Bengaluru Viral Video: ಕ್ಯಾಬ್ ಚಾಲಕ ಮಾಡಿದ ಕೆಲಸಕ್ಕೆ ನಾರ್ಥಿ ಯುವತಿ ಫಿದಾ...! ನೆಟ್ಟಿಗರ ಪ್ರತಿಕ್ರಿಯೆ
Bengaluru Viral Video: ಬೆಂಗಳೂರು ಏರ್‌ಪೋರ್ಟ್ ಕ್ಯಾಬ್ ಚಾಲಕ ಮಾಡಿದ ಕೆಲಸಕ್ಕೆ ನಾರ್ಥ್ ಯುವತಿ ಮಾತ್ರವಲ್ಲದೇ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಕ್ಯಾಬ್ ಚಾಲಕರು, ಆಟೋ ಚಾಲಕರು ಮತ್ತು ಪ್ರಯಾಣಿಕರ ಮಧ್ಯ ಆಗಾಗ ಗಲಾಟೆಗಳು ನಡೆಯುತ್ತಲೇ ಇರುತ್ತವೆ. ಕನ್ನಡ ಭಾಷೆ, ಚಾಲಕರ ವರ್ತನೆ ಇನ್ನಿತರ ಕಾರಣಗಳಿಗಾಗಿ ಚಾಲಕರ ಬಗ್ಗೆ ನಕಾರಾತ್ಮಕ ಸುದ್ದಿಗಳನ್ನು ಕೇಳಿದ್ದೇವೆ. ಇಂತಹ ಬೆಳವಣಿಗೆ ಮಧ್ಯೆ ಈ ಕ್ಯಾಬ್ ಚಾಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ.
ಕೆಲಸದ ಧಾವಂತ ಬದುಕಿನಲ್ಲಿ ಸರಿಯಾಗಿ ತಿನ್ನಲು ಸಮಯ ಇರುವುದಿಲ್ಲ. ಅದರ ಮೇಲೆ ಕೆಲಸ ಒತ್ತಡ ಇದ್ದರಂತೂ ಮುಗಿಯಿತು. ಯಾವುದು ಬೇಡ ಮೊದಲು ನೆಮ್ಮದಿ ಸಿಕ್ಕರೆ ಸಾಕೆನ್ನುವವರೇ ಹೆಚ್ಚು. ಇದೇ ರೀತಿಯ ಮನಸ್ಥಿತಿಯಲ್ಲಿ ಉತ್ತರ ಭಾರತ ಮೂಲದ (ನಾರ್ಥಿ) ಯುವತಿಯೊಬ್ಬರು ಏರ್‌ಪೋರ್ಟ್‌ಗೆ ತೆರಳು ಕ್ಯಾಬ್ ಹತ್ತಿದ್ದಾರೆ.

ಕಾರಿನಲ್ಲಿ ಕೂತ ಯುವತಿ ಮೊಬೈಲ್‌ನಲ್ಲಿ ತನ್ನ ಆಪ್ತರೊಂದಿಗೆ ಮಾತನಾಡಲು ಆರಂಭಿಸಿದ್ದಾರೆ. ಕೆಲಸದ ಒತ್ತಡ, ಆವತ್ತಿನ ಅನುಭವ ಕುರಿತು ಕೋಪದಲ್ಲಿ ಮಾತಾಡುತ್ತಾ ಸಾಗಿದ್ದಾರೆ. ಕೆಲಸದ ಒತ್ತಡ, ತನವಾದ ಸಾಕಷ್ಟು ಹಸಿವಿನ ಬಗ್ಗೆ ಮೊಬೈಲ್‌ನಲ್ಲಿ ಮಾತನಾಡಿದ್ದಾರೆ. ಅದನ್ನು ಕೇಳಿಸಿಕೊಂಡ ಕ್ಯಾಬ್ ಚಾಲಕ ದಾರಿ ಮಧ್ಯ ಎರಡು ನಿಮಿಷ ಬಂದೆ ಎಂದು ಹೇಳಿ ಕಾರು ನಿಲ್ಲಿಸಿ ಹೋಗಿದ್ದಾನೆ..
ಕ್ಯಾಬ್ ಚಾಲಕ ಮಾಡಿದ ಕೆಲಸಕ್ಕೆ ಯುವತಿ ಫಿದಾ
ಕೆಲವೇ ನಿಮಿಷಗಳ ಬಳಿಕ ಬಂದ ಕ್ಯಾಬ್ ಚಾಲಕ ಆ ಯುವತಿಗೆ ತಿನ್ನಲು ಸ್ಯಾಂಡ್ ವಿಚ್ ತಿಂಡಿ ತಂದು ಕೊಟ್ಟಿದ್ದಾರೆ. ಇದನ್ನು ಕಂಡ ಯುವತಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆಹಾರ ತರುವ ಅಗತ್ಯವಿರಲಿಲ್ಲ, ನಿಮಗೇಕೆ ತೊಂದರೆ ಎಂದು ಹಿಂದಿಯಲ್ಲಿ ತಿಳಿಸಿದ್ದಾರೆ. ಅದಕ್ಕೆ ಕ್ಯಾಬ್ ಚಾಲಕ ನೀವು ನಮ್ಮ ಫ್ಯಾಮಿಲಿ ಇದ್ದ ಹಾಗೆ. ನೀವು ಮೊಬೈಲ್‌ನಲ್ಲಿ ಮಾತನಾಡಿದ್ದನ್ನು ಕೇಳಿಸಿಕೊಂಡು ತಂದೆ. ಪರವಾಗಿಲ್ಲ ತಿನ್ನಿ ಎಂದಿದ್ದಾರೆ.
ಕ್ಯಾಬ್ ಚಾಲಕನ ಈ ಮಾನವೀಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸಾರ್ವಜನಿಕ ವಲಯದಲ್ಲಿ ಸಕಾರಾತ್ಮಕ ಮಾತುಗಳು ಕೇಳಿ ಬಂದಿವೆ. ಕೆಲಸದ ಒತ್ತಡ, ಸಮಯದ ಅಭಾಯವದಲ್ಲಿ ಕೆಲವೊಮ್ಮೆ ಕೋಪದಿಂದ ಏನು ತಿನ್ನದೇ ಹೋಗಿಬಿಟ್ಟಿರುತ್ತೇವೆ. ಹಸಿವು ಹೆಚ್ಚಿದ್ದಾಗ ಕೋಪ ಬರುವುದು ಸಹಜ. ಅದನ್ನು ಅರಿತ ಕ್ಯಾಬ್ ಚಾಲಕ ನಡೆದುಕೊಂಡ ರೀತಿ ಕಂಡು ಯುವತಿ ಏರ್‌ಪೋರ್ಟ್ ತಲುತ್ತಿದ್ದಂತೆ ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಚಾಲಕನ ಬಗ್ಗೆ ಯುವತಿ ಹಾಡಿ ಹೊಗಳಿದ್ದಾರೆ. ಈ ವಿಡಿಯೋ ನೋಡಿದವರು ಚಾಲಕನ ಪರವಾಗಿ ಒಳ್ಳೆ ಮಾತುಗಳನ್ನಾಡಿದ್ದಾರೆ.
ವೈರಲ್ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ
ಬೆಂಗಳೂರು ಕ್ಯಾಬ್ ಚಾಲಕರಿಗೆ ಫಿದಾ ಆದ ಹಿಂದಿ ಹುಡುಗಿ! ಚಾಲಕರಿಗೆ ಸಲಾಂ! ನಿಮಗೂ ಇಂತಹ ಅನುಭವ ಆಗಿದ್ರೆ ಕಾಮೆಂಟ್ ಮಾಡಿ ಎಂದು ವೈರಲ್ ವಿಡಿಯೋ ಬಗ್ಗೆ ನೆಟ್ಟಿಗರು ಮೆಚ್ಚುಗೆಯ ಮಾತನಾಡಿದ್ದಾರೆ. ಮತ್ತೊಬ್ಬರು "ಡ್ರೈವರ್ ಗತ್ತು ಎಲ್ಲರಿಗೂ ಗೊತ್ತು' ಅಂತ ಹೇಳಿದ್ದಾರೆ.
"ನಾವು ಕನ್ನಡಿಗರು ಕರುಣೆ ಎಂಬ ಸಂಕೋಲೆ ತೊಟ್ಟು ನಿಂತಿರುವವರು ನಿಷ್ಕಲ್ಮಷ ಪ್ರೀತಿ ಎಂಬ ಸಂಕೋಲೆ ಕಟ್ಟುವವರು..' ಎಂದು ಇನ್ನೊಬ್ಬರು ಕಾಮೆಂಟ್ ಹಾಕಿದ್ದಾರೆ. 'ಮಾನವೀಯತೆ ಮೆರೆದ ಚಾಲಕನಿಗೆ ನಮ್ಮ ಅಭಿನಂದನೆಗಳು. ಆದರೆ ಹೆಣ್ಣು ಮಕ್ಕಳು ಕಷ್ಟದಲ್ಲಿದ್ದಾಗ ಗಂಡು ಮಕ್ಕಳು ತುಂಬಾ ಸ್ಪಂದಿಸುತ್ತಾರೆ. ಆದರೆ ಅದೇ ರೀತಿ ಆ ಜಾಗದಲ್ಲಿ ಒಬ್ಬ ಗಂಡು ಹಸಿವಿನಿಂದ ಇದ್ದಿದ್ದರೆ ಅವನಿಗೆ ಯಾರು ಸಹಾಯ ಮಾಡುತ್ತಿರಲಿಲ್ಲ, ಅದೇ ವಿಪರ್ಯಾಸ..' ಎಂದು ಮತ್ತೊಬ್ಬರು ವಾಸ್ತವದ ವಿಚಾರ ಪ್ರಸ್ತಾಪಿಸಿದ್ದಾರೆ.












Click it and Unblock the Notifications