಗಳು, ಮೂರು ಬೆಳ್ಳಿ ಪದಕಗಳು ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಭೆಯ ಅಂಗವಾಗಿ ದೇಶದ ಕಾರಾಗೃಹಗಳ ನೈರ್ಮಲ್ಯ ಮತ್ತು ಪಾಲನೆ ಕುರಿತು ಸ್ಪರ್ಧೆಯೂ ನಡೆಯಿತು. ಕರ್ತವ್ಯ ಸಭೆಯ ಆಯೋಜಕರು ನಾಮನಿರ್ದೇಶನ ಮಾಡಿದ ಜೈಲು ಅಧಿಕಾರಿಗಳ ವಿಶೇಷ ಸಮಿತಿಯು ದೇಶದ ವಿವಿಧ ರಾಜ್ಯಗಳ ವಿವಿಧ ಜೈಲುಗಳಿಗೆ ಭೇಟಿ ನೀಡಿತು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಎಫ್‌ಎಸ್‌ಎಸ್‌ಎಐನಿಂದ 4 ರೇಟಿಂಗ್‌

ಎಫ್‌ಎಸ್‌ಎಸ್‌ಎಐನಿಂದ 4 ರೇಟಿಂಗ್‌

ಸ್ಪರ್ಧೆಯಲ್ಲಿ ಪರಪ್ಪನ ಅಗ್ರಹಾರದ ಬೆಂಗಳೂರು ಸೆಂಟ್ರಲ್ ಜೈಲು ದೇಶದಲ್ಲೇ ಮೊದಲ ಸ್ಥಾನ ಪಡೆದ ಜೈಲು ಎಂಬುದು ಹೆಮ್ಮೆಯ ವಿಷಯವಾಗಿದೆ. ಇದು ಜೂನ್ 2021 ರಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ (ಎಫ್‌ಎಸ್‌ಎಸ್‌ಎಐ) '4 ಸ್ಟಾರ್' ರೇಟಿಂಗ್ ಅನ್ನು ನೈರ್ಮಲ್ಯ ಮತ್ತು ಆವರಣ ನಿರ್ವಹಣೆಗಾಗಿ ನೀಡಲಾಗಿದೆ ಎಂದು ಜೈಲು ಅಧಿಕಾರಿಗಳು ಸೇರಿಸಿದರು.

1997 ರಲ್ಲಿ ಸ್ಥಾಪಿತವಾದ ಜೈಲು

1997 ರಲ್ಲಿ ಸ್ಥಾಪಿತವಾದ ಜೈಲು

ಬೆಂಗಳೂರು ಕೇಂದ್ರ ಕಾರಾಗೃಹವನ್ನು ಹೊರತುಪಡಿಸಿ, ಕರ್ನಾಟಕದ ಎಲ್ಲಾ 8 ಕೇಂದ್ರ ಕಾರಾಗೃಹಗಳು ಅಕ್ಟೋಬರ್ 2021 ಮತ್ತು ಮಾರ್ಚ್ 2022 ರ ನಡುವೆ ಎಫ್‌ಎಸ್‌ಎಸ್‌ಎಐನಿಂದ '4 ಸ್ಟಾರ್' ರೇಟಿಂಗ್‌ನೊಂದಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಕಾರಾಗೃಹ, ಬೆಂಗಳೂರು ಇದು ಭಾರತದ ಕರ್ನಾಟಕ ರಾಜ್ಯದ ಅತಿ ದೊಡ್ಡ ಕಾರಾಗೃಹವಾಗಿದೆ. 1997 ರಲ್ಲಿ ಸ್ಥಾಪಿತವಾದ ಇದು 2000 ರಲ್ಲಿ ಬೆಂಗಳೂರಿನ ಕೇಂದ್ರ ಕಾರಾಗೃಹವಾಗಿ ಮಾರ್ಪಟ್ಟಿತು.

English summary
Bengaluru Parappana Agrahara Central Jail was awarded as the best Jail in the country in the Jail Sanitation Competition held recently at the 6th All India Jail Duty Meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X