ಬೆಂಗಳೂರು: ಇನ್ನು ಬೆರಳ ತುದಿಯಲ್ಲೇ ಸಿಗಲಿದೆ ಅಪರಾಧ ದಾಖಲೆ
ಬೆಂಗಳೂರು, ಸೆಪ್ಟೆಂಬರ್ 14: ಬೆಂಗಳೂರು ಪೊಲೀಸರು ಇನ್ನು ಮುಂದೆ ರಸ್ತೆಗಳಲ್ಲಿ ಗಸ್ತು ತಿರುಗುವಾಗ ಯಾರಾದಾದ್ದರೂ ಕ್ರಿಮಿನಲ್ ದಾಖಲೆಯನ್ನು ಪರಿಶೀಲನೆ ಮಾಡಬಹುದಾಗಿದೆ
ಬೆಂಗಳೂರು ಪೊಲೀಸರಿಗೆ ಇನ್ನು ಮುಂದೆ ಬೆರಳ ತುದಿಯಲ್ಲೇ ವ್ಯಕ್ತಿಗಳ ಸಂಪೂರ್ಣ ಅಪರಾಧ ದಾಖಲೆ ಪೊಲೀಸರಿಗೆ ಸಿಗಲಿದೆ. ಅಪರಾಧ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಮತ್ತು ಸಿಸ್ಟಮ್ಸ್ (ಸಿಸಿಟಿಎನ್‌ಎಸ್) ಅಡಿಯಲ್ಲಿ ಗೃಹ ಸಚಿವಾಲಯದಿಂದ ಪೊಲೀಸರು ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗಳನ್ನು ಪಡೆದುಕೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಪೂರ್ವ) ಎ ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.
ಮೊಬೈಲ್ ಸಿಸಿಟಿಎನ್‌ಎಸ್ ಅಪ್ಲಿಕೇಶನ್‌ನಲ್ಲಿ ಅಳವಡಿಸಲಾದ ಫಿಂಗರ್‌ಪ್ರಿಂಟ್ ಡೇಟಾಬೇಸ್‌ನೊಂದಿಗೆ ಪರಿಶೀಲನೆ ಮಾಡಲು ಪೊಲೀಸರು ಸ್ಕ್ಯಾನರ್‌ಗಳನ್ನು ಬಳಸಬಹುದಾಗಿದೆ. ಈ ಆ್ಯಪ್ ಸ್ಟೇಟ್ ಕ್ರೈಮ್ ರೆಕಾರ್ಡ್ ಬ್ಯೂರೋ (ಎಸ್‌ಸಿಆರ್‌ಬಿ) ಯಿಂದ ಅಭಿವೃದ್ಧಿಪಡಿಸಿದೆ. ಇದು ಸಂಬಂಧಪಟ್ಟ ವ್ಯಕ್ತಿಯ ಕ್ರಿಮಿನಲ್ ದಾಖಲೆಯನ್ನು ಯಾವುದಾದರೂ ಇದ್ದರೆ ತೋರಿಸುತ್ತದೆ. ಈ ಅಪ್ಲಿಕೇಶನ್ ರಾಜ್ಯವಾರು ಫಿಂಗರ್‌ಪ್ರಿಂಟ್ ಡೇಟಾಬೇಸ್ ಅನ್ನು ಏಕೀಕರಿಸುತ್ತದೆ. ಇದಕ್ಕಾಗಿ ಪೊಲೀಸ್ ಸಿಬ್ಬಂದಿ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ ಎಂದು ರಾವ್ ಹೇಳಿದರು.
ಬೆಂಗಳೂರಿನ 111 ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಿಗೆ ತಲಾ ಐದು ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗಳನ್ನು ನೀಡಲಾಗಿದ್ದು, ಸಿಇಎನ್ ಕ್ರೈಂ ಪೊಲೀಸ್ ಠಾಣೆಗಳು ತಲಾ ಒಂದನ್ನು ನೀಡಲಾಗಿದೆ. ಕೇಂದ್ರ ಅಪರಾಧ ವಿಭಾಗಕ್ಕೆ (ಸಿಸಿಬಿ) 15 ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗಳನ್ನು ನೀಡಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ರಮಣ್ ಗುಪ್ತಾ ತಿಳಿಸಿದ್ದಾರೆ.
ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗಳು ಪಾಕೆಟ್ ಸ್ನೇಹಿಯಾಗಿದೆ. ಅವುಗಳ ಬಳಕೆಯು ಪೊಲೀಸರ ದಕ್ಷತೆಯನ್ನು ಹೆಚ್ಚಿಸುತ್ತದೆ. ಸ್ಕ್ಯಾನರ್‌ಗಳು ಮತ್ತು ಸಿಸಿಟಿಎನ್‌ಎಸ್ ಅಪ್ಲಿಕೇಶನ್ ಅನ್ನು ಮೂರು ತಿಂಗಳ ಕಾಲ ಪ್ರಾಯೋಗಿಕ ಆಧಾರದ ಮೇಲೆ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನಗಳನ್ನು ಖರೀದಿಸಲಾಗುವುದು ಎಂದು ಗುಪ್ತಾ ಹೇಳಿದರು.

ದೇಹದ ಗುರುತುಗಳ ಮೂಲಕವು ಮಾಹಿತಿ ಮ್ಯಾಚಿಂಗ್
ಕಾಣೆಯಾದ ವ್ಯಕ್ತಿಗಳು ಮತ್ತು ಅಸ್ವಾಭಾವಿಕ ಸಾವುಗಳ ಮಾಹಿತಿಯೂ ಸಹ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಸಾವಿನ ಸಂದರ್ಭದಲ್ಲಿ ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಇದು ಸಹಾಯ ಮಾಡುತ್ತದೆ. ಪೊಲೀಸರು ಛಾಯಾಚಿತ್ರ ಅಥವಾ ದೇಹದ ಗುರುತುಗಳು, ಎತ್ತರ, ಬಟ್ಟೆ ಮತ್ತು ಇತರ ವ್ಯತ್ಯಾಸಗಳನ್ನು ಹೊಂದಿರುವ ವ್ಯಕ್ತಿಯನ್ನು ಪರಿಶೀಲನೆ ಮಾಡಬಹುದು ಎಂದು ಅವರು ಹೇಳಿದರು.

ವಾಹನ ಮಾಲೀಕತ್ವದ ಮಾಹಿತಿಯೂ ಲಭ್ಯ
ಅಪರಾಧ ಕೃತ್ಯಗಳಲ್ಲಿ ಬಳಸಲಾದ ವಾಹನಗಳ ಮಾಹಿತಿವನ್ನು ಸಹ ಅಪ್ಲಿಕೇಶನ್ ಒಳಗೊಂಡಿರುತ್ತದೆ. ಗಸ್ತಿನಲ್ಲಿರುವ ಪೊಲೀಸರು ವಾಹನವು ಅಪರಾಧದಲ್ಲಿ ತೊಡಗಿದೆಯೇ ಎಂದು ಕಂಡುಹಿಡಿಯಲು ನೋಂದಣಿ ಸಂಖ್ಯೆಯನ್ನು ಪರಿಶೀಲಿಸಬಹುದು. ಆ್ಯಪ್ ಈಗಾಗಲೇ ಮಾರಣಾಂತಿಕ ಮತ್ತು ಮಾರಣಾಂತಿಕವಲ್ಲದ ಅಪಘಾತಗಳಲ್ಲಿ ಭಾಗಿಯಾಗಿರುವ ವಾಹನಗಳ ವಿವರಗಳನ್ನು ಹೊಂದಿದ್ದು, ವಾಹನ ಮಾಲೀಕತ್ವದ ಡೇಟಾವನ್ನು ಸಹ ಸೇರಿಸಲಾಗುತ್ತಿದೆ. ಅಪ್ಲಿಕೇಶನ್‌ನಲ್ಲಿ ಹುಡುಕಾಟವು ಘೋರ ಅಪರಾಧಗಳು ಅಥವಾ ಆಸ್ತಿ-ಸಂಬಂಧಿತ ಅಪರಾಧಗಳ ಇತಿಹಾಸವನ್ನು ತೋರಿಸಿದರೆ, ಪೊಲೀಸರು ತಕ್ಷಣ ಅಂತಹ ಜನರನ್ನು ವಿಚಾರಣೆಗಾಗಿ ಬಂಧಿಸಬಹುದು ಎಂದು ಅವರು ಹೇಳಿದರು.

ಶಂಕಿತರ ಚಟುವಟಿಕೆಗಳ ಬಗ್ಗೆಯೂ ಮಾಹಿತಿ
ಶಂಕಿತರನ್ನು ಅವರು ಆ ಪ್ರದೇಶದಲ್ಲಿ ಏಕೆ ಇದ್ದಾರೆ, ಅವರ ಪ್ರಸ್ತುತ ಚಟುವಟಿಕೆಗಳು ಮತ್ತು ಇತರ ವಿವರಗಳ ಬಗ್ಗೆ ಅವರನ್ನು ಪ್ರಶ್ನಿಸಲಾಗುತ್ತದೆ. ಕುಟುಂಬ, ನೆರೆಹೊರೆಯವರು ಅಥವಾ ಸ್ನೇಹಿತರ ನಡುವಿನ ಜಗಳಗಳಂತಹ ಅಪರಾಧಗಳಲ್ಲಿ ವ್ಯಕ್ತಿ ಭಾಗಿಯಾಗಿದ್ದರೆ ನಾವು ಅವರನ್ನು ಪ್ರಶ್ನಿಸುವುದಿಲ್ಲ. ನಮ್ಮ ಆದ್ಯತೆಯು ಆಸ್ತಿ ಸಂಬಂಧಿತ ಅಪರಾಧಗಳು ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ಬರುತ್ತದೆ. ಸ್ಕ್ಯಾನರ್ ಯಾವುದೇ ವ್ಯಕ್ತಿಯ ಫಿಂಗರ್ ಪ್ರಿಂಟ್ ಮಾಹಿತಿವನ್ನು ಸಂಗ್ರಹಿಸುವುದಿಲ್ಲ. ಅದು ಕೇವಲ ತಿಳಿಸುತ್ತದೆ, ನಂತರ ಅದನ್ನು ಅಳಿಸುತ್ತದೆ. ಜನರು ತಮ್ಮ ಬೆರಳಚ್ಚುಗಳನ್ನು ನೀಡುವಾಗ ಭಯಪಡುವ ಅಥವಾ ಹಿಂಜರಿಯುವ ಅಗತ್ಯವಿಲ್ಲ ಎಂದು ಗುಪ್ತಾ ಹೇಳಿದರು.

ಯಾರ ಬಂಧನವಾದರೂ ಗೊತ್ತಾಗುತ್ತದೆ
ಸಿಸಿಟಿಎನ್‌ಎಸ್ ಮೊಬೈಲ್ ಅಪ್ಲಿಕೇಶನ್ ಬಂಧನ ದತ್ತಾಂಶವನ್ನು ಸಹ ಒದಗಿಸುತ್ತದೆ. ನಿರ್ದಿಷ್ಟ ಪೊಲೀಸ್ ಠಾಣೆಯಿಂದ ಮಾಡಿದ ಯಾವುದೇ ಬಂಧನವನ್ನು ಅಪ್ಲಿಕೇಶನ್‌ನಲ್ಲಿ ತಿಳಿಸಲಾಗುತ್ತದೆ. ಇದರಿಂದ ಇತರ ಠಾಣೆಗಳ ಪೊಲೀಸ್ ಅಧಿಕಾರಿಗಳು ತ್ವರಿತ ಅಧಿಸೂಚನೆಯನ್ನು ಪಡೆಯುತ್ತಾರೆ. ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಲ್ಲಿ ಆ ವ್ಯಕ್ತಿಯೂ ಬೇಕಾಗಿದ್ದರೆ, ಪೊಲೀಸರು ಇಲ್ಲಿ ಸಮನ್ವಯ ಸಾಧಿಸಬಹುದು ಮತ್ತು ಹೆಚ್ಚಿನ ತನಿಖೆಯನ್ನು ಕೈಗೊಳ್ಳಬಹುದು ಎಂದು ಗುಪ್ತಾ ಹೇಳಿದ್ದಾರೆ.












Click it and Unblock the Notifications