ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್‌ ಸ್ಪರ್ಶ, ಬೆಂಗಳೂರು ಬಾಲಕ ಸಾವು

|
Google Oneindia Kannada News

ಬೆಂಗಳೂರು, ಜನವರಿ 18: ಉತ್ತರ ಬೆಂಗಳೂರಿನ ಆರ್‌ಟಿ ನಗರದ ಎಚ್‌ಎಂಟಿ ಲೇಔಟ್‌ನಲ್ಲಿ 13 ವರ್ಷದ ಬಾಲಕ ಗಾಳಿಪಟ ಹಾರಿಸುವಾಗ ಹೈಟೆನ್ಷನ್ ತಂತಿ ಸ್ಪರ್ಶಿಸಿ ವಿದ್ಯುತ್ ಸ್ಪರ್ಶದಿಂದ ಸುಟ್ಟ ಗಾಯಗಳಾಗಿ ಸಾವನ್ನಪ್ಪಿದ್ದಾನೆ.

ಮೃತ ಬಾಲಕನನ್ನು ಎಚ್‌ಎಂಟಿ ಲೇಔಟ್‌ನ ದಾಸಪ್ಪ ಗಾರ್ಡನ್ ನಿವಾಸಿ ಅಬೂಬಕರ್ ಎಂದು ಗುರುತಿಸಲಾಗಿದೆ. ಸೋಮವಾರ (ಜೂನ್ 16) ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಎಚ್‌ಎಂಟಿ ಲೇಔಟ್‌ನ 6ನೇ ಬಿ ಕ್ರಾಸ್ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಪಾರ್ಕ್‌ನಲ್ಲಿ ಅಬೂಬಕರ್ ಮತ್ತು ಆತನ ಸ್ನೇಹಿತ ಗಾಳಿಪಟ ಹಾರಿಸಲು ಹೋಗಿದ್ದರು. ಆಗ ಗಾಳಿಪಟ ಹಾರಿಸುವಾಗ ವಿದ್ಯುತ್‌ ಸ್ಪರ್ಶಿಸಿ ಗಾಯಗಳಾಗಿ ಆತ ಸಾವನ್ನಪ್ಪಿದ್ದನು.

ಜಗಳೂರು; ಉಡಾಫೆ ಉತ್ತರ ನೀಡಿದ ಎಇಇಗೆ ರೈತರಿಂದ ಬಿತ್ತು ಗೂಸಾಜಗಳೂರು; ಉಡಾಫೆ ಉತ್ತರ ನೀಡಿದ ಎಇಇಗೆ ರೈತರಿಂದ ಬಿತ್ತು ಗೂಸಾ

ಅಬೂಬಕರ್ ಮತ್ತು ಆತನ ಸ್ನೇಹಿತ ಗಾಳಿಪಟವನ್ನು ತಂದು ಉದ್ಯಾನವನದಲ್ಲಿ ಹಾರಿಸಲು ಹೋಗಿದ್ದರು. ಆಗ ಗಾಳಿಪಟ ಹೈ ಟೆನ್ಷನ್ ವೈರ್ ಮೇಲೆ ಬಿದ್ದಿದೆ. ಅಬೂಬಕರ್ ಉದ್ಯಾನವನದ ಕಾಂಪೌಂಡ್ ಮೆಶ್ ಸಹಾಯದಿಂದ ಉದ್ಯಾನವನದ ಪಕ್ಕದ ಕಟ್ಟಡವನ್ನು ಏರಿದ್ದನು. ಆತ ವಸತಿ ಕಟ್ಟಡದ ಮೊದಲ ಮಹಡಿ ತಲುಪಿ ಗಾಳಿಪಟ ತೆಗೆದುಕೊಳ್ಳಲು ಯತ್ನಿಸಿದರು.

Bengaluru boy dies of electrocution while flying kite

ಆಗ ಕಟ್ಟಡದಿಂದ ಒಂದೂವರೆ ಅಡಿ ದೂರದಲ್ಲಿರುವ ಹೈ ಟೆನ್ಷನ್ ವೈರ್‌ನ ಸಂಪರ್ಕಕ್ಕೆ ಆತ ಬಂದಿದ್ದನು. ಆಗ ಅಬೂಬಕರ್ ಅವರಿಗೆ ವಿದ್ಯುತ್ ಶಾಕ್ ತಗುಲಿತ್ತು. ಶಾಕ್‌ ಹೊಡೆಯುವುದನ್ನು ಕಂಡ ಆತನ ಸ್ನೇಹಿತ ಸಹಾಯಕ್ಕಾಗಿ ಕೂಗಿಕೊಂಡನು. ಆಗ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ರವಾನಿಸಿ ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಟ್ಟಗಾಯಗಳ ವಾರ್ಡ್‌ಗೆ ಸ್ಥಳಾಂತರಿಸಿದ್ದರು.

ಕರ್ನಾಟಕ ಏಕದಿನದ ವಿದ್ಯುತ್ ಬಳಕೆಯಲ್ಲಿ ಜ.13ರಂದು ದಾಖಲೆ, ಕಾರಣ ಏನು?, ಪೂರ್ಣ ವಿವಿರ ಇಲ್ಲಿದೆಕರ್ನಾಟಕ ಏಕದಿನದ ವಿದ್ಯುತ್ ಬಳಕೆಯಲ್ಲಿ ಜ.13ರಂದು ದಾಖಲೆ, ಕಾರಣ ಏನು?, ಪೂರ್ಣ ವಿವಿರ ಇಲ್ಲಿದೆ

ಅಬೂಬಕರ್‌ಗೆ ಶೇ 80ರಷ್ಟು ಸುಟ್ಟ ಗಾಯಗಳಾದವು. ಕ್ರಮೇಣ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಧ್ಯರಾತ್ರಿ 1.30ರ ಸುಮಾರಿಗೆ ಮೃತಪಟ್ಟನು. ಅಬೂಬಕರ್ ಸಣ್ಣ ಕೋಲಿನ ಸಹಾಯದಿಂದ ಗಾಳಿಪಟವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರು ಎಂದು ಅಬೂಬಕರ್‌ನ ಸ್ನೇಹಿತರು ಸ್ಥಳೀಯ ಜನರಿಗೆ ತಿಳಿಸಿದರು. ಆದರೆ ಕೆಲವರು ನೇರವಾಗಿ ಗಾಳಿಪಟವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಅಬೂಬಕರ್ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ. ಅವನಿಗೆ ತಂದೆ ಸುಲ್ತಾನ, ಮನೆ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಅಬೂಬಕರ್ ಅವರ ತಾಯಿ ಮತ್ತು ಇಬ್ಬರು ಅಣ್ಣಂದಿರು ಇದ್ದರು. ಸುಲ್ತಾನ ನೀಡಿದ ದೂರಿನ ಆಧಾರದ ಮೇಲೆ ಆರ್‌ಟಿ ನಗರ ಪೊಲೀಸರು ಕೆಪಿಟಿಸಿಎಲ್, ಬೆಸ್ಕಾಂ ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್ 304 ಎ ಅಡಿಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದಾರೆ.

English summary
A 13-year-old boy died of electrocution after touching a high-tension wire while flying a kite at HMT Layout in RT Nagar, North Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X