ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೋಯ್ಡಾ ಅವಳಿ ಕಟ್ಟಡ ಮಾದರಿಯಲ್ಲಿ ಬೆಂಗಳೂರು ಕಟ್ಟಡಗಳ ತೆರವು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್‌ 13: ಬೆಂಗಳೂರಿನಲ್ಲಿ ನಡೆಯುತ್ತಿರುವ ಅತಿಕ್ರಮಣಗಳ ತೆರವು ಕುರಿತು ಚರ್ಚೆ ವಾಗ್ವಾದಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಮಂಗಳವಾರ ಮುಂದಿನ ಮಳೆಗಾಲದ ವೇಳೆಗೆ ಎಲ್ಲಾ ಅತಿಕ್ರಮಣಗಳನ್ನು ನೋಯ್ಡಾ ಅವಳಿ ಗೋಪುರ ಶೈಲಿಯಲ್ಲಿ ನೆಲಸಮ ಮಾಡಿ ತೆರವುಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಕಳೆದ ತಿಂಗಳು ನೋಯ್ಡಾದಲ್ಲಿ ದೇಶದ ಗಮನ ಸೆಳೆದಿದ್ದ ಸೂಪರ್‌ಟೆಕ್ ಅವಳಿ ಗೋಪುರಗಳ ನೆಲಸಮವನ್ನು ಉಲ್ಲೇಖಿಸಿದ ಸಚಿವರು, ಮುಂದಿನ ಮಳೆಗಾಲದ ವೇಳೆಗೆ ನಾವು ಬೆಂಗಳೂರಿನಲ್ಲಿ ಬಾಕಿ ಉಳಿದಿರುವ ಎಲ್ಲಾ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗುವುದು. ನೋಯ್ಡಾದಂತೆ ಎಲ್ಲಾ ಅಪಾರ್ಟ್‌ಮೆಂಟ್‌ಗಳನ್ನು ನೆಲಸಮ ಮಾಡಲಾಗುವುದು. ಅಧಿಕಾರಿಗಳು ಮತ್ತು ಬಿಲ್ಡರ್‌ಗಳ ವಿರುದ್ಧ ಕ್ರಮ ಮತ್ತು ಪ್ರವಾಹದಂತಹ ಪರಿಸ್ಥಿತಿಯ ಕುರಿತು ಈಗಾಗಲೇ ವಿಧಾನಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಅವರು ತಿಳಿಸಿದರು.

ಬಿಬಿಎಂಪಿ: ಮಹದೇವಪುರ ವಲಯದಲ್ಲಿ 15 ಒತ್ತುವರಿ ತೆರವುಬಿಬಿಎಂಪಿ: ಮಹದೇವಪುರ ವಲಯದಲ್ಲಿ 15 ಒತ್ತುವರಿ ತೆರವು

ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಬುಲ್ಡೋಜರ್‌ ಕಾರ್ಯಾಚರಣೆ

ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಬುಲ್ಡೋಜರ್‌ ಕಾರ್ಯಾಚರಣೆ

ರಾಜ ಕಾಲುವೆಯಲ್ಲಿ ಮುಕ್ತವಾಗಿ ನೀರು ಹರಿದು ಹೋಗಲು ಸಮಸ್ಯೆ ಉಂಟು ಮಾಡಿ ಮನೆ ಕಟ್ಟಿಕೊಂಡಿರುವವರಿಗೆ ಒತ್ತುವರಿ ತೆರವು ನೋಟಿಸ್‌ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ತಿಳಿಸಿದ್ದರು. ಈ ವರ್ಷದ ಆರಂಭದಲ್ಲಿ ಕೋಮು ಘರ್ಷಣೆಯ ಸಂದರ್ಭದಲ್ಲಿ ಪಕ್ಷಪಾತದ ಬುಲ್ಡೋಜರ್ ಕಾರ್ಯಚರಣೆಗಾಗಿ ಬಿಜೆಪಿಯು ಈ ಹಿಂದೆ ಆಡಳಿತ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ತೀವ್ರ ಟೀಕೆಯನ್ನು ಎದುರಿಸಿತ್ತು.

ದಿನನಿತ್ಯ ಪ್ರಯಾಣಿಕರಿಗೆ ಟ್ರಾಫಿಕ್‌ ಕಿರಿಕಿರಿ

ದಿನನಿತ್ಯ ಪ್ರಯಾಣಿಕರಿಗೆ ಟ್ರಾಫಿಕ್‌ ಕಿರಿಕಿರಿ

ಕಳೆದ ಕೆಲವು ವಾರಗಳಿಂದ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಂಗಳೂರು ಜಲಾವೃತದಿಂದ ತತ್ತರಿಸಿದೆ. ಈ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸ್ಥಳೀಯರು ಪ್ರವಾಹದಂತಹ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ದಿನನಿತ್ಯ ಪ್ರಯಾಣಿಕರು ಹಲವಾರು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುತ್ತಾರೆ ಎಂಬ ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಎದುರಿಸುತ್ತಿವೆ. ಬೆಂಗಳೂರಿನ ವೈದ್ಯರೊಬ್ಬರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು ತಮ್ಮ ಕಾರನ್ನು ಬಿಟ್ಟು ಮೂರು ಕಿಲೋಮೀಟರ್ ಓಡಿ ಶಸ್ತ್ರ ಚಿಕಿತ್ಸೆ ಮಾಡಿದ ವರದಿಯು ಪರಿಸ್ಥಿತಿಯ ಗಂಭೀರತೆಗೆ ಹಿಡಿದ ಕನ್ನಡಿಯಾಗಿತ್ತು.

ಬೆಂಗಳೂರಿನಲ್ಲಿ ಪ್ರವಾಹಕ್ಕೆ ರಾಜಕಾಲುವೆ ಒತ್ತುವರಿ ತೆರವು ಮಾಡದಿರುವುದೇ ಕಾರಣ- ಹೈಕೋರ್ಟ್ ತರಾಟೆಬೆಂಗಳೂರಿನಲ್ಲಿ ಪ್ರವಾಹಕ್ಕೆ ರಾಜಕಾಲುವೆ ಒತ್ತುವರಿ ತೆರವು ಮಾಡದಿರುವುದೇ ಕಾರಣ- ಹೈಕೋರ್ಟ್ ತರಾಟೆ

ಆಡಳಿತಾರೂಢ ಬಿಜೆಪಿಗೆ ತರಾಟೆ

ಆಡಳಿತಾರೂಢ ಬಿಜೆಪಿಗೆ ತರಾಟೆ

ವಿರೋಧ ಪಕ್ಷ ಕಾಂಗ್ರೆಸ್ ಬೆಂಗಳೂರಿನಲ್ಲಿ ಅಕ್ರಮ ನಿರ್ಮಾಣಗಳು ಮತ್ತು ಜಾಗದ ದುರುಪಯೋಗಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಎಂದು ಸರ್ಕಾರವನ್ನು ದೂಷಿಸಿದರೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೂಲಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

ಕೆರೆಗಳ ನಿರ್ವಹಣೆಗೆ ಎಂದಿಗೂ ಯೋಚಿಸಲಿಲ್ಲ

ಕೆರೆಗಳ ನಿರ್ವಹಣೆಗೆ ಎಂದಿಗೂ ಯೋಚಿಸಲಿಲ್ಲ

ಆದರೆ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಸಂಪೂರ್ಣ ಯೋಜಿತವಲ್ಲದ ಆಡಳಿತದಿಂದ ಇದು ಸಂಭವಿಸಿದೆ. ಇದು ಕಾಂಗ್ರೆಸ್ ಸರ್ಕಾರದ ಕೆಟ್ಟ ಆಡಳಿತದ ಪರಿಣಾಮವಾಗಿದೆ. ಅವರು ಕೆರೆಗಳ ನಿರ್ವಹಣೆಗೆ ಎಂದಿಗೂ ಯೋಚಿಸಲಿಲ್ಲ. ಕೆರೆ ಬದಿಗಳಲ್ಲಿ ಬಲ, ಎಡ ಮತ್ತು ಉತ್ತರದಲ್ಲಿ ನಿರ್ಮಾಣಕ್ಕೆ ಅನುಮತಿ ನೀಡಿದರು. ಮತ್ತು ವಲಯವನ್ನು ಬಫರ್ ಮಾಡಿದರು ಎಂದು ಹೇಳಿದ್ದರು. ಏತನ್ಮಧ್ಯೆ, ರಾಜಕಾಲುವೆ ಅಭಿವೃದ್ಧಿಯಲ್ಲಿನ ಅವ್ಯವಹಾರದ ಬಗ್ಗೆ ಆಮ್ ಆದ್ಮಿ ಪಕ್ಷವೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಜಲಾವೃತದಿಂದ ಹೆಚ್ಚು ಹಾನಿಗೊಳಗಾದವರಿಗೆ ಪಕ್ಷವು ಉತ್ತರವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

English summary
Karnataka Revenue Minister R Ashok on Tuesday said that all apartments built illegally on Rajakaluve in Bengaluru city will be demolished like Noida twin buildings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X